ಪುರುಷನ ಬಲಿದಾನ: ಎಲ್ಲವುಗಳ ಆರಂಭ

3 ಮತ್ತು 4 ನೇ ವಚನಗಳ ನಂತರ ಪುರುಷಸುಕ್ತನು ತನ್ನ ಗಮನವನ್ನು ಪುರುಷನ ಗುಣಗಳಿಂದ ಪುರುಷನ ಬಲಿದಾನದ ಕಡೆಗೆ ಬದಲಾಯಿಸುತ್ತಾನೆ. 6 ಮತ್ತು 7 ನೇ ವಚನಗಳು ಇದನ್ನು ಈ ಕೆಳಗಿನ ರೀತಿಯಲ್ಲಿ ತೋರಿಸುತ್ತವೆ. (ಸಂಸ್ಕೃತ ಲಿಪ್ಯಂತರಣಗಳು ಮತ್ತು ಪುರುಷಸುಕ್ತನ ಬಗ್ಗೆ ನನ್ನ ಅನೇಕ ಆಲೋಚನೆಗಳು ಜೊಸೇಫ್ ಪಡಿನ್‌ಜರೆಕರ (346 ಪುಟ. 2007) ಇವರು ಬರೆದ ಪ್ರಾಚೀನ ವೇದಗಳಲ್ಲಿ ಕ್ರಿಸ್ತನು ಎಂಬ ಪುಸ್ತಕವನ್ನು ಅಧ್ಯಯನ ಮಾಡುವುದರಿಂದ ಬಂದವು)

ಪುರುಷಸುಕ್ತನಲ್ಲಿ ವಚನ 6-7

ಆಂಗ್ಲ ಭಾಷಾಂತರಸಂಸ್ಕೃತ ಲಿಪ್ಯಂತರ
ದೇವರುಗಳು ಪುರುಷನನ್ನು ಬಲಿದಾನ ಮಾಡಿದಾಗ, ವಸಂತಕಾಲವು ಅದರ ಕರಗಿದ ಬೆಣ್ಣೆ, ಬೇಸಿಗೆಯಲ್ಲಿ ಅದರ ಇಂಧನ ಮತ್ತು ಶರತ್ಕಾಲದಲ್ಲಿ ಅದರ ಅರ್ಪಣೆಯಾಗಿತ್ತು. ಆರಂಭದಲ್ಲಿ ಜನಿಸಿದ ಪುರುಷನನ್ನು ಒಣಹುಲ್ಲಿನಲ್ಲಿ ಯಜ್ಞದಂತೆ, ಚಿಮುಕಿಸಿದರು. ದೇವರುಗಳು, ಸಾಧಕರು ಮತ್ತು ದರ್ಶಕರು ಆತನನ್ನು ಬಲಿಪಶುವಾಗಿ ಯಜ್ಞಮಾಡಿದರು.ಯತ್ಪುರುಸೇನಹವಿಸ ದೇವಯಜ್ಞಮತನ್ವತವಸಂತೋಯಸ್ಯದಿದಜಯಂಗ್ರಿಸ್ಮೈದ್ಮಹಸಾರದ್ದವಿತಮ್ ಯಜ್ಞಂಭರ್ಶಿಪ್ರೋಕ್ಸಮ್ ಪುರಿನುಸುಬ್ಶಕ್ರಸಮುಕ್ಕುಟೀಮ್  

ಎಲ್ಲವೂ ತಕ್ಷಣವೇ ಸ್ಪಷ್ಟವಾಗಿಲ್ಲವಾದರೂ, ಸ್ಪಷ್ಟವಾದ ಸಂಗತಿಯೆಂದರೆ ಪುರುಷನ ಬಲಿದಾನದ ಮೇಲೆ ಗಮನಹರಿಸುವುದು. ಪ್ರಾಚೀನ ವೇದಿಕ ನಿರೂಪಕ ಸಯನಾಚಾರ್ಯರು ಈ ಹೇಳಿಕೆಯನ್ನು ಮಾಡಿದರು:

“ಥೆರ್ಸಿಸ್ – ಸಂತರು ಮತ್ತು ದೇವರುಗಳು – ಯಜ್ಞದ ಬಲಿಪಶುವಾಗಿರುವ ಪುರುಷನನ್ನು ಬಂಧಿಸಿ ಯಜ್ಞದ ಪ್ರಾಣಿಯಂತೆ ತಮ್ಮ ಮನಸ್ಸುಗಳಿಂದ ಯಜ್ಞಕ್ಕೆ ಅರ್ಪಿಸಿದರು”

ಸಯಾನಾಚಾರ್ಯರ ವ್ಯಾಖ್ಯಾನ ರಿಗ್ ವೇದ 10.90.7

8-9 ನೇ ವಚನಗಳು “ತಸ್ಮಾದ್ಯಜ್ಞತ್ಸರ್ವಾಹುತಾ…” ಎಂಬ ವಾಕ್ಯದಿಂದ ಪ್ರಾರಂಭವಾಗುತ್ತವೆ, ಇದರರ್ಥ ಪುರುಷನು ತನ್ನ ಬಲಿದಾನದಲ್ಲಿ ತನ್ನಲ್ಲಿದ್ದ ಎಲ್ಲವನ್ನು ಅರ್ಪಿಸಿದನು – ಆತನು ಒಂದನ್ನೂ ಹಿಂತೆಗೆದುಕೊಳ್ಳಲಿಲ್ಲ. ಪುರುಷನು ತನ್ನ ಬಲಿದಾನವನ್ನು ನೀಡುವಲ್ಲಿ ಹೊಂದಿದ್ದ ಪ್ರೀತಿಯನ್ನು ಇದು ತೋರಿಸುತ್ತದೆ. ಪ್ರೀತಿಯಿಂದ ಮಾತ್ರ ನಾವು ನಮ್ಮನ್ನು ಸಂಪೂರ್ಣವಾಗಿ ಇತರರಿಗೆ ಕೊಡಬಹುದು ಮತ್ತು ಏನನ್ನೂ ಹಿಂತೆಗೆದುಕೊಳ್ಳುವುದಿಲ್ಲ. ಯೇಸುಸತ್ಸಂಗ್ (ಯೇಸು ಕ್ರಿಸ್ತನು) ವೇದ ಪುಸ್ತಕಂ (ಸತ್ಯವೇದ) ನಲ್ಲಿ ಹೇಳಿದಂತೆ,

“ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ” ().

ಯೋಹಾನ 15:13

ಶಿಲುಬೆಯ ತ್ಯಾಗಕ್ಕೆ ಸ್ವಇಚ್ಚೆಯಿಂದ ತನ್ನನ್ನು ಒಪ್ಪಿಸಿಕೊಂಡಿದ್ದರಿಂದ ಯೇಸುಸತ್ಸಂಗ್ (ಯೇಸು ಕ್ರಿಸ್ತನು) ಇದನ್ನು ಹೇಳಿದನು. ಪುರುಷನ ಬಲಿದಾನ ಮತ್ತು ಯೇಸುಸತ್ಸಂಗ್ ನ  ಬಲಿದಾನಕ್ಕೂ ಸಂಬಂಧವಿದೆಯೇ? ಪುರುಷಸುಕ್ತ 5 ನೇ ವಚನ (ನಾವು ಇಲ್ಲಿಯವರೆಗೆ ಬಿಟ್ಟುಬಿಟ್ಟಿರುವ) ಒಂದು ಸುಳಿವನ್ನು ನೀಡುತ್ತದೆ – ಆದರೆ ಸುಳಿವು ನಿಗೂಢವಾಗಿದೆ.  5 ನೇ ವಚನ ಇಲ್ಲಿದೆ

ಪುರುಷಸುಕ್ತದಲ್ಲಿ ವಚನ  5

ಆಂಗ್ಲ ಭಾಷಾಂತರ ಸಂಸ್ಕೃತ ಲಿಪ್ಯಂತರ
ಅದರಿಂದ – ಪುರುಷನ ಒಂದು ಭಾಗದಿಂದ – ಬ್ರಹ್ಮಾಂಡವು ಹುಟ್ಟಿತು ಮತ್ತು ಅದನ್ನು ಪುರುಷನ ಆಸನವನ್ನಾಗಿ ಮಾಡಲಾಯಿತು ಮತ್ತು ಅವನು ಸರ್ವವ್ಯಾಪಿಯಾದನು.ತಸ್ಮದ್ ವಿರಲಜಯತವಿರಾಜೋಧಿಪುರ ಸಾಜಟೋಟ್ಯಸಿಯತಪಾಸಕಭೂಮಿಮ್ತೋಪುರ

ಪುರುಷಸಕ್ತ ಪ್ರಕಾರ, ಸಮಯದ ಆರಂಭದಲ್ಲಿ ಪುರುಷನನ್ನು ಬಲಿದಾನ ಮಾಡಲಾಯಿತು ಮತ್ತು ಅದು ಬ್ರಹ್ಮಾಂಡದ ಸೃಷ್ಟಿಗೆ ಕಾರಣವಾಯಿತು. ಹೀಗೆ ಈ ಬಲಿದಾನವನ್ನು ಭೂಮಿಯ ಮೇಲೆ ಮಾಡಲು ಸಾಧ್ಯವಾಗಲಿಲ್ಲ ಯಾಕೆಂದರೆ ತ್ಯಾಗವೇ ಭೂಮಿಯನ್ನು ಹೊರತಂದಿತು. ಪುರುಷನ ತ್ಯಾಗದ ಪರಿಣಾಮವಾಗಿ ಈ ಸೃಷ್ಟಿ ಉಂಟಾಗುವದನ್ನು 13 ನೇ ವಚನ ಸ್ಪಷ್ಟವಾಗಿ ತೋರಿಸುತ್ತದೆ. ಅದು ಹೀಗೆ ಹೇಳುತ್ತದೆ

ಪುರುಷಸುಕ್ತದಲ್ಲಿ 13 ನೇ ವಚನ

ಆಂಗ್ಲ ಭಾಷಾಂತರ ಸಂಸ್ಕೃತ ಲಿಪ್ಯಂತರ
ಚಂದ್ರನು ಅವನ ಮನಸ್ಸಿನಿಂದ ಹುಟ್ಟಿದನು. ಅವನ ಕಣ್ಣಿನಿಂದ ಸೂರ್ಯ ಹೊರಬಂದನು. ಅವನ ಬಾಯಿಂದ ಮಿಂಚು, ಮಳೆ ಮತ್ತು ಬೆಂಕಿ ಉತ್ಪತ್ತಿಯಾಯಿತು. ಅವನ ಉಸಿರಿನಿಂದ ಗಾಳಿ ಹುಟ್ಟಿತು. ಚಂದ್ರಮಮಾನಸೋಜತಸಕೋಶರೋಯಜಯತ ಮುಖಿಂದ್ರಸ್ಕಾಗ್ನಿಸಕಪ್ರಂದವಯೂರಜಯತ
­

ವೇದ ಪುಸ್ತಕಂ (ಸತ್ಯವೇದ) ನ ಆಳವಾದ ತಿಳುವಳಿಕೆಯಲ್ಲಿಯೇ ಅದು ಸ್ಪಷ್ಟವಾಗುತ್ತದೆ. ಋಷಿ (ಪ್ರವಾದಿ) ಮೀಕನ ಬರಹಗಳನ್ನು ಓದಿದಾಗ ನಾವು ಇದನ್ನು ನೋಡುತ್ತೇವೆ.  ಅವನು ಸುಮಾರು ಕ್ರಿ.ಪೂ 750 ರಲ್ಲಿ ವಾಸಿಸಿದನು ಮತ್ತು ಯೇಸು ಕ್ರಿಸ್ತನು (ಯೇಸುಸತ್ಸಂಗ್) ಬರುವುದಕ್ಕೆ ಮೊದಲು ಅವನು 750 ವರ್ಷಗಳ ಹಿಂದೆಯೇ ವಾಸಿಸುತ್ತಿದ್ದರೂ, ಆತನು ಹುಟ್ಟುವ ನಗರವನ್ನು ತಿಳಿಸಿ ಆತನ ಬರೋಣವನ್ನು ಮುನ್ಸೂಚಿಸಿದನು. ಅವನು ಹೀಗೆ ಭವಿಷ್ಯ ನುಡಿದನು:

ಆದರೆ ಎಫ್ರಾತದ ಬೇತ್ಲೆಹೇಮೇ,

ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ

ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ

ನನಗಾಗಿ ಹೊರಡುವನು;

ಆತನ ಹೊರಡೋಣದ ಮೂಲವು

ಪುರಾತನವೂ ಅನಾದಿಯೂ ಆದದ್ದು.

ಮೀಕ 5:2

ಆಡಳಿತಗಾರ (ಅಥವಾ ಕ್ರಿಸ್ತನು) ಬೆತ್ಲೆಹೆಮ್ ಪಟ್ಟಣದಿಂದ ಹೊರಬರುತ್ತಾನೆ ಎಂದು ಮೀಕ ಭವಿಷ್ಯ ನುಡಿದನು. 750 ವರ್ಷಗಳ ನಂತರ ಈ ದರ್ಶನವು ನೆರವೇರಿಕೆಗಾಗಿ ಯೇಸು ಕ್ರಿಸ್ತನು (ಯೆಶುಸತ್ಸಂಗ್) ಬೆತ್ಲೆಹೆಮಿನಲ್ಲಿ ಜನಿಸಿದನು. ಸತ್ಯವನ್ನು ಹುಡುಕುವವರು ಸಾಮಾನ್ಯವಾಗಿ ಮೀಕನ ದರ್ಶನದ ಈ ಅಂಶದ ಮೇಲೆ ತಮ್ಮ ಆಶ್ಚರ್ಯವನ್ನು ಕೇಂದ್ರೀಕರಿಸುತ್ತಾರೆ. ಹೇಗಾದರೂ, ಈ ಮುಂಬರುವ ಮೂಲದ  ಬಗ್ಗೆ ನಾವು ಗಮನಹರಿಸಬೇಕಾಗಿದೆ. ಮೀಕನು ಭವಿಷ್ಯದ ಮುಂಬರುವಿಕೆಯನ್ನು ಮುನ್ನುಡಿದನು, ಆದರೆ ಈ ಬರುವಿಕೆಯ ಮೂಲವು ಹಿಂದಿನ ಕಾಲದಲ್ಲಿ ಆಳವಾಗಿದೆ ಎಂದು ಅವನು ಹೇಳುತ್ತಾನೆ. ಆತನ ‘ಮೂಲಗಳು ಹಳೆಯವು’. ಈ ಬರುವವನ ಮೂಲವು ಆತನು ಭೂಮಿಯ ಮೇಲೆ ಕಾಣಿಸಿಕೊಳ್ಳುವುದಕ್ಕೆ ಮುಂಚೆಯೇ ಆಗಿತ್ತು!  ‘… ಹಳೆಯದು’ ಎಂಬುದು ಎಷ್ಟು ಹಿಂದಕ್ಕೆ ಹೋಗುತ್ತದೆ? ಅದು ‘ ಪುರಾತನ ಅನಾದಿಗೆ‘ ಹೋಗುತ್ತದೆ. ವೇದ ಪುಸ್ತಕಂ (ಸತ್ಯವೇದ) ನಲ್ಲಿನ ನಿಜವಾದ ಜ್ಞಾನದ ಇತರ ಮಾತುಗಳು ಅದನ್ನು ಮತ್ತಷ್ಟು ಸ್ಪಷ್ಟಪಡಿಸುತ್ತವೆ. ಕೊಲೊಸ್ಸೆ 1: 15 ರಲ್ಲಿ ರಿಷಿ ಪೌಲನು  (ಸುಮಾರು ಕ್ರಿ.ಶ. 50 ರಲ್ಲಿ  ಬರೆದನು) ಯೇಶುವ (ಯೇಸುವಿನ) ಬಗ್ಗೆ ಹೀಗೆ ಪ್ರಕಟಿಸಿದನು:

ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ.

ಕೊಲೊಸ್ಸಸೆ 1:15

ಯೇಸುವನ್ನು ‘ಅದೃಶ್ಯನಾದ ದೇವರ ಪ್ರತಿರೂಪನೂ’  ಮತ್ತು  ‘ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನು’ ಎಂದು ಪ್ರಕಟಿಸಿದನು. ಬೇರೆ ರೀತಿಯಲ್ಲಿ ಹೇಳುವುದಾದರೆ, ಯೆಶುವಿನ ಅವತಾರವು ಇತಿಹಾಸದಲ್ಲಿ ನಿಖರವಾದ ಸಮಯದಲ್ಲಿದ್ದರೂ (ಕ್ರಿ.ಪೂ. 4 – ಕ್ರಿ.ಶ. 33), ಬೇರೆ ಯಾವುದನ್ನಾದರು ಉಂಟುಮಾಡುವುದಕ್ಕೆ ಮೊದಲು ಹಾಗೂ – ನಿತ್ಯತ್ವಕ್ಕೆ ಹಿಂದೆಯೂ ಆತನು ಅಸ್ತಿತ್ವದಲ್ಲಿದ್ದನು.  ದೇವರು (ಪ್ರಜಾಪತಿ) ಯಾವಾಗಲೂ ನಿತ್ಯತ್ವದ ಹಿಂದೆಯೂ ಅಸ್ತಿತ್ವದಲ್ಲಿದ್ದ ಕಾರಣ ಆತನು ಹಾಗೆ ಮಾಡಿದನು, ಮತ್ತು ಆತನ ‘ಪ್ರತಿರೂಪವಾಗಿ’ ಯೇಸು (ಯೇಸುಸತ್ಸಂಗ್) ಯಾವಾಗಲೂ ಅಸ್ತಿತ್ವದಲ್ಲಿದ್ದನು.

ಜಗತ್ತಿನ ಸೃಷ್ಟಿಯ ಆರಂಭದಲೇ ಬಲಿದಾನ ಸಮಸ್ತಕ್ಕೂ ಆದಿ

ಆದರೆ ಆತನು ನಿತ್ಯತ್ವದ ಭೂತಕಾಲದಿಂದ ಅಸ್ತಿತ್ವದಲ್ಲಿದದ್ದು ಮಾತ್ರವಲ್ಲ, ಪರಲೋಕದ ದರ್ಶನದಲ್ಲಿರುವ ಋಷಿ  (ಪ್ರವಾದಿ) ಯೋಹಾನನು ಈ ಯೇಸುವನ್ನು (ಯೇಸುಸತ್ಸಂಗ್) ಹೀಗೆ ನೋಡಿದನು

“ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಯಾದಾತನು….”

ಪ್ರಕಟನೆ 13:8

ಇದು ವಿರೋಧಾಭಾಸವೇ? ಕ್ರಿ.ಶ 33 ರಲ್ಲಿ ಯೇಸುವನ್ನು (ಯೇಸುಸತ್ಸಂಗ್) ಕೊಲ್ಲಲಿಲ್ಲವೇ? ಆಗ ಆತನು ಕೊಲ್ಲಲ್ಪಟ್ಟಿದ್ದರೆ, ಆತನನ್ನು ‘ಜಗತ್ತಿನ ಸೃಷ್ಟಿಯ ಆರಂಭದಲ್ಲೇ’ ಹೇಗೆ ಕೊಲ್ಲಲು ಸಾಧ್ಯ? ಈ ವಿರೋಧಭಾಸದಲ್ಲಿಯೇ ಪುರುಷಸುಕ್ತ ಮತ್ತು ವೇದ ಪುಸ್ತಕಂ ಒಂದೇ ವಿಷಯವನ್ನು ವಿವರಿಸುತ್ತಿರುವುದನ್ನು ನಾವು ನೋಡುತ್ತೇವೆ. ಪುರುಷನ ಬಲಿದಾನ ‘ಆರಂಭದಲ್ಲೇ ಎಂದು ಪುರುಷಸುಕ್ತ ಹೇಳುವುದನ್ನು ನಾವು ನೋಡಿದ್ದೇವೆ. ಜೋಸೆಫ್ ಪಡಿನ್‌ಜರೆಕರ ಅವರು ವೇದಗಳಲ್ಲಿ ಕ್ರಿಸ್ತನು ಎಂಬ ತಮ್ಮ ಪುಸ್ತಕದಲ್ಲಿ ಸೂಚಿಸುವದೇನಂದರೆ, ಪುರುಷಸುಕ್ತನನ್ನು ಕುರಿತಾದ ಸಂಸ್ಕೃತ ವ್ಯಾಖ್ಯಾನವು ಆರಂಭದಲ್ಲಿ ಪುರುಷನ ಈ ಬಲಿದಾನವು ‘ದೇವರ ಹೃದಯದಲ್ಲಿ’ ಇತ್ತು ಎಂದು ಹೇಳುತ್ತದೆ (ಅವರು ಇದನ್ನು ಸಂಸ್ಕೃತದ ‘ಮಾನಸಯಾಗಂ’ ಎಂದು ಅನುವಾದಿಸಿದ್ದಾರೆ). ಸಂಸ್ಕೃತ ವಿದ್ವಾಂಸ ಎನ್.ಜೆ.ಶೆಂಡೆ ಅವರು ಆರಂಭದಲ್ಲಿ ಈ ಬಲಿದಾನವು ಮಾನಸಿಕ ಅಥವಾ ಸಾಂಕೇತಿಕ * ಎಂದು ಹೇಳಿದ್ದಾರೆಂದು ಅವರು ಉಲ್ಲೇಖಿಸಿದ್ದಾರೆ.

ಆದ್ದರಿಂದ ಈಗ ಪುರುಷಸುಕ್ತನ ರಹಸ್ಯವು ಸ್ಪಷ್ಟವಾಗುತ್ತದೆ. ಪುರುಷನು ದೇವರಾಗಿದ್ದನು ಮತ್ತು ನಿತ್ಯತ್ವದ ಹಿಂದೆಯೂ ದೇವರ ಸ್ವರೂಪವಾಗಿದ್ದನು. ಆತನು ಬೇರೆ ಎಲ್ಲದಕ್ಕಿಂತ ಮೊದಲೇ ಇದ್ದವನು. ಆತನು ಎಲ್ಲರಿಗಿಂತ ಮೊದಲನೆಯವನು. ದೇವರು ತನ್ನ ಸರ್ವಜ್ಞತೆಯಲ್ಲಿ, ಮಾನವಕುಲದ ಸೃಷ್ಟಿಗೆ ಬಲಿದಾನದ ಅವಶ್ಯಕತೆ ಇದೆ ಎಂದು ತಿಳಿದಿದ್ದನು – ಇದಕ್ಕಾಗಿ ಆತನು ಒದಗಿಸಬಹುದಾದ ಎಲ್ಲವು ಬೇಕಾಗುತ್ತದೆ – ಲೋಕದೊಳಕ್ಕೆ ಬಂದ ಪುರುಷನ ಅವತಾರವು ಪಾಪವನ್ನು ತೊಳೆಯುವುದು ಅಥವಾ ಶುದ್ಧೀಕರಿಸುವುದೇ  ಆಗಿತ್ತು. ಈ ಹಂತದಲ್ಲಿಯೇ ಬ್ರಹ್ಮಾಂಡ ಮತ್ತು ಮಾನವಕುಲದ ಸೃಷ್ಟಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದನ್ನು ದೇವರು ನಿರ್ಧರಿಸಬೇಕಾಗಿತ್ತು. ಆ ನಿರ್ಧಾರದಲ್ಲಿ ಪುರುಷನು ಬಲಿದಾನಕ್ಕೆ ಸಿದ್ಧನಾಗಲು ನಿರ್ಧರಿಸಿದನು, ಮತ್ತು ಸೃಷ್ಟಿ ಮುಂದುವರಿಯಿತು. ಆದ್ದರಿಂದ ಮಾನಸಿಕವಾಗಿ, ಅಥವಾ ದೇವರ ಹೃದಯದಲ್ಲಿ, ಪುರುಷನನ್ನು ವೇದ ಪುಸ್ತಕಂ ಪ್ರಕಟಿಸಿದಂತೆ ‘ಜಗತ್ತಿನ ಸೃಷ್ಟಿಗೆ ಮೊದಲೇ ವಧಿಸಲ್ಪಟ್ಟನು’.

ಆ ನಿರ್ಧಾರವನ್ನು ತೆಗೆದುಕೊಂಡ ನಂತರ – ಸಮಯ ಪ್ರಾರಂಭವಾಗುವ ಮೊದಲೇ – ದೇವರು (ಪ್ರಜಾಪತಿ – ಸಮಸ್ತ ಸೃಷ್ಟಿಗೆ ಒಡೆಯನು) ಸಮಯ, ಬ್ರಹ್ಮಾಂಡ ಮತ್ತು ಮಾನವಕುಲವನ್ನು ಸೃಷ್ಟಿಸುವದನ್ನು ಕುರಿತು  ನಿರ್ಧರಿಸಿದನು. ಹೀಗೆ ಪುರುಷನ ಸ್ವಇಚ್ಚೆಯ ಬಲಿದಾನದವು ‘ಹುಟ್ಟಬೇಕಾದ ಜಗತ್ತು’ (5 ನೇ ವಚನ), ಚಂದ್ರ, ಸೂರ್ಯ, ಮಿಂಚು ಮತ್ತು ಮಳೆ (ವಚನ 13) ಉಂಟುಮಾಡಲು ಕಾರಣವಾಯಿತು, ಮತ್ತು ಸಮಯವು ಸಹ (ವಚನ 6 ರಲ್ಲಿ ಉಲ್ಲೇಖಿಸಲಾದ ವಸಂತ, ಬೇಸಿಗೆ ಮತ್ತು ಶರತ್ಕಾಲವನ್ನು) ಪ್ರಾರಂಭಿಸಲು ಕಾರಣವಾಯಿತು.  ಈ ಎಲ್ಲದಕ್ಕಿಂತ ಮೊದಲೇ ಪುರುಷನು ಹುಟ್ಟಿದನು.

ಪುರುಷನನ್ನು ಯಜ್ಞ ಮಾಡಿದ ದೇವರುಗಳುಯಾರು?

ಆದರೆ ಒಂದು ಒಗಟು ಉಳಿದಿದೆ.  ಪುರುಷಸಕ್ತ 6 ನೇ ವನಚವು ‘ದೇವರುಗಳು’ (ದೇವಗಳು) ಪುರುಷನನ್ನು ಯಜ್ಞಮಾಡಿದರು ಎಂದು ಹೇಳುತ್ತದೆ? ಈ ದೇವರುಗಳು ಯಾರು? ವೇದ ಪುಸ್ತಕಂ (ಸತ್ಯವೇದ) ಇದನ್ನು ವಿವರಿಸುತ್ತದೆ.  ಋಷಿಗಳಲ್ಲಿ ಒಬ್ಬನಾದ ದಾವೀದನು  ಕ್ರಿ.ಪೂ 1000 ರಲ್ಲಿ ಪವಿತ್ರ ಗೀತೆಯನ್ನು ಬರೆದನು, ಅದು ದೇವರು (ಪ್ರಜಾಪತಿ) ಹೇಗೆ ಪುರುಷ ಮತ್ತು ಸ್ತ್ರೀಯರ ಬಗ್ಗೆ ಮಾತನಾಡಿದ್ದಾನೆಂದು ಪ್ರಕಟಪಡಿಸಿತು:

“ನೀವು ‘ದೇವರುಗಳು’, ಎಲ್ಲರೂ ಪರಾತ್ಪರನ ಮಕ್ಕಳು ಎಂದು ನಾನು ಹೇಳಿದೆನು.”

ಕೀರ್ತನೆ 82:6

ಯೇಶುಸತ್ಸಂಗ್ (ಯೇಸು ಕ್ರಿಸನು) 1000 ವರ್ಷಗಳ ನಂತರ ಋಷಿ ದಾವೀದನ ಈ ಪವಿತ್ರ ಗೀತೆಯನ್ನು ಕುರಿತು ಹೀಗೆ ಹೇಳಿದನು:

ಅದಕ್ಕೆ ಯೇಸು – “ನೀವು ದೇವರುಗಳೇ ಎಂದು ನಾನು ಹೇಳಿದೆನು ಎಂಬದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದದೆಯಲ್ಲಾ; ಶಾಸ್ತ್ರವು ಸುಳ್ಳಾಗಲಾರದಷ್ಟೆ; ಹಾಗಾದರೆ ದೇವರ ವಾಕ್ಯವನ್ನು ಹೊಂದಿದವರನ್ನು ದೇವರುಗಳೆಂದು ಆತನು ಹೇಳಿರುವಲ್ಲಿ ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆಂದು ಹೇಳಿದ್ದಕ್ಕೆ ನೀನು ದೇವದೂಷಣೆ ಮಾಡುತ್ತೀ ಅನ್ನುತ್ತೀರೋ?”

ಯೋಹಾನ 10:34-36

ಋಷಿ ದಾವೀದನು ‘ದೇವರುಗಳು’ ಎಂದು ಉಪಯೋಗಿಸಿದ ಪದವನ್ನು ಯೆಶುಸತ್ಸಂಗ್ (ಯೇಸು ಕ್ರಿಸನು) ನಿಜವಾದ ಶಾಸ್ತ್ರವಾಕ್ಯವೆಂದು ದೃಢಪಡಿಸಿದ್ದಾನೆ. ಇದು ಯಾವ ರೀತಿಯಲ್ಲಿ ಹೀಗಿರುತ್ತದೆ? ನಾವು ‘ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿದ್ದೇವೆ’ (ಆದಿಕಾಂಡ 1:27) ಎಂದು ವೇದ ಪುಸ್ತಕಂನಲ್ಲಿ ಸೃಷ್ಟಿ ವಿಷಯವನ್ನು ನಾವು ನೋಡುತ್ತೇವೆ. ಆದ್ದರಿಂದ ಬೇರೆ ಅರ್ಥದಲ್ಲಿ ನಮ್ಮನ್ನು ‘ದೇವರುಗಳು’ ಎಂದು ಪರಿಗಣಿಸಬಹುದು ಯಾಕೆಂದರೆ ನಾವು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟಿದ್ದೇವೆ.  ಆದರೆ ವೇದ ಪುಸ್ತಕಂ ಮತ್ತಷ್ಟು ವಿವರಿಸುತ್ತದೆ. ಪುರುಷನ ಈ ಬಲಿದಾನವನ್ನು ಸ್ವೀಕರಿಸುವವರು ಹೀಗಿರುವರು ಎಂದು ಅದು ಪ್ರಕಟಿಸುತ್ತದೆ:

ಹೇಗಂದರೆ ನಾವು ಪ್ರೀತಿಯಲ್ಲಿ ನಡೆದು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು ನಮ್ಮನ್ನು ಜಗದುತ್ಪತ್ತಿಗೆ ಮುಂಚೆ ಕ್ರಿಸ್ತನಲ್ಲಿ ಆರಿಸಿಕೊಂಡನು. ಆತನು ತನ್ನ ಕೃಪೆಯನ್ನು ಪ್ರಖ್ಯಾತಿಗೆ ತರಬೇಕೆಂದು ನಮ್ಮನ್ನು ಯೇಸು ಕ್ರಿಸ್ತನ ಮೂಲಕ ತನ್ನ ಪುತ್ರರನ್ನಾಗಿ ಸ್ವೀಕರಿಸುವದಕ್ಕೆ ದಯಾಪೂರ್ವಕವಾದ ತನ್ನ ಚಿತ್ತಾನುಸಾರವಾಗಿ ಮೊದಲೇ ಸಂಕಲ್ಪಮಾಡಿದ್ದನು. 

ಎಫೆಸ 1:4-5

ಪ್ರಜ್ಞಾಪತಿ-ಪುರುಷನು ಜಗತ್ತನ್ನು ಸೃಷ್ಟಿಸುವುದಕ್ಕೆ ಮೊದಲು ಪುರುಷನನ್ನು ಪರಿಪೂರ್ಣ ಯಜ್ಞವಾಗಿ ಅರ್ಪಿಸುವ ನಿರ್ಧಾರವನ್ನು ಮಾಡಿದಾಗ, ದೇವರು ಸಹ  ಜನರನ್ನು ಆರಿಸಿಕೊಂಡನು. ಆತನು ಅವರನ್ನು ಯಾಕೆ ಆಯ್ಕೆ ಮಾಡಿಕೊಂಡನು? ಆತನು ನಮ್ಮನ್ನು ತನ್ನ ‘ಪುತ್ರ’ ರಾಗಿರಬೇಕೆಂದು ಆರಿಸಿಕೊಂಡಿದ್ದಾನೆ ಎಂದು ಇದು ಸ್ಪಷ್ಟವಾಗಿ ಹೇಳುತ್ತದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಬಲಿದಾನದ ಮೂಲಕ ದೇವರ ಮಕ್ಕಳಾಗಲು ದೇವರು ತನ್ನನ್ನು ತಾನೇ ಸಂಪೂರ್ಣವಾಗಿ ತ್ಯಾಗಮಾಡಲು ಆರಿಸಿಕೊಂಡಾಗ ಪುರುಷರು ಮತ್ತು ಸ್ತ್ರೀಯರನ್ನು ಆಯ್ಕೆಮಾಡಲಾಗಿದೆ ಎಂದು ವೇದ ಪುಸ್ತಕಂ (ಸತ್ಯವೇದ) ಪ್ರಕಟಿಸುತ್ತದೆ. ಆ ಪೂರ್ಣ ಅರ್ಥದಲ್ಲಿ ನಾವು ‘ದೇವರುಗಳು’ ಎಂದು ಹೇಳಲಾಗುತ್ತದೆ. ‘ದೇವರ ವಾಕ್ಯವನ್ನು ಹೊಂದಿದವರನ್ನು’ – ಆತನ ವಾಕ್ಯವನ್ನು ಸ್ವೀಕರಿಸುವವರಿಗೆ (ಯೇಸುಸತ್ಸಂಗ್ ಈ ಮೇಲೆ ಹೇಳಿದಂತೆ) ಇದು ನಿಜವಾಗಿದೆ. ಆ ಅರ್ಥದಲ್ಲಿ ಭವಿಷ್ಯದ ದೇವರ ಪುತ್ರರ ಅಗತ್ಯತೆಗಳಾಗಿದ್ದವು ಇದು ಪುರುಷನನ್ನು ಆತನ ಬಲಿದಾನಕ್ಕೆ ಕಟ್ಟಲಾಯಿತು. ಪುರುಷಸುಕ್ತ 6 ನೇ ವಚನ ಹೇಳುವಂತೆ ‘ದೇವರುಗಳು ಪುರುಷನನ್ನು ಯಜ್ಞವಾಗಿ ಅರ್ಪಿಸಿದರು’. ಪುರುಷನ ಬಲಿದಾನವು  ನಮ್ಮ ಶುದ್ಧೀಕರಣಕ್ಕಾಗಿ ಆಗಿತ್ತು.

ಪುರುಷನ ಬಲಿದಾನವು ಪರಲೋಕಕ್ಕೆ ಮಾರ್ಗ

ಆದ್ದರಿಂದ ನಾವು ಪ್ರಾಚೀನ ಪುರುಷಸುಕ್ತ ಮತ್ತು ವೇದ ಪುಸ್ತಕಂನ  ಬುದ್ಧಿವಂತಿಕೆಯಿಂದ ದೇವರ ಯೋಜನೆಯನ್ನು ಬಹಿರಂಗಪಡಿಸಿದ್ದೇವೆ. ಇದು ಒಂದು ಅದ್ಭುತ ಯೋಜನೆ – ನಾವು ಊಹಿಸಲಾಗದ ಒಂದು ಯೋಜನೆಯಾಗಿದೆ. ಪುರುಷಸುಕ್ತನು 16 ನೇ ವಚನದಲ್ಲಿ ಮುಕ್ತಾಯಗೊಂಡಂತೆ ಇದು ನಮಗೂ ಬಹಳ ಮುಖ್ಯವಾಗಿದೆ.

ಆಂಗ್ಲ ಭಾಷಾಂತರ ಸಂಸ್ಕೃತ ಲಿಪ್ಯಂತರ
ದೇವರುಗಳು ಪುರುಷನನ್ನು ಬಲಿದಾನವಾಗಿ ಅರ್ಪಿಸಿದರು. ಇದು ಆರಂಭದಲ್ಲಿ ಸ್ಥಾಪಿತವಾದ ತತ್ವವಾಗಿದೆ. ಇದರ ಮೂಲಕ ಋಷಿಗಳು ಸ್ವರ್ಗವನ್ನು ಪಡೆಯುವರುಯಜ್ಞನೇಯಜ್ಞಮಜಯಂತದೇವಸ್ತಾನಿಧರ್ಮನಿಪ್ರಥಾಮನ್ಯಾಸನ್ತೆಹನಕಮ್ಮಮ್ಮಹಮನಸಕಂತ ಯತ್ರಪುರ್ವೇಶಾಧ್ಯಾಹಸಂತಿದೇವ

ಋಷಿಯು ಒಬ್ಬ ‘ಬುದ್ಧಿವಂತ’ ವ್ಯಕ್ತಿಯಾಗಿದ್ದಾನೆ. ಮತ್ತು ಸ್ವರ್ಗವನ್ನು ಪಡೆಯಲು ಹಂಬಲಿಸುವುದು ನಿಜಕ್ಕೂ ಬುದ್ಧಿವಂತ ವಿಷಯ. ಇದು ನಮ್ಮ ವ್ಯಾಪ್ತಿಯಿಂದ ಹೊರಗಿಲ್ಲ. ಅದು ಅಸಾಧ್ಯವಲ್ಲ. ಹೆಚ್ಚಿನ ಶಿಸ್ತು ಮತ್ತು ಧ್ಯಾನದ ಮೂಲಕ ಮೋಕ್ಷವನ್ನು ಸಾಧಿಸುವ ಪರಿಶುದ್ಧ ಪುರುಷರ ಅತ್ಯಂತ ತಪಸ್ವಿಗಳಿಗೆ ಮಾತ್ರವಲ್ಲ. ಇದು ಗುರುಗಳಿಗೆ ಮಾತ್ರವಲ್ಲ. ಇದಕ್ಕೆ ತದ್ವಿರುದ್ಧವಾಗಿ ಇದು ಯೇಸು ಕ್ರಿಸ್ತನು  (ಯೆಶುಸತ್ಸಂಗ್) ತನ್ನ ಅವತಾರದಲ್ಲಿ ಪುರುಷ ಸ್ವತಃ ಒದಗಿಸಿದ ಒಂದು ಮಾರ್ಗವಾಗಿದೆ.

ಪುರುಷನ ಬಲಿದಾನ ಪರಲೋಕಕ್ಕೆ ಬೇರೆ ಮಾರ್ಗವಿಲ್ಲ

ವಾಸ್ತವವಾಗಿ, ಇದು ನಮಗೆ ಮಾತ್ರವಲ್ಲದೆ ಪುರುಷಸುಕ್ತ 15 ಮತ್ತು 16 ನೇ ವಚನದ ನಡುವೆ ಸಯನಾಚಾರ್ಯರ ಸಂಸ್ಕೃತ ವ್ಯಾಖ್ಯಾನವಾಗಿದೆ

ಆಂಗ್ಲ ಭಾಷಾಂತರ ಸಂಸ್ಕೃತ ಲಿಪ್ಯಂತರ
ಹೀಗಾಗಿ, ಇದನ್ನು ತಿಳಿದಿರುವವನು ಮರಣರಹಿತ ಸ್ಥಿತಿಯನ್ನು ತಲುಪಲು ಸಾಧ್ಯವಾಗುತ್ತದೆ. ಇದಕ್ಕೆ ಬೇರೆ ದಾರಿ ತಿಳಿದಿಲ್ಲ.ತಮೆವವಿಡ್ನಾಮೃತಹಭಾವತಿನ್ಯಾಹ್ಪಂತಾಯನಾಯವೇದ್ಯತೆ

ನಿತ್ಯ ಜೀವವನ್ನು (ಮರಣರಹಿತತೆ) ತಲುಪಲು ಬೇರೆ ದಾರಿ ತಿಳಿದಿಲ್ಲ! ಖಂಡಿತವಾಗಿಯೂ ಈ ವಿಷಯವನ್ನು ಹೆಚ್ಚು ಕುಲಂಕಷವಾಗಿ ಅಧ್ಯಯನ ಮಾಡುವುದು ಬುದ್ಧಿವಂತಿಕೆಯಾಗಿದೆ. ಇಲ್ಲಿಯವರೆಗೆ ನಾವು ಪುರುಷ ಪುಷ್ಟಮದಲ್ಲಿ ಹೇಳಲಾದ ಕಥೆಯೊಂದಿಗೆ ಪ್ರತಿಧ್ವನಿಸುವ ದೇವರು, ಮಾನವಕುಲ ಮತ್ತು ವಾಸ್ತವದ ಅತಿಯಾದ ಕಥೆಯನ್ನು ಹೇಗೆ ಹೇಳುತ್ತದೆ ಎಂಬುದನ್ನು ತೋರಿಸುವ ವೇದ ಪುಸ್ತಕಂ (ಸತ್ಯವೇದ) ಮೂಲಕ ನಾವು ಹಾದುಹೋಗಿದ್ದೇವೆ. ಆದರೆ ನಾವು ಈ ಕಥೆಯನ್ನು ವಿವರವಾಗಿ ಅಥವಾ ಕ್ರಮವಾಗಿ ನೋಡಲಿಲ್ಲ. ಆದ್ದರಿಂದ, ಆರಂಭದಿಂದಲೇ, ಸೃಷ್ಟಿಯ ಬಗ್ಗೆ ಕಲಿಯುವುದು, ಪುರುಷನ ಈ ತ್ಯಾಗದ ಅಗತ್ಯವಿರುವ ಕಾರಣವೇನು, ಮನು ಪ್ರವಾಹವನ್ನು ತಂದ ಜಗತ್ತಿಗೆ ಏನಾಯಿತು (ವೇದ ಪುಸ್ತಕಂನಲ್ಲಿ ನೋಹ) ಮತ್ತು ತಮ್ಮನ್ನು ಸಾವಿನಿಂದ ಮುಕ್ತಗೊಳಿಸಿ ಪರಲೋಕದಲ್ಲಿ ನಿತ್ಯಜೀವವನ್ನು ಕೊಡುವ ವಾಗ್ಧಾನವನ್ನು ಕುರಿತು ಪ್ರಪಂಚದ ರಾಷ್ಟ್ರಗಳು ಪರಿಪೂರ್ಣ ಬಲಿದಾನದ ವಾಗ್ದಾನವನ್ನು ಹೇಗೆ ಕಲಿತವು ಮತ್ತು ಸಂರಕ್ಷಿಸಿವೆ ಎಂಬ ಸಂಗತಿಗಳನ್ನು ವೇದ ಪುಸ್ತಕಂ ಮೂಲಕ ಅನ್ವೇಷಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.  ಖಂಡಿತವಾಗಿ, ಇವು ಕಲಿಯಬೇಕಾದ ಸಂಗತಿಗಳಾಗಿವೆ.

*(ಎನ್. ಜೆ. ಶೆಂಡೆ.  ವೇದಿಕ ಸಾಹಿತ್ಯದಲ್ಲಿ ಪುರುಷಸುಕ್ತ (ಆರ್.ವಿ 10-90)  (ಸಂಸ್ಕೃತದಲ್ಲಿ ಸುಧಾರಿತ ಅಧ್ಯಯನ ಕೇಂದ್ರದ ಪ್ರಕಾಶನಗಳು, ಪೂನಾ ವಿಶ್ವವಿದ್ಯಾಲಯ) 1965.

Leave a Reply

Your email address will not be published. Required fields are marked *