ಯೇಸು ಗುಣಪಡಿಸುತ್ತಾನೆ – ತನ್ನ ರಾಜ್ಯವನ್ನು ಬಹಿರಂಗಪಡಿಸುತ್ತಾನೆ

ರಾಜಸ್ಥಾನದ, ಮೆಹಂದಿಪುರದ ಬಳಿಯ ಬಾಲಾಜಿ ಮಂದಿರವು, ಜನರನ್ನು ಪೀಡಿಸುವ ದುಷ್ಟಶಕ್ತಿಗಳನ್ನು, ರಾಕ್ಷಸರನ್ನು, ಭೂತಗಳನ್ನು, ಪ್ರೇತಗಳನ್ನು ಅಥವಾ ದೆವ್ವಗಳನ್ನು  ಗುಣಪಡಿಸುವ ಹೆಸರುವಾಸಿಯನ್ನು ಹೊಂದಿದೆ. ಹನುಮಾನ್ ಜಿ (ಮಗುವಿನ  ರೂಪದಲ್ಲಿ ಭಗವಂತ ಹನುಮಾನ್) ಅನ್ನು ಬಾಲಾ ಜಿ, ಅಥವಾ ಬಾಲಾಜಿ ಎಂದೂ ಕರೆಯಲಾಗುತ್ತದೆ. ಆತನ ಬಾಲಾಜಿ ಮಂದಿರ, ಅಥವಾ ದೇವಾಲಯವು, ದುಷ್ಟಶಕ್ತಿಗಳಿಂದ ಬಳಲುತ್ತಿರುವ ಜನರಿಗೆ ತೀರ್ಥ, ಅಥವಾ ತೀರ್ಥಯಾತ್ರೆಯ ತಾಣವಾಗಿದೆ. ಪ್ರತಿದಿನವು, ಸಾವಿರಾರು ಯಾತ್ರಿಕರು, ಭಕ್ತರು ಮತ್ತು ಆಧ್ಯಾತ್ಮಿಕವಾಗಿ ಬಳಲುತ್ತಿರುವ ಜನರು ಈ ಎಲ್ಲಾ ಆಧ್ಯಾತ್ಮಿಕ ಹತೋಟಿಯಿಂದ ತೀರ್ಥ-ಯಾತ್ರೆಯಲ್ಲಿ ಗುಣಮುಖರಾಗುವ ಭರವಸೆಯಿಂದ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಭೂತ ಮತ್ತು ದೆವ್ವದ ಹತೋಟಿ, ವಶೀಕರಣದ ಮತ್ತು ಭೂತೋಚ್ಚಾಟನೆ ಎಲ್ಲವೂ ಈ ಬಾಲಾಜಿ ಅಥವಾ ಹನುಮಾನ್ ಜಿ ದೇವಸ್ಥಾನದಲ್ಲಿ ಸಾಮಾನ್ಯವಾಗಿದೆ ಮತ್ತು ಹಾಗೆಯೇ ಮೆಹಂದಿಪುರ ಬಾಲಾಜಿಯು ತೀರ್ಥಯಾತ್ರೆಯ ತಾಣವಾಗಿದ್ದು, ಇದು ಆತ್ಮಗಳಿಂದ ವಿಮೋಚನೆಯ ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ಪುರಾಣಗಳು ವಿವರವಾಗಿ ಭಿನ್ನವಾಗಿವೆ ಆದರೆ ಹನುಮಾನ್ ಆ ಸ್ಥಳದಲ್ಲಿ ಒಂದು ರೂಪವಾಗಿ ಸ್ವಯಂ-ಪ್ರಕಟವಾದನು ಎಂದು ಹೇಳುತ್ತಾರೆ, ಆದ್ದರಿಂದ ಹನುಮಾನ್ ಜಿಯ ನೆನಪಿಗಾಗಿ ದೇವಾಲಯವನ್ನು ಅಲ್ಲಿ ನಿರ್ಮಿಸಲಾಗಿದೆ. ಇದನ್ನು ಶ್ರೀ ಮೆಹಂದಿಪುರ ಬಾಲಾಜಿ ಮಂದಿರದಲ್ಲಿ ಜನರು ವಶೀಕರಣ, ನಿದ್ರಾಜನಕ ಸ್ಥಿತಿಯಲ್ಲಿದ್ದಾರೆ ಮತ್ತು ವಿಮೋಚನೆಗಾಗಿ ಕಾಯುತ್ತಿರುವ ಗೋಡೆಗಳಿಗೆ ಸರಪಳಿ ಸಹಾ ಹಾಕಿದ್ದಾರೆ ಎಂದು ವರದಿಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಬಾಲಾಜಿಯ ದಿನಗಳು ಎಂದು ಪರಿಗಣಿಸಿ ಮಂಗಳವಾರ ಮತ್ತು ಶನಿವಾರದಂದು ಬರುತ್ತಾರೆ. ಆರ್ತಿ, ಅಥವಾ ಪೂಜೆಯ ಸಮಯದಲ್ಲಿ, ದೆವ್ವ ಹಿಡಿದವರ ಕಿರುಚಾಟಗಳನ್ನು ಕೇಳಬಹುದು, ಮತ್ತು ಜನರು ಬೆಂಕಿಯಲ್ಲಿ ಭೂತರೂಪವನ್ನು ಹೊಂದುವರು ಮತ್ತು ವಶೀಕರಣದಲ್ಲಿ ಅನಿರೀಕ್ಷಿತವಾಗಿ  ನೃತ್ಯ ಮಾಡುವದನ್ನುಕಾಣಬಹುದು.

ವೇದ ಪುಸ್ತಕದಲ್ಲಿ ಭೂತಗಳು ಮತ್ತು ದುಷ್ಟಶಕ್ತಿಗಳು

ನಿಜಕ್ಕೂ ಇತಿಹಾಸದ ಮೂಲಕ ದುಷ್ಟಶಕ್ತಿಗಳು ಜನರನ್ನು ಪೀಡಿಸಿವೆ. ಏಕೆ? ಅವರು ಎಲ್ಲಿಂದ ಬರುತ್ತಾರೆ?

ಅರಣ್ಯದಲ್ಲಿ ಯೇಸುವನ್ನು ಶೋಧಿಸಿದ ಸೈತಾನ ಮತ್ತು ಅವನೊಂದಿಗೆ ಬಿದ್ದ ಅನೇಕ ದೂತರುಗಳ ಮೇಲೆ ನಾಯಕತ್ವವನ್ನು ಹೊಂದಿದ್ದಾನೆಂದು ವೇದ ಪುಸ್ತಕವು (ಸತ್ಯವೇದ) ವಿವರಿಸುತ್ತದೆ. ಮೊದಲ ಮಾನವರು ಸರ್ಪವನ್ನು ಆಲಿಸಿದಾಗಿನಿಂದ, ಈ ದುಷ್ಟಶಕ್ತಿಗಳು ಜನರನ್ನು ಪೀಡಿಸುತ್ತಿತ್ತು ಮತ್ತು ನಿಯಂತ್ರಿಸುತ್ತಿತ್ತು. ಮೊದಲ ಮಾನವರು ಸರ್ಪವನ್ನು ಆಲಿಸಿದಾಗ, ಸತ್ಯಯುಗವು ಕೊನೆಗೊಳ್ಳಲ್ಪಟ್ಟಿತು ಮತ್ತು ನಾವು ಈ ಆತ್ಮಗಳಿಗೆ ನಮ್ಮನ್ನು ನಿಯಂತ್ರಿಸಲು ಮತ್ತು ಪೀಡಿಸಲು ಹಕ್ಕನ್ನು ನೀಡಿದ್ದೇವೆ.

ಯೇಸು ಮತ್ತು ದೇವರ ರಾಜ್ಯ

ಯೇಸು ದೇವರ ರಾಜ್ಯದ ಬಗ್ಗೆ ಅಧಿಕಾರದಿಂದ ಬೋಧಿಸಿದನು. ಆತನು ತನಗೆ ಆ ಅಧಿಕಾರಕ್ಕೆ ಹಕ್ಕಿದೆ ಎಂದು ತೋರಿಸಲು ಜನರನ್ನು ಹಿಂಸಿಸುವ ದುಷ್ಟಶಕ್ತಿಗಳು, ದೆವ್ವಗಳು ಮತ್ತು ಭೂತಗಳನ್ನು ಹೊರಹಾಕಿದನು.

ಯೇಸು ದೆವ್ವಗಳಿಂದ ಸ್ವಾಧೀನ ಪಡಿಸಲ್ಪಟ್ಟವನನ್ನು ಗುಣಪಡಿಸುತ್ತಾನೆ

ಅನೇಕ ಬಾರಿ ಯೇಸು ದುಷ್ಟಶಕ್ತಿಗಳು ಅಥವಾ ಭೂತಗಳೊಂದಿಗೆ ಮುಖಾಮುಖಿಯಾಗಿದ್ದನು. ಆದರೂ, ಅನೇಕ ಬಾರಿ ಆತನು ದುಷ್ಟಶಕ್ತಿಗಳನ್ನೊಳಗೊಂಡ  ಜನರನ್ನು ಗುಣಪಡಿಸಿದ್ದನ್ನು ಸಹಾ ಸುವಾರ್ತೆಗಳು ದಾಖಲಿಸಿದೆ. ಶಿಕ್ಷಕ ಎಂದು ಕರೆಯಲ್ಪಡುವ  ಆತನ ಅಂತಹ ಮೊದಲ ಗುಣಪಡಿಸುವಿಕೆ ಇಲ್ಲಿದೆ:

21 ಆಗ ಅವರು ಕಪೆರ್ನೌಮಿಗೆ ಹೋದರು; ಕೂಡಲೆ ಆತನು ಸಬ್ಬತ್‌ ದಿನದಲ್ಲಿ ಸಭಾಮಂದಿರ ದೊಳಗೆ ಪ್ರವೇಶಿಸಿ ಬೋಧಿಸಿದನು.
22 ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನು ಶಾಸ್ತ್ರಿಗಳಂತೆ ಅಲ್ಲ, ಅಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
23 ಆಗ ಅವರ ಸಭಾಮಂದಿ ರದಲ್ಲಿ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನಿದ್ದನು.
24 ಅವನು–ನಮ್ಮನ್ನು ಬಿಟ್ಟುಬಿಡು; ನಜರೇತಿನ ಯೇಸುವೇ, ನಮ್ಮಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು; ನೀನು ದೇವರ ಪರಿಶುದ್ಧನೇ ಎಂದು ಕೂಗಿ ಹೇಳಿದನು.
25 ಆಗ ಯೇಸು ಅವನನ್ನು ಗದರಿಸಿ–ಸುಮ್ಮನಿರು, ಅವನೊಳ ಗಿಂದ ಹೊರಗೆ ಬಾ ಅಂದನು.
26 ಆಗ ಅಶುದ್ಧಾತ್ಮವು ಅವನನ್ನು ಒದ್ದಾಡಿಸಿದ ಮೇಲೆ ಮಹಾಶಬ್ದದಿಂದ ಕೂಗಿ ಅವನೊಳಗಿಂದ ಹೊರಗೆ ಬಂದಿತು.
27 ಅದಕ್ಕೆ ಅವರೆಲ್ಲರೂ–ಇದು ಏನಾಗಿರಬಹುದು? ಈ ಹೊಸ ಬೋಧನೆ ಯಾವದು? ಯಾಕಂದರೆ ಆತನು ಅಶುದ್ಧಾತ್ಮಗಳಿಗೂ ಅಧಿಕಾರದಿಂದ ಅಪ್ಪಣೆಕೊಡು ತ್ತಾನೆ; ಅವು ಆತನಿಗೆ ವಿಧೇಯವಾಗುತ್ತವಲ್ಲಾ ಎಂದು ತಮ್ಮಲ್ಲಿ ತಾವೇ ಪ್ರಶ್ನಿಸಿಕೊಳ್ಳುವಷ್ಟು ವಿಸ್ಮಯಗೊಂಡರು.
28 ಕೂಡಲೆ ಆತನ ಕೀರ್ತಿಯು ಗಲಿಲಾಯದ ಸುತ್ತಮುತ್ತಲಿನ ಎಲ್ಲಾ ಪ್ರದೇಶದಲ್ಲಿ ಹಬ್ಬಿ

ತು.ಮಾರ್ಕ 1: 21-28

ಮೆಹಂದಿಪುರ ಬಾಲಾಜಿ ಮಂದಿರದಲ್ಲಿದ್ದಂತೆ, ಜನರು ಸ್ವಾಧೀನ ಪಡಿಸಲ್ಪಟ್ಟವನನ್ನು ಸರಪಳಿ ಹಾಕಲು ಪ್ರಯತ್ನಿಸಿದ್ದನ್ನು, ಗುಣಪಡಿಸುವಿಕೆಯನ್ನು ಸುವಾರ್ತೆಗಳು ನಂತರ ವಿವರಿಸುತ್ತವೆ, ಆದರೆ ಆ ಸರಪಳಿಗಳು ಅವನನ್ನು ಹಿಡಿದಿಡಲು ಸಾಧ್ಯವಾಗಲಿಲ್ಲ. ಇದನ್ನು ಈ ರೀತಿ ಸುವಾರ್ತೆಯು  ದಾಖಲಿಸುತ್ತದೆ

ರುವಾಯ ಅವರು ಸಮುದ್ರದ ಆಚೆಗೆ ಗದರೇನರ ಸೀಮೆಗೆ ಬಂದರು.
2 ಆತನು ದೋಣಿಯಿಂದ ಹೊರಗೆ ಬಂದಾಗ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನು ಕೂಡಲೆ ಸಮಾಧಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು.
3 ಇವನು ಸಮಾಧಿ ಗಳಲ್ಲಿ ವಾಸಿಸುತ್ತಿದ್ದನು. ಇವನನ್ನು ಯಾವ ಮನುಷ್ಯನೂ ಸಂಕೋಲೆಗಳಿಂದಲಾದರೂ ಕಟ್ಟಲಾರದೆ ಹೋದನು.
4 ಯಾಕಂದರೆ ಅನೇಕ ಸಾರಿ ಅವನನ್ನು ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿ ಗಳನ್ನು ಕಿತ್ತುಹಾಕಿ ಬೇಡಿಗಳನ್ನು ಮುರಿದು ತುಂಡು ಮಾಡುತ್ತಿದ್ದದ್ದರಿಂದ ಯಾವ ಮನುಷ್ಯನೂ ಅವನನ್ನು ಹತೋಟಿಗೆ ತರಲಾರದೆ ಇದ್ದನು.
5 ಅವನು ರಾತ್ರಿ ಹಗಲು ಯಾವಾಗಲೂ ಬೆಟ್ಟಗಳಲ್ಲಿಯೂ ಸಮಾಧಿಗಳ ಲ್ಲಿಯೂ ಕೂಗುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಕೊಯ್ದುಕೊಳ್ಳುತ್ತಿದ್ದನು.
6 ಆದರೆ ಅವನು ದೂರದಿಂದ ಯೇಸುವನ್ನು ನೋಡಿದಾಗ ಓಡಿಬಂದು ಆತನನ್ನು ಆರಾಧಿಸಿ —
7 ಮಹೋನ್ನತನಾದ ದೇವಕುಮಾರನಾಗಿ ರುವ ಯೇಸುವೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಯಾತನೆಪಡಿಸಬೇಡವೆಂದು ನಾನು ನಿನಗೆ ದೇವರಾಣೆ ಇಡುತ್ತೇನೆ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು.
8 ಯಾಕಂದರೆ ಆತನು ಅವ ನಿಗೆ–ಅಶುದ್ಧಾತ್ಮವೇ, ಆ ಮನುಷ್ಯನೊಳಗಿನಿಂದ ಹೊರಗೆ ಬಾ ಎಂದು ಹೇಳಿದ್ದನು.
9 ಆತನು ಅವನಿಗೆ–ನಿನ್ನ ಹೇಸರೇನು ಎಂದು ಕೇಳಲು ಅವನು ಪ್ರತ್ಯುತ್ತರವಾಗಿ–ನನ್ನ ಹೆಸರು ಲೀಜೆನ್‌ (ದಂಡು); ಯಾಕಂದರೆ ನಾವು ಅನೇಕರಿದ್ದೇವೆ ಅಂದನು.
10 ತಮ್ಮನ್ನು ಆ ದೇಶದೊಳಗಿಂದ ಹೊರಗೆ ಕಳುಹಿಸದಂತೆ ಅವನು ಆತನನ್ನು ಬಹಳವಾಗಿ ಬೇಡಿ ಕೊಂಡನು.
11 ಆಗ ಅಲ್ಲಿ ಬೆಟ್ಟಗಳ ಸವಿಾಪದಲ್ಲಿ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು.
12 ಎಲ್ಲಾ ದೆವ್ವಗಳು ಆತನಿಗೆ–ನಾವು ಆ ಹಂದಿಗಳೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಕಳುಹಿಸು ಎಂದು ಬೇಡಿಕೊಂಡವು.
13 ಕೂಡಲೆ ಯೇಸು ಅವುಗಳಿಗೆ ಅಪ್ಪಣೆಕೊಟ್ಟನು. ಆಗ ಅಶುದ್ಧಾತ್ಮಗಳು ಹೊರಗೆ ಹೋಗಿ ಆ ಹಂದಿಗಳೊಳಗೆ ಸೇರಿಕೊಂಡವು; ಮತ್ತು ಆ ಗುಂಪು ಉಗ್ರತೆಯಿಂದ ಓಡಿ ಇಳಿಜಾರಿನಿಂದ ಸಮುದ್ರದೊಳಗೆ ಬಿದ್ದು ಉಸುರುಗಟ್ಟಿ ಸತ್ತವು. (ಅವು ಸುಮಾರು ಎರಡು ಸಾವಿರ ಇದ್ದವು.)
14 ಆಗ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿ ಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ತಿಳಿಸಿ ದರು; ಅವರು ನಡೆದ ಸಂಗತಿ ಏನೆಂದು ನೋಡುವದಕ್ಕೆ ಹೊರಟರು.
15 ಅವರು ಯೇಸುವಿನ ಬಳಿಗೆ ಬಂದು ಆ ದೆವ್ವಗಳ ದಂಡು ಹಿಡಿದವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಚಿತ್ತದಿಂದ ಕೂತು ಕೊಂಡಿರುವದನ್ನು ನೋಡಿ ಭಯಪಟ್ಟರು.
16 ಅದನ್ನು ನೋಡಿದವರು ದೆವ್ವ ಹಿಡಿದಿದ್ದವನಿಗೆ ಆದದ್ದನ್ನೂ ಹಂದಿಗಳ ವಿಷಯವಾಗಿಯೂ ಅವರಿಗೆ ಹೇಳಿದರು.
17 ಆಗ ಅವರು ತಮ್ಮ ಮೇರೆಗಳನ್ನು ಬಿಟ್ಟುಹೋಗ ಬೇಕೆಂದು ಆತನನ್ನು ಬೇಡಿಕೊಳ್ಳಲಾರಂಭಿಸಿದರು.
18 ಆತನು ದೋಣಿಯೊಳಗೆ ಬಂದಾಗ ಆ ದೆವ್ವ ಹಿಡಿದಿದ್ದವನು ತಾನು ಆತನ ಜೊತೆಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿಕೊಂಡನು.
19 ಆದಾಗ್ಯೂ ಯೇಸು ಅವನನ್ನು ಇರಗೊಡದೆ ಅವನಿಗೆ–ನಿನ್ನ ಮನೆಗೂ ಸ್ನೇಹಿತರ ಬಳಿಗೂ ಹೋಗಿ ಕರ್ತನು ನಿನ್ನ ಮೇಲೆ ಕರುಣೆಯಿಟ್ಟು ಎಂಥಾ ಮಹತ್ಕಾರ್ಯಗಳನ್ನು ಮಾಡಿ ದ್ದಾನೆಂದು ಅವರಿಗೆ ಹೇಳು ಅಂದನು.
20 ಅವನು ಹೊರಟು ಹೋಗಿ ಯೇಸು ತನಗೆ ಎಂಥೆಂಥಾ ಮಹತ್ಕಾರ್ಯಗಳನ್ನು ಮಾಡಿದನೆಂಬದನ್ನು ದೆಕಪೊಲಿ ಯದಲ್ಲಿ ಪ್ರಕಟಿಸಲಾರಂಭಿಸಿದನು. ಆಗ ಎಲ್ಲರೂ ಆಶ್ಚರ್ಯಪಟ್ಟರು.

ಮಾರ್ಕ 5: 1-20

ದೇವರ ಮಗನು ಮನುಷ್ಯನಾಗಿ ನಮ್ಮ ಮಧ್ಯದಲ್ಲಿ ವಾಸಮಾಡಿದನು, ಯೇಸು ಜನರನ್ನು ಗುಣಪಡಿಸಲು  ಗ್ರಾಮಾಂತರದ ಸುತ್ತುಮುತ್ತು ಸಂಚರಿಸಿದನು. ಆತನು  ಅವರು ವಾಸಿಸುತ್ತಿದ್ದ ಸ್ಥಳಕ್ಕೆ ಹೋದನು, ಭೂತಗಳು ಮತ್ತು ಪ್ರೇತಗಳ ಪೀಡನೆಯನ್ನು ಪರಿಚಯಿಸಿದನು, ಆತನ ಮಾತಿನ ಅಧಿಕಾರದಿಂದ ಸರಳವಾಗಿ ಅವರನ್ನು ಗುಣಪಡಿಸಿದನು.

ಯೇಸು ರೋಗಿಗಳನ್ನು ಗುಣಪಡಿಸುತ್ತಾನೆ

ಕರೋನವೈರಸ್ ಸ್ಫೋಟದ ಕಾರಣದಿಂದ 2020 ರ ಮಾರ್ಚ್ 17 ರಂದು, ಮೆಹಂದಿಪುರ ಬಾಲಾಜಿ ದೇವಾಲಯವನ್ನು ಅನಿರ್ದಿಷ್ಟ ಅವಧಿಗೆ ಮುಚ್ಚಲಾಯಿತು. ದುಷ್ಟಶಕ್ತಿಗಳಿಂದ ಗುಣಮುಖರಾಗಲು ಜನಪ್ರಿಯವಾಗಿದ್ದರೂ, ಮೆಹಂದಿಪುರ ಬಾಲಾಜಿ ಭಕ್ತರು ಈ ಹೊಸ ಸಾಂಕ್ರಾಮಿಕ ಕಾಯಿಲೆಯಿಂದ ದುರ್ಬಲರಾಗುತ್ತಾರೆ. ಆದಾಗ್ಯೂ, ಯೇಸು, ಜನರನ್ನು ದುಷ್ಟಶಕ್ತಿಗಳಿಂದ ಮಾತ್ರವಲ್ಲ, ಸಾಂಕ್ರಾಮಿಕ ಕಾಯಿಲೆಗಳಿಂದಲೂ ಬಿಡುಗಡೆ ಮಾಡಿದನು. ಅಂತಹ ಒಂದು ಗುಣಪಡಿಸುವಿಕೆಯನ್ನು ಈ ರೀತಿ ದಾಖಲಿಸಲಾಗಿದೆ:

40 ಆಗ ಒಬ್ಬ ಕುಷ್ಠರೋಗಿಯು ಆತನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿ ಆತನಿಗೆ — ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಬೇಡಿಕೊಂಡನು.
41 ಆಗ ಯೇಸು ಕನಿಕರಪಟ್ಟು ತನ್ನ ಕೈನೀಡಿ ಅವನನ್ನು ಮುಟ್ಟಿ ಅವನಿಗೆ–ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು.
42 ಹೀಗೆ ಆತನು ಹೇಳಿದ ಕೂಡಲೆ ಆ ಕುಷ್ಠವು ತಕ್ಷಣವೇ ಅವನಿಂದ ಹೊರಟುಹೋಗಿ ಅವನು ಶುದ್ಧನಾದನು.
43 ಆತನು ಅವನಿಗೆ ನೇರವಾಗಿ ಆಜ್ಞಾಪಿಸಿ ಕೂಡಲೆ ಕಳುಹಿಸಿದನು;
44 ಅವನಿಗೆ ಹೇಳಿದ್ದೇನಂದರೆ–ಯಾವ ಮನುಷ್ಯನಿಗೂ ಏನೂ ಹೇಳಬೇಡ ನೋಡು; ಆದರೆ ನೀನು ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿದವುಗಳನ್ನು ಅರ್ಪಿಸು ಅಂದನು.
45 ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ

ಬಮಾರ್ಕ 1: 40-45

ಗುಣಪಡಿಸುವ ಯೇಸುವಿನ ಪ್ರಖ್ಯಾತಿಯು ಹೆಚ್ಚಾಯಿತು ಆದ್ದರಿಂದ ಬಾಲಾಜಿ ಮಂದಿರದಲ್ಲಿ ಅವರು ಮಾಡಿದಂತೆ (ಅದು ತೆರೆದಾಗ) ಜನಸಮೂಹವು ಅವನನ್ನು ಒಟ್ಟುಗೂಡಿಸಿತು.

38 ತರುವಾಯ ಆತನು ಸಭಾಮಂದಿರದಿಂದ ಎದ್ದು ಸೀಮೋನನ ಮನೆಯಲ್ಲಿ ಪ್ರವೇಶಿಸಿದನು; ಅಲ್ಲಿ ಸೀಮೋನನ ಹೆಂಡತಿಯ ತಾಯಿಗೆ ಕಠಿಣ ಜ್ವರವಿದ್ದದ ರಿಂದ ಅವರು ಆಕೆಗೋಸ್ಕರ ಆತನನ್ನು ಬೇಡಿಕೊಂಡರು.
39 ಆಗ ಆತನು ಆಕೆಯ ಬಳಿಯಲ್ಲಿ ನಿಂತು ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟಿತು; ಕೂಡಲೆ ಆಕೆಯು ಎದ್ದು ಅವರನ್ನು ಉಪಚರಿಸಿದಳು.
40 ಸೂರ್ಯಾಸ್ತಮಾನವಾಗುತ್ತಿದ್ದಾಗ ನಾನಾ ವಿಧ ವಾದ ರೋಗಗಳಿಂದ ಅಸ್ವಸ್ಥವಾದವರೆಲ್ಲರನ್ನು ಅವರು ಆತನ ಬಳಿಗೆ ತಂದರು; ಆತನು ಅವರಲ್ಲಿ ಪ್ರತಿಯೊಬ್ಬನ ಮೇಲೆ ತನ್ನ ಕೈಗಳನ್ನಿಟ್ಟು ಅವರನ್ನು ಸ್ವಸ್ಥಪಡಿಸಿದನು.
41 ಅನೇಕರೊಳಗಿಂದ ದೆವ್ವಗಳು ಸಹ ಹೊರಗೆ ಬಂದು ಕೂಗುತ್ತಾ–ನೀನು ದೇವಕುಮಾರನಾದ ಕ್ರಿಸ್ತನೇ ಎಂದು ಹೇಳಿದವು. ಆತನು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದನು. ಯಾಕಂದರೆ ಆತನು ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು.

ಲೂಕ 4: 38-41

ಯೇಸು ಕುಂಟ, ಕುರುಡ, ಕಿವುಡರನ್ನು ಗುಣಪಡಿಸುವನು

ಇಂದಿನಂತೆ, ಯೇಸುವಿನ ಕಾಲದಲ್ಲಿಯೂ ಯಾತ್ರಿಕರು ಪವಿತ್ರ ತೀರ್ಥಗಳಲ್ಲಿ ಪೂಜೆಗಳನ್ನು ಮಾಡುತ್ತಿದ್ದರು, ಶುದ್ಧೀಕರಿಸಲ್ಪಡಲು  ಮತ್ತು ಗುಣಮುಖರಾಗಲು ಆಶಿಸಿದರು. ದಾಕಲಿಸಲ್ಪಟ್ಟಂತಹ ಅನೇಕ ಗುಣಪಡಿಸುವಿಕೆಗಳಲ್ಲಿ ಎರಡನ್ನು ನಾವು ನೋಡುತ್ತೇವೆ:

ದಾದ ಮೇಲೆ ಯೆಹೂದ್ಯರದೊಂದು ಹಬ್ಬ ಇದ್ದದರಿಂದ ಯೇಸು ಯೆರೂ ಸಲೇಮಿಗೆ ಹೋದನು.
2 ಯೆರೂಸಲೇಮಿನಲ್ಲಿ ಕುರಿ ಮಾರುವ ಸ್ಥಳದ ಹತ್ತಿರದಲ್ಲಿ ಒಂದು ಕೊಳವಿದೆ; ಇದು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯ ಲ್ಪಡುತ್ತದೆ. ಅದಕ್ಕೆ ಐದು ದ್ವಾರಾಂಗಳಗಳಿವೆ.
3 ಇವು ಗಳಲ್ಲಿ ಬಲಹೀನರೂ ಕುರುಡರೂ ಕುಂಟರೂ ಮೈ ಒಣಗಿದವರೂ ಆಗಿದ್ದ ದೊಡ್ಡ ಸಮೂಹವು ಬಿದ್ದು ಕೊಂಡಿದ್ದು ನೀರಿನ ಕದಲಿಸುವಿಕೆಗಾಗಿ ಕಾದುಕೊಂಡಿ ದ್ದರು.
4 ಆಯಾ ಕಾಲದಲ್ಲಿ ಒಬ್ಬ ದೂತನು ಕೊಳ ದೊಳಗೆ ಇಳಿದುಹೋಗಿ ನೀರನ್ನು ಕದಲಿಸುತ್ತಿದ್ದನು; ನೀರು ಕದಲಿಸಲ್ಪಟ್ಟ ಮೇಲೆ ಮೊದಲು ಯಾರು ನೀರಿನೊಳಗೆ ಹೆಜ್ಜೆಯಿಡುತ್ತಿದ್ದರೋ ಅವರಿಗೆ ಯಾವ ರೋಗವಿದ್ದರೂ ಸ್ವಸ್ಥವಾಗುತ್ತಿತ್ತು.
5 ಆಗ ಮೂವತ್ತೆಂಟು ವರುಷದಿಂದ ರೋಗಿಯಾಗಿದ್ದ ಒಬ್ಬಾನೊಬ್ಬ ಮನು ಷ್ಯನು ಅಲ್ಲಿ ಇದ್ದನು.
6 ಅವನು ಬಿದ್ದುಕೊಂಡಿರುವದನ್ನು ಯೇಸು ನೋಡಿ ಅವನು ಬಹುಕಾಲದಿಂದ ಆ ಸ್ಥಿತಿ ಯಲ್ಲಿ ಇದ್ದಾನೆಂದು ತಿಳಿದು ಅವನಿಗೆ–ನಿನಗೆ ಸ್ವಸ್ಥವಾ ಗುವದಕ್ಕೆ ಮನಸ್ಸುಂಟೋ ಎಂದು ಕೇಳಿದನು.
7 ಅದಕ್ಕೆ ಆ ರೋಗಿಯು ಪ್ರತ್ಯುತ್ತರವಾಗಿ ಆತನಿಗೆ–ಅಯ್ಯಾ, ನೀರು ಕದಲಿಸಲ್ಪಡುವಾಗ ನನ್ನನ್ನು ಕೊಳದೊಳಗೆ ಇಳಿಸುವದಕ್ಕೆ ನನಗೆ ಯಾರು ಇಲ್ಲ; ಆದರೆ ನಾನು ಬರುತ್ತಿರುವಾಗಲೇ ನನಗಿಂತ ಮುಂದಾಗಿ ಮತ್ತೊಬ್ಬನು ಇಳಿಯುತ್ತಾನೆ ಅಂದನು.
8 ಯೇಸು ಅವನಿಗೆ– ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅಂದನು.
9 ಕೂಡಲೆ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು; ಆ ದಿನವು ಸಬ್ಬತ್ತಾಗಿತ್ತು.
10 ಆದದರಿಂದ ಯೆಹೂದ್ಯರು ಸ್ವಸ್ಥನಾದವನಿಗೆ–ಇದು ಸಬ್ಬತ್‌ ದಿನವಾಗಿದೆ; ನೀನು ಹಾಸಿಗೆಯನ್ನು ಹೊತ್ತುಕೊಳ್ಳುವದು ನ್ಯಾಯವಲ್ಲ ಅಂದರು.
11 ಅವನು ಪ್ರತ್ಯುತ್ತರವಾಗಿ ಅವರಿಗೆ–ನನ್ನನ್ನು ಸ್ವಸ್ಥ ಮಾಡಿದಾತನೇ–ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನನಗೆ ಹೇಳಿದ್ದಾನೆ ಅಂದನು.
12 ಅದಕ್ಕೆ ಅವರು ಅವನಿಗೆ–ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು ಎಂದು ಕೇಳಿದರು.
13 ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ; ಯಾಕಂದರೆ ಆ ಸ್ಥಳ ದಲ್ಲಿ ಜನಸಮೂಹವು ಇದ್ದದರಿಂದ ಯೇಸು ಅಲ್ಲಿಂದ ಸರಕೊಂಡು ಹೋಗಿದ್ದನು.
14 ತರುವಾಯ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು ಅವ ನಿಗೆ–ಇಗೋ, ನಿನಗೆ ಸ್ವಸ್ಥವಾಯಿತಲ್ಲಾ; ನಿನ್ನ ಮೇಲೆ ಹೆಚ್ಚಿನ ಕೇಡು ಬಾರದಂತೆ ಇನ್ನು ಪಾಪಮಾಡಬೇಡ ಅಂದನು.
15 ಆಗ ಅವನು ಹೊರಟು ಹೋಗಿ ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯ ರಿಗೆ ತಿಳಿಸಿದನು.

ಯೋಹಾನ 5: 1-15

27 ಯೇಸು ಅಲ್ಲಿಂದ ಹೊರಟಾಗ ಇಬ್ಬರು ಕುರುಡರು ಆತನನ್ನು ಹಿಂಬಾಲಿಸುತ್ತಾ–ದಾವೀದ ಕುಮಾರನೇ, ನಮ್ಮ ಮೇಲೆ ಕರುಣೆ ಇಡು ಎಂದು ಕೂಗಿ ಹೇಳುತ್ತಿದ್ದರು.
28 ಆತನು ಮನೆಯೊಳಕ್ಕೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು; ಆಗ ಯೇಸು ಅವರಿಗೆ–ನಾನು ಇದನ್ನು ಮಾಡಲು ಶಕ್ತನೆಂದು ನೀವು ನಂಬುತ್ತೀರೋ ಎಂದು ಕೇಳಿದಾಗ ಅವರು ಆತನಿಗೆ–ಕರ್ತನೇ, ಹೌದು ಎಂದು ಅಂದರು.
29 ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ–ನಿಮ್ಮ ನಂಬಿಕೆಯಂತೆ ನಿಮಗಾಗಲಿ ಎಂದು ಹೇಳಿದನು.
30 ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು; ಮತ್ತು ಯೇಸು ಅವರಿಗೆ–ಇದು ಯಾರಿಗೂ ಗೊತ್ತಾಗಬಾರದು ನೋಡಿರಿ ಎಂದು ಅವರಿಗೆ ಖಂಡಿತವಾಗಿ ಅಪ್ಪಣೆಕೊಟ್ಟು ಹೇಳಿದನು.
31 ಆದರೆ ಅವರು ಹೊರಟುಹೋಗಿ ಆ ಸೀಮೆಯಲ್ಲೆಲ್ಲಾ ಆತನ ಕೀರ್ತಿಯನ್ನು ಹಬ್ಬಿಸಿದರು.
32 ಅವರು ಹೊರಟು ಹೋಗುತ್ತಿದ್ದಾಗ ಇಗೋ, ದೆವ್ವ ಹಿಡಿದಿದ್ದ ಮೂಕನಾದ ಒಬ್ಬ ಮನುಷ್ಯನನ್ನು ಅವರು ಆತನ ಬಳಿಗೆ ತಂದರು.
33 ಮತ್ತು ದೆವ್ವವು ಹೊರಗೆ ಹಾಕಲ್ಪಟ್ಟ ಮೇಲೆ ಮೂಕನು ಮಾತಾಡಿದನು; ಆಗ ಜನಸಮೂಹಗಳವರು ಬೆರ ಗಾಗಿ–ಇಂಥದ್ದು ಎಂದೂ ಇಸ್ರಾಯೇಲಿನಲ್ಲಿ ಕಂಡಿಲ್ಲ ಎಂದು ಹೇಳಿದರು.

ಮತ್ತಾಯ 9: 27-33

ಯೇಸು ಸತ್ತವರನ್ನು ಎಬ್ಬಿಸುತ್ತಾನೆ

ಯೇಸು ಸತ್ತ ಜನರನ್ನು ಮತ್ತೆ ಜೀವಕ್ಕೆ ತಂದ ಸಂದರ್ಭಗಳನ್ನು ಸಹಾ ಸುವಾರ್ತೆಗಳು ದಾಖಲಿಸುತ್ತವೆ. ಇಲ್ಲಿ ಒಂದು ವಿವರಣೆ ಇದೆ

21 ಯೇಸು ತಿರಿಗಿ ದೋಣಿಯಲ್ಲಿ ಆಚೇದಡಕ್ಕೆ ಹೋದಾಗ ಬಹಳ ಜನರು ಆತನ ಬಳಿಗೆ ಕೂಡಿಬಂದರು; ಆಗ ಆತನು ಸಮುದ್ರದ ಸವಿಾಪದ ಲ್ಲಿದ್ದನು.
22 ಆಗ ಇಗೋ, ಸಭಾಮಂದಿರದ ಅಧಿಕಾರಿ ಗಳಲ್ಲಿ ಯಾಯಿರನೆಂದು ಹೆಸರಿದ್ದ ಒಬ್ಬನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು–
23 ನನ್ನ ಚಿಕ್ಕಮಗಳು ಸಾಯುವ ಸ್ಥಿತಿಯಲ್ಲಿ ಮಲಗಿದ್ದಾಳೆ, ಅವಳು ಸ್ವಸ್ಥಳಾಗುವಂತೆ ನೀನು ಬಂದು ನಿನ್ನ ಕೈಗಳನ್ನು ಅವಳ ಮೇಲೆ ಇಡು; ಆಗ ಅವಳು ಬದುಕುವಳು ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು.
24 ಆಗ ಯೇಸು ಅವನ ಸಂಗಡ ಹೋದನು; ಮತ್ತು ಬಹಳ ಜನರು ನೂಕಾಡುತ್ತಾ ಆತನ ಹಿಂದೆ ಹೋದರು.
25 ಆಗ ಹನ್ನೆರಡು ವರುಷಗಳಿಂದ ರಕ್ತಸ್ರಾವವಿದ್ದ ಒಬ್ಬ ಸ್ತ್ರೀಯು
26 ಅನೇಕ ವೈದ್ಯರಿಂದ ಬಹು ಕಷ್ಟಗಳನ್ನು ಅನುಭವಿಸಿ ತನಗಿದ್ದದ್ದನ್ನೆಲ್ಲಾ ವೆಚ್ಚ ಮಾಡಿದ್ದಾಗ್ಯೂ ರೋಗವು ಹೆಚ್ಚಾಯಿತೇ ಹೊರತು ಗುಣವಾಗಲಿಲ್ಲ.
27 ಆಗ ಆಕೆಯು ಯೇಸುವಿನ ವಿಷಯ ಕೇಳಿ ಜನರ ಗುಂಪಿನ ಹಿಂದೆ ಬಂದು ಆತನ ಉಡುಪನ್ನು ಮುಟ್ಟಿ ದಳು.
28 ಯಾಕಂದರೆ ಆಕೆಯು–ನಾನು ಆತನ ಉಡುಪುಗಳನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಅಂದುಕೊಂಡಿದ್ದಳು.
29 ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು.
30 ತಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿ ನಲ್ಲಿ ಹಿಂತಿರುಗಿ–ನನ್ನ ಉಡುಪುಗಳನ್ನು ಮುಟ್ಟಿದವರು ಯಾರು ಎಂದು ಕೇಳಲು
31 ಆತನ ಶಿಷ್ಯರು ಆತನಿಗೆ –ಜನಸಮೂಹವು ನಿನ್ನನ್ನು ನೂಕುವದನ್ನು ನೋಡಿ ಯೂ–ನನ್ನನ್ನು ಯಾರು ಮುಟ್ಟಿದರೆಂದು ನೀನು ಹೇಳುತ್ತೀಯಲ್ಲಾ ಅಂದರು.
32 ಆದರೆ ಆತನು ಇದನ್ನು ಮಾಡಿದವಳನ್ನು ಕಾಣಬೇಕೆಂದು ಸುತ್ತಲೂ ನೋಡಿದನು.
33 ಆದರೆ ಆ ಸ್ತ್ರೀಯು ತನ್ನಲ್ಲಿ ಆದದ್ದನ್ನು ತಿಳುಕೊಂಡು ಭಯದಿಂದ ನಡುಗುತ್ತಾ ಬಂದು ಆತನ ಮುಂದೆ ಅಡ್ಡಬಿದ್ದು ಸತ್ಯವನ್ನೆಲ್ಲಾ ಆತನಿಗೆ ತಿಳಿಸಿದಳು.
34 ಆಗ ಆತನು ಆಕೆಗೆ–ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು; ಸಮಾಧಾನದಿಂದ ಹೋಗು; ನಿನ್ನ ಜಾಡ್ಯದಿಂದ ನೀನು ಸ್ವಸ್ಥಳಾಗು ಅಂದನು.
35 ಆತನು ಇನ್ನೂ ಮಾತನಾಡುತ್ತಿರುವಾಗ ಸಭಾ ಮಂದಿರದ ಅಧಿಕಾರಿಯ ಮನೆಯಿಂದ ಕೆಲವರು ಅಲ್ಲಿಗೆ ಬಂದು–ನಿನ್ನ ಮಗಳು ಸತ್ತಿದ್ದಾಳೆ; ಬೋಧಕ ನಿಗೆ ಇನ್ನು ನೀನು ತೊಂದರೆಪಡಿಸುವದು ಯಾಕೆ? ಅಂದರು.
36 ಹಾಗೆ ಹೇಳಿದ್ದನ್ನು ಯೇಸು ಕೇಳಿದ ಕೂಡಲೆ ಆ ಸಭಾಮಂದಿರದ ಅಧಿಕಾರಿಗೆ–ಭಯ ಪಡಬೇಡ, ನಂಬಿಕೆ ಮಾತ್ರ ಇರಲಿ ಅಂದನು.
37 ಆತನು ಪೇತ್ರ, ಯಾಕೋಬ, ಯಾಕೋಬನ ಸಹೋದರನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನ ಹಿಂದೆ ಬರಗೊಡಲಿಲ್ಲ.
38 ಆತನು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದು ಗೊಂದಲವನ್ನೂ ಬಹಳವಾಗಿ ಗೋಳಾಡುತ್ತಾ ಅಳುತ್ತಿರುವವರನ್ನೂ ಕಂಡನು.
39 ಆತನು ಒಳಕ್ಕೆ ಬಂದಾಗ ಅವರಿಗೆ–ನೀವು ಈ ಗೊಂದಲ ಮಾಡು ವದೂ ಅಳುವದೂ ಯಾಕೆ? ಹುಡುಗಿಯು ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ ಅಂದನು.
40 ಆಗ ಅವರು ಆತನಿಗೆ ಹಾಸ್ಯಮಾಡಿ ನಕ್ಕರು. ಆದರೆ ಆತನು ಅವರೆಲ್ಲರನ್ನು ಹೊರಗೆ ಹಾಕಿ ಹುಡುಗಿಯ ತಂದೆ ತಾಯಿಗಳನ್ನು ಮತ್ತು ತನ್ನ ಜೊತೆಯಲ್ಲಿದ್ದವರನ್ನು ಕರೆದುಕೊಂಡು ಒಳಕ್ಕೆ ಹುಡುಗಿಯು ಮಲಗಿದ್ದಲ್ಲಿಗೆ ಹೋದನು.
41 ಮತ್ತು ಆತನು ಆ ಹುಡುಗಿಯ ಕೈ ಹಿಡಿದು ಆಕೆಗೆ –ತಲಿಥಾ ಕೂಮ್‌ ಅಂದನು. ಹುಡುಗಿಯೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಎಂದರ್ಥ.
42 ಕೂಡಲೆ ಆ ಹನ್ನೆರಡು ವರುಷದ ಹುಡುಗಿಯು ಎದ್ದು ನಡೆದಾಡಿದಳು; ಆಗ ಅವರು ಅತ್ಯಾಶ್ಚರ್ಯ ದಿಂದ ಬೆರಗಾದರು.
43 ಇದು ಯಾವ ಮನುಷ್ಯ ನಿಗೂ ತಿಳಿಯಬಾರದೆಂದು ಆತನು ಅವರಿಗೆ ಖಂಡಿತ ವಾಗಿ ಹೇಳಿ ಅವಳಿಗೆ ತಿನ್ನುವದಕ್ಕೆ ಏನಾದರೂ ಕೊಡಬೇಕೆಂದು ಅಪ್ಪಣೆಕೊಟ್ಟನು.

ಮಾರ್ಕ 5: 21-43

ಯೇಸು ಗುಣಪಡಿಸುವಿಕೆಯ ಮೇಲೆ ಪ್ರಭಾವ ಬೀರಿದ್ದಾನೆ, ಆತನ ಹೆಸರು ವ್ಯಾಪಕವಾಗಿ ತಿಳಿದಿರುವ ದೇಶಗಳಲ್ಲಿ, ಕೆಲವು ದುಷ್ಟಶಕ್ತಿಗಳಿವೆ, ಹೆಚ್ಚಿನ ಜನರು ಈಗ ದುಷ್ಟಶಕ್ತಿಗಳ ಅಸ್ತಿತ್ವವನ್ನು ಅನುಮಾನಿಸುತ್ತಾರೆ ಏಕೆಂದರೆ ಪ್ರಕಟಣೆಗಳು ತಲೆಮಾರುಗಳಿಂದ ಅಪರೂಪವಾಗಿದೆ.

ಪರಲೋಕ ರಾಜ್ಯದ ಮುನ್ನೋಟ

ಯೇಸು ದುಷ್ಟಶಕ್ತಿಗಳನ್ನು ಹೊರಹಾಕಿದನು, ರೋಗಿಗಳನ್ನು ಗುಣಪಡಿಸಿದನು ಮತ್ತು ಸತ್ತವರನ್ನು ಎಬ್ಬಿಸಿದನು, ಜನರಿಗೆ ಸಹಾಯ ಮಾಡುವದು ಮಾತ್ರವಲ್ಲ, ಆದರೆ ಆತನು ಬೋಧಿಸಿದ ರಾಜ್ಯದ ಗುಣವನ್ನು ಸಹಾ ತೋರಿಸಿದನು. ಮುಂಬರುವ ರಾಜ್ಯದಲ್ಲಿ

4 ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣ ವಿರುವದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವದೇ ಇಲ್ಲ. ಮೊದಲಿದ್ದವುಗಳೆಲ್ಲಾ ಇಲ್ಲದೆ ಹೋದವು ಎಂದು ಹೇಳಿತು.

ಪ್ರಕಟನೆ 21: 4

ಗುಣಪಡಿಸುವುದು ಈ ರಾಜ್ಯದ ಮುನ್ನೋಟವಾಗಿತ್ತು, ಆದ್ದರಿಂದ ಈ ‘ಹಳೆಯ ವಿಷಯಗಳ ಕ್ರಮಗಳ’ ಮೇಲಿನ ಗೆಲುವು ಹೇಗಿರುತ್ತದೆ ಎಂಬುದನ್ನು ನಾವು ನೋಡಬಹುದು.

ನೀವು ಅಂತಹ ‘ಹೊಸ ವ್ಯವಸ್ಥೆ’ ರಾಜ್ಯದಲ್ಲಿರಲು ಇಷ್ಟಪಡುವುದಿಲ್ಲವೇ?

ಯೇಸು ಪ್ರಕೃತಿಯನ್ನು ಆಜ್ಞಾಪಿಸುವ ಮೂಲಕ ತನ್ನ ರಾಜ್ಯವನ್ನು ಪ್ರದರ್ಶಿಸುತ್ತಲೇ ಇದ್ದಾನೆ – ತನ್ನನ್ನು ತಾನು ಮಾಂಸದಲ್ಲಿ ಓಂ ಎಂದು ತೋರಿಸಿಕೊಳ್ಳುತ್ತಾನೆ.

Leave a Reply

Your email address will not be published. Required fields are marked *