ದೇವರ ರಾಜ್ಯ? ಗುಣವನ್ನು ತಾವರೆಯಲ್ಲಿ, ಶಂಖ ಮತ್ತು ಜೋಡಿಯ ಮೀನುಗಳಲ್ಲಿ ಚಿತ್ರಿಸಲಾಗಿದೆ

ಕಮಲವು ದಕ್ಷಿಣ ಏಷ್ಯಾದ ಸಾಂಪ್ರದಾಯಿಕ ಹೂವು. ಪ್ರಾಚೀನ ಇತಿಹಾಸದಲ್ಲಿ ಕಮಲದ ಹೂವು ಒಂದು ಪ್ರಮುಖ ಸಂಕೇತವಾಗಿತ್ತು, ಅದು ಇಂದಿಗೂ ಉಳಿದಿದೆ. ಕಮಲದ ಸಸ್ಯಗಳ ಎಲೆಗಳು ಒಂದು ವಿಶಿಷ್ಟವಾದ ರಚನೆಯನ್ನು ಹೊಂದಿದ್ದು, ಇದು ಸ್ವಯಂ ಶುದ್ದತೆಗೊಳಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ, ಇದರಿಂದಾಗಿ ಹೂವುಗಳು ಮಣ್ಣಿನಿಂದ ಹೊರಹೊಮ್ಮಲು ಕಾಂತಿಹೀನವಾಗದ ಅವಕಾಶ ಮಾಡಿಕೊಡುತ್ತದೆ. ಈ ಸ್ವಾಭಾವಿಕ ಲಕ್ಷಣವು ಹೊಲಸಿನಿಂದ ಅಸ್ಪೃಶ್ಯ, ಮಣ್ಣಿನಿಂದ ಹೂವು ಹೊರಬರುವಂತ ಸಾಂಕೇತಿಕ ಉಲ್ಲೇಖಗಳನ್ನು ಸೃಷ್ಟಿಸಿತು. ಮೊದಲು ಋಗ್ವೇದವು ಕಮಲವನ್ನು ಒಂದು ರೂಪಕದಲ್ಲಿ (RV 5.LXVIII.7-9) ಉಲ್ಲೇಖಿಸುತ್ತದೆ, ಅಲ್ಲಿ ಮಗುವಿನ ಸುರಕ್ಷಿತ ಜನನದ ಬಯಕೆಯನ್ನು ವಿವರಿಸುತ್ತದೆ.

ವಿಷ್ಣು ಕುಬ್ಜ ವಾಮನಾಗಿದ್ದಾಗ, ಅವನ ಪತ್ನಿ ಲಕ್ಷ್ಮಿ ಮಹಾ ಮಂಥನ ಸಮುದ್ರದಲ್ಲಿನ ಕಮಲದಿಂದ ಪದ್ಮ, ಅಥವಾ ಕಮಲದ ಹಾಗೆ ಕಾಣಿಸಿಕೊಂಡಳು, ಇವೆರಡರ  ಅರ್ಥವು “ಕಮಲ” ಎಂದಾಗಿದೆ. ಲಕ್ಷ್ಮಿಯು ಕಮಲದೊಂದಿಗೆ ಮರೆಯಾಗಿರುವ ಸಂಪರ್ಕವನ್ನು ಕಾಪಾಡುತ್ತಾಳೆ ಹಾಗೂ ಹೂವುಗಳೊಳಗೆ ತನ್ನ ವಾಸಸ್ಥಾನವನ್ನು ಹೊಂದಿದ್ದಾಳೆ.

ಶಂಖ ಎಂಬುದು ಆಚರಣೆ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಶಂಖ ಚಿಪ್ಪು ಎಂಬದಾಗಿದೆ. ಶಂಖ ಒಂದು ದೊಡ್ಡ ಸಮುದ್ರದ ಬಸವನ ಚಿಪ್ಪು ಆಗಿದೆ  ಆದರೆ ಪುರಾಣಗಳಲ್ಲಿ ಶಂಕ ವಿಷ್ಣುವಿನ ಚಿಹ್ನೆ ಆಗಿದೆ ಮತ್ತು ಇದನ್ನು ಹೆಚ್ಚಾಗಿ ತುತ್ತೂರಿಯಾಗಿ ಬಳಸಲಾಗುತ್ತದೆ.

ಎಂಟು ಅಷ್ಟಮಂಗಳದ (ಶುಭ ಚಿಹ್ನೆಗಳು) ಬೋಧನಾ ಸಾಧನಗಳಲ್ಲಿ ಕಮಲ ಮತ್ತು ಶಂಖವು ಪ್ರಮುಖವಾದ ಎರಡು ಸಾಧನಗಳಾಗಿದೆ. ಅವು ಸಮಯರಹಿತ  ಗುಣಮಟ್ಟ ಅಥವಾ ಗುಣಗಳಿಗೆ ದೃಷ್ಟಾಂತಗಳಾಗಿ ಅಥವಾ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ. ಹಲವಾರು ಗ್ರಂಥಗಳು ಗುಣಗಳ ಪರಿಕಲ್ಪನೆಯನ್ನು ಚರ್ಚಿಸುತ್ತವೆ, ಸಹಜವಾದ ನೈಸರ್ಗಿಕ ಶಕ್ತಿಗಳು ಒಟ್ಟಾಗಿ ರೂಪಾಂತರಗೊಳ್ಳುತ್ತವೆ ಮತ್ತು ಪ್ರಪಂಚವನ್ನು ಬದಲಾಯಿಸುತ್ತಿರುತ್ತವೆ. ಸಂಖ್ಯ ಚಿಂತನೆಯಲ್ಲಿರುವ ಮೂರು ಗುಣಗಳು: ಸತ್ವ (ಒಳ್ಳೆಯತನ, ರಚನಾತ್ಮಕ, ಸಾಮರಸ್ಯ), ರಾಜಸ್  (ಉತ್ಸಾಹ, ಚುರುಕಾದ, ಗೊಂದಲ), ಮತ್ತು ತಮಾಸ್ (ಕತ್ತಲೆ, ವಿನಾಶಕಾರಿ, ಗಲಿಬಿಲಿ). ನ್ಯಾಯ ಮತ್ತು ವೈಶೇಷಿಕ ಚಿಂತನೆಯ ಶಾಲೆಗಳು ಹೆಚ್ಚಿನ ಗುಣಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತವೆ. ಹಾಗಾದರೆ ದೇವರ ರಾಜ್ಯವು ಹೇಗೆ ಗುಣದಂತೆಯೇ?

ಸಾಂಖ್ಯ ಚಿಂತನೆಯಲ್ಲಿ ಸತ್ವ, ರಾಜಸ್, ತಮಾಸ್ ಗುಣಗಳನ್ನು ವಿವರಿಸುವ ಕಮಲದ ಹೂವು

ಯೇಸು ದೇವರ ರಾಜ್ಯವನ್ನು ಕಾರ್ಯಾಚರಣೆಯ ಗುಣಮಟ್ಟ, ಗುಣ ಎನ್ನುವ ರೀತಿಯಲ್ಲಿ ನೋಡಿದನು, ಏಕೆಂದರೆ ಅದು ಸುವ್ಯವಸ್ಥಿತವಾಗಿ ಬದಲಾಗುತ್ತಿದೆ ಮತ್ತು ಜಗತ್ತನ್ನು ಮೀರಿಸುತ್ತದೆ. ನಮ್ಮನ್ನು ದೇವರ ರಾಜ್ಯಕ್ಕೆ ಆಹ್ವಾನಿಸಲಾಗಿದೆ ಎಂದು ಆತನು   ಕಲಿಸಿದನು, ಆದರೆ ಹಾಗೆ ಮಾಡಲು ದ್ವಿಜರೂ ಬೇಕು. ನಂತರ ಆತನು ದೇವರ ರಾಜ್ಯದ ಗುಣವನ್ನು ನಾವು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯ ಮಾಡಲು ಸಸ್ಯಗಳು, ಶಂಖಗಳು ಮತ್ತು ಜೋಡಿಯಾಗಿರುವ ಮೀನುಗಳನ್ನು (ಅಷ್ಟಮಂಗಳ ಚಿಹ್ನೆಗಳು) ಬೋಧನಾ ಸಾಧನಗಳಾಗಿ ಬಳಸಿಕೊಂಡು ದೇವರ ರಾಜ್ಯದ ಸ್ವಭಾವ ಅಥವಾ ಗುಣಗಳ ಕುರಿತು ಕಥೆಗಳ ಸರಣಿ (ಸಾಮ್ಯಗಳು ಎಂದು ಕರೆಯುತ್ತಾರೆ) ನೀಡಿದನು. ಆತನ ರಾಜ್ಯದ ಸಾಮ್ಯಗಳು ಇಲ್ಲಿವೆ.

ದೇ ದಿನದಲ್ಲಿ ಯೇಸು ಆ ಮನೆಯಿಂ ಹೊರಟುಹೋಗಿ ಸಮುದ್ರದ ಬಳಿಯಲಿ ಕೂತುಕೊಂಡನು.
2 ಆಗ ಜನರ ದೊಡ್ಡ ಸಮೂಹಗಳು ಆತನ ಬಳಿಗೆ ಕೂಡಿ ಬಂದದ್ದರಿಂದ ಆತನು ದೋಣಿ ಯನ್ನು ಹತ್ತಿ ಕೂತುಕೊಂಡನು. ಮತ್ತು ಆ ಸಮೂಹ ದವರೆಲ್ಲಾ ದಡದ ಮೇಲೆ ನಿಂತಿದ್ದರು.
3 ಆಗ ಆತನು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದೇನಂದರೆ–ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟನು.
4 ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಆಗ ಪಕ್ಷಿಗಳು ಬಂದು ಅವು ಗಳನ್ನು ನುಂಗಿಬಿಟ್ಟವು.
5 ಕೆಲವು ಬಹಳ ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು; ಅಲ್ಲಿ ಆಳವಾದ ಮಣ್ಣು ಇಲ್ಲದ್ದರಿಂದ ತಕ್ಷಣವೇ ಅವು ಮೊಳೆತವು;
6 ಆದರೆ ಸೂರ್ಯನು ಮೇಲಕ್ಕೆ ಬಂದಾಗ ಅವು ಬಾಡಿಹೋಗಿ ಅವುಗಳಿಗೆ ಬೇರು ಇಲ್ಲದ್ದರಿಂದ ಒಣಗಿಹೋದವು.
7 ಮತ್ತು ಕೆಲವು ಮುಳ್ಳುಗಳಲ್ಲಿ ಬಿದ್ದವು; ಆಗ ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
8 ಆದರೆ ಬೇರೆಯವುಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು ಕೆಲವು ನೂರರಷ್ಟು ಕೆಲವು ಅರವತ್ತರಷ್ಟು ಕೆಲವು ಮೂವತ್ತರಷ್ಟು ಫಲಕೊಟ್ಟವು.
9 ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.

ಮತ್ತಾಯ 13: 1-9
ಕಮಲದ ಬೀಜಗಳು ಮೊಳಕೆಯೊಡೆಯಲು ಕಾರಣವಾಗುವ ಜೀವಶಕ್ತಿಯನ್ನು ಹೊಂದಿವೆ

ಈ ಸಾಮ್ಯದ ಅರ್ಥವೇನು? ಆತನು ಕೇಳಿದವರಿಗೆ ಅರ್ಥವನ್ನು ಕೊಟ್ಟ ಕಾರಣ ನಾವು ಊಹಿಸಬೇಕಾಗಿಲ್ಲ:

18 ಆದದರಿಂದ ಬಿತ್ತುವವನ ಸಾಮ್ಯದ ವಿಷಯವಾಗಿ ನೀವು ಕೇಳಿರಿ:
19 ಯಾವನಾದರೂ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ ಕೆಡುಕನು ಬಂದು ಅವನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಬಿಡು ವನು; ದಾರಿಯ ಮಗ್ಗುಲಲ್ಲಿ ಬೀಜವನ್ನು ಅಂಗೀಕರಿ ಸಿದವನು ಇವನೇ.

ಮತ್ತಾಯ 13: 18-19
ಆದರೆ ಈ ಬೀಜಗಳು ನೆಲದ ಮಾರ್ಗದಲ್ಲಿ ಮೊಳಕೆಯೊಡೆಯಲು ಸಾಧ್ಯವಿಲ್ಲ

20 ಮತ್ತು ಬಂಡೆಯ ಸ್ಥಳಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಅಂಗೀಕರಿಸುತ್ತಾನೆ;
21 ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು.

ಮತ್ತಾಯ 13: 20-21
ಸೂರ್ಯನ ಶಾಖವು ಬೀಜದಿಂದ ಜೀವವನ್ನು ಕೊಲ್ಲಬಹುದು

22 ಮುಳ್ಳುಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಸಹ ಇವನೇ; ಇವನು ವಾಕ್ಯವನ್ನು ಕೇಳುತ್ತಾನೆ; ಆದರೆ ಈ ಪ್ರಪಂಚದ ಚಿಂತೆಯೂ ಐಶ್ವರ್ಯದ ಮೋಸವೂ ವಾಕ್ಯವನ್ನು ಅಡಗಿಸುವ ದರಿಂದ ಅವನು ಫಲ ಕೊಡಲಾರನು.

ಮತ್ತಾಯ 13:22
ಇತರ ಸಸ್ಯಗಳು ಕಮಲದ ಹೂವಿನ ಬೆಳವಣಿಗೆಗೆ ಅಡ್ಡಿಯಾಗಬಹುದು

23 ಆದರೆ ಒಳ್ಳೇ ಭೂಮಿಯಲ್ಲಿ ಬೀಜ ವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯ ವನ್ನು ಕೇಳಿ ಅದನು ಗ್ರಹಿಸುತ್ತಾನೆ; ಇವನೇ ಫಲಫಲಿ ಸುವವನಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾನೆ.

ಮತ್ತಾಯ 13:23
ಕಮಲದ ಸಸ್ಯವು ಸರಿಯಾದ ಮಣ್ಣಿನಲ್ಲಿ ಬೆಳೆಯುವದು ಮತ್ತು ಸೌಂದರ್ಯದಲ್ಲಿ ವೃದ್ಧಿಯಾಗುತ್ತದೆ

ದೇವರ ರಾಜ್ಯದ ಸಂದೇಶಕ್ಕೆ ನಾಲ್ಕು ಪ್ರತಿಕ್ರಿಯೆಗಳಿವೆ. ಮೊದಲನೆಯವರಿಗೆ ‘ತಿಳುವಳಿಕೆ’ ಇಲ್ಲ ಮತ್ತು ಈ ಕಾರಣದಿಂದ ದುಷ್ಟ ಅವರ ಹೃದಯದಿಂದ ಸಂದೇಶವನ್ನು ದೂರವಿರಿಸುತ್ತಾನೆ. ಉಳಿದ ಮೂರು ಪ್ರತಿಕ್ರಿಯೆಗಳು ಆರಂಭದಲ್ಲಿ ಬಹಳ ಅನುಕೂಲಕರವಾಗಿರುತ್ತವೆ ಮತ್ತು ಅವರು ಸಂದೇಶವನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. ಆದರೆ ಈ ಸಂದೇಶವು ಕಷ್ಟದ ಸಮಯಗಳ ಮೂಲಕ ನಮ್ಮ ಹೃದಯದಲ್ಲಿ ಬೆಳೆಯಬೇಕು. ಮಾನಸಿಕ ಅಂಗೀಕಾರವು ನಮ್ಮ ಜೀವನದ ಮೇಲೆ ಪರಿಣಾಮ ಬೀರದಂತೆ ಸಾಕಾಗುವುದಿಲ್ಲ. ಆದ್ದರಿಂದ ಈ ಪ್ರತಿಕ್ರಿಯೆಗಳಲ್ಲಿ ಎರಡು, ಆರಂಭದಲ್ಲಿ ಸಂದೇಶವನ್ನು ಸ್ವೀಕರಿಸಿದರೂ, ಅದು ಅವರ ಹೃದಯದಲ್ಲಿ ಬೆಳೆಯಲು ಅನುಮತಿಸಲಿಲ್ಲ. ನಾಲ್ಕನೆಯ ಹೃದಯ ಮಾತ್ರ, ‘ವಾಕ್ಯವನ್ನು ಕೇಳುತ್ತದೆ ಮತ್ತು ಅದನ್ನು ಅರ್ಥಮಾಡಿಕೊಳ್ಳುತ್ತದೆ’ ದೇವರು ಹುಡುಕುತ್ತಿರುವ ರೀತಿಯಲ್ಲಿ ಅದನ್ನು ನಿಜವಾಗಿಯೂ ಸ್ವೀಕರಿಸುತ್ತದೆ.

ಯೇಸು ಈ ಸಾಮ್ಯವನ್ನು ಕಲಿಸಿದನು ಆದ್ದರಿಂದ ನಾವು ನಮ್ಮಲ್ಲಿ ಕೇಳಿಕೊಳ್ಳಬೇಕಾದದ್ದು: ‘ನಾನು ಈ ಮಣ್ಣಿನಲ್ಲಿ ಯಾವುದು?’

ಕಳೆಗಳ ಸಾಮ್ಯ

ಈ ಸಾಮ್ಯವನ್ನು ವಿವರಿಸಿದ ನಂತರ, ಯೇಸು ಕಳೆಗಳನ್ನು ಬಳಸಿ ಒಂದು ಸಾಮ್ಯವನ್ನು ಕಲಿಸಿದನು.

24 ಆತನು ಮತ್ತೊಂದು ಸಾಮ್ಯವನ್ನು ಹೇಳಿದ್ದೇ ನಂದರೆ–ಪರಲೋಕ ರಾಜ್ಯವು ಒಳ್ಳೇ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆ ಯಾಗಿದೆ.
25 ಹೇಗಂದರೆ ಜನರು ನಿದ್ರೆ ಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಯನ್ನು ಬಿತ್ತಿ ಹೊರಟು ಹೋದನು.
26 ಅದು ಮೊಳೆತು ಫಲಕೊಟ್ಟಾಗ ಹಣಜಿ ಸಹ ಕಾಣಿಸಿ ಕೊಂಡಿತು.
27 ಆದದರಿಂದ ಮನೇಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ–ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೇ ಬೀಜವನ್ನು ಬಿತ್ತಿದಿ ಯಲ್ಲಾ? ಹಾಗಾದರೆ ಈ ಹಣಜಿಯು ಎಲ್ಲಿಂದ ಬಂತು ಎಂದು ಕೇಳಿದರು.
28 ಅವನು ಅವರಿಗೆ–ಒಬ್ಬ ವೈರಿ ಯು ಇದನ್ನು ಮಾಡಿದ್ದಾನೆ ಅಂದನು. ಆದರೆ ಸೇವಕರು ಅವನಿಗೆ–ಹಾಗಾದರೆ ನಾವು ಹೋಗಿ ಅವುಗಳನ್ನು ಕೂಡಿಸುವಂತೆ ನೀನು ಇಷ್ಟಪಡುತ್ತೀಯೋ ಎಂದು ಕೇಳಿದರು.
29 ಆದರೆ ಅವನು–ಬೇಡ, ನೀವು ಹಣಜಿಯನ್ನು ಕೂಡಿಸುವಾಗ ಅವುಗಳೊಂದಿಗೆ ಗೋದಿಯನ್ನೂ ಕಿತ್ತೀರಿ.
30 ಸುಗ್ಗೀಕಾಲದ ವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ–ಮೊದಲು ಹಣಜಿಯನ್ನು ಕೂಡಿಸಿ ಅದನ್ನು ಸುಡುವದಕ್ಕೆ ಹೊರೆ ಕಟ್ಟಿರಿ; ಆದರೆ ಗೋದಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು ಅಂದನು.

ಮತ್ತಾಯ 13: 24-30
ಕಳೆಗಳು ಮತ್ತು ಗೋಧಿ: ಗೋಧಿ ಮಾಗುವ ಮೊದಲು ಮತ್ತು ಕಳೆಗಳು ಒಂದೇ ರೀತಿ ಕಾಣುತ್ತವೆ

ಆತನು ಈ ಸಾಮ್ಯವನ್ನು ಇಲ್ಲಿ ವಿವರಿಸುತ್ತಾನೆ.

36 ತರುವಾಯ ಯೇಸು ಜನಸಮೂಹವನ್ನು ಕಳು ಹಿಸಿಬಿಟ್ಟು ಮನೆಯೊಳಕ್ಕೆ ಹೋದನು; ಆಗ ಶಿಷ್ಯರು ಆತನ ಬಳಿಗೆ ಬಂದು ಆತನಿಗೆ–ಹೊಲದ ಹಣಜಿಯ ಸಾಮ್ಯವನ್ನು ನಮಗೆ ವಿವರಿಸು ಅಂದರು.
37 ಆತನು ಪ್ರತ್ಯುತ್ತರವಾಗಿ ಅವರಿಗೆ– ಒಳ್ಳೇ ಬೀಜ ಬಿತ್ತುವ ವನು ಮನುಷ್ಯಕುಮಾರನು;
38 ಹೊಲವು ಈ ಲೋಕ; ಒಳ್ಳೇ ಬೀಜವು ರಾಜ್ಯದ ಮಕ್ಕಳಾಗಿದ್ದಾರೆ; ಆದರೆ ಹಣಜಿಯು ಕೆಡುಕನ ಮಕ್ಕಳಾಗಿದ್ದಾರೆ.
39 ಅದನ್ನು ಬಿತ್ತಿದ ವೈರಿಯು ಸೈತಾನನೇ; ಸುಗ್ಗೀ ಕಾಲವು ಲೋಕದ ಅಂತ್ಯವಾಗಿದೆ; ಮತ್ತು ಕೊಯ್ಯುವವರು ದೂತರೇ.
40 ಹೇಗೆ ಹಣಜಿಯನ್ನು ಕೂಡಿಸಿ ಬೆಂಕಿಯಲ್ಲಿ ಸುಡು ವರೋ ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವದು.

ಮತ್ತಾಯ 13: 36-43

ಸಾಸಿವೆ ಕಾಳು ಮತ್ತು ಹುಳಿಹಿಟ್ಟಿನ  ಸಾಮ್ಯಗಳು

ಯೇಸು ಇತರ ಸಾಮಾನ್ಯ ಸಸ್ಯಗಳ ವಿವರಣೆಗಳೊಂದಿಗೆ ಕೆಲವು ಸಂಕ್ಷಿಪ್ತ ಸಾಮ್ಯಗಳನ್ನು ಸಹ ಕಲಿಸಿದನು.

31 ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ–ಒಬ್ಬ ಮನುಷ್ಯನು ತಕ್ಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದ ಸಾಸಿವೆ ಕಾಳಿಗೆ ಪರಲೋಕರಾಜ್ಯವು ಹೋಲಿಕೆಯಾಗಿದೆ.
32 ಅದು ಎಲ್ಲಾ ಬೀಜಗಳಿಗಿಂತಲೂ ಚಿಕ್ಕದಾದದ್ದೇ ನಿಜ; ಆದರೆ ಅದು ಬೆಳೆದಾಗ ಎಲ್ಲಾ ಸಸಿಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ.
33 ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ–ಒಬ್ಬ ಸ್ತ್ರೀಯು ಹುಳಿಯನ್ನು ತಕ್ಕೊಂಡು ಮೂರು ಸೇರು ಹಿಟ್ಟೆಲ್ಲಾ ಹುಳಿಯಾಗುವ ತನಕ ಅದರಲ್ಲಿ ಅಡಗಿಸಿಟ್ಟ ಹುಳಿಗೆ ಪರಲೋಕ ರಾಜ್ಯವು ಹೋಲಿಕೆಯಾಗಿದೆ.

ಮತ್ತಾಯ 13: 31-33
ಸಾಸಿವೆ ಬೀಜ ಚಿಕ್ಕದಾಗಿದೆ.
ಸಾಸಿವೆ ಸಸ್ಯಗಳು ಸೊಂಪಾಗಿ ಮತ್ತು ದೊಡ್ಡದಾಗಿ ಬೆಳೆಯುತ್ತವೆ

ಈ ಜಗತ್ತಿನಲ್ಲಿ ದೇವರ ರಾಜ್ಯವು ಸಣ್ಣದಾಗಿ ಮತ್ತು ಅತ್ಯಲ್ಪವಾಗಿ ಪ್ರಾರಂಭವಾಗುತ್ತದೆ ಆದರೆ ಹಿಟ್ಟಿನ ಮೂಲಕ ಕೆಲಸ ಮಾಡುವ ಹುಳಿಹಿಟ್ಟಿನಂತೆ ಮತ್ತು ದೊಡ್ಡ ಸಸ್ಯವಾಗಿ ಬೆಳೆಯುವ ಸಣ್ಣ ಬೀಜದಂತೆ ಪ್ರಪಂಚದಾದ್ಯಂತ ಬೆಳೆಯುತ್ತದೆ. ಅದು ಏಕಕಾಲದಲ್ಲಿ ಅಥವಾ,ಬಲದಿಂದ ಆಗುವುದಿಲ್ಲ, ಅದರ ಬೆಳವಣಿಗೆಯು ಅಗೋಚರವಾಗಿರುತ್ತದೆ ಆದರೆ ಎಲ್ಲೆಡೆ ಮತ್ತು ತಡೆಯಲಾಗದು.

ಹೂಳಿಟ್ಟ ದ್ರವ್ಯದ ಮತ್ತು ಉತ್ತಮವಾದ ಮುತ್ತಿನ ಸಾಮ್ಯಗಳು

44 ಪರಲೋಕರಾಜ್ಯವು ಹೊಲದಲ್ಲಿ ಬಚ್ಚಿಟ್ಟಿದ ಸಂಪತ್ತಿಗೆ ಹೋಲಿಕೆಯಾಗಿದೆ; ಅದನ್ನು ಒಬ್ಬ ಮನು ಷ್ಯನು ಕಂಡುಕೊಂಡು ಬಚ್ಚಿಟ್ಟು ಅದರ ಸಂತೋಷದ ನಿಮಿತ್ತ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ.
45 ಪರಲೋಕರಾಜ್ಯವು ಒಳ್ಳೇ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
46 ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು.

ಮತ್ತಾಯ 13: 44 -46
ಶಂಖ ಚಿಪ್ಪುಗಳು ಉತ್ತಮವಾದ ನಿಧಿಯನ್ನು ಒಳಗೊಂಡಿರಬಹುದು ಆದರೆ ಮೌಲ್ಯವು ಮೇಲ್ನೋಟಕ್ಕೆ ಗೋಚರಿಸುವುದಿಲ್ಲ

ಕೆಲವು ಶಂಖ ಚಿಪ್ಪುಗಳ ಒಳಗೆ ಗುಲಾಬಿ ಮುತ್ತುಗಳಿವೆ – ಹೆಚ್ಚಿನ ಮೌಲ್ಯದೊಂದಿಗೆ ಮರೆಮಾಡಲಾಗಿದೆ

ಗುಲಾಬಿ ಮುತ್ತುಗಳು ಬಹಳ ಮೌಲ್ಯಯುತವಾಗಿವೆ

ಈ ಸಾಮ್ಯಗಳು ದೇವರ ರಾಜ್ಯದ ಮೌಲ್ಯವನ್ನು ಕೇಂದ್ರೀಕರಿಸುತ್ತವೆ. ಹೊಲದಲ್ಲಿ ಹೂಳಿಟ್ಟ ನಿಧಿಯ ಬಗ್ಗೆ ಯೋಚಿಸಿ. ಮರೆಮಾಚಲ್ಪಟ್ಟ ಕಾರಣ, ಹೊಲದ ಮೂಲಕ ಹಾದುಹೋಗುವ ಪ್ರತಿಯೊಬ್ಬರೂ ಹೊಲವು ಕಡಿಮೆ ಮೌಲ್ಯವನ್ನು ಹೊಂದಿದೆ ಎಂದು  ಭಾವಿಸುತ್ತಾರೆ, ಮತ್ತು ಈ ಪ್ರಕಾರ  ಅವರಿಗೆ ಅದರಲ್ಲಿ ಆಸಕ್ತಿ ಇರುವದಿಲ್ಲ. ಆದರೆ ಯಾರಾದರೂ ಅಲ್ಲಿ ಒಂದು ನಿಧಿ ಇದೆ ಎಂದು ಅರಿತುಕೊಂಡು, ಹೊಲವನ್ನು ಬಹಳ ಅಮೂಲ್ಯವಾಗಿಸುತ್ತಾರೆ – ಅದನ್ನು ಖರೀದಿಸಲು ಮತ್ತು ನಿಧಿಯನ್ನು ಪಡೆಯಲು ಹಾಗೂ ಎಲ್ಲವನ್ನೂ ಮಾರಾಟ ಮಾಡಲು ಸಾಕಷ್ಟು ಮೌಲ್ಯಯುತವಾಗಿದೆ. ಆದ್ದರಿಂದ  ಇದು ದೇವರ ರಾಜ್ಯದೊಂದಿಗೆ ಇದೆ – ಹೆಚ್ಚಿನವರು ಗಮನಿಸದ ಮೌಲ್ಯ, ಆದರೆ ಅದರ ಮೌಲ್ಯವನ್ನು ನೋಡುವ ಕೆಲವರು ಹೆಚ್ಚಿನ ಮೌಲ್ಯವನ್ನು ಪಡೆಯುತ್ತಾರೆ.

ಬಲೆಯ ಸಾಮ್ಯ

47 ಪರಲೋಕರಾಜ್ಯವು ಸಮುದ್ರದಲ್ಲಿ ಬೀಸಲ್ಪಟ್ಟು ಎಲ್ಲಾ ತರವಾದದ್ದನ್ನು (ಮಾನುಗಳನ್ನು) ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.
48 ಅದು ತುಂಬಿದಾಗ ಅವರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಪಾತ್ರೆಗಳಲ್ಲಿ ತುಂಬಿಸಿ ಕೆಟ್ಟವುಗಳನ್ನು ಹೊರಗೆ ಬಿಸಾಡಿದರು.
49 ಹಾಗೆಯೇ ಲೋಕಾಂತ್ಯ ದಲ್ಲಿ ಇರುವದು; ದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸುವರು.
50 ಮತ್ತು ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು ಎಂದು ಹೇಳಿದನು.

ಮ್ಯಾಥ್ಯೂ 13: 47-50
ದೇವರ ರಾಜ್ಯವು ಗೋವಾದಲ್ಲಿ ಈ ಮೀನುಗಾರರಂತೆ ಜನರನ್ನು ವಿಂಗಡಿಸುತ್ತದೆ

ಯೇಸು ದೇವರ ರಾಜ್ಯದ ಬಗ್ಗೆ ಕಲಿಸಲು ಅಷ್ಟಮಂಗಳದ – ಮೀನಿನ ಜೋಡಿಯನ್ನು ಬಳಸಿದನು. ದೇವರ ರಾಜ್ಯವು ಮೀನುಗಳನ್ನು ಬೇರ್ಪಡಿಸುವಂತಹ ಮೀನುಗಾರರಂತೆ ಜನರನ್ನು ಎರಡು ಗುಂಪುಗಳಾಗಿ ಪ್ರತ್ಯೇಕಿಸುತ್ತದೆ. ಇದು ನ್ಯಾಯತೀರ್ಪಿನ ದಿನದಂದು ಸಂಭವಿಸುತ್ತದೆ.

ದೇವರ ರಾಜ್ಯವು ಹಿಟ್ಟಿನಲ್ಲಿನ ಹುಳಿಯಂತೆ;  ನಿಗೂಢವಾಗಿ ಬೆಳೆಯುತ್ತದೆ; ಹೆಚ್ಚಿನ ಮೌಲ್ಯವನ್ನು ಮರೆಮಾಡಲಾಗಿದೆ; ಮತ್ತು ಜನರ ಮಧ್ಯದಲ್ಲಿ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ. ಇದು ಜನರನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥವಾಗದವರ ನಡುವೆ ಪ್ರತ್ಯೇಕಿಸುತ್ತದೆ. ಈ ಸಾಮ್ಯಗಳನ್ನು ಕಲಿಸಿದ ನಂತರ ಯೇಸು ತನ್ನ ಕೇಳುಗರಿಗೆ ಈ ಪ್ರಶ್ನೆಯನ್ನು ಕೇಳಿದನು.

51 ಇದಲ್ಲದೆ ಯೇಸು ಅವರಿಗೆ–ಇವುಗಳನ್ನೆಲ್ಲಾ ನೀವು ಗ್ರಹಿಸಿದ್ದೀರಾ ಎಂದು ಕೇಳಿದ್ದಕ್ಕೆ ಅವರು ಆತ ನಿಗೆ–ಕರ್ತನೇ, ಹೌದು ಎಂದು ಹೇಳಿದರು.

ಮತ್ತಾಯ 13:51

ಇದರ ಬಗ್ಗೆ ನೀವು ಏನು ಯೋಚಿಸುವಿರಿ ? ದೇವರ ರಾಜ್ಯವು ಪ್ರಪಂಚದಾದ್ಯಂತ ಚಲಿಸುವ ಗುಣ ಎಂದು ಅರ್ಥೈಸಿಕೊಂಡರೆ ಅದು ನಿಮ್ಮ ಮೂಲಕ ಚಲಿಸದ ಹೊರತು ನಿಮಗೆ ಯಾವುದೇ ಪ್ರಯೋಜನವಿಲ್ಲ. ಮತ್ತೆ ಹೇಗೆ?

ಯೇಸು ಗಂಗಾ ತೀರ್ಥದಂತೆ ತನ್ನ ಜೀವಜಲ ಸಾಮ್ಯದೊಂದಿಗೆ ವಿವರಿಸುತ್ತಾನೆ.

Leave a Reply

Your email address will not be published. Required fields are marked *