Skip to content

ಪರ್ವತವನ್ನು ಪವಿತ್ರವಾಗಿಸುವ ತ್ಯಾಗ

ಚೀನಾದ ಟಿಬೆಟಿಯನ್ ಪ್ರದೇಶದಲ್ಲಿ, ಭಾರತದಿಂದ ಗಡಿಯುದ್ದಕ್ಕೂ ಇರುವ ಪರ್ವತವೇ ಕೈಲಾಸ  ಪರ್ವತವು (ಅಥವ ಕೈಲಾಸ). ಹಿಂದುಗಳು, ಬೌದ್ಧರು ಮತ್ತು ಜೈನರು ಕೈಲಾಸ  ಪರ್ವತವನ್ನು ಪವಿತ್ರ ಪರ್ವತವೆಂದು ಪರಿಗಣಿಸುತ್ತಾರೆ. ಕೈಲಾಸ  ಪರ್ವತವು ಭಗವ೦ತ ಶಿವನ (ಅಥವ ಮಹಾದೇವ), ಅವರ ಪತ್ನಿಯಾದ ಪಾರ್ವತಿ ದೇವತೆಯ (ಉಮಾ, ಗೌರಿ ಎ೦ದೂ ಕರೆಯಲ್ಪಡುವ೦ತ) ಮತ್ತು ಅವರ ಮಗನಾದ ಭಗವ೦ತ ಗಣೇಶನ (ಗಣಪತಿ ಅಥವಾ ವಿನಾಯಕ) ವಾಸಸ್ಥಾನವೆಂದು ಹಿಂದುಗಳು ಪರಿಗಣಿಸುತ್ತಾರೆ. ಪವಿತ್ರ ಆಚರಣೆಯ ಸಮಯದಲ್ಲಿ, ಸಾವಿರಾರು ಹಿಂದುಗಳು ಮತ್ತು ಜೈನರು ಕೈಲಾಸ ಪರ್ವತವನ್ನು ಸುತ್ತಾಡಲು ಮತ್ತು ಅದು ನೀಡುವ ಆಶೀರ್ವಾದವನ್ನು ಪಡೆಯಲು ತೀರ್ಥಯಾತ್ರೆ ಮಾಡುತ್ತಾರೆ.

ಭಗವ೦ತ ಶಿವನು  ಪಾರ್ವತಿಯು ಸ್ನಾನ ಮಾಡುವಾಗ ನೋಡುವುದನ್ನು ತಡೆದ ಗಣೇಶನ ತಲೆಯನ್ನು ತೆಗೆದು ಕೊಂದ ಸ್ಥಳವಾಗಿದೆ ಕೈಲಾಸ. ಆನೆಯ ತಲೆಯನ್ನು ತನ್ನ ಮುಂಡದ ಮೇಲೆ ಇರಿಸಿ, ಗಣೇಶನನ್ನು ಮರಣದಿಂದ ಹೇಗೆ ಶಿವನಿಗೆ ಹಿಂದಿರುಗಿಸಲಾಯಿತು ಎಂಬ ಪ್ರಸಿದ್ಧ ಕಥೆಯನ್ನು ಹೀಗೆ ಮುಂದುವರಿಸಲಾಗಿದೆ. ತ್ಯಾಗದ ಮೂಲಕ ಗಣೇಶನಿಗೆ ತನ್ನ ತಲೆಯನ್ನು ಅರ್ಪಿಸಿ ಆನೆಯು ಸತ್ತುಹೋಯಿತು, ಆದ್ದರಿಂದ ಭಗವ೦ತ ಶಿವನು ತನ್ನ ಮಗನನ್ನು ಸಾವಿನಿಂದ ಮರಳಿ ಪಡೆಯುವ೦ತಾಯಿತು. ಈ ತ್ಯಾಗವು ಕೈಲಾಸದಲ್ಲಿ ಸಂಭವಿಸುವದರ ಮೂಲಕ, ಇದು ಇಂದಿನ ಪವಿತ್ರ ಪರ್ವತವಾಗಿದೆ. ಕೈಲಾಸ, ಮೇರು ಪರ್ವತದ ಭೌತಿಕ ಪ್ರದರ್ಶನ ಎಂದು ಕೆಲವರು ಪರಿಗಣಿಸುತ್ತಾರೆ – ಇದು ಬ್ರಹ್ಮಾಂಡದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ. ಮೇರು ಪರ್ವತದಿಂದ ಕೈಲಾಸ ಪರ್ವತದ ಮೂಲಕ ಕೇಂದ್ರೀಕೃತವಾಗಿರುವ ಈ ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುವ ಚಿಹ್ನೆಗಳಾಗಿ ಅನೇಕ ದೇವಾಲಯಗಳನ್ನು ಏಕಕೇಂದ್ರಕ ವಲಯಗಳಿಂದ ನಿರ್ಮಿಸಲಾಗಿದೆ.

ಶ್ರೀ ಅಬ್ರಹಾಂರವರು ಮೋರಿಯಾ ಪರ್ವತದಲ್ಲಿ ತಮ್ಮ ಮಗನನ್ನು ಸಾವಿನಿಂದ ಹಿಂತಿರುಗಿ ಪಡೆದ ಅನುಭವವು ದೇವರ ತ್ಯಾಗದ ಮಾದರಿಯಾಗಿದೆ. ಆ ತ್ಯಾಗವು – ಯೇಸುವಿನ ಮುಂಬರುವ ಅವತಾರದಲ್ಲಿ ಆಳವಾದ ಆಧ್ಯಾತ್ಮಿಕ ವಾಸ್ತವವನ್ನು ಸೂಚಿಸುವ ಸಂಕೇತವಾಗಿದೆ. ಇಬ್ರೀಯ ವೇದಗಳು 4000 ವರ್ಷಗಳ ಹಿಂದಿನ ಶ್ರೀ ಅಬ್ರಹಾಮನ ಅನುಭವಗಳನ್ನು ಮತ್ತು ಅದರ ಮಹತ್ವವನ್ನು ನಮಗೆ ವಿವರಿಸುತ್ತಲೇ ಇರುತ್ತವೆ. ಈ ಚಿಹ್ನೆಯ ತಿಳುವಳಿಕೆಯು ಇಬ್ರಿಯರಿಗೆ ಮಾತ್ರವಲ್ಲದೆ ‘ಎಲ್ಲ ಜನಾಂಗಗಳಿಗೆ’ ಆಶೀರ್ವಾದವನ್ನು ನೀಡುತ್ತದೆ ಎಂದು ಘೋಷಿಸುತ್ತದೆ. ಆದ್ದರಿಂದ ಕಥೆಯನ್ನು ಕಲಿಯುವುದು ಮತ್ತು ಅದರ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಯೋಗ್ಯವಾಗಿದೆ.

ಶ್ರೀ ಅಬ್ರಹಾಮನ ತ್ಯಾಗದ ಪರ್ವತ ಚಿಹ್ನೆ

ಅಬ್ರಹಾಮನಿಗೆ ಬಹಳ ಹಿಂದೆಯೇ ರಾಷ್ಟ್ರಗಳ ವಾಗ್ದಾನವು ಹೇಗೆ ನೀಡಲ್ಪಟ್ಟಿತ್ತೆ೦ದು ನಾವು ನೋಡಿದ್ದೇವೆ. ಇಂದು ಯಹೂದಿಗಳು ಮತ್ತು ಅರಬ್ಬರು ಅಬ್ರಹಾಮನಿಂದ ಬಂದಿದ್ದಾರೆ, ಆದ್ದರಿಂದ ವಾಗ್ಧಾನವು ಸತ್ಯವಾದದ್ದು ಮತ್ತು ಅವರು ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ನಮಗೆ ತಿಳಿದಿದೆ. ಅಬ್ರಹಾಮನು ಈ ವಾಗ್ದಾನವನ್ನು ನಂಬಿದ್ದರಿಂದ ಅವನಿಗೆ ನೀತಿಯನ್ನು ನೀಡಲಾಯಿತು – ಅವನು ಮೋಕ್ಷವನ್ನು ಕಠಿಣ ಅರ್ಹತೆಯಿಂದ ಪಡೆಯಲ್ಲಿಲ್ಲ ಆದರೆ ಅವನು ಅದನ್ನು ಉಚಿತ ಉಡುಗೊರೆಯಾಗಿ ಸ್ವೀಕರಿಸಿದನು.

ಸ್ವಲ್ಪ ಸಮಯದ ನಂತರ, ಅಬ್ರಹಾಮನು ಬಹುನಿರೀಕ್ಷಿತ ಮಗನಾದ ಇಸಾಕನ್ನು ಸ್ವೀಕರಿಸಿದನು (ಇಂದು ಇವರಿಂದ ಯಹೂದಿಗಳು ತಮ್ಮ ಸಂತತಿಯನ್ನು ಗುರುತಿಸುತ್ತಾರೆ). ಇಸಾಕನು ಯುವಕನಾಗಿ ಬೆಳೆದ. ಅನಂತರ ದೇವರು ಅಬ್ರಹಾಮನನ್ನು ನಾಟಕೀಯ ರೀತಿಯಲ್ಲಿ ಪರೀಕ್ಷಿಸಿದನು. ಇಲ್ಲಿ ನೀವು ಸಂಪೂರ್ಣ ವಿವರವನ್ನು ಓದಬಹುದು ಮತ್ತು ಈ ಗುಪ್ತ ಪರೀಕ್ಷೆಯ ಅರ್ಥವನ್ನು ತಿಳಿಯಲು ನಾವು ಪ್ರಮುಖ ವಿವರಗಳನ್ನು ನೋಡುತ್ತೇವೆ – ಸದಾಚಾರಕ್ಕೆ ಹೇಗೆ ಪಾವತಿಸಲಾಗುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

ಅಬ್ರಹಾಮನ ಪರೀಕ್ಷೆ

ಈ ಪರೀಕ್ಷೆಯು ಭೀಕರ ಆಜ್ಞೆಯೊಂದಿಗೆ ಪ್ರಾರಂಭವಾಯಿತು:

  2 ಆಗ ಆತನು –ನೀನು ಪ್ರೀತಿಮಾಡುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಈಗ ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು ಅಂದನು

ಆದಿಕಾಂಡ 22: 2

ಅಬ್ರಹಾಮನು ಆಜ್ಞೆಗೆ ವಿಧೇಯನಾಗಿ  ‘ಮರುದಿನ ಬೆಳಿಗ್ಗೆ ಎದ್ದು’ ಮತ್ತು ‘ಮೂರು ದಿನಗಳ ಪ್ರಯಾಣದ ನಂತರ’ ಅವರು ಪರ್ವತವನ್ನು ತಲುಪಿದರು. ನಂತರ

  9 ದೇವರು ಹೇಳಿದ ಸ್ಥಳಕ್ಕೆ ಅವರು ಬಂದಾಗ ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ ತನ್ನ ಮಗನಾದ ಇಸಾಕನನ್ನು ಕಟ್ಟಿ ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು.
10 ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವದಕ್ಕೆ ಕತ್ತಿ ತೆಗೆದುಕೊಂಡನು.

ಆದಿಕಾಂಡ 22: 9-10

ಅಬ್ರಹಾಮನು ಆಜ್ಞೆಯನ್ನು ಪಾಲಿಸಲು ಮುಂದಾದನು. ಆದರೆ ನಂತರ ಗಮನಾರ್ಹವಾದದ್ದು ಸಂಭವಿಸಿದೆ:

  11 ಆಗ ಕರ್ತನ ದೂತನು ಆಕಾಶದೊಳಗಿಂದ ಅವನನ್ನು ಕರೆದು–ಅಬ್ರಹಾಮನೇ, ಅಬ್ರಹಾಮನೇ ಅಂದಾಗ ಅವನು–ಇಲ್ಲಿ ಇದ್ದೇನೆ ಅಂದನು.
12 ಆಗ ಅವನು –ಹುಡಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ. ನೀನು ದೇವರಿಗೆ ಭಯ ಪಡುತ್ತೀಯೆಂದು ಈಗ ನಾನು ತಿಳಿದಿದ್ದೇನೆ. ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವದಕ್ಕೆ ಹಿಂತೆಗೆಯಲಿಲ್ಲ ಅಂದನು.
13 ಆಗ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ನೋಡಿದನು; ಇಗೋ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು.

ಆದಿಕಾಂಡ 22: 11-13

ಕೊನೆಯ ಕ್ಷಣದಲ್ಲಿ ಇಸಾಕನು ಸಾವಿನಿಂದ ರಕ್ಷಿಸಲ್ಪಟ್ಟನು ಮತ್ತು ಅಬ್ರಹಾಮನು ಒ೦ದು ಟಗರನ್ನು ನೋಡಿದನು ಮತ್ತು  ಅದನ್ನು ಬಲಿ ಕೊಟ್ಟನು. ದೇವರು ಒಂದು ಟಗರನ್ನು ಒದಗಿಸಿದನು ಮತ್ತು ಆ ಟಗರು ಇಸಾಕನ  ಸ್ಥಾನವನ್ನು ಪಡೆಯಿತು.

ತ್ಯಾಗ: ಭವಿಷ್ಯವನ್ನು ನೋಡುವುದು

ಆಗ ಅಬ್ರಹಾಮನು ಆ ಸ್ಥಳವನ್ನು ಹೆಸರಿಸುತ್ತಾನೆ. ಅವನು ಅದನ್ನು ಹೆಸರಿಸುವುದನ್ನು ಗಮನಿಸಿ.

ಆ ಸ್ಥಳಕ್ಕೆ ಅಬ್ರಹಾಮನು ಯೆಹೋವ ಯೀರೆ ಎಂದು ಹೆಸರಿಟ್ಟನು. ಯೆಹೋವನು ಬೆಟ್ಟದಲ್ಲಿ ಒದಗಿಸುವನು ಎಂಬುದಾಗಿ ಇಂದಿನವರೆಗೂ ಹಾಗೆ ಹೇಳುವ ಪದ್ಧತಿ ಇದೆ.

ಆದಿಕಾಂಡ 22:14

ಅಬ್ರಹಾಮನು ಅದಕ್ಕೆ ‘ಕರ್ತನು ಒದಗಿಸುವನು’ ಎಂದು ಹೆಸರಿಸಿದನು. ಇಲ್ಲಿ ಒಂದು ಪ್ರಶ್ನೆ ಇದೆ. ಆ ಹೆಸರು ಭೂತ ಕಾಲ, ವರ್ತಮಾನ ಕಾಲ ಅಥವಾ ಭವಿಷ್ಯತ್ ಕಾಲದಲ್ಲಿದೆಯೇ? ಇದು ಭವಿಷ್ಯತ್ ಕಾಲದಲ್ಲಿರುವದಾಗಿ ಸ್ಪಶ್ಟವಾಗಿದೆ. ಎಲ್ಲಾ ಅನುಮಾನಗಳನ್ನು ತೆಗೆದುಹಾಕಲು “… ಇದನ್ನು ಒದಗಿಸಲಾಗುವುದು”  ಎಂಬ ಅಭಿಪ್ರಾಯವನ್ನು ಪುನರಾವರ್ತಿಸುತ್ತದೆ. ಪುನ:  ಇದು ಭವಿಷ್ಯತ್ ಕಾಲದಲ್ಲಿದೆ – ಹೀಗೆ ಭವಿಷ್ಯದತ್ತ ನೋಡುತ್ತಿದೆ. ಆದರೆ ಇಸಾಕನ ಬದಲಿಗೆ ಟಗರಿನ ತ್ಯಾಗದ ನಂತರ ಈ ಹೆಸರಿಡಲಾಗಿದೆ. ಅಬ್ರಹಾಮನು ಆ ಸ್ಥಳವನ್ನು ಹೆಸರಿಸುವಾಗ, ಪೊದೆಯಲ್ಲಿ ಹಿಡಿಯಲ್ಪಟ್ಟ ಟಗರನ್ನು ಉಲ್ಲೇಖಿಸುತ್ತಿದ್ದನೆಂದು ಮತ್ತು ತನ್ನ ಮಗನ ಬದಲಿಗೆ ಯಾಗ ಮಾಡಿದರು ಎ೦ದು ಅನೇಕರು ಭಾವಿಸುತ್ತಾರೆ. ಆದರೆ ಅದನ್ನು ಈಗಾಗಲೇ ಯಾಗ ಮಾಡಿ ಈ ಹಂತದಲ್ಲಿ ಸುಡಲಾಯಿತು. ಅಬ್ರಹಾಮನು ಆಗಲೇ ಸತ್ತ೦ತ, ತ್ಯಾಗಮಾಡಲ್ಪಟ್ಟ೦ತಹ ಮತ್ತು ಸುಟ್ಟುಹೋದ ಟಗರಿನ ಬಗ್ಗೆ ಯೋಚಿಸುತ್ತಿದ್ದದ್ದೇ ಆಗಿದ್ದರೆ – ಅವನು ಆ ಸ್ಥಳಕ್ಕೆ ‘ಕರ್ತನು ಒದಗಿಸಿದ್ದಾನೆ’ ಎಂದು ಹೆಸರಿಸುತ್ತಿದ್ದನು, ಅಂದರೆ ಭೂತ ಕಾಲದಲ್ಲಿ. ‘ಮತ್ತು ಇಂದಿಗೂ ಇದನ್ನು “ಕರ್ತನ ಪರ್ವತದ ಮೇಲೆ ಒದಗಿಸಲಾಗಿದೆ”” ಎಂದು ವ್ಯಾಖ್ಯಾನಿಸಬಹುದಾಗಿತ್ತು. ಆದರೆ ಅಬ್ರಹಾಮನು ಸ್ಪಷ್ಟವಾಗಿ ಇದನ್ನು ಭವಿಷ್ಯತ್ ಕಾಲದಲ್ಲಿ ಹೆಸರಿಸಿದ್ದಾರೆ. ಆದ್ದರಿಂದ ಈಗಾಗಲೇ ಸತ್ತ ಮತ್ತು ಯಾಗ ಮಾಡಿದ ಟಗರಿನ ಬಗ್ಗೆ ಯೋಚಿಸುತ್ತಿರಲಿಲ್ಲ. ಅವರು ವಿಭಿನ್ನವಾದ ವಿಷಯಕ್ಕೆ ಜ್ಞಾನೋದಯಗೊಂಡರು. ಅವರು ಭವಿಷ್ಯದ ಬಗ್ಗೆ ಏನಾದರೂ ಒಳನೋಟವನ್ನು ಹೊಂದಿದ್ದರು. ಆದರೆ ಏನು?

ಯಾವ ಸ್ಥಳದಲ್ಲಿ ಯಾಗವು ನಡೆಯಲ್ಪಟ್ಟಿತು

ಈ ತ್ಯಾಗಕ್ಕಾಗಿ ಅಬ್ರಹಾಮನಿಗೆ ಮಾರ್ಗ ನಿರ್ದೇಶಿಸಿದ ಪರ್ವತವನ್ನು ನೆನಪಿಸಿಕೊಳ್ಳಿ. :

ಆಗ ದೇವರು, “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಮೊರೀಯ ದೇಶಕ್ಕೆ ಹೋಗಿ…

ವಿ .2

ಇದು ನಡೆದದ್ದು ‘ಮೊರೀಯ’ದಲ್ಲಿ. ಅದು ಎಲ್ಲಿದೆ? ಇದು ಅಬ್ರಹಾಮನ ದಿನಗಳಲ್ಲಿ ಅರಣ್ಯ ಪ್ರದೇಶವಾಗಿದ್ದರೂ (ಕ್ರಿ.ಪೂ 2000), ಸಾವಿರ ವರ್ಷಗಳ ನಂತರ (ಕ್ರಿ.ಪೂ 1000) ದಾವೀದ ಮಹಾರಾಜನು ಅಲ್ಲಿ ಜೆರುಸಲೇಮ್ ನಗರವನ್ನು ಸ್ಥಾಪಿಸಿದನು ಮತ್ತು ಅವನ ಮಗ ಸೊಲೊಮೋನನು ಅಲ್ಲಿ ಮೊದಲ ದೇವಾಲಯವನ್ನು ನಿರ್ಮಿಸಿದನು. ಇದನ್ನು ನಾವು ಹಳೆಯ ಒಡಂಬಡಿಕೆಯ ಐತಿಹಾಸಿಕ ಪುಸ್ತಕಗಳಲ್ಲಿ ಓದುತ್ತೇವೆ.

  ಗ ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ ಕರ್ತನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ದಾವೀದನು ಸಿದ್ಧಮಾಡಿದ ಯೆಬೂಸಿ ಯನಾದ ಒರ್ನಾನನ ಕಣದಲ್ಲಿ ಕರ್ತನ ಆಲಯವನ್ನು ಕಟ್ಟಲು ಪ್ರಾರಂಭಿಸಿದನು.

2 ಪೂರ್ವಕಾಲವೃತ್ತಾಂತ 3:1

ಇನ್ನೂ ಹೇಳುವುದಾದರೆ, ಅಬ್ರಹಾಮನು ಜೀವಿಸಿದ ಹಳೆಯ ಒಡಂಬಡಿಕೆಯ ಸಮಯದಲ್ಲಿ(ಕ್ರಿ.ಪೂ. 4000) ‘ಮೊರೀಯ ಪರ್ವತವು’ ಅರಣ್ಯದಲ್ಲಿ ಪ್ರತ್ಯೇಕವಾದ ಪರ್ವತ ಶಿಖರವಾಗಿತ್ತು, ಆದರೆ 1000 ವರ್ಷಗಳ ನಂತರ ದಾವೀದ ಮತ್ತು ಸೊಲೊಮೋನನ ಮೂಲಕ ಅದು ಇಸ್ರಾಯೇಲ್ಯರ ಕೇಂದ್ರ ನಗರವಾಗಿ ಮಾರ್ಪಟ್ಟಿತು. ಅಲ್ಲಿ ಅವರು ಸೃಷ್ಟಿಕರ್ತನಿಗಾಗಿ ರ್ದೇವಾಲಯವನ್ನು ನಿರ್ಮಿಸಿದರು. ಇಂದಿಗೂ ಇದು ಯಹೂದಿ ಜನರಿಗೆ ಮತ್ತು ಇಸ್ರೇಲ್ ರಾಜಧಾನಿಗೆ ಪವಿತ್ರ ಸ್ಥಳವಾಗಿದೆ.

ಯೇಸು – ಯೇಸುವಿನ ಪ್ರತಿಬಿಂಬ – ಮತ್ತು ಅಬ್ರಹಾಮನ ಯಾಗ

ಈಗ ಹೊಸ ಒಡಂಬಡಿಕೆಯಲ್ಲಿ ಯೇಸುವಿನ ಶಿರೋನಾಮೆಗಳ ಬಗ್ಗೆ ಯೋಚಿಸಿ. ಯೇಸುವಿಗೆ ಅನೇಕ ಶಿರೋನಾಮೆಗಳಿವೆ. ಬಹುಶಃ ಅತ್ಯಂತ ಪ್ರಸಿದ್ಧವಾದ ಶಿರೋನಾಮೆ ಎ೦ದರೆ ‘ಕ್ರಿಸ್ತನು’. ಆದರೆ ಅವನಿಗೆ ಮತ್ತೊಂದು ಶಿರೋನಾಮೆಯನ್ನು ನೀಡಲಾಗಿದೆ, ಅದು ಸಹ ಮುಖ್ಯವಾಗಿದೆ. ಇದನ್ನು ನಾವು ಯೋಹಾನನು ಬರೆದ ಸುವಾರ್ತೆಯಲ್ಲಿ ಸ್ನಾನಿಕನಾದ ಯೋಹಾನನು ಅವನ ಬಗ್ಗೆ ಹೇಳುವದಾಗಿ ನೋಡುತ್ತೇವೆ:

  29 ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ–ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.
30 ನನ್ನ ಹಿಂದೆ ಒಬ್ಬ ಮನುಷ್ಯನು ಬರು ತ್ತಾನೆ; ಆತನು ನನಗಿಂತ ಮೊದಲೇ ಇದ್ದದರಿಂದ ನನಗಿಂತ ಮುಂದಿನವನು ಎಂದು ನಾನು ಯಾರ ವಿಷಯದಲ್ಲಿ ಹೇಳಿದೆನೋ ಆತನೇ ಈತನು.

ಯೋಹಾನ 1:29

ಇನ್ನೂ ಹೇಳುವುದಾದರೆ, ಯೇಸುವನ್ನು ‘ದೇವರ ಕುರಿಮರಿ’ ಎಂದು ಕರೆಯಲಾಗುತ್ತಿತ್ತು. ಈಗ ಯೇಸುವಿನ ಜೀವನದ ಅಂತ್ಯವನ್ನು ಪರಿಗಣಿಸಿ. ಅವನನ್ನು ಎಲ್ಲಿ ಬಂಧಿಸಿ ಶಿಲುಬೆಗೇರಿಸಲಾಯಿತು? ಅದು ಯೆರೂಸಲೇಮಿನಲ್ಲಿ (ನಾವು ನೋಡಿದಂತೆ = ‘ಮೊರಿಯಾ ಪರ್ವತ’). ಆತನ ಬಂಧನದ ಸಮಯದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ:

  7 ಆತನು ಹೆರೋದನ ಅಧಿಕಾರದ ವಿಭಾಗಕ್ಕೆ ಸಂಬಂಧಪಟ್ಟವನೆಂದು ತಿಳಿದ ಕೂಡಲೆ ಆ ಸಮಯದಲ್ಲಿ ಯೆರೂಸಲೇಮಿನಲ್ಲಿಯೇ ಇದ್ದ ಹೆರೋದನ ಬಳಿಗೆ ಆತನನ್ನು ಕಳುಹಿಸಿದನು.

ಲೂಕ 23: 7

ಯೇಸುವಿನ ಬಂಧನ, ವಿಚಾರಣೆ ಮತ್ತು ಶಿಲುಬೆಗೇರಿಸುವಿಕೆಯು ಯೆರೂಸಲೇಮಿನಲ್ಲಿ ಸಂಭವಿಸಿದೆ (= ಮೊರಿಯಾ ಪರ್ವತ). ಮೊರಿಯಾ ಪರ್ವತದಲ್ಲಿ ನಡೆದ ಘಟನೆಗಳನ್ನು ವೇಳಾಪಟ್ಟಿಯು ತೋರಿಸುತ್ತದೆ.

ಹಳೆಯ ಒಡಂಬಡಿಕೆಯಿಂದ ಹೊಸ ಒಡಂಬಡಿಕೆಯವರೆಗೆ ಮೊರಿಯಾ ಪರ್ವತದಲ್ಲಿನ  ಪ್ರಮುಖ ಇತಿಹಾಸದ ಘಟನೆಗಳು

ಈಗ ಅಬ್ರಹಾಮನ ಬಗ್ಗೆ ಮತ್ತೆ ಯೋಚಿಸಿ. ಅವನು ಆ ಸ್ಥಳಕ್ಕೆ ‘ಯೆಹೋವನು ಒದಗಿಸುವನು’ ಎಂದು  ಭವಿಷ್ಯತ್  ಕಾಲದಲ್ಲಿ  ಹೆಸರಿಸಲು ಕಾರಣವೇನು? ಮುಂಬರುವ ದಿನಗಳಲ್ಲಿ  ಆ  ಸ್ಥಳದಲ್ಲಿ ಏನಾದರು ಒದಗಲಾಗುವುದು ಎಂದು ಅವನು ಹೇಗೆ ತಿಳಿದನು? ಅದು ಅವನು ಮೊರಿಯಾ ಪರ್ವತದ ಮೇಲೆ ಜಾರಿಗೆ ತಂದದ್ದನ್ನು ನಿಖರವಾಗಿ ಪ್ರತಿಬಿಂಬಿಸುತ್ತದೆ. ಅದರ ಬಗ್ಗೆ ಯೋಚಿಸಿ – ಅವನ ಪರೀಕ್ಷೆಯಲ್ಲಿ ಮಗನಾದ ಇಸಾಕನು ಕೊನೆಯ ಕ್ಷಣದಲ್ಲಿ ಸಾವಿನಿಂದ ರಕ್ಷಿಸಲ್ಪಟ್ಟನು ಏಕೆಂದರೆ ಅವನ ಸ್ಥಳದಲ್ಲಿ ಒಂದು ಟಗರನ್ನು ಬಲಿ ನೀಡಲಾಯಿತು. ಎರಡು ಸಾವಿರ ವರ್ಷಗಳ ನಂತರ, ಯೇಸುವನ್ನು ‘ದೇವರ ಕುರಿಮರಿ’ ಎಂದು ಕರೆಯಲಾಯಿತು ಮತ್ತು ಅದೇ ಸ್ಥಳದಲ್ಲಿಯೇ ಬಲಿ ನೀಡಲಾಯಿತು! ಇದು ‘ಅದೇ ಸ್ಥಳವೆ೦ದು’ ಅಬ್ರಹಾಮನಿಗೆ ಹೇಗೆ ಗೊತ್ತಿತ್ತು? ಅವನಿಗೆ ಪ್ರಜಾಪತಿಯಿಂದ, ಸೃಷ್ಟಿಕರ್ತನಾದ ದೇವರಿಂದಲೇ ಜ್ಞಾನೋದಯ ದೊರೆತಿದ್ದರೆ ಗಮನಾರ್ಹವಾದದ್ದನ್ನು ಮಾತ್ರ ಅವನು ತಿಳಿದಿರಬಹುದು ಮತ್ತು ಮು೦ತಿಳಸಬಹುದಿತ್ತು.

ದೈವಿಕ ಮನಸ್ಸು ಬಹಿರಂಗವಾಗಿದೆ

ಈ ಎರಡು ಘಟನೆಗಳನ್ನು ಸ್ಥಳದ ಮೂಲಕ ಸಂಪರ್ಕಿಸುವ ಮನಸ್ಸು ಇದ್ದಾಗ್ಯೂ, ಅವರು 2000 ವರ್ಷಗಳ ಇತಿಹಾಸದಿ೦ದ ಪ್ರತ್ಯೇಕಿಸಲ್ಪಟ್ಟರು.

ಅಬ್ರಹಾಮನ ತ್ಯಾಗವು 2000 ವರ್ಷಗಳ ಮುಂದೆ ನಡೆಯಬಹುದಾದ೦ತ ಯೇಸುವಿನ ತ್ಯಾಗದ ಬಗ್ಗೆ ಯೋಚಿಸುವಂತೆ ಮಾಡುವ ಒಂದು ಸಂಕೇತವಾಗಿ ತೋರುತ್ತದೆ.

ಹಿಂದಿನ ಘಟನೆಯಾದ (ಅಬ್ರಹಾಮನ ತ್ಯಾಗವು) ಅನಂತರದ ಘಟನೆಯಾದ (ಯೇಸುವಿನ ತ್ಯಾಗವನ್ನು) ಹೇಗೆ ಸೂಚಿಸುತ್ತದೆಯೋ ಹಾಗೆಯೇ ಈ ನಂತರದ ಘಟನೆಯನ್ನು ನಮಗೆ ನೆನಪಿಸುತ್ತದೆ. ತನ್ನನ್ನೇ ನಮಗಾಗಿ ಪ್ರಕಟಿಸಬೇಕೆ೦ಬ (ಸೃಷ್ಟಿಕರ್ತನಾದ ದೇವರ)  ಮನಸ್ಸು ಸಾವಿರಾರು ವರ್ಷಗಳಿಂದ ಬೇರ್ಪಟ್ಟಿದ್ದರೂ ಘಟನೆಗಳನ್ನು ಸಮನ್ವಯಗೊಳಿಸುವ ಮೂಲಕ ನಮಗೆ  ಬಹಿರಂಗಪಡಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಇದು ದೇವರು ಅಬ್ರಹಾಮನ ಮೂಲಕ ಮಾತಾಡಿದ ಸಂಕೇತವಾಗಿದೆ.

ನಿಮಗೂ ಮತ್ತು ನನಗೂ ಶುಭಸ೦ದೇಶ

ಹೆಚ್ಚಿನ ವೈಯಕ್ತಿಕ ಕಾರಣಗಳಿಗಾಗಿ ಈ ವರ್ಣನೆಯು ನಮಗೆ ಮುಖ್ಯವಾಗಿದೆ. ಕೊನೆಯದಾಗಿ, ದೇವರು ಅದನ್ನು ಅಬ್ರಹಾಮನಿಗೆ ಘೋಷಿಸಿದನು

“…ನೀನು ನನ್ನ ಮಾತಿಗೆ ವಿಧೇಯನಾಗಿ ಭೂಮಿಯ ಎಲ್ಲಾ ಜನಾಂಗಗಳಿಗೆ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು  

ಆದಿಕಾಂಡ 22: 18

ನಿಮ್ಮ ಭಾಷೆ, ಧರ್ಮ, ಶಿಕ್ಷಣ, ವಯಸ್ಸು, ಲಿಂಗ ಅಥವಾ ಸಂಪತ್ತು ಯಾವುದೇ ಇರಲಿ – ನೀವು ‘ಭೂಮಿಯ ಮೇಲಿನ ಯಾವುದಾದರೊ೦ದು  ರಾಷ್ಟ್ರಕ್ಕೆ’ ಸೇರಿದವರಾಗಿದ್ದೀರಿ! ಆಗ ಇದು ನಿಮಗೆ ವಿಶೇಷವಾಗಿ ನೀಡಲಾಗುವ ವಾಗ್ದಾನವಾಗಿದೆ. ವಾಗ್ದಾನ ಏನೆ೦ಬದನ್ನು ಗಮನಿಸಿ – ದೇವರಿಂದಲೇ ಒಂದು ‘ಆಶೀರ್ವಾದ’! ಇದು ಕೇವಲ ಯಹೂದಿಗಳಿಗೆ ಮಾತ್ರವಲ್ಲ, ಪ್ರಪಂಚದ ಎಲ್ಲಾ ಜನರಿಗೆ ನೀಡಲ್ಪಟ್ಟಿದೆ .

ಈ ‘ಆಶೀರ್ವಾದ’ವನ್ನು ಹೇಗೆ ನೀಡಲಾಗುತ್ತದೆ? ಇಲ್ಲಿ ಸಂತತಿ’ ಎಂಬ ಪದವು ಏಕವಚನದಲ್ಲಿದೆ. ಇದು ಅನೇಕ ವಂಶಸ್ಥರು ಅಥವಾ ಜನರಲ್ಲಿರುವಂತೆ ‘ಸಂತತಿಗಳು’ ಅಲ್ಲ, ಆದರೆ ‘ಅವನು’ ಎಂಬಂತೆ ಏಕವಚನದಲ್ಲಿದೆ.  ಇದು ಅನೇಕ ಜನರು ಅಥವಾ ಜನರ ಗುಂಪಿನ ಮೂಲಕ ಇರುವ ‘ಅವರು’ ಅಲ್ಲ. ಇಬ್ರೀಯ ವೇದಗಳಲ್ಲಿ ದಾಖಲಾಗಿರುವಂತೆ ‘ಅವನು’ ಸರ್ಪದ ‘ಹಿಮ್ಮಡಿಯನ್ನು ಹೊಡೆಯುತ್ತಾನೆ’ ಮತ್ತು ಇದು ಇತಿಹಾಸದ ಪ್ರಾರ೦ಭದಲ್ಲಿ ನೀಡಿದ ವಾಗ್ದಾನವನ್ನು ನಿಖರವಾಗಿ ಅನುಸರಿಸುತ್ತದೆ ಮತ್ತು ಪುರುಸಸುಕ್ತದಲ್ಲಿ ನೀಡಲ್ಪಟ್ಟ೦ತೆ  ಪುರುಷನ ತ್ಯಾಗದ (‘ಅವನು’) ವಾಗ್ದಾನಕ್ಕೆ ಸಮನಾಗಿರುತ್ತದೆ. ಈ ಚಿಹ್ನೆಯೊಂದಿಗೆ ಮೊರಿಯಾ ಪರ್ವತ  (= ಯೆರುಸಲೇಮ್) – ಈ ಪ್ರಾಚೀನ ವಾಗ್ದಾನಗಳಿಗೆ ಹೆಚ್ಚಿನ ವಿವರಗಳನ್ನು ನೀಡುತ್ತದೆ. ಅಬ್ರಹಾಮನ ತ್ಯಾಗದ ವಿವರಗಳು ಈ ಆಶೀರ್ವಾದವನ್ನು ಹೇಗೆ ನೀಡಲಾಗಿದೆ, ಮತ್ತು ಸದಾಚಾರಕ್ಕೆ ಹೇಗೆ ಬೆಲೆ ನೀಡಲಾಗುತ್ತದೆ ಎಂಬುದನ್ನು ಅಬ್ರಹಾಮನ ತ್ಯಾಗದ ವಿವರಗಳ ಮೂಲಕ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

ದೇವರ ಆಶೀರ್ವಾದವನ್ನು ಹೇಗೆ ಪಡೆಯಲಾಗುತ್ತದೆ?

ಇಸಾಕನನ್ನು ಸಾವಿನಿಂದ ರಕ್ಷಿಸಿ, ಟಗರು ಅವನ ಸ್ಥಳದಲ್ಲಿ ತ್ಯಾಗ ಮಾಡಿದ೦ತೆಯೇ, ದೇವರ ಕುರಿಮರಿ ತನ್ನ ತ್ಯಾಗದ ಮರಣದಿಂದ, ಮರಣದ ಶಕ್ತಿ ಮತ್ತು ದಂಡದಿಂದ ನಮ್ಮನ್ನು ರಕ್ಷಿಸುತ್ತಾನೆ. ಅದನ್ನು ಸತ್ಯವೇದವು ಘೋಷಿಸುತ್ತದೆ

… ಪಾಪಕ್ಕೆ ಮರಣವೇ ಸಂಬಳ

ರೋಮಾಪುರದವರಿಗೆ 6: 23

ನಾವು ಮಾಡುವ ಪಾಪಗಳು ವಿಧಿಯನ್ನು ಉಂಟುಮಾಡುತ್ತವೆ ಮತ್ತು ಅದು ಸಾವಿಗೆ ಕಾರಣವಾಗುತ್ತದೆ ಎಂದು ಹೇಳುವ ಇನ್ನೊಂದು ವಿಧಾನ ಇದು. ಆದರೆ ಇಸಾಕನಿಗೆ ಬದಲಿಯಾಗಿ ಕುರಿಮರಿ ಸಾವನ್ನಪ್ಪಿತು. ಅದನ್ನು ಅಬ್ರಹಾಮನು ಮತ್ತು ಇಸಾಕನು ಒಪ್ಪಿಕೊಳ್ಳಬೇಕಾಗಿತ್ತು. ಅವನು ಅದನ್ನು ಮಾಡಲಿಲ್ಲ ಮತ್ತು ಅದನ್ನು ಅರ್ಹಗೊಳಿಸಲಿಲ್ಲ. ಆದರೆ ಅವನು ಅದನ್ನು ಉಡುಗೊರೆಯಾಗಿ ಸ್ವೀಕರಿಸಬಹುದಾಗಿತ್ತು. ಹೀಗೆ ಅವನು ಮೋಕ್ಷವನ್ನುಹೊ೦ದಿದನು.

ಇದು ನಾವು ಅನುಸರಿಸಬಹುದಾದ ಮಾದರಿಯನ್ನು ತೋರಿಸುತ್ತದೆ. ಯೇಸು ‘ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿಯಾಗಿದ್ದಾನೆ’. ಇದು ನಿಮ್ಮ ಸ್ವಂತ ಪಾಪವನ್ನು ಒಳಗೊಂಡಿದೆ. ಆದ್ದರಿಂದ ಯೇಸು, ಕುರಿಮರಿ, ನಿಮ್ಮ ಪಾಪಗಳನ್ನು ‘ತೆಗೆದುಹಾಕಲು’ ತನ್ನನ್ನೇ ಸಮರ್ಪಿಸಿದನು. ನೀವು ಇದಕ್ಕೆ ಅರ್ಹರಲ್ಲ ಆದರೆ ನೀವು ಅದನ್ನು ಉಡುಗೊರೆಯಾಗಿ ಸ್ವೀಕರಿಸಬಹುದು. ಪುರುಷನಾದ ಯೇಸುವಿಗೆ ಕರೆ ಮಾಡಿ ಮತ್ತು ನಿಮ್ಮ ಪಾಪಗಳನ್ನು ತೆಗೆದುಹಾಕಲು ಕೇಳಿಕೊಳ್ಳಿ. ಅವನ ತ್ಯಾಗವೇ ಅವನಿಗೆ ಆ ಶಕ್ತಿಯನ್ನು ನೀಡುತ್ತದೆ. ಇದು ನಮಗೆ ತಿಳಿದಿದೆ ಏಕೆಂದರೆ ಇದು ಮೊರಿಯಾ ಪರ್ವತದ ಮೇಲೆ ಅಬ್ರಹಾಮನ ಮಗನ ಬಲಿಯು, ಅದೇ ಸ್ಥಳದಲ್ಲಿ 2000 ವರ್ಷಗಳ ನಂತರ ಯೇಸುವಿನಿಂದ ‘ಒದಗಿಸಲ್ಪಡುವುದು’ ಮುನ್ಸೂಚನೆ ನೀಡಲ್ಪಟ್ಟಿದೆ.

ಪಸ್ಕಹಬ್ಬದ ಚಿಹ್ನೆಯಲ್ಲಿ ಇದು ಯಾವಾಗ ಸಂಭವಿಸುತ್ತದೆ ಎಂದು ಮುನ್ಸೂಚನೆ ನೀಡುವ ಮೂಲಕ ಇದನ್ನು ಅನುಸರಿಸಲಾಗುತ್ತದೆ.

ಮುಖ್ಯಪದಗಳು: ಕೈಲಾಸ ಪರ್ವತ,ಅಬ್ರಹಾಮ, ವಾಗ್ದಾನ, ಮೊರೀಯ, ಸದಾಚಾರ

Leave a Reply

Your email address will not be published. Required fields are marked *