ಏಕೆ ವಿಶ್ವದಾದ್ಯಂತ ಎಲ್ಲಾ ಸಂಸ್ಕೃತಿಗಳಲ್ಲಿ ಮದುವೆಯನ್ನು ದೇವರಿಂದ ಬರುವಂತದ್ದಾಗಿದೆ ಎಂದು ನೋಡಲಾಗುತ್ತದೆ? ಏಕೆ ಮದುವೆಗಳನ್ನು ಪವಿತ್ರ ಸಮಾರಂಭಗಳೆಂದು ಪರಿಗಣಿಸಲಾಗುತ್ತದೆ? ದೇವರು ಮದುವೆಯನ್ನು ಸೃಷ್ಟಿಸಿರಬಹುದು, ಮತ್ತು ಅದನ್ನು ಗುರುತಿಸುವ ವಿವಾಹಗಳು, ಆಳವಾದ ವಾಸ್ತವವನ್ನು ಚಿತ್ರವಾಗಿ ನಮಗೆ ನೋಡಲು, ನೋಡಲು ಕಷ್ಟ, ಆದರೆ ಒಳಗೆ ಪ್ರವೇಶಿಸಲು –ನಮ್ಮನ್ನು – ನಿಮ್ಮನ್ನು ಆಹ್ವಾನಿಸುವಾತನಾಗಿದ್ದಾನೆ.
ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಪವಿತ್ರ ಗ್ರಂಥವಾದ, ಋಗ್ವೇದವನ್ನು, ಕ್ರಿ.ಪೂ 2000 – 1000 ರ ನಡುವೆ ಬರೆಯಲಾಗಿದೆ. ಮದುವೆಯ ಈ ಕಲ್ಪನೆಗೆ ವೈದಿಕ ಸಂಪ್ರದಾಯದಲ್ಲಿ ಜನರ ಪವಿತ್ರ ಒಕ್ಕೂಟವಾಗಿ ವಿವಾಹ (ವಿವಾಹ್) ಎಂಬದಾಗಿ ಬಳಸಲಾಗುತ್ತದೆ. ಆದ್ದರಿಂದ ಈ ವೇದಗಳಲ್ಲಿನ ವಿವಾಹವು ಜಗತ್ತಿನ ಕಾನೂನುಗಳನ್ನು ಆಧರಿಸಿದೆ. ಇದನ್ನು ಬ್ರಹ್ಮಾಂಡವು ಚಿತ್ರಿಸಿದೆ ಮತ್ತು ಇದನ್ನು “ಬೆಂಕಿಯಿಂದ ಸ್ವತಃ ಸಾಕ್ಷಿಯಾದ ಪವಿತ್ರ ಏಕತೆ “ ಎಂದು ಪರಿಗಣಿಸಲಾಗಿದೆ.
ಇಬ್ರೀಯ ವೇದಗಳು, ಸರಿಸುಮಾರು ಅದೇ ಕಾಲದಿಂದ, ದೇವರಿಂದ ಪ್ರಕಟಣೆಗಳನ್ನು ಪಡೆದ ಋಷಿಮುನಿಗಳ ಪುಸ್ತಕಗಳಾಗಿವೆ. ಇಂದು ನಾವು ಈ ಪುಸ್ತಕಗಳನ್ನು ಸತ್ಯವೇದದ ಹಳೆಯ ಒಡಂಬಡಿಕೆಯಾಗಿ ತಿಳಿದಿದ್ದೇವೆ. ನಿಯಮಿತವಾಗಿ ಈ ಪುಸ್ತಕಗಳು ದೇವರು ಏನು ಮಾಡಲಿದ್ದಾನೆಂದು ಚಿತ್ರಿಸಲು ‘ವಿವಾಹ’ ಮತ್ತು ‘ಮದುವೆ’ ಗಳನ್ನು ಬಳಸಲಾಗುತ್ತಿತ್ತು. ಈ ಪುಸ್ತಕಗಳು ಯಾರೋ ಒಬ್ಬರ ಬರೋಣವನ್ನು ನಿರೀಕ್ಷಿಸುತ್ತಿದ್ದವು, ಆತನು ಜನರೊಂದಿಗೆ ಶಾಶ್ವತವಾದ ಸಂಬಂಧವನ್ನು ಪ್ರಾರಂಭಿಸುತ್ತಾನೆ, ಇದನ್ನು ಮದುವೆಯ ದೃಷ್ಟಿಯಿಂದ ಚಿತ್ರಿಸಲಾಗಿದೆ. ಹೊಸ ಒಡಂಬಡಿಕೆಯು, ಅಥವಾ ಸುವಾರ್ತೆ, ಈ ಯಾರೋ ಎನ್ನುವಂತಹದ್ದು ಯೇಸು – ಯೇಸುವಿನ ಪ್ರತಿಬಿಂಬ ಎಂದು ಘೋಷಿಸುತ್ತದೆ.
ಈ ಜಾಲತಾಣದಲ್ಲಿನ ಪ್ರಬಂಧವೆಂದರೆ ಪ್ರಾಚೀನ ಸಂಸ್ಕೃತ ಮತ್ತು ಇಬ್ರೀಯ ವೇದಗಳು ಒಂದೇ ವ್ಯಕ್ತಿಯನ್ನು ನಿರೀಕ್ಷಿಸುತ್ತಿದ್ದವು. ಇದನ್ನು ಮತ್ತಷ್ಟು ಪರಿಶೋಧಿಸಲಾಗಿದೆ, ಆದರೆ ವಿವಾಹದ ವಿಷಯದಲ್ಲಿಯೂ ಸಹ, ಯೇಸುವಿನ ಆಹ್ವಾನದ ಸುವಾರ್ತೆಗಳ ಚಿತ್ರ, ಮತ್ತು ವಿವಾಹದ ನಡುವಿನ ಹೋಲಿಕೆಗಳು ಗಮನಾರ್ಹವಾಗಿವೆ.
ಸಪ್ತಪದಿ: ಏಳು ವಿವಾಹದ ಹಂತಗಳು
ವಿವಾಹ ಸಮಾರಂಭದ ಕೇಂದ್ರ ಭಾಗವೆಂದರೆ ಏಳು ಹಂತಗಳು, ಅಥವಾ ಸಪ್ತಪದಿ ಸಾತ್ ಫೆರೆ:
ಇದು ವಧು-ವರನು ಏಳು ಹೆಜ್ಜೆಗಳನ್ನು ಇಟ್ಟು ಪ್ರತಿಜ್ಞೆ ಮಾಡುತ್ತಾರೆ. ವೈದಿಕ ಸಂಪ್ರದಾಯದಲ್ಲಿ, ಸಪ್ತಪದಿಗಳನ್ನು ಪವಿತ್ರ ಬೆಂಕಿಯ (ಅಗ್ನಿ) ಸುತ್ತಲೂ ಮಾಡಲಾಗುತ್ತದೆ, ಇದಕ್ಕೆ ಸಾಕ್ಷಿ ಅಗ್ನಿ ದೇವ (ದೈವಿಕ ಬೆಂಕಿ).
ಹಾಗೆಯೇ ಸತ್ಯವೇದವು ಕೂಡ ದೇವರನ್ನು ಬೆಂಕಿಯಂತೆ ಚಿತ್ರಿಸುತ್ತದೆ
ದೇವರು ದಹಿಸುವ ಅಗ್ನಿಯಾಗಿದ್ದಾನೆ .
ಇಬ್ರಿಯರಿಗೆ 12:29 & ಧರ್ಮೋಪದೇಶಕಾಂಡ 4:24
ಬ್ರಹ್ಮಾಂಡದ ಮೊದಲು ನಡೆಸಿದ ವಿವಾಹದಲ್ಲಿ ಈ ದೈವಿಕ ವಿವಾಹ ಆಮಂತ್ರಣದ ಅತ್ಯುನ್ನತ ಸ್ಥಾನವನ್ನು ಸತ್ಯವೇದದ ಕೊನೆಯ ಪುಸ್ತಕವು ಮುನ್ಸೂಚಿಸುತ್ತದೆ. ಈ ಮದುವೆಗೆ ಮುನ್ನಡೆಸುವುದು ಸಹ ಏಳು ಹಂತಗಳಾಗಿವೆ. ಈ ಪುಸ್ತಕವು ಈ ಪದಗಳೊಂದಿಗೆ ಅವುಗಳನ್ನು ‘ಮುದ್ರೆಗಳು’ ಎಂದು ವಿವರಿಸುತ್ತದೆ:
ನಾನು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. 2 ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು “ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು. 3 ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ. 4 ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ. 5 ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ ನೋಡು, ಯೂದ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ವಂಶಜನೂ ಆಗಿರುವ ಒಬ್ಬನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ” ಎಂದು ಹೇಳಿದನು.
ಪ್ರಕಟನೆ 5: 1-5
ವಿವಾಹವನ್ನು ಆಚರಿಸಲಾಯಿತು
ಪ್ರತಿಯೊಂದು ಏಳು ಸಪ್ತಪದಿ ಹಂತಗಳಂತೆ, ವಧು-ವರನು ಪವಿತ್ರ ಪ್ರತಿಜ್ಞೆಯನ್ನು ಬದಲಾಯಿಸುವಾಗ, ಈ ಪುಸ್ತಕವು ನಂತರ ಪ್ರತಿ ಮುದ್ರೆಯ ಪ್ರಾರಂಭವನ್ನು ವಿವರಿಸುತ್ತದೆ. ಏಳನೇ ಮುದ್ರೆಯನ್ನು ತೆರೆದ ನಂತರವೇ ವಿವಾಹವನ್ನು ಘೋಷಿಸಲಾಗುತ್ತದೆ:
ಯಜ್ಞದ ಕುರಿಮರಿಯಾದಾತನ ವಿವಾಹಕಾಲವು ಬಂದಿತೆಂದು ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ, ಏಕೆಂದರೆ ಆತನನ್ನು ವಿವಾಹವಾಗುವ ಕನ್ಯೆಯು ತನ್ನನ್ನು ತಾನೇ ಸಿದ್ಧಮಾಡಿಕೊಂಡಿದ್ದಾಳೆ” ಎಂದು ಹೇಳಿತು.
ಪ್ರಕಟನೆ 19: 7
ಬರಾತ್, ವಿವಾಹ ಮೆರವಣಿಗೆ
ಈ ವಿವಾಹವು ಸಾಧ್ಯ ಏಕೆಂದರೆ ವರನು, ಆ ದಹಿಸುವ ಅಗ್ನಿಯ ಸಮ್ಮುಖದಲ್ಲಿ ವಧುವಿನ ಬೆಲೆಯನ್ನು ಪಾವತಿಸಿದನು, ಮತ್ತು ಸ್ವರ್ಗೀಯ ಮೆರವಣಿಗೆಯನ್ನು ಮುನ್ನಡೆಸುತ್ತಾನೆ, ತನ್ನ ಕುದುರೆ ಸವಾರಿ ಮಾಡುತ್ತಾನೆ, ಇಂದಿನ ಮದುವೆಗಳಲ್ಲಿರುವಂತೆ ಬರಾತ್, ತನ್ನ ವಧುವನ್ನು ಪಡೆಯಲು ಬರುತ್ತಾನೆ.
ಯಾಕಂದರೆ ಭಗವಂತನು ಸ್ವರ್ಗದಿಂದ, ದೊಡ್ಡ ಆಜ್ಞೆಯಿಂದ, ಪ್ರಧಾನ ದೇವದೂತರ ಧ್ವನಿಯಿಂದ ಮತ್ತು ದೇವರ ಕಹಳೆ ಕರೆಯಿಂದ ಇಳಿಯುತ್ತಾನೆ ಮತ್ತು ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದೇಳುತ್ತಾರೆ. 17 ಅದರ ನಂತರ, ಇನ್ನೂ ಜೀವಂತವಾಗಿರುವ ಮತ್ತು ಉಳಿದಿರುವ ನಾವು ಅವರೊಂದಿಗೆ ಮೋಡಗಳಲ್ಲಿ ಸಿಕ್ಕಿಹಾಕಿಕೊಂಡು ಭಗವಂತನನ್ನು ಗಾಳಿಯಲ್ಲಿ ಭೇಟಿಯಾಗುತ್ತೇವೆ. ಆದ್ದರಿಂದ ನಾವು ಶಾಶ್ವತವಾಗಿ ಭಗವಂತನೊಂದಿಗೆ ಇರುತ್ತೇವೆ.
1 ಥೆಸಲೋನಿಕದವರಿಗೆ 4: 16-17
ವಧುವಿನ ಬೆಲೆ ಅಥವಾ ವರದಕ್ಷಿಣೆ
ಇಂದಿನ ವಿವಾಹಗಳಲ್ಲಿ, ವಧುವಿನ ಬೆಲೆ ಮತ್ತು ವರದಕ್ಷಿಣೆಯ ಕುರಿತು ಚರ್ಚೆಗಳು ಮತ್ತು ವಿವಾದಗಳು ಹೆಚ್ಚಾಗಿ ನಡೆಯುತ್ತವೆ. ವಧು ವರನ ಮತ್ತು ಅವನ ಕುಟುಂಬಕ್ಕೆ ಏರ್ಪಾಡು ಮಾಡುವದಾಗಿದೆ ಅದು ವಧುವನ್ನು ನೀಡುವಾಗ ಜೊತೆಯಲ್ಲಿ ಬರುವದಾಗಿದೆ, ಕನ್ಯಾದಾನ. ಈ ಬರಲಿರುವ ಸ್ವರ್ಗೀಯ ವಿವಾಹದಲ್ಲಿ, ವರನು ವಧುವಿಗೆ ಬೆಲೆ ನೀಡಿದ್ದರಿಂದ, ಅವನು ವಧುವಿಗೆ ಉಡುಗೊರೆಯನ್ನು, ಉಚಿತ ಉಡುಗೊರೆಯನ್ನು ತರುತ್ತಾನೆ
ಅವರು ಹೊಸಹಾಡನ್ನು ಹಾಡುತ್ತಾ, “ನೀನು ಸುರುಳಿಯನ್ನು ಸ್ವೀಕರಿಸಲು ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ. ನೀನು ವಧಿಸಲ್ಪಟ್ಟು, ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು ದೇವರಿಗಾಗಿ ಕೊಂಡುಕೊಂಡಿರುವೆ.
ಪ್ರಕಟನೆ 5: 9
ಆತ್ಮನು ಮತ್ತು ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.
ಪ್ರಕಟನೆ 22:17
ಮದುವೆ ಯೋಜನೆ
ಇಂದು, ಪೋಷಕರು ವಿವಾಹಗಳನ್ನು ಏರ್ಪಡಿಸುತ್ತಾರೆ (ವ್ಯವಸ್ಥಿತ ಮದುವೆ) ಅಥವಾ ದಂಪತಿಗಳು ತಮ್ಮ ಪರಸ್ಪರ ಪ್ರೀತಿಯಿಂದ (ಪ್ರೀತಿ-ಮದುವೆ) ಮದುವೆಯಾಗುತ್ತಾರೆ. ಎರಡೂ ಸಂದರ್ಭಗಳಲ್ಲಿ, ನೀವು ಮೊದಲೇ ನಿಮ್ಮ ನಿರೀಕ್ಷಿತ ಸಂಗಾತಿಯ ಬಗ್ಗೆ ಮತ್ತು ನಿಮ್ಮ ಮದುವೆಯ ವ್ಯವಸ್ಥೆಯ ಕುರಿತು ಹೆಚ್ಚು ಆಲೋಚನೆ ಅಥವಾ ತಿಳುವಳಿಕೆಯನ್ನು ಸೇರ್ಪಡಿಸುತ್ತೀರಿ. ಮದುವೆಯ ಪ್ರಸ್ತಾಪವನ್ನು ನೀಡಿದಾಗ ವಿವಾಹದ ಬಗ್ಗೆ ತಿಳುವಳಿಕೆಯಿಲ್ಲದೆ ಉಳಿಯುವುದು ಜಾಣತನವಲ್ಲ.
ಈ ಬರಲಿರುವ ವಿವಾಹ ಮತ್ತು ಅದಕ್ಕೆ ನಿಮ್ಮ ಆಹ್ವಾನವೂ ಸಹಾ ನಿಜವಾಗಿದೆ. ಈ ಕಾರಣಕ್ಕಾಗಿ ನಾವು ಈ ಜಾಲತಾಣವನ್ನು ರಚಿಸಿದ್ದೇವೆ ಇದರಿಂದ ನಿಮ್ಮನ್ನು ಆತನ ವಿವಾಹಕ್ಕೆ ಆಹ್ವಾನಿಸುವ ದೇವರ ಬಗ್ಗೆ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ನಿಮಗೆ ಅವಕಾಶವಿದೆ. ಈ ವಿವಾಹವು ಒಂದು ನಿರ್ದಿಷ್ಟ ಸಂಸ್ಕೃತಿ, ವರ್ಗ ಅಥವಾ ಜನರಿಗೆ ಅಲ್ಲ. ಸತ್ಯವೇದ ಹೇಳುತ್ತದೆ:
ಇದಾದ ನಂತರ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಜನಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. ಅವರು ಸಕಲ ಜನಾಂಗ, ಕುಲ, ಜಾತಿಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.
ಪ್ರಕಟನೆ 7: 9
ನಾವು ಈ ಬರಲಿರುವ ವಿವಾಹವನ್ನ್ನು ಅರ್ಥಮಾಡಿಕೊಳ್ಳಲು ಈ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ, ಋಗ್ವೇದಗಳೊಂದಿಗೆ ಪ್ರಾರಂಭಿಸಿ, ನಂತರ ಸಂಸ್ಕೃತ ಮತ್ತು ಇಬ್ರೀಯ ವೇದಗಳ ಸಮಾನತೆಯನ್ನು ನೋಡುತ್ತೇವೆ. ವರನು ಯಾರು, ಆತನ ಹೆಸರು, ಆತನು ಬರುವ ಸಮಯ (ಪವಿತ್ರ ಏಳರಲ್ಲಿಯೂ ಸಹಾ), ಮತ್ತು ಹೇಗೆ ಆತನು ವಧುವಿನ ಬೆಲೆಯನ್ನು ಪಾವತಿಸುತ್ತಾನೆ ಎಂಬ ಬಗ್ಗೆ ದೇವರು ಇಬ್ರೀಯ ವೇದಗಳಲ್ಲಿ ವಿವರಗಳನ್ನು ಮತ್ತು ಯೋಜನೆಗಳನ್ನು ಬಹಿರಂಗಪಡಿಸುತ್ತಲೇ ಇದ್ದನು. ನಾವು ವರನ ಆಗಮನವನ್ನು, ಆತನ ಜನ್ಮದೊಂದಿಗೆ ಪ್ರಾರಂಭಿಸಿ ಆತನ ಕೆಲವು ಆಲೋಚನೆಗಳು, ವಧುವಿನ ವೇತನ, ಆತನ ವಧುವಿಗೋಸ್ಕರವಿರುವ ತನ್ನ ಪ್ರೀತಿ ಮತ್ತು ಆತನ ಆಹ್ವಾನ ಅನುಸರಿಸುತ್ತೇವೆ.
ವಿವಾಹದಲ್ಲಿ ನಿಮ್ಮನ್ನು ನೋಡಲು ಆಶಿಸುತ್ತೇವೆ.