ರಾಮಾಯಣಕ್ಕಿಂತ ಉತ್ತಮವಾದ ಪ್ರೀತಿಯ ಮಹಾಕಾವ್ಯ- ನೀವು ಅದರಲ್ಲಿರಬಹುದು

ಒಬ್ಬರು ರಚಿಸಲಾದ ಎಲ್ಲಾ ವಿಶೇಷ ಮಹಾಕಾವ್ಯಗಳು ಮತ್ತು ಪ್ರೇಮಕಥೆಗಳನ್ನು ಪರಿಗಣಿಸಿದಾಗ, ರಾಮಾಯಣವು ಖಂಡಿತವಾಗಿಯೂ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬರುತ್ತದೆ. ಈ ಮಹಾಕಾವ್ಯಕ್ಕೆ ಅನೇಕ ಶ್ರೇಷ್ಠವಾದ ಅಂಶಗಳಿವೆ:

  • ರಾಮ ಮತ್ತು ಸೀತೆಯ ನಡುವಿನ ಪ್ರೀತಿ,
  • ಸಿಂಹಾಸನಕ್ಕಾಗಿ ಹೋರಾಡುವ ಬದಲು ಅರಣ್ಯ ವನವಾಸವನ್ನು ಆರಿಸುವಲ್ಲಿ ರಾಮನ ನಮ್ರತೆ,
  • ರಾಮನ ಒಳ್ಳೆಯತನವನ್ನು ರಾವಣನ ದುಷ್ಟತೆಯ ವಿರುದ್ಧ ಹಾಕಲಾಗಿದೆ,
  • ರಾವಣನ ಸೆರೆಯಲ್ಲಿದ್ದಾಗ ಸೀತೆಯ ಪರಿಶುದ್ಧತೆ,
  • ಅವಳನ್ನು ರಕ್ಷಿಸುವಲ್ಲಿ ರಾಮನ ಧೈರ್ಯ.
ರಾಮಾಯಣದ ಅನೇಕ ರೂಪಾಂತರಗಳನ್ನು ಪ್ರದರ್ಶಿಸಲಾಗಿದೆ

ಅದರ ವೀರರ ಪಾತ್ರವನ್ನು ಹೊರತರುವ ರೀತಿಯಲ್ಲಿ, ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಗೆಲ್ಲುವ ಉದ್ದದ ಹಾದಿಯು, ರಾಮಾಯಣವನ್ನು ಸಮಯರಹಿತ ಮಹಾಕಾವ್ಯವನ್ನಾಗಿ ಪರಿಣಾಮಗೊಳಿಸಿದೆ . ಈ ಕಾರಣಕ್ಕಾಗಿ ಸಮುದಾಯಗಳು ಪ್ರತಿವರ್ಷ ರಾಮಲೀಲೆಗಳನ್ನು ಪ್ರದರ್ಶಿಸುತ್ತವೆ, ವಿಶೇಷವಾಗಿ ವಿಜಯದಶಮಿ (ದುಸ್ಸೆಹ್ರ, ದಸರಾ  ಅಥವಾ ದಶೈನ್) ಉತ್ಸವದಲ್ಲಿ, ರಾಮ್ಚರಿತ್ ಮನಸ್  ಅಂತಹ ರಾಮಾಯಣದಿಂದ ಪಡೆದ ಸಾಹಿತ್ಯವನ್ನು ಹೆಚ್ಚಾಗಿ ಆಧರಿಸಿದೆ.

ನಾವು ರಾಮಾಯಣದಲ್ಲಿಇರಲು ಸಾಧ್ಯವಿಲ್ಲ

ರಾಮಾಯಣದ ಪ್ರಮುಖ ನ್ಯೂನತೆಯೆಂದರೆ ನಾವು ನಾಟಕವನ್ನು ಕೇವಲ ಓದಬಹುದು, ಕೇಳಬಹುದು ಅಥವಾ ವೀಕ್ಷಿಸಬಹುದು. ಕೆಲವರು ರಾಮಲೀಲೆಯಲ್ಲಿ ಭಾಗವಹಿಸಬಹುದು, ಆದರೆ ರಾಮಲೀಲೆಯು ನಿಜವಾದ ಕಥೆಯಲ್ಲ. ನಾವು ನಿಜವಾಗಿಯೂ ದಶರಥ ರಾಜನ ಅಯೋಧ್ಯ ಸಾಮ್ರಾಜ್ಯದಲ್ಲಿರುವ ರಾಮಾಯಣ ಜಗತ್ತಿನಲ್ಲಿ ಪ್ರವೇಶಿಸಿ ರಾಮನೊಂದಿಗೆ ಸಾಹಸಗಳನ್ನು ಮಾಡಲು ಜೊತೆಯಲ್ಲಿರಲು ಸಾಧ್ಯವಾದರೆ ಉತ್ತಮವಲ್ಲವೇ?

ಮಹಾಕಾವ್ಯದೊಳಗೆಪ್ರವೇಶಿಸಲು ಆಹ್ವಾನಿಸಲಾಗಿದೆ

ಅದು ನಮಗೆ ಲಭ್ಯವಿಲ್ಲದಿದ್ದರೂ, ರಾಮಾಯಣದಂತೆಯೇ ಮತ್ತೊಂದು ಮಹಾಕಾವ್ಯವೂ ಇದೆ, ಅದನ್ನು ನಾವು ಪ್ರವೇಶಿಸಲು ಆಹ್ವಾನಿಸಲ್ಪಟ್ಟಿದ್ದೇವೆ. ಈ ಮಹಾಕಾವ್ಯವು ರಾಮಾಯಣಕ್ಕೆ ಅನೇಕ ಹೋಲಿಕೆಗಳನ್ನು ಹೊಂದಿದೆ, ನಾವು ಈ ನಿಜ-ಜೀವನದ ಮಹಾಕಾವ್ಯವನ್ನು ಅರ್ಥಮಾಡಿಕೊಳ್ಳಲು ರಾಮಾಯಣವನ್ನು ಮಾದರಿ ಆಗಿ ಬಳಸಬಹುದು. ಈ ಮಹಾಕಾವ್ಯವು ಪ್ರಾಚೀನ ಇಬ್ರೀಯ  ವೇದಗಳನ್ನು ರೂಪಿಸುತ್ತದೆ, ಈಗ ಇದನ್ನು ಹೆಚ್ಚಾಗಿ ಸತ್ಯವೇದ ಎಂದು ಕರೆಯಲಾಗುತ್ತದೆ. ಆದರೆ ಈ ಮಹಾಕಾವ್ಯವು ನಾವು ವಾಸಿಸುವ ಜಗತ್ತಿನಲ್ಲಿ ಅಭಿನಯಿಸುತ್ತದೆ, ಅದರ ನಾಟಕದೊಳಗೆ  ಪ್ರವೇಶಿಸಲು ನಮಗೆ ಅವಕಾಶ ಮಾಡಿಕೊಡುತ್ತದೆ. ಇದು ನಮಗೆ  ಹೊಸದಾಗಿರಬಹುದಾದ್ದರಿಂದ, ರಾಮಾಯಣದ ಮಸೂರದ ಮೂಲಕ ನೋಡುವ ಅದನ್ನು ನಾವು ನೋಡುವದರಿಂದ, ಅದರ ಕಥೆಯನ್ನು, ಮತ್ತು ಅದರಲ್ಲಿ ನಾವು ಅಭಿನಯಿಸುವ ಪಾತ್ರವನ್ನು ಅರ್ಥಮಾಡಿಕೊಳ್ಳಬಹುದು.

ಇಬ್ರೀಯ ವೇದಗಳು: ರಾಮಾಯಣದಂತಹ ಪ್ರೀತಿಯ ಮಹಾಕಾವ್ಯ

ರಾಮಾಯಣದ ಮುಖ್ಯಭಾಗ ರಾಮ ಮತ್ತು ಸೀತೆಯ ಪ್ರೀತಿಯ ಕುರಿತಾಗಿರುವದು

ಅನೇಕ ಭಾಗ-ಕಥಾವಸ್ತುಗಳನ್ನು ಹೊಂದಿರುವ ಮಹಾಕಾವ್ಯವಾಗಿದ್ದರೂ, ರಾಮಾಯಣವು ನಾಯಕ,ರಾಮ, ಮತ್ತು ಅದರ ನಾಯಕಿ, ಸೀತೆಯ ನಡುವಿನ ಪ್ರೇಮಕಥೆಯನ್ನು ಕೇಂದ್ರೀಕರಿಸಿರುವದನ್ನು ರೂಪಿಸುತ್ತದೆ. ಅದೇ ರೀತಿಯಲ್ಲಿ, ಇಬ್ರೀಯ ವೇದಗಳು ಅನೇಕ ಭಾಗ-ಕಥಾವಸ್ತುಗಳೊಂದಿಗೆ ದೊಡ್ಡ ಮಹಾಕಾವ್ಯವನ್ನು ರೂಪಿಸಿದರೂ, ಸೀತೆಯು ರಾಮನ ವಧುವಂತೆ, ಸತ್ಯವೇದವು ಯೇಸು (ನಾಯಕ) ಮತ್ತು ಈ ಜಗತ್ತಿನಲ್ಲಿ ಅವನ ವಧು ಆಗುವ ಜನರ ನಡುವಿನ ಪ್ರೇಮಕಥೆಯನ್ನು ಕೇಂದ್ರೀಕರಿಸಿದೆ. ರಾಮಾಯಣದಲ್ಲಿ ಸೀತೆಯು ಅಭಿನಯಿಸಲು ಪ್ರಮುಖ ಪಾತ್ರವನ್ನು ಹೊಂದಿದಂತೆ, ಸತ್ಯವೇದದ ಕಥೆಯಲ್ಲಿ ನಮಗೂ ಅಭಿನಯಿಸಲು ಒಂದು ಪ್ರಮುಖ ಪಾತ್ರವಿದೆ.

ಪ್ರಾರಂಭ: ಪ್ರೀತಿಯ ನಷ್ಟ

ಆದರೆ ಆರಂಭದಲ್ಲಿ ಪ್ರಾರಂಭಿಸೋಣ. ಹೆಚ್ಚಿನ ರಾಮಾಯಣ ಗ್ರಂಥಗಳಲ್ಲಿ ಸೀತೆಯು ಭೂಮಿಯಿಂದ ಬರುವಂತೆಯೇ, ಭೂಮಿಯಿಂದಲೇ ದೇವರು ಮನುಷ್ಯನನ್ನು ಸೃಷ್ಟಿಸಿದನೆಂದು ಸತ್ಯವೇದ ಹೇಳುತ್ತದೆ. ದೇವರು ಇದನ್ನು ಮಾಡಿದನು ಏಕೆಂದರೆ ಆತನು ಮನುಷ್ಯನನ್ನು ಪ್ರೀತಿಸಿದನು, ಅವನೊಂದಿಗೆ ಸಂಬಂಧವನ್ನು ಬಯಸುತ್ತಾನೆ. ಹೇಗೆ ದೇವರು ತನ್ನ ಜನರಿಗಾಗಿರುವ  ತನ್ನ ಬಯಕೆಯನ್ನು ವಿವರಿಸುತ್ತಾನೆ ಎಂಬುದನ್ನು ಪ್ರಾಚೀನ ಇಬ್ರೀಯ ವೇದಗಳಲ್ಲಿ ಗಮನಿಸಿರಿ.

23 ತರುವಾಯ ಇಜ್ರೇಲನ್ನು ನನಗಾಗಿ ದೇಶದಲ್ಲಿ ಬಿತ್ತುವೆನು; ಕರುಣೆ ಹೊಂದ ದವಳ ಮೇಲೆಯೇ ನಾನು ಕರುಣೆಯನ್ನು ತೋರಿ ಸುವೆನು. ನನ್ನ ಜನವಲ್ಲದ್ದಕ್ಕೆ–ನೀನು ನನ್ನ ಜನ ವೆಂದು ಹೇಳುವೆನು; ಅವರು–ನನ್ನ ದೇವರೇ ಎಂದು ಭಜಿಸುವರು ಎಂದು ದೇವರಾದ ಕರ್ತನು ಹೇಳುತ್ತಾನೆ.

ಹೋಶೇಯನು 2:23

ಖಳನಾಯಕನಿಂದ ನಾಯಕಿಯ ಸೆರೆ

ರಾವಣನು ಸೀತೆಯನ್ನು ಅಪಹರಿಸಿ, ರಾಮನಿಂದ ಅವಳನ್ನು ಬೇರ್ಪಡಿಸುತ್ತಾನೆ

ಆದಾಗ್ಯೂ, ದೇವರು ಈ ಸಂಬಂಧಕ್ಕಾಗಿ ಮಾನವಕುಲವನ್ನು ಸೃಷ್ಟಿಸಿದರೂ, ಖಳನಾಯಕನು ಸಂಬಂಧವನ್ನು ನಾಶಪಡಿಸಿದನು. ರಾವಣನು ಸೀತೆಯನ್ನು ಅಪಹರಿಸಿ ಹಾಗೂ ತನ್ನ ಲಂಕಾ ಸಾಮ್ರಾಜ್ಯದಲ್ಲಿ ಬಂಧನದಲ್ಲಿಟ್ಟಂತೆ, ದೇವರ ಎದುರಾಳಿಯಾದ, ಸೈತಾನನನ್ನು, ಸಾಮಾನ್ಯವಾಗಿ ಅಸುರದಂತ- ಸರ್ಪವೆಂದು ಚಿತ್ರಿಸಲಾಗಿದೆ, ಮಾನವಕುಲದ ಬಂಧನವನ್ನು ತಂದಿತು. ಸತ್ಯವೇದವು ಅವನ ನಿಯಂತ್ರಣದಲ್ಲಿರುವ ನಮ್ಮ ಪರಿಸ್ಥಿತಿಯನ್ನು ಈ ಮಾತುಗಳಲ್ಲಿ ವಿವರಿಸುತ್ತದೆ.

ದಲ್ಲದೆ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಆತನು ಬದುಕಿಸಿದನು.
2 ನೀವು ಪೂರ್ವದಲ್ಲಿ ಅಪರಾಧ ಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹ ಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡಿಸುವ ಆತ್ಮನಿಗನುಸಾರವಾಗಿ ನಡೆದುಕೊಂಡಿರಿ;
3 ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು.

ಎಫೆಸದವರಿಗೆ 2: 1-3

ಬರುವ ಸಂಘರ್ಷದ ರೂಪ

ರಾವಣನು ತನ್ನ ರಾಜ್ಯಕ್ಕೆ ಸೀತೆಯನ್ನು ವಶಪಡಿಸಿಕೊಂಡಾಗ, ರಾಮನು ಅವಳನ್ನು ರಕ್ಷಿಸುವದಾಗಿ ಮತ್ತು ಅವನನ್ನು  ನಾಶಪಡಿಸುವುದಾಗಿ ಎಚ್ಚರಿಸಿದನು. ಅದೇ ರೀತಿ, ಸೈತಾನನು ಪಾಪ ಮತ್ತು ಸಾವಿಗೆ ನಮ್ಮ ಪತನವನ್ನು ತಂದಾಗ, ದೇವರು ಸೈತಾನನನ್ನು ಎಚ್ಚರಿಸಿದನು, ಮಾನವನ ಇತಿಹಾಸದ ಆರಂಭದಲ್ಲಿ, ಹೇಗೆ ದೇವರು ಅವನನ್ನು ನಾಶಪಡಿಸುತ್ತಾನೆ, ಸ್ತ್ರೀಯ ಸಂತಾನದ ಮೂಲಕ –  ಒಗಟು ಈ ವಿರೋಧಿಗಳ ನಡುವಿನ ಹೋರಾಟದ ಕೇಂದ್ರವಾಗಿತ್ತು.

ದೇವರು ಈ ಸಂತಾನದ ಬರುವಿಕೆಯನ್ನು ಪ್ರಾಚೀನ ಕಾಲದ ಮೂಲಕ ಪುನರುಚ್ಚರಿಸಿದ್ದಾನೆ:

ಹಾಗೆಯೇ ರಾಮಾಯಣವು ರಾವಣ ಮತ್ತು ರಾಮರ ನಡುವಿನ ಮುಖಾಮುಖಿಯನ್ನು ಈ ಮೂಲಕ ರಚಿಸಿತು:

  • ಅಸಾಧ್ಯವಾದ ಗರ್ಭಧಾರಣೆ (ದಶರಥನ ಹೆಂಡತಿಯರು ದೈವಿಕ ಮಧ್ಯಸ್ಥಿಕೆಯಿಲ್ಲದೆ ಗರ್ಭಧರಿಸಲು ಸಾಧ್ಯವಿರಲಿಲ್ಲ),
  • ಮಗನನ್ನು ಬಿಟ್ಟುಕೊಡುವುದು (ದಶರಥನು ರಾಮನನ್ನು ಕಾಡಿನಲ್ಲಿ ಗಡಿಪಾರು ಮಾಡಲು ಬಿಟ್ಟುಕೊಡಬೇಕಾಯಿತು),
  • ಜನರ ಬಿಡುಗಡೆ (ರಾಕ್ಷಸ ಸುಬಹು ಕಾಡಿನ ಮುನಿಗಳನ್ನು, ವಿಶೇಷವಾಗಿ ವಿಶ್ವಮಿತ್ರನನ್ನು, ರಾಮನು ಅವನನ್ನು ನಾಶಮಾಡುವವರೆಗೂ ಪೀಡಿಸಿದನು),
  • ಅದ್ವಿತೀಯ ರಾಜವಂಶದ ಸ್ಥಾಪನೆ (ಅಂತಿಮವಾಗಿ ರಾಮನು ರಾಜನಾಗಿ ಆಳ್ವಿಕೆ ನಡೆಸಲು ಸಾಧ್ಯವಾಯಿತು).

                                                                                            ತನ್ ಪ್ರೀತಿಯನ್ ರಕ್ಷಿಸಲು ಬರುತ್ತಾನೆ

ಕನ್ಯೆಯಾದ ಮಹಿಳೆಯ ಮೂಲಕ ಬರುವನೆಂದು ವಾಗ್ಧಾನ ನೀಡಿದ ಯೇಸುವು ಆ ಸಂತಾನವೆಂದು ಸುವಾರ್ತೆಗಳು ಬಹಿರಂಗಪಡಿಸುತ್ತವೆ. ರಾವಣನಿಂದ ಸಿಕ್ಕಿಬಿದ್ದ ಸೀತೆಯನ್ನು ರಕ್ಷಿಸಲು ರಾಮ ಬಂದಂತೆ, ಸಾವು ಮತ್ತು ಪಾಪದಿಂದ ಸಿಕ್ಕಿಬಿದ್ದವರನ್ನು ರಕ್ಷಿಸಲು ಯೇಸು ಭೂಮಿಗೆ ಬಂದನು. ಆದಾಗ್ಯೂ, ರಾಮನಂತೆ, ಅವನು ದೈವಿಕ ಅದ್ವಿತೀಯನು, ಆತನು ಸ್ವಇಚ್ಚೆಯಿಂದ ಹಕ್ಕು ಮತ್ತು ಅಧಿಕಾರದಿಂದ ತನ್ನನ್ನೇ ಬರಿದುಮಾಡಿಕೊಂಡನು. ಸತ್ಯವೇದವು ಇದನ್ನು ಈ ರೀತಿ ವಿವರಿಸುತ್ತದೆ

5 ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿ ಇರಲಿ.
6 ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ
7 ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು.
8 ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿ ಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣ ವನ್ನಾದರೂ ಹೊಂದುವಷ್ಟು ವಿಧೇಯನಾದನು.

ಫಿಲಿಪ್ಪಿಯವರಿಗೆ 2: 5 ಬಿ -8

ಸೋಲಿನ ಮೂಲಕ ವಿಜಯ

ರಾಮನು ದೈಹಿಕ ಯುದ್ಧದ ಮೂಲಕ ರಾವಣನನ್ನು ಸೋಲಿಸುತ್ತಾನೆ

ರಾಮಾಯಣ ಮತ್ತು ಸತ್ಯವೇದ ಮಹಾಕಾವ್ಯದ ನಡುವಿನ ಪ್ರಮುಖ ವ್ಯತ್ಯಾಸ ಇಲ್ಲಿದೆ. ರಾಮಾಯಣದಲ್ಲಿ ರಾಮನು ರಾವಣನನ್ನು ಶಕ್ತಿಯ ಬಲದಿಂದ ಸೋಲಿಸುತ್ತಾನೆ. ವೀರರ ಯುದ್ಧದಲ್ಲಿ ಅವನನ್ನು ಕೊಲ್ಲುತ್ತಾನೆ.

ರಾಮನು ದೈಹಿಕ ಯುದ್ಧದ ಮೂಲಕ ರಾವಣನನ್ನು ಸೋಲಿಸುತ್ತಾನೆ

ಯೇಸುವಿನ ವಿಜಯದ ಹಾದಿ ವಿಭಿನ್ನವಾಗಿತ್ತು; ಅದು ಸೋಲಿನ ಹಾದಿಯ ಮೂಲಕ ಸಾಗಿತು. ಭೌತಿಕ ಯುದ್ಧವನ್ನು ಗೆಲ್ಲುವ ಬದಲು, ಯೇಸು ಮೊದಲೇ ಪ್ರವಾದಿಸಿದಂತೆ ದೈಹಿಕ ಮರಣ ಹೊಂದಿದನು. ಅತನು ಇದನ್ನು ಮಾಡಿದನು ಏಕೆಂದರೆ ನಮ್ಮ ಸೆರೆಯು ಸಾವಿನಲ್ಲಾಗಿತ್ತು, ಆದ್ದರಿಂದ ಅತನು ಸಾವನ್ನು ಸೋಲಿಸಬೇಕಾಗಿತ್ತು. ಅತನು ಸತ್ತವರೊಳಗಿಂದ ಎದ್ದೇಳುವ ಮೂಲಕ ಹಾಗೆ ಮಾಡಿದನು, ಅದನ್ನು ನಾವು ಐತಿಹಾಸಿಕವಾಗಿ ಪರಿಶೀಲಿಸಬಹುದು. ಅತನು ನಮಗಾಗಿ ಸಾಯುವ ಮೂಲಕ, ಅಕ್ಷರಶಃ ನಮ್ಮ ಪರವಾಗಿ ತನ್ನನ್ನು ತಾನೇ ಕೊಟ್ಟನು. ಸತ್ಯವೇದವು ಯೇಸುವಿನ ಬಗ್ಗೆ ಹೇಳುವಂತೆ

14 ಆತನು ನಮ್ಮನ್ನು ಸಕಲ ದುಷ್ಟತನದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಅಸಮಾನ್ಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ತಾನೇ ಒಪ್ಪಿಸಿ ಕೊಟ್ಟನು.

ತೀತನಿಗೆ 2:14

ಪ್ರೇಮಿಗಳ ಆಹ್ವಾನ

ರಾಮಾಯಣದಲ್ಲಿ, ರಾವಣನನ್ನು ಸೋಲಿಸಿದ ನಂತರ ರಾಮ ಮತ್ತು ಸೀತೆಯು ಮತ್ತೆ-ಒಂದಾದರು. ಸತ್ಯವೇದದ ಮಹಾಕಾವ್ಯದಲ್ಲಿ, ಈಗ ಯೇಸು ಮರಣವನ್ನು ಸೋಲಿಸಿದ್ದಾನೆ, ಹಾಗೆಯೇ ಯೇಸು ಭಕ್ತಿಯಲ್ಲಿ ಪ್ರತಿಕ್ರಿಯಿಸಲು, ನಿಮಗೂ ಮತ್ತು ನನಗೂ ಆತನವರಾಗಲು, ಆಹ್ವಾನವನ್ನು ನೀಡುತ್ತಾನೆ. ಇದನ್ನು ಆರಿಸುವವರು ಅವನ ವಧುವಾಗುವರು

25 ಪುರಷರೇ, ನೀವು ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಯಾಕಂದರೆ ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು.
26 ಆತನು ಅದನ್ನು ವಾಕ್ಯವೆಂಬ ನೀರಿನಿಂದ ತೊಳೆದು ಪ್ರತಿಷ್ಠಿಸಿ ಶುದ್ಧ ಮಾಡಿದ್ದಲ್ಲದೆ
27 ಅದನ್ನು ಕಳಂಕ ಸುಕ್ಕು ಇಂಥಾದ್ದು ಯಾವದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯ ನ್ನಾಗಿ ತನಗೆ ತಾನೇ ಸಮರ್ಪಿಸಿಕೊಳ್ಳಬೇಕೆಂದಿದ್ದಾನೆ.

ಎಫೆಸದವರಿಗೆ 5: 25-27

32 ಇದೊಂದು ದೊಡ್ಡ ಮರ್ಮವೇ; ಆದರೆ ನಾನು ಕ್ರಿಸ್ತನ ವಿಷಯವಾಗಿಯೂ ಸಭೆಯ ವಿಷಯವಾಗಿಯೂ ಮಾತನಾಡುತ್ತೇನೆ.

ಎಫೆಸದವರಿಗೆ 5:32

ಸುಂದರ ಮತ್ತು ಶುದ್ಧರಾಗಲು

ರಾಮನು ಸೀತೆಯನ್ನು ಪ್ರೀತಿಸುತ್ತಾನೆ ಏಕೆಂದರೆ ಅವಳು ಸುಂದರವಾಗಿದ್ದಾಳೆ

ರಾಮಾಯಣದಲ್ಲಿ, ರಾಮನು ಸೀತೆಯನ್ನು ಪ್ರೀತಿಸುತ್ತಿದ್ದನು ಏಕೆಂದರೆ ಅವಳು ಸುಂದರವಾಗಿದ್ದಳು. ಅವಳೂ ಸಹಾ ಶುದ್ಧವಾದ  ಗುಣಗಳನ್ನು ಹೊಂದಿದ್ದಳು. ಸತ್ಯವೇದದ ಮಹಾಕಾವ್ಯವು ಈ ಜಗತ್ತಿನಲ್ಲಿ ನಮ್ಮೊಂದಿಗೆ ಪರಿಶುದ್ಧರಲ್ಲದವರ ಕುರಿತು  ವಿವರಿಸುತ್ತದೆ. ಆದರೆ ಯೇಸು ತನ್ನ ಕರೆಗೆ ಸ್ಪಂದಿಸುವವರನ್ನು ಇನ್ನೂ ಪ್ರೀತಿಸುತ್ತಾನೆ, ಅವರು ಸುಂದರ ಮತ್ತು ಪರಿಶುದ್ಧರಾಗಿರುವದರಿಂದ ಅಲ್ಲ, ಆದರೆ ಅವರನ್ನು ಸುಂದರ ಮತ್ತು ಪರಿಶುದ್ಧರನ್ನಾಗಿ ಮಾಡುವ ಸಲುವಾಗಿ, ಈ ಕೆಳಗಿನ ಗುಣಗಳೊಂದಿಗೆ ಪೂರ್ಣಗೊಂಡಿದ್ದಾರೆ

22 ಆದರೆ ಆತ್ಮನ ಫಲವೇನಂದರೆ–ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ
23 ಸಾತ್ವಿಕತ್ವ ಮಿತವ್ಯಯ ಇಂಥ ವುಗಳೇ; ಇಂಥವುಗಳಿಗೆ ವಿರೋಧವಾಗಿ ನ್ಯಾಯ ಪ್ರಮಾಣವಿಲ್ಲ.

ಗಲಾತ್ಯದವರಿಗೆ 5: 22-23

ಅಗ್ನಿ ಪರೀಕ್ಷೆಯ ನಂತರ

ಯೇಸು ತನ್ನ ವಧುವನ್ನು ಆಂತರಿಕವಾಗಿ ಸುಂದರವಾಗಿಸಲು ಪ್ರೀತಿಸುತ್ತಾನೆ – ಪರೀಕ್ಷೆಗಳ ಮೂಲಕ

ರಾವಣನ ಸೋಲಿನ ನಂತರ ಸೀತೆ ಮತ್ತು ರಾಮ ಮತ್ತೆ ಒಂದಾಗುತ್ತಿದ್ದರೂ, ಸೀತೆಯ ಸದ್ಗುಣದ ಬಗ್ಗೆ ಪ್ರಶ್ನೆಗಳು ಹೊರಹೊಮ್ಮಿತು. ರಾವಣನ ನಿಯಂತ್ರಣದಲ್ಲಿರುವಾಗ ಅವಳು ಅಸಭ್ಯ ಎಂದು ಕೆಲವರು ಆರೋಪಿಸಿದರು. ಆದ್ದರಿಂದ ಸೀತೆಯು ತನ್ನ ಮುಗ್ಧತೆಯನ್ನು ಸಾಬೀತುಪಡಿಸಲು ಅಗ್ನಿ ಪರೀಕ್ಷೆಗೆ  (ಬೆಂಕಿಯ ಅಗ್ನಿ ಪರೀಕ್ಷೆಗಳು) ಒಳಗಾಗಬೇಕಾಯಿತು . ಸತ್ಯವೇದದ ಮಹಾಕಾವ್ಯದಲ್ಲಿ, ಪಾಪ ಮತ್ತು ಸಾವಿನ ಮೇಲೆ ಜಯಗಳಿಸಿದ ನಂತರ, ಯೇಸು ತನ್ನ ಪ್ರೀತಿಗಾಗಿ, ಆತನು ಯಾರಿಗಾಗಿ ಹಿಂದಿರುಗುವನೋ, ಅವರಿಗಾಗಿ ತಯಾರಿ ಮಾಡಲು ಸ್ವರ್ಗಕ್ಕೆ ಏರಿದನು. ಆತನಿಂದ ಬೇರ್ಪಟ್ಟಾಗ, ನಾವು ಸಹಾ ಅಗ್ನಿ ಪರೀಕ್ಷೆಗಳ, ಅಥವಾ ಪರೀಕ್ಷೆಗಳ, ಮೂಲಕ ಹೋಗಬೇಕಾಗಿದೆ, ಅದನ್ನು ಸತ್ಯವೇದವು ಬೆಂಕಿಗೆ ಹೋಲಿಸುತ್ತದೆ; ನಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ಅಲ್ಲ, ಆದರೆ ಆತನ ಶುದ್ಧ ಪ್ರೀತಿಯನ್ನು ಕಲುಷಿತಗೊಳಿಸುವದರಿಂದ ನಮ್ಮನ್ನು ಶುದ್ಧೀಕರಿಸಲು. ಸತ್ಯವೇದವು ಈ ಚಿತ್ರಣವನ್ನು ಬಳಸುತ್ತದೆ

3 ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ತನ್ನ ಮಹಾ ಕರುಣಾನುಸಾರವಾಗಿ ಜೀವಕರವಾದ ನಿರೀಕ್ಷೆಗೂ
4 ಲಯ ಕಳಂಕ ಕ್ಷಯಗಳಿಲ್ಲದ ಬಾಧ್ಯತೆಗೂ ನಮ್ಮನ್ನು ತಿರಿಗಿ ಹುಟ್ಟಿಸಿದ್ದಾನೆ. ಈ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಟ್ಟಿದೆ.
5 ಅಂತ್ಯ ಕಾಲದಲ್ಲಿ ಪ್ರಕಟವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ನಂಬಿಕೆಯ ಮುಖಾಂತರ ದೇವರು ನಿಮ್ಮನ್ನು ತನ್ನ ಬಲದಿಂದ ಕಾಯುತ್ತಾನೆ.
6 ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ಕಷ್ಟಗಳಲ್ಲಿ ದುಃಖಿಸುವವ ರಾಗಿದ್ದರೂ ಬಹಳವಾಗಿ ಹರ್ಷಿಸುವವರಾಗಿದ್ದೀರಿ.
7 ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು.
8 ನೀವು ಆತನನ್ನು ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ; ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
9 ನಿಮ್ಮ ನಂಬಿಕೆಯ ಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿದ್ದೀರಿ.

1 ಪೇತ್ರನು 1: 3-9

ಒಂದು ವಿಶೇಷ ಮದುವೆಗೆ

ಸತ್ಯವೇದದ ಮಹಾಕಾವ್ಯವು ವಿವಾಹದೊಂದಿಗೆ ಕೊನೆಗೊಳ್ಳುತ್ತದೆ

ಯೇಸು ತನ್ನ ಪ್ರೀತಿಗಾಗಿ ಪುನಃ ಬರುವನೆಂದು ಮತ್ತು ಹಾಗೆ ಮಾಡಿದ ನಂತರ ಅವಳನ್ನು ತನ್ನ ವಧುವನ್ನಾಗಿ ಮಾಡುತ್ತಾನೆಂದು ಸತ್ಯವೇದವು ಘೋಷಿಸುತ್ತದೆ. ಆದ್ದರಿಂದ, ಎಲ್ಲಾ ವಿಶೇಷ ಮಹಾಕಾವ್ಯಗಳಲ್ಲಿರುವಂತೆಯೇ, ಸತ್ಯವೇದ ವಿವಾಹದೊಂದಿಗೆ ಕೊನೆಗೊಳ್ಳುತ್ತದೆ. ಯೇಸು ಪಾವತಿಸಿದ ಬೆಲೆ ಈ ಮದುವೆಗೆ ದಾರಿ ಮಾಡಿಕೊಟ್ಟಿದೆ. ಆ ವಿವಾಹವು ಸಾಂಕೇತಿಕವಲ್ಲ ಆದರೆ ನಿಜವಾದದ್ದು, ಮತ್ತು ಆತನ ಮದುವೆಯ ಆಮಂತ್ರಣವನ್ನು ಸ್ವೀಕರಿಸುವವರನ್ನು ಆತನು ‘ಕ್ರಿಸ್ತನ ವಧು’ ಎಂದು ಕರೆಯುತ್ತಾನೆ. ಅದು ಹೇಳುವಂತೆ:

7 ಸಂತೋಷಪಡೋಣ, ಹರ್ಷಗೊಳ್ಳೋಣ, ಆತ ನನ್ನು ಘನಪಡಿಸೋಣ; ಯಾಕಂದರೆ ಕುರಿಮರಿಯಾದಾ ತನ ವಿವಾಹವು ಬಂತು; ಆತನಿಗೆ ವಿವಾಹವಾಗುವ ಕನ್ಯೆಯು ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ ಎಂದು ಹೇಳಿತು.

ಪ್ರಕಟನೆ 19: 7

ಯೇಸುವಿನ ವಿಮೋಚನೆಯ ವಾಗ್ದಾನವನ್ನು ಸ್ವೀಕರಿಸುವವರು ಆತನ ‘ವಧು’ ಆಗುತ್ತಾರೆ. ಆತನು ಈ ಸ್ವರ್ಗೀಯ ವಿವಾಹವನ್ನು ನಮ್ಮೆಲ್ಲರಿಗೂ ಅರ್ಪಿಸುತ್ತಾನೆ. ಸತ್ಯವೇದವು ಆತನ ಮದುವೆಗೆ ಬರಲು ನಿಮಗೂ ಮತ್ತು ನನಗೂ ಕೊಡಲ್ಪಡುವ ಈ ಆಹ್ವಾನದಿಂದ ಕೊನೆಗೊಳ್ಳುತ್ತದೆ

17 ಆತ್ಮನೂ ಮದಲಗಿತ್ತಿಯೂ–ಬಾ, ಅನ್ನುತ್ತಾರೆ. ಕೇಳುವವನು–ಬಾ, ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.

ಪ್ರಕಟನೆ 22: 17

ಮಹಾಕಾವ್ಯಕ್ಕೆ ಪ್ರವೇಶಿಸಿ: ಪ್ರತಿಕ್ರಿಯಿಸುವ ಮೂಲಕ

ರಾಮಾಯಣದಲ್ಲಿನ ಸೀತೆ ಮತ್ತು ರಾಮನ ನಡುವಿನ ಸಂಬಂಧವನ್ನು ಯೇಸುವಿನಲ್ಲಿ ನಮಗೆ ನೀಡಿರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಮಸೂರವಾಗಿ ಬಳಸಲಾಗುತ್ತದೆ. ಇದು ನಮ್ಮನ್ನು ಪ್ರೀತಿಸುವ ದೇವರ ಸ್ವರ್ಗೀಯ ಪ್ರಣಯವಾಗಿದೆ. ಆತನ  ಮದುವೆ ಪ್ರಸ್ತಾಪವನ್ನು ಒಪ್ಪಿಕೊಳ್ಳುವವರೆಲ್ಲರೂ ಆತನ ವಧುವಾಗಿ ಮದುವೆಯಾಗಲಿದ್ದಾರೆ. ಯಾವುದೇ ಮದುವೆ ಪ್ರಸ್ತಾಪದಂತೆ ನೀವು ಅಭಿನಯಿಸಲು, ಪ್ರಸ್ತಾಪವನ್ನು ಸ್ವೀಕರಿಸಲು ಅಥವಾ ಸ್ವೀಕರಿಸದಿರಲು ಸಕ್ರಿಯ ಭಾಗವನ್ನು ಹೊಂದಿದ್ದೀರಿ. ಪ್ರಸ್ತಾಪವನ್ನು ಸ್ವೀಕರಿಸುವಲ್ಲಿ ನೀವು ಆ ಸಮಯರಹಿತ ಮಹಾಕಾವ್ಯಕ್ಕೆ ಪ್ರವೇಶಿಸುತ್ತೀರಿ ಅದು ರಾಮಾಯಣ ಮಹಾಕಾವ್ಯದ ಭವ್ಯತೆಯನ್ನು ಸಹ ಮೀರಿಸುತ್ತದೆ.

Leave a Reply

Your email address will not be published. Required fields are marked *