ಮಾನವಕುಲ ಹೇಗೆ ಮುಂದುವರೆಯಿತು – ಮನು (ಅಥವಾ ನೋಹ) ಖಾತೆಯಿಂದ ಪಾಠಗಳು

ಈ ಹಿಂದೆ ನಾವು ಮಾನವ ಇತಿಹಾಸದ ಪ್ರಾರಂಭದಲ್ಲಿಯೇ ನೀಡಲ್ಪಟ್ಟ ಮೋಕ್ಷದ ವಾಗ್ದಾನವನ್ನು ನೋಡಿದ್ದೇವೆ. ನಮ್ಮನ್ನು ಭ್ರಷ್ಟಾಚಾರಕ್ಕೆ ನಡೆಸುವಂತೆ ನಮ್ಮಲ್ಲಿ ಏನೋ ಇದೆ, ಅದು ನಮ್ಮ ಕಾರ್ಯಗಳಲ್ಲಿ ಬಹಿರಂಗವಾಗುವದು, ಉದ್ದೇಶಿತ ನೈತಿಕ ನಡವಳಿಕೆಯ ಗುರಿಯನ್ನು ಕಳೆದುಕೊಂಡಿರುವುದನ್ನು, ಮತ್ತು ನಮ್ಮ ಅಸ್ತಿತ್ವದ ಸ್ವರೂಪಕ್ಕೆ ಇನ್ನಷ್ಟು ಆಳವಾಗಿದೆ ಎಂದು ಸಹ ನಾವು ಗಮನಿಸಿದ್ದೇವೆ. ದೇವರಿಂದ (ಪ್ರಜಾಪತಿ) ಮಾಡಲ್ಪಟ್ಟ ನಮ್ಮ ಮೂಲ ಚಿತ್ರಣವನ್ನು ನಾಶಪಡಿಸಲಾಗಿದೆ. ನಾವು ಅನೇಕ ಧರ್ಮಾಚರಣೆಗಳು, ತೊಳೆಯುವುದು ಮತ್ತು ಪ್ರಾರ್ಥನೆಗಳೊಂದಿಗೆ ಕಷ್ಟಪಟ್ಟು ಪ್ರಯತ್ನಿಸಿದರೂ, ನಮ್ಮ ಭ್ರಷ್ಟಾಚಾರವು ನಾವು ಸರಿಯಾಗಿ ಸಾಧಿಸಲು ಸಾಧ್ಯವಾಗದ ಶುದ್ಧೀಕರಣದ ಅಗತ್ಯವನ್ನು ಸ್ವತಃ ಅನುಭವಿಸಲು ಕಾರಣವಾಗುತ್ತದೆ. ಪರಿಪೂರ್ಣ ಪ್ರಾಮಾಣಿಕತೆಯೊಂದಿಗೆ ಬದುಕಲು ಪ್ರಯತ್ನಿಸುವ ಈ ‘ಕಠಿಣ’ ಹೋರಾಟವನ್ನು ನಿರಂತರವಾಗಿ ಹೋರಾಡುವದರಿಂದ ನಾವು ಆಗಾಗ್ಗೆ ಆಯಾಸಗೊಳ್ಳುತ್ತೇವೆ.

ಈ ಭ್ರಷ್ಟಾಚಾರವು ಯಾವುದೇ ನೈತಿಕ ಹತೋಟಿಯಿಲ್ಲದೆ ಬೆಳೆಯುತ್ತಿದ್ದರೆ ಸಂಗತಿಗಳು ಬೇಗನೆ ಕ್ಷೀಣಿಸಬಹುದು. ಇದು ಮಾನವ ಇತಿಹಾಸದಲ್ಲಿ ಬಹಳ ಮುಂಚೆಯೇ ಸಂಭವಿಸಿತು. ಇದು ಹೇಗೆ ಸಂಭವಿಸಿತು ಎಂದು ಸತ್ಯವೇದದ ಪ್ರಾರಂಭದ ಅಧ್ಯಾಯಗಳು (ವೇದ ಪುಸ್ತಕ) ನಮಗೆ ಹೇಳುತ್ತವೆ. ಈ ವಿವರವು ಶತಪಥ ಬ್ರಾಹ್ಮಣಕ್ಕೆ ಸಮಾನಾಂತರವಾಗಿದೆ, ಇದು ಮನು ಎಂದು ಕರೆಯಲ್ಪಡುವಂತಹ – ಇಂದಿನ ಮಾನವಕುಲದ ಪೂರ್ವಿಕರು – ಮಾನವ ಭ್ರಷ್ಟಾಚಾರದಿಂದಾಗಿ ದೊಡ್ಡ ದೋಣಿಯಲ್ಲಿ ಆಶ್ರಯ ಪಡೆಯುವ ಮೂಲಕ ಬಂದ ಪ್ರವಾಹದ ಒಂದು ದೊಡ್ಡ ತೀರ್ಪಿನಿಂದ ಹೇಗೆ ಬದುಕುಳಿದಿದೆ ಎಂಬುದನ್ನು ವಿವರಿಸುತ್ತದೆ. ಸತ್ಯವೇದ (ವೇದ ಪುಸ್ತಕ) ಮತ್ತು ಸಂಸ್ಕೃತ ವೇದಗಳು ಇಂದು ಜೀವಂತವಾಗಿರುವ ಎಲ್ಲಾ ಮಾನವಕುಲವು ಅವನಿಂದ ಬಂದಿದೆ ಎಂದು ಹೇಳುತ್ತವೆ.

ಪ್ರಾಚೀನ ಮನು – ಮ್ಯಾನ್ಅಂದರೆ ಮನುಷ್ಯ ಎಂಬ ಇಂಗ್ಲಿಷ್ ಪದವನ್ನು ನಾವು ಎಲ್ಲಿ ಪಡೆಯುತ್ತೇವೆ

‘ಮ್ಯಾನ್’ ಎಂಬ ಇಂಗ್ಲಿಷ್ ಪದ ಆರಂಭಿಕ ಜರ್ಮನಿಯಿಂದ ಬಂದಿದೆ. ಯೇಸುಕ್ರಿಸ್ತನ (ಯೇಸುವಿನ ಪ್ರತಿಬಿಂಬ) ಕಾಲದಲ್ಲಿ ವಾಸಿಸುತ್ತಿದ್ದ ರೋಮನ್ ಇತಿಹಾಸಕಾರ ಟಾಸಿಟಸ್, ಜರ್ಮೇನಿಯಾ ಎಂದು ಕರೆಯಲ್ಪಡುವಂತ ತಮ್ಮ ಪುಸ್ತಕದಲ್ಲಿ ಜರ್ಮನಿಯ ಜನರ ಇತಿಹಾಸವನ್ನು ಬರೆದಿದ್ದಾರೆ. ಅದರಲ್ಲಿ ಅವರು ಹೇಳುತ್ತಾರೆ

ತಮ್ಮ ಹಳೆಯ ಲಘು ಕಾವ್ಯಗಳಲ್ಲಿ (ಇದು ಅವರ ಇತಿಹಾಸ) ಅವರು ಭೂಮಿಯಿಂದ ಹುಟ್ಟಿದ ದೇವರು ಟುಯಿಸ್ಟೊ ಮತ್ತು ಅವನ ಮಗ ಮನ್ನುಸ್, ಅವರನ್ನು ರಾಷ್ಟ್ರದ ಪಿತಾಮಹರು ಮತ್ತು ಸಂಸ್ಥಾಪಕರಾಗಿ ಕೊಂಡಾಡುತ್ತಾರೆ. ಅವರು ಮೂವರು ಗಂಡು ಮಕ್ಕಳನ್ನು ಮನ್ನಸ್‌ಗೆ ಒಪ್ಪಿಸಿದ್ದಾರೆ, ನಂತರ ಅನೇಕ ಜನರನ್ನು ಅವರ ಹೆಸರಿನಿಂದ ಕರೆಯಲಾಗುತ್ತದೆ

ಟಾಸಿಟಸ್. ಜರ್ಮೇನಿಯಾ ಅಧ್ಯಾಯ 2,  ಕ್ರಿ.ಶ. 100 ರಲ್ಲಿ ಬರೆಯಲಾಗಿದೆ

ಈ ಪ್ರಾಚೀನ ಜರ್ಮನಿಯ ಪದ ‘ಮನ್ನಸ್’ ಪ್ರೊಟೊ-ಇಂಡೋ-ಯುರೋಪಿಯನ್ “ಮನುಹ್” (ಹೋಲಿಕೆ. ಸಂಸ್ಕೃತ ಮನುಹ್, ಅವೆಸ್ತನ್ಮನು-,) ನಿಂದ ಬಂದಿದೆ ಎಂದು ವಿದ್ವಾಂಸರು ಹೇಳುತ್ತಾರೆ. ಆದ್ದರಿಂದ, ‘ಮ್ಯಾನ್’ ಎಂಬ ಇಂಗ್ಲಿಷ್ ಪದವು ಮನುವಿನಿಂದ ಬಂದಿದೆ, ಸತ್ಯವೇದ (ವೇದ ಪುಸ್ತಕ) ಮತ್ತು ಶತಪಥ ಬ್ರಾಹ್ಮಣರು ಮನು ನಮ್ಮ ಪೂರ್ವಿಕ ಎಂದು ಹೇಳುತ್ತಾರೆ! ಶತಪಥ ಬ್ರಾಹ್ಮಣದಿಂದ ಸಂಕ್ಷಿಪ್ತವಾಗಿ ಈ ವ್ಯಕ್ತಿಯನ್ನು ನೋಡೋಣ. ಖಾತೆಯು ಸ್ವಲ್ಪ ವಿಭಿನ್ನ ಅಂಶಗಳನ್ನು ಹೊಂದಿದೆ, ಆದ್ದರಿಂದ ನಾನು ಸಾಮಾನ್ಯ ಅಂಶಗಳನ್ನು ವಿವರಿಸುತ್ತೇನೆ.

ಸಂಸ್ಕೃತ ವೇದಗಳಲ್ಲಿ ಮನುವಿನ ವರ್ಣನೆ

ವೇದಗಳಲ್ಲಿ ಸತ್ಯವನ್ನು ಹುಡುಕುವ ನೀತಿವಂತನಾಗಿದ್ದನು ಮನು. ಮನು ಸಂಪೂರ್ಣವಾಗಿ ಪ್ರಾಮಾಣಿಕನಾಗಿದ್ದರಿಂದ, ಆರಂಭದಲ್ಲಿ ಅವನನ್ನು ಸತ್ಯವ್ರತ (“ಸತ್ಯದ ಪ್ರಮಾಣವಚನ ಹೊಂದಿರುವವನು”) ಎಂದು ಕರೆಯಲಾಗುತ್ತಿತ್ತು.

ಶತಪಥ ಬ್ರಾಹ್ಮಣದ ಪ್ರಕಾರ (ಶತಪಥ ಬ್ರಾಹ್ಮಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ), ಅವತಾರವು ಮನುಗೆ ಬರುವ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿತು. ಆರಂಭದಲ್ಲಿ ಅವತಾರವು ನದಿಯಲ್ಲಿ ಕೈ ತೊಳೆದುಕೊಂಡಾಗ ಶಫಾರಿ (ಸಣ್ಣ ಮೀನು) ಆಗಿ ಕಾಣಿಸಿಕೊಂಡನು. ಪುಟ್ಟ ಮೀನು ತನ್ನನ್ನು ಕಾಪಾಡಲು ಮನು ಅವರನ್ನು ಕೇಳಿತು, ಮತ್ತು ಸಹಾನುಭೂತಿಯಿಂದ ಅವನು ಅದನ್ನು ನೀರಿನ ಮಡಿಕೆಯಲ್ಲಿ ಹಾಕಿದನು. ಮನು ಅವನನ್ನು ದೊಡ್ಡ ಬಿಂದಿಗೆಯಲ್ಲಿ ಹಾಕುವವರೆಗೂ ಅದು ದೊಡ್ಡದಾಗಿ ಬೆಳೆಯುತ್ತಲೇ ಇತ್ತು ಮತ್ತು ನಂತರ ಅವನನ್ನು ಬಾವಿಯಲ್ಲಿ ಭದ್ರವಾಗಿಟ್ಟನು. ನಿರಂತರವಾಗಿ ಬೆಳೆಯುತ್ತಿರುವ ಮೀನಿಗೆ ಬಾವಿಯು ಕೂಡ ಸಾಕಾಗದೆಂದು ಸಾಬೀತಾದಾಗ, ಮನು ಅವನನ್ನು ಕೆರೆಯಲ್ಲಿ (ಜಲಾಶಯ) ಇರಿಸಿದನು, ಅದು ಎರಡು ಯೋಜನೆಗಳಾಗಿದ್ದವು (25 ಕಿ.ಮೀ) ಮೇಲ್ಮೈಯಿಂದ ಎತ್ತರದಲ್ಲಿ ಮತ್ತು ಭೂಮಿಯಲ್ಲಿ, ಉದ್ದದಷ್ಟು, ಮತ್ತು ಯೋಜನೆ (13 ಕಿ.ಮೀ) ಅಗಲದಲ್ಲಿ. ಮೀನು ಮತ್ತಷ್ಟು ಬೆಳೆದಂತೆ ಮನು ಅದನ್ನು ನದಿಗೆ ಹಾಕಬೇಕಾಯಿತು, ಮತ್ತು ನದಿಯು ಸಾಕಷ್ಟಿಲ್ಲವೆಂದು ಸಾಬೀತಾದಾಗ ಅವನು ಅದನ್ನು ಸಾಗರದಲ್ಲಿ ಇರಿಸಿದನು, ನಂತರ ಅದು ಮಹಾ ಸಾಗರದ ಅತಿ ವಿಶಾಲ ವಿಸ್ತಾರವನ್ನು ತುಂಬಿತು.

ಆಗ ಅವತಾರವು ಎಲ್ಲಾ- ವಿನಾಶಕಾರಿ ಪ್ರವಾಹವು ಅತಿ ಶೀಘ್ರದಲ್ಲೇ ಬರಲಿದೆ ಎಂದು ಮನುಗೆ ತಿಳಿಸಿತು. ಆದ್ದರಿಂದ ಮನು ಬಹು ದೊಡ್ಡದಾದ ದೋಣಿಯನ್ನು ನಿರ್ಮಿಸಿದನು ಅದು ಭೂಮಿಯಲ್ಲಿ ಪುನಃ ಜನಸಂಖ್ಯೆಯನ್ನುಂಟು ಮಾಡಲು ತನ್ನ ಕುಟುಂಬ, ವಿವಿಧ ಬೀಜಗಳು, ಮತ್ತು ಪ್ರಾಣಿಗಳನ್ನು ಇಟ್ಟುಕೊಂಡಿತು, ಏಕೆಂದರೆ ಪ್ರವಾಹವು  ಕಡಿಮೆಯಾದ ನಂತರ ಸಾಗರ ಮತ್ತು ಸಮುದ್ರಗಳು  ಹಿಮ್ಮೆಟ್ಟುತ್ತದೆ ಮತ್ತು ಜನರು ಮತ್ತು ಪ್ರಾಣಿಗಳೊಂದಿಗೆ ಜಗತ್ತನ್ನು ಪುನಃ ಜನಸಂಖ್ಯೆ ಮಾಡಬೇಕಾಗುತ್ತದೆ. ಪ್ರವಾಹದ ಸಮಯದಲ್ಲಿ ಮನು ಮೀನಿನ ಕೊಂಬಿಗೆ ದೋಣಿಯನ್ನು ಬಿಗಿಯಾಗಿಸಿದನು, ಅದು ಅವತಾರವೂ ಆಗಿತ್ತು. ಪ್ರವಾಹದ ನಂತರ ಅವನ ದೋಣಿಯು ಪರ್ವತದ ತುದಿಯಲ್ಲಿ ಕೊನೆಗೊಂಡಿತು. ನಂತರ ಅವನು ಪರ್ವತದಿಂದ ಇಳಿದು ತನ್ನ ವಿಮೋಚನೆಗಾಗಿ ಯಾಗ ಮತ್ತು ಅರ್ಪಣೆಗಳನ್ನು ಅರ್ಪಿಸಿದನು. ಇಂದು ಭೂಮಿಯ ಮೇಲಿನ ಎಲ್ಲಾ ಜನರು ಅವನ ವಂಶದಲ್ಲಿಹುಟ್ಟಿದವರಾಗಿದ್ದಾರೆ.

ಸತ್ಯವೇದದಲ್ಲಿ ನೋಹನ ವರ್ಣನೆ (ವೇದ ಪುಸ್ತಕ)

ಸತ್ಯವೇದದಲ್ಲಿನ (ವೇದ ಪುಸ್ತಕ) ವರ್ಣನೆಯು ಅದೇ ಘಟನೆಯನ್ನು ವಿವರಿಸುತ್ತದೆ, ಆದರೆ ಈ ವರ್ಣನೆಯಲ್ಲಿ ಮನುವನ್ನು ‘ನೋಹ’ ಎಂದು ಕರೆಯಲಾಗುತ್ತದೆ. ನೋಹನ ವರ್ಣನೆ ಮತ್ತು ಸತ್ಯವೇದದಿಂದ ಜಾಗತಿಕ ಪ್ರವಾಹವನ್ನು ವಿವರವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ. ಸಂಸ್ಕೃತ ವೇದಗಳು ಮತ್ತು ಸತ್ಯವೇದದ ಜೊತೆಗೆ, ಈ ಘಟನೆಯ ನೆನಪುಗಳನ್ನು ವಿವಿಧ ಸಂಸ್ಕೃತಿಗಳು, ಧರ್ಮಗಳು ಮತ್ತು ಚರಿತ್ರೆಗಳಿಂದ ಅನೇಕ ಇತಿಹಾಸಗಳಲ್ಲಿ ಸಂರಕ್ಷಿಸಲಾಗಿದೆ. ಪ್ರಪಂಚವು ಜಲಜಶಿಲೆಯಿಂದ ಹೊದಿಕೆಯಾಗಿದೆ, ಇದು ಪ್ರವಾಹದ ಸಮಯದಲ್ಲಿ ರೂಪಿಸಲ್ಪಟ್ಟಿತು. ಆದ್ದರಿಂದ ಈ ಪ್ರವಾಹದ ಭೌತಿಕ ಮತ್ತು ಮಾನವಶಾಸ್ತ್ರೀಯ ಪುರಾವೆಗಳು ನಮ್ಮಲ್ಲಿವೆ. ಆದರೆ ಇಂದು ಈ ವರ್ಣನೆಗೆ ನಾವು ಗಮನ ಹರಿಸಬೇಕಾದ ಎಚ್ಚರಿಕೆ ಏನು?

ತಪ್ಪಿಹೋದ ವಿರುದ್ಧ ಕರುಣೆ ಹೊಂದುವದು

ದೇವರು ಭ್ರಷ್ಟಾಚಾರವನ್ನು (ಪಾಪವನ್ನು) ನಿರ್ಣಯಿಸುತ್ತಾನೆಯೇ, ಮತ್ತು ಪ್ರತ್ಯೇಕವಾಗಿ ನಮ್ಮ ಪಾಪವನ್ನು ನಿರ್ಣಯಿಸಲಾಗುತ್ತದೆಯೆ ಅಥವಾ ಇಲ್ಲವೇ, ಎಂದು ನಾವು ಕೇಳುವಾಗ ಆಗಾಗ್ಗೆ ಪ್ರತಿಕ್ರಿಯೆಯು ಹೀಗಿರುತ್ತದೆ, “ನಾನು ನ್ಯಾಯತೀರ್ಪಿನ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿಲ್ಲ ಏಕೆಂದರೆ ದೇವರು ಬಹಳ ದಯೆಯುಳ್ಳವನು ಮತ್ತು ಕರುಣಾಮಯಿ, ಅವನು ನಿಜವಾಗಿಯೂ ನನ್ನನ್ನು ನಿರ್ಣಯಿಸುವನು ಎಂದು ನಾನು ಯೋಚಿಸುವುದಿಲ್ಲ”. ಇದನ್ನು ಪುನಃ ಯೋಚಿಸಲು ನೋಹನ (ಅಥವಾ ಮನು) ಈ ವರ್ಣನೆಯು ನಮಗೆ ಕಾರಣವಾಗಬೇಕು. ಆ ನ್ಯಾಯತೀರ್ಪಿನಲ್ಲಿ ಇಡೀ ಜಗತ್ತು (ನೋಹ ಮತ್ತು ಅವನ ಕುಟುಂಬವನ್ನು ಹೊರತುಪಡಿಸಿ) ನಾಶವಾಯಿತು. ಹಾಗಾದರೆ ಆತನ ಕರುಣೆ ಎಲ್ಲಿದೆ? ಅದನ್ನು ನಾವೆಯಲ್ಲಿಒದಗಿಸಲಾಗಿತ್ತು.

ದೇವರು ತನ್ನ ಕರುಣೆಯಲ್ಲಿ, ಯಾರಿಗೆ ಬೇಕಾದರೂ ದೊರಕುವ ಒಂದು ನಾವೆಯನ್ನು ಒದಗಿಸಿದನು. ಯಾರಾದರೂ ಆ ನಾವೆಯನ್ನು  ಪ್ರವೇಶಿಸಬಹುದಿತ್ತು ಮತ್ತು ಮುಂಬರುವ ಪ್ರವಾಹದಿಂದ ಕರುಣೆ ಮತ್ತು ಸುರಕ್ಷತೆಯನ್ನು ಪಡೆಯಬಹುದಿತ್ತು. ಬಹುತೇಕ ಎಲ್ಲಾ ಜನರು ಮುಂಬರುವ ಪ್ರವಾಹಕ್ಕೆ ಅಪನಂಬಿಕೆಯೊಂದಿಗೆ ಪ್ರತಿಕ್ರಿಯಿಸಿದರು ಎಂಬುದೇ ಸಮಸ್ಯೆಯಾಗಿತ್ತು. ಅವರು ನೋಹನನ್ನು ಗೇಲಿ ಮಾಡಿದರು ಮತ್ತು ಮುಂಬರುವ ನ್ಯಾಯತೀರ್ಪು ನಿಜವಾಗಿಯೂ ಸಂಭವಿಸುತ್ತದೆ ಎಂದು ನಂಬಲಿಲ್ಲ. ಆದ್ದರಿಂದ ಅವರು ಪ್ರವಾಹದಲ್ಲಿ ನಾಶವಾದರು. ಆದರೂ ಅವರೆಲ್ಲರೂ ನಾವೆಯನ್ನು ಪ್ರವೇಶಿಸಿಬಹುದಾಗಿತ್ತು ಮತ್ತು ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳುಬಹುದಿತ್ತು.

ಬಹುಶಃ ಅಂದು ಜೀವಂತವಾಗಿದ್ದವರು ಎತ್ತರವಾದ ಬೆಟ್ಟಕ್ಕೆ ಏರುವ ಮೂಲಕ ಅಥವಾ ದೊಡ್ಡದಾದ ತೇಲುವ ಕಟ್ಟುಮರವನ್ನು ನಿರ್ಮಿಸುವ ಮೂಲಕ ಪ್ರವಾಹದಿಂದ ತಪ್ಪಿಸಬಹುದು ಎಂದು ಭಾವಿಸಿದ್ದರು. ಆದರೆ ಅವರು ನ್ಯಾಯತೀರ್ಪಿನ ಅಳತೆ ಮತ್ತು ಶಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಈ ‘ಒಳ್ಳೆಯ ಕಲ್ಪನೆಗಳು’ ಆ ನ್ಯಾಯತೀರ್ಪ್ಪಿಗೆ ಸಾಕಾಗುವುದಿಲ್ಲ; ಅವರನ್ನು ಇನ್ನೂ ಹೆಚ್ಚಾಗಿ ಕಾಪಾಡುವಂತಹದು ಬೇಕಾಗಿತ್ತು – ಅದು ನಾವೆ. ಅವರೆಲ್ಲರೂ ನಾವೆಯನ್ನು ನಿರ್ಮಿಸುತ್ತಿರುವುದನ್ನು ಗಮನಿಸಿದಾಗ ಅದು ಮುಂಬರುವ ನ್ಯಾಯತೀರ್ಪು ಮತ್ತು ದೊರಕುವ ಕರುಣೆ ಎರಡಕ್ಕೂ ಸ್ಪಷ್ಟ ಸಂಕೇತವಾಗಿತ್ತು. ಮತ್ತು ನೋಹನ (ಮನು) ಉದಾಹರಣೆಯತ್ತ ಗಮನ ಹರಿಸುವಲ್ಲಿ ಅದು ಇಂದು ನಮ್ಮೊಂದಿಗೆ ಅದೇ ರೀತಿ ಮಾತನಾಡುತ್ತದೆ, ನಮ್ಮ ಸ್ವಂತ ಒಳ್ಳೆಯ ಆಲೋಚನೆಗಳಿಂದಲ್ಲ, ದೇವರು ಸ್ಥಿರಪಡಿಸಿದ ನಿಬಂಧನೆಯ ಮೂಲಕ ಕರುಣೆಯನ್ನು ಪಡೆಯಲಾಗುತ್ತದೆ ಎಂಬುದನ್ನು ತೋರಿಸುತ್ತದೆ.

ಹಾಗಾದರೆ ನೋಹನು ದೇವರ ಕರುಣೆಯನ್ನು ತಿಳಿದು ಕೊಳ್ಳಲು ಮುಖ್ಯ ಕಾರಣವೇನು? ನೀವು ಸತ್ಯವೇದವು  ಹಲವಾರು ಬಾರಿ ವಾಕ್ಯಾಂಗ ಭಾಗವನ್ನು ಪುನರಾವರ್ತಿಸುವುದನ್ನು ಗಮನಿಸಬಹುದು

ಮತ್ತು ಕರ್ತನು ಆಜ್ಞಾಪಿಸಿದದ್ದನ್ನು ಎಲ್ಲಾ ನೋಹನು ಮಾಡಿದನು

ನಾನು ಅರ್ಥಮಾಡಿಕೊಳ್ಳುವದ್ದನ್ನು ಉದ್ದೇಶಿಸಲು, ಅಥವಾ ನಾನು ಇಷ್ಟಪಡುವದನ್ನು, ಅಥವಾ ನಾನು ಒಪ್ಪುವದನ್ನು ಮಾಡಲು ತಿಳಿದುಕೊಳ್ಳುತ್ತೇನೆ. ಮುಂಬರುವ ಪ್ರವಾಹದ ಎಚ್ಚರಿಕೆಯ ಬಗ್ಗೆ ಮತ್ತು ಭೂಮಿಯ ಮೇಲೆ ಅಂತಹ ದೊಡ್ಡ ನಾವೆಯನ್ನು ನಿರ್ಮಿಸುವ ಆಜ್ಞೆಯ ಬಗ್ಗೆ ನೋಹನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳಿತ್ತೆಂದು ನನಗೆ ನಿಶ್ಚಯವಿದೆ. ಅವನು ಒಳ್ಳೆಯ ಮತ್ತು ಸತ್ಯವನ್ನು- ಹುಡುಕುವ ಮನುಷ್ಯನಾಗಿದ್ದರಿಂದ ಬಹುಶಃ ಈ ನಾವೆಯನ್ನು ನಿರ್ಮಿಸಲು ಗಮನ ಹರಿಸಬೇಕಾಗಿಲ್ಲ ಎಂದು ಉದ್ದೇಶಿಸಿರಬಹುದೆಂದು ನನಗೆ ನಿಶ್ಚಯವಿದೆ. ಆದರೆ ಅವನು ಆಜ್ಞಾಪಿಸಿದ ಎಲ್ಲವನ್ನೂ ಮಾಡಿದನು – ಅವನು ಅರ್ಥಮಾಡಿಕೊಂಡದ್ದು ಮಾತ್ರವಲ್ಲ, ಅವನಿಗೆ ಸುಖಕರವಾದದ್ದು ಮಾತ್ರವಲ್ಲ, ಮತ್ತು ಅವನಿಗೆ ಅರ್ಥವಾಗುವಂತಹದ್ದೂ ಕೂಡ ಅಲ್ಲ. ನಾವು ತಿಳಿದುಕೊಳ್ಳಲು ಇದು ಒಂದು ಉತ್ತಮ ಉದಾಹರಣೆಯಾಗಿದೆ.

ಮೋಕ್ಷಕ್ಕೆ ಬಾಗಿಲು

ನಾವೆಯೊಳಗೆ ನೋಹ, ಅವನ ಕುಟುಂಬ ಮತ್ತು ಪ್ರಾಣಿಗಳು ಪ್ರವೇಶಿಸಿದ ನಂತರ ಯೆಹೋವನು ನೋಹನನ್ನು ಒಳಗೆ ಇಟ್ಟು ಬಾಗಿಲನ್ನು ಮುಚ್ಚಿದನು ಎಂದು ಸತ್ಯವೇದವು ಕೂಡ ನಮಗೆ ಹೇಳುತ್ತದೆ

ಆದಿಕಾಂಡ 7:16

ನಾವೆಯಲ್ಲಿದ್ದ ಒಂದೇ ಬಾಗಿಲನ್ನು ನಿಯಂತ್ರಿಸುತ್ತಿದ್ದದ್ದು ಮತ್ತು ನಿರ್ವಹಿಸುತ್ತಿದ್ದದ್ದು ದೇವರೇ ಆಗಿದ್ದರು – ನೋಹನಲ್ಲ. ನ್ಯಾಯತೀರ್ಪು ಬಂದಾಗ ಮತ್ತು ನೀರು ಏರಿದಾಗ, ಹೊರಗಿನ ಜನರಿಂದ ನಾವೆಯ ಮೇಲೆ ಹೊಡೆತದ ಯಾವುದೇ ಪ್ರಮಾಣವು ನೋಹನು ಬಾಗಿಲು ತೆರೆಯುವಂತೆ ಮಾಡಲಿಲ್ಲ. ದೇವರು ಆ ಒಂದೇ ಬಾಗಿಲನ್ನು ನಿಯಂತ್ರಿಸಿದನು. ಆದರೆ ಅದೇ ಸಮಯದಲ್ಲಿ ಒಳಗಿನವರು ಆತ್ಮವಿಶ್ವಾಸದಿಂದ ವಿಶ್ರಾಂತಿ ಪಡೆಯಬಹುದಿತ್ತು ಏಕೆಂದರೆ ದೇವರು ಬಾಗಿಲನ್ನು ನಿಯಂತ್ರಿಸಿದ್ದರಿಂದ ಯಾವುದೇ ಗಾಳಿ ಅಥವಾ ಅಲೆ ಅದನ್ನು ತೆರೆಯಲು ಒತ್ತಾಯಿಸಲಿಲ್ಲಲ್ಲ. ಅವರು ದೇವರ ಆರೈಕೆ ಮತ್ತು ಕರುಣೆಯ ಬಾಗಿಲಲ್ಲಿ ಸುರಕ್ಷಿತರಾಗಿದ್ದರು.

ದೇವರು ಬದಲಾಗದೆ ಇರುವುದರಿಂದ ಇದು ಇಂದಿಗೂ ನಮಗೆ ಅನ್ವಯಿಸುತ್ತದೆ. ಬರಲಿರುವ ಮತ್ತೊಂದು ನ್ಯಾಯತೀರ್ಪು ಇದೆ ಎಂದು ಸತ್ಯವೇದವು ಎಚ್ಚರಿಸುತ್ತದೆ – ಮತ್ತು ಇದು ಬೆಂಕಿಯಿಂದ – ಆದರೆ ಆತನ ನ್ಯಾಯತೀರ್ಪಿನ ಜೊತೆಗೆ ಆತನು ಕರುಣೆಯನ್ನು ಸಹಾ ನೀಡುವನು ಎಂದು ನೋಹನ ಸೂಚನೆಯು ನಮಗೆ ಭರವಸೆಯನ್ನು ನೀಡುತ್ತದೆ. ನಮ್ಮ ಅಗತ್ಯವನ್ನು ಸರಿದೂಗಿಸುವ ಮತ್ತು ನಮಗೆ ಕರುಣೆಯನ್ನು ನೀಡುವ ಒಂದು ಬಾಗಿಲಿನೊಂದಿಗಿರುವ ನಾವೆಯನ್ನು ನಾವು ದೃಷ್ಟಿಯಿಡಬೇಕು.

ಪುನಃ ಯಾಗ                                   

ಸತ್ಯವೇದವು ಸಹಾ ನಮಗೆ ಹೇಳುವದೇನೆಂದರೆ ನೋಹನು:

ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿ, ಅದರ ಮೇಲೆ ಶುದ್ಧವಾದ ಪ್ರತಿ ಪಶು ಪಕ್ಷಿಗಳಿಂದ ಆಯ್ದುಕೊಂಡು ಸರ್ವಾಂಗಹೋಮ ಮಾಡಿದನು.

ಆದಿಕಾಂಡ 8:20

ಇದು ಪುರುಷಸುಕ್ತದ ಯಾಗದ ಮಾದರಿಗೆ ಸರಿಹೊಂದುತ್ತದೆ. ಪುರುಷನ ಬಲಿ ನೀಡಲಾಗುವುದು ಎಂದು ನೋಹನು (ಅಥವಾ ಮನು) ತಿಳಿದಂತೆ, ಅವನು ಮುಂಬರುವ ಯಾಗವನ್ನು ಮನಸ್ಸಿನಲ್ಲಿ ಕಲ್ಪಿಸಿ ಪ್ರಾಣಿ ಬಲಿ ಅರ್ಪಿಸಿ ದೇವರು ಅದನ್ನು ಮಾಡುತ್ತಾನೆ ಎಂಬ ನಂಬಿಕೆಯನ್ನು ನಿರೂಪಿಸಿದನು. ವಾಸ್ತವವಾಗಿ ಈ ಯಾಗದ ನಂತರ ದೇವರು ‘ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿದನು’(ಆದಿಕಾಂಡ 9: 1) ಮತ್ತು ‘ನೋಹನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು’ (ಆದಿಕಾಂಡ 9: 9) ಎಲ್ಲಾ ಜನರನ್ನು ಮತ್ತೆ ಪ್ರವಾಹದಿಂದ ತೀರ್ಪುಮಾಡಬಾರದು ಎಂದು ಸತ್ಯವೇದವು ಹೇಳುತ್ತದೆ. ಆದುದರಿಂದ ನೋಹನ ಪ್ರಾಣಿಬಲಿಯು ಅವನ ಆರಾಧನೆಯಲ್ಲಿ ನಿರ್ಣಾಯಕವಾಗಿತ್ತು ಎಂದು ತೋರುತ್ತದೆ.

ಪುನರ್ಜನ್ಮ – ಕಾನೂನಿನ ಮೂಲಕ ಅಥವಾ

ವೈದಿಕ ಸಂಪ್ರದಾಯದಲ್ಲಿ, ಮನುಸ್ಮೃತಿಯ ಉಗಮವು ಮನು ಎಂದು, ಜೀವನದಲ್ಲಿ ಒಬ್ಬ ವ್ಯಕ್ತಿಯ ವರ್ಣ/ಜಾತಿಯ ಸಲಹೆ ಅಥವಾ ನಿರ್ದೇಶನವನ್ನು ನೀಡುತ್ತದೆ. ಜನನದಲ್ಲಿ, ಎಲ್ಲಾ ಮಾನವರು ಶೂದ್ರರು ಅಥವಾ ಸೇವಕರಾಗಿ ಜನಿಸುತ್ತಾರೆ, ಆದರೆ ಈ ಬಂಧನದಿಂದ ಪಾರಾಗಲು ನಮಗೆ ಎರಡನೆಯ ಅಥವಾ ಹೊಸ ಜನ್ಮದ ಅವಶ್ಯಕತೆ ಇದೆ ಎಂದು ಯಜುರ್ವೇದ ಹೇಳುತ್ತದೆ. ಮನುಸ್ಮೃತಿಯು   ಚರ್ಚಾಸ್ಪದವಾಗಿದೆ ಮತ್ತು ಸ್ಮೃತಿಯ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ವ್ಯಕ್ತಪಡಿಸಲಾಗಿದೆ. ಈ ಎಲ್ಲಾ ವಿವರಗಳನ್ನು ವಿಶ್ಲೇಷಿಸುವುದು ನಮ್ಮ ವ್ಯಾಪ್ತಿಗೂ ಮೀರಿದೆ. ಹೇಗಾದರೂ, ಅನ್ವೇಷಿಸಲು ಯೋಗ್ಯವಾದ ಸಂಗತಿ, ಸತ್ಯವೇದದಲ್ಲಿದೆ, ನೋಹ/ಮನುವಿನ ವಂಶದವರಾದ ಸೆಮಿಟಿಕ್ ಜನರು ಶುದ್ಧತೆ ಮತ್ತು ಪಾಪವಿಮೋಚನೆ ಪಡೆಯಲು ಎರಡು ಮಾರ್ಗಗಳನ್ನು ಪಡೆದರು. ಒಂದು ಮಾರ್ಗವೆಂದರೆ ಕಾನೂನಿನ ಮೂಲಕ ಪಾಪವಿಮೋಚನೆ, ಧಾರ್ಮಿಕ ತೊಳೆಯುವಿಕೆ ಮತ್ತು ಬಲಿಗಳು – ಮನುಸ್ಮೃತಿಗೆ ಸಮಾನರೂಪವಾಗಿದೆ. ಇನ್ನೊಂದು ಮಾರ್ಗವು ಹೆಚ್ಚು ರಹಸ್ಯವಾಗಿತ್ತು, ಮತ್ತು ಇದು ಪುನರ್ಜನ್ಮವನ್ನು ಪಡೆಯುವ ಮೊದಲು ಸಾವನ್ನು ಒಳಗೊಂಡಿತ್ತು. ಯೇಸು ಕೂಡ ಇದರ ಬಗ್ಗೆ ಕಲಿಸಿದರು. ಆತನ ದಿನದಲ್ಲಿ ಕಲಿತ ವಿದ್ವಾಂಸರಿಗೆ ಹೇಳಿದರು

ಯೇಸು ಉತ್ತರಿಸಿದನು, “ನಾನು ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು.”

ಯೋಹಾನ 3: 3

ನಾವು ಇದನ್ನು ಮತ್ತೂ ಹೆಚ್ಚಾಗಿ ಮುಂದಿನ ಲೇಖನಗಳಲ್ಲಿ ನೋಡೋಣ. ಆದರೆ ಸತ್ಯವೇದ ಮತ್ತು ಸಂಸ್ಕೃತ ವೇದಗಳ ನಡುವೆ ಏಕೆ ಇಂತಹ ಸಾಮ್ಯತೆಗಳಿವೆ ಎಂದು ನಾವು ಮುಂದೆ ಅನ್ವೇಷಿಸುತ್ತೇವೆ.

Leave a Reply

Your email address will not be published. Required fields are marked *