Skip to content

ಮೋಕ್ಷದ ವಾಗ್ದಾನ – ಆರಂಭದಿಂದಲೇ

ಮಾನವಕುಲವು ತಮ್ಮ ಪ್ರಾರಂಭದ ಸೃಷ್ಟಿಯ ಸ್ಥಿತಿಯಿಂದ ಹೇಗೆ ಕುಸಿಯಿತು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಸತ್ಯವೇದವು (ವೇದ ಪುಸ್ತಕ) ಮೊದಲಿನಿಂದಲೂ ದೇವರು ಹೊಂದಿದ್ದ ಯೋಜನೆಯೊಂದಿಗೆ ಮುಂದುವರಿಯುತ್ತದೆ. ಈ ಯೋಜನೆಯು ಪ್ರಾರಂಭದಲ್ಲೇ ನೀಡಲಾದ  ವಾಗ್ದಾನದಲ್ಲಿ ಕೇಂದ್ರೀಕರಿಸಲಾಗಿದೆ ಮತ್ತು ಪುರುಷಸೂಕ್ತದಲ್ಲಿ ಪ್ರತಿಧ್ವನಿಸುವ ಅದೇ ಯೋಜನೆಯಾಗಿದೆ.

ಸತ್ಯವೇದವು – ನಿಜವಾಗಿಯೂ ಗ್ರಂಥಾಲಯ

ಈ ವಾಗ್ದಾನದ ಮಹತ್ವವನ್ನು ಪ್ರಶಂಸಿಸಲು ನಾವು ಸತ್ಯವೇದದ ಕೆಲವು ಮೂಲಭೂತ ಸಂಗತಿಗಳನ್ನು ತಿಳಿದಿರಬೇಕು. ಇದು ಪುಸ್ತಕವಾಗಿದ್ದರೂ, ನಾವು ಅದನ್ನು ಹಾಗೆ ಭಾವಿಸಿದ್ದರೂ, ಅದನ್ನು ಚಲಿಸುವ ಗ್ರಂಥಾಲಯ ಎಂದು ಭಾವಿಸುವುದು ಸರಿಯಾಗಿದೆ. ಏಕೆಂದರೆ ಇದು 1500 ವರ್ಷಗಳ ಅವಧಿಯಲ್ಲಿ, ವಿವಿಧ ಲೇಖಕರು ಬರೆದ, ಪುಸ್ತಕಗಳ ಸಂಗ್ರಹವಾಗಿದೆ. ಇಂದು ಈ ಪುಸ್ತಕಗಳನ್ನು ಒಂದು ಸಂಪುಟವಾಗಿ ಸಿದ್ಧಮಾಡಲಾಗಿದೆ – ಅದು ಸತ್ಯವೇದ. ಈ ಸಂಗತಿಯು ಮಾತ್ರ ವಿಶ್ವದ ಶ್ರೇಷ್ಠ ಪುಸ್ತಕಗಳಲ್ಲಿ ಸತ್ಯವೇದವನ್ನು       ಋಗ್ವೇದಗಳಂತೆ ಅನನ್ಯಗೊಳಿಸುತ್ತದೆ. ವೈವಿಧ್ಯಮಯ ಕರ್ತೃತ್ವದ ಜೊತೆಗೆ, ಸತ್ಯವೇದದ ಹಲವಾರು ಪುಸ್ತಕಗಳು ಹೇಳಿಕೆಗಳು, ಘೋಷಣೆಗಳು ಮತ್ತು ನಂತರದ ಬರಹಗಾರರು ಅನುಸರಿಸುವ ಮುನ್ಸೂಚನೆಗಳನ್ನು ನೀಡುತ್ತವೆ. ಸತ್ಯವೇದವನ್ನು ಕೇವಲ ಒಬ್ಬ ಲೇಖಕ, ಅಥವಾ ಒಬ್ಬರಿಗೊಬ್ಬರು ತಿಳಿದಿರುವ ಲೇಖಕರ ಗುಂಪು ಬರೆದಿದ್ದರೆ, ಅದು ಮಹತ್ವದ್ದಾಗಿರುವುದಿಲ್ಲ. ಆದರೆ ಸತ್ಯವೇದ ಲೇಖಕರು ನೂರಾರು ಮತ್ತು ಸಾವಿರಾರು ವರ್ಷಗಳಿಂದ ಬೇರ್ಪಟ್ಟಿದ್ದಾರೆ, ವಿವಿಧ ನಾಗರೀಕತೆಗಳು, ಭಾಷೆಗಳು, ಸಾಮಾಜಿಕ ಸ್ತರಗಳು ಮತ್ತು ಸಾಹಿತ್ಯ ಪ್ರಕಾರಗಳಲ್ಲಿ ಬರೆದಿರುತ್ತಾರೆ – ಆದರೂ ಅವರ ಸಂದೇಶಗಳು ಮತ್ತು ಮುನ್ಸೂಚನೆಗಳನ್ನು ನಂತರದ ಲೇಖಕರು ಮತ್ತಷ್ಟು ಅಭಿವೃದ್ಧಿಪಡಿಸಿದ್ದಾರೆ ಅಥವಾ ಸತ್ಯವೇದದ ಹೊರಗೆ ಪರಿಶೀಲಿಸಿದ ಇತಿಹಾಸದ ಸಂಗತಿಗಳ ಮೂಲಕ ಪೂರೈಸಿದ್ದಾರೆ. ಇದು ಸತ್ಯವೇದವನ್ನು ಸಂಪೂರ್ಣ ವಿಭಿನ್ನ ಮಟ್ಟದಲ್ಲಿ ಅನನ್ಯವಾಗಿಸುತ್ತದೆ – ಮತ್ತು ಅದರ ಸಂದೇಶವನ್ನು ಅರ್ಥಮಾಡಿಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತದೆ. ಹಳೆಯ ಒಡಂಬಡಿಕೆಯ ಪುಸ್ತಕಗಳ (ಯೇಸುವಿಗೆ ಮುಂಚಿನ ಪುಸ್ತಕಗಳು) ಅಸ್ತಿತ್ವದಲ್ಲಿರುವ ಪ್ರತಿಗಳು ಕ್ರಿ.ಪೂ 200 ರದ್ದು ಎಂದು ಕಾಲಗಣನೆ ಮಾಡಲಾಗಿದೆ, ಆದ್ದರಿಂದ ಸತ್ಯವೇದದ ಪಠ್ಯ ಆಧಾರವು ಪ್ರಪಂಚದ ಇತರ ಪ್ರಾಚೀನ ಪುಸ್ತಕಗಳಿಗಿಂತ ಹೆಚ್ಚು ಉತ್ತಮವಾಗಿದೆ.

ಉದ್ಯಾನದಲ್ಲಿ ಮೋಕ್ಷದ ವಾಗ್ದಾನ

ನಾವು ಇದನ್ನು ಸತ್ಯವೇದಲ್ಲಿನ ಆದಿಕಾಂಡ ಪುಸ್ತಕದ ಪ್ರಾರಂಭದಲ್ಲಿಯೇ ಸೃಷ್ಟಿ ಮತ್ತು ನಾಶನ ವಿವರದ ನಂತರದ ಘಟನೆಗಳಿಗೆ ‘ಎದುರು ನೋಡುತ್ತಿದ್ದೇವೆ’. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಪ್ರಾರಂಭವನ್ನು ವಿವರಿಸುತ್ತಿದ್ದರೂ, ಅದನ್ನು ಅಂತ್ಯದ ದೃಷ್ಟಿಯಿಂದ ಬರೆಯಲಾಗಿದೆ. ಇಲ್ಲಿ ದೇವರು ತನ್ನ ಎದುರಾಳಿ ಸೈತಾನನನ್ನು ಎದುರಿಸುವಾಗ, ಸರ್ಪದ ರೂಪದಲ್ಲಿದ್ದ ದುಷ್ಟನ ವ್ಯಕ್ತಿತ್ವ ಮತ್ತು ಸೈತಾನನು ಮಾನವ ಪತನವನ್ನು ತಂದ ಸ್ವಲ್ಪ ಸಮಯದ ನಂತರ ಅವನೊಂದಿಗೆ ಒಗಟಿನಲ್ಲಿ ಮಾತನಾಡುವಾಗ ನಾವು ಒಂದು ವಾಗ್ದಾನವನ್ನು ನೋಡುತ್ತೇವೆ:

“… ಮತ್ತು ನಾನು (ದೇವರು) ನಿನಗೂ (ಸೈತಾನ) ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅವನ ಹಿಮ್ಮಡಿಯನ್ನು ಕಚ್ಚುವಿ.”

ಆದಿಕಾಂಡ 3:15

ನೀವು ಎಚ್ಚರಿಕೆಯಾಗಿ ಓದುವುದರಿಂದ ಐದು ವಿವಿಧ ಕಥಾಪಾತ್ರಗಳು ಪ್ರಸ್ತಾಪಿಸಿರುವದನ್ನು ನೋಡಬಹುದು ಮತ್ತು ಅದು ಭವಿಷ್ಯಸೂಚಕವಾದದ್ದು, ಅದು ಸಮಯವನ್ನು ಎದುರು ನೋಡುತ್ತಿದೆ (ಭವಿಷ್ಯತ್ ಕಾಲದಲ್ಲಿ ಪದೇ ಪದೇ ಬಳಕೆಯಾಗುವ “ಕ್ರಿಯಾಪದವನ್ನು” ನೋಡಬಹುದು). ಕಥಾಪಾತ್ರಗಳು ಹೀಗಿವೆ:

1. ದೇವರು/ಪ್ರಜಾಪತಿ

2. ಸೈತಾನ/ಸರ್ಪ

3. ಸ್ತ್ರೀ

4. ಸ್ತ್ರೀಯ ಸಂತತಿ

5. ಸೈತಾನನ ಸಂತತಿ

ಮತ್ತು ಭವಿಷ್ಯದಲ್ಲಿ ಹೇಗೆ ಈ ಕಥಾಪಾತ್ರಗಳು ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ಒಗಟು  ಮುಂತಿಳಿಸುತ್ತದೆ. ಇದನ್ನು ಕೆಳಗೆ ತೋರಿಸಲಾಗಿದೆ

Relationships between the characters depicted in the Promise of Genesis

 ಆದಿಕಾಂಡದ ವಾಗ್ಧಾನದಲ್ಲಿನ ಕಥಾಪಾತ್ರಗಳ ನಡುವಿನ ಸಂಬಂಧಗಳು

ಸೈತಾನ ಮತ್ತು ಸ್ತ್ರೀ ಇಬ್ಬರೂ ‘ಸಂತತಿಯನ್ನು’ ಹೊಂದುವಂತೆ ದೇವರು ವ್ಯವಸ್ಥೆಯನ್ನು ಮಾಡುವನು. ಈ ಸಂತತಿಯ ನಡುವೆ ಹಾಗೂ ಸ್ತ್ರೀ ಮತ್ತು ಸೈತಾನನ ನಡುವೆ ‘ಹಗೆತನ’ ಅಥವಾ ದ್ವೇಷ ಇರುವದು. ಸೈತಾನನು ಸ್ತ್ರೀಯ ಸಂತತಿಯ ‘ಹಿಮ್ಮಡಿಯನ್ನುಕಚ್ಚುವನು’ ಮತ್ತು ಸ್ತ್ರೀಯ ಸಂತತಿಯು ಸೈತಾನನ ‘ತಲೆಯನ್ನುಜಜ್ಜುವನು’.

ಸಂತತಿಯ ಮೇಲಿನ ಅನುಮಾನಗಳು – ಅವನು

ಇಲ್ಲಿಯವರೆಗೆ ನಾವು ನೇರವಾಗಿ ಪಾಠದಿಂದ ಗಮನವಿಟ್ಟು ನೋಡಿದ್ದೇವೆ. ಈಗ ಕೆಲವು ಕಾರಣಾಂತರದ ಅನುಮಾನಗಳು ಇವೆ. ಏಕೆಂದರೆ ಸ್ತ್ರೀಯ ‘ಸಂತತಿಯನ್ನು’ ‘ಅವನು’ ಮತ್ತು ‘ಅವನ’ ಎಂದು ಕರೆಯಲಾಗುತ್ತದೆ, ಅದು ಒಬ್ಬ ಪುರುಷ ಮನುಷ್ಯ – ವ್ಯಕ್ತಿ ಎಂದು ನಮಗೆ ತಿಳಿದಿದೆ. ಅದರೊಂದಿಗೆ ನಾವು ಕೆಲವು ಸಾಧ್ಯವಾದ ವ್ಯಾಖ್ಯಾನಗಳನ್ನು ತ್ಯಜಿಸಬಹುದು. ‘ಅವನು’ ಸಂತತಿಯು ಆಗಿರುವಂತೆಯೇ ‘ಅವಳು’ ಅಲ್ಲ ಮತ್ತು ಆದ್ದರಿಂದ ಸ್ತ್ರೀಯಾಗಲು ಸಾಧ್ಯವಿಲ್ಲ. ‘ಅವನು’ ಸಂತತಿಯು ಆಗಿರುವಂತೆಯೇ ‘ಅವರು’, ಅಲ್ಲ, ಅದು ಬಹುಶಃ, ಜನರ ಗುಂಪು, ಅಥವಾ ಜನಾಂಗ, ಅಥವಾ ತಂಡ, ಅಥವಾ ರಾಷ್ಟ್ರವಾಗಿರಬಹುದು. ವಿವಿಧ ಸಮಯಗಳಲ್ಲಿ ಮತ್ತು ವಿವಿಧ ರೀತಿಯಲ್ಲಿ ಜನರು ‘ಅವರು’ ಉತ್ತರವಾಗಿರಬಹುದೆಂದು ಭಾವಿಸಿದ್ದರು. ಆದರೆ ಸಂತತಿಯು, ‘ಅವನು’ ಆಗಿರುವುದು ಒಂದು ಜನರ ಗುಂಪು ಅಲ್ಲ, ಅದು ಒಂದು ರಾಷ್ಟ್ರ ಅಥವಾ ಹಿಂದೂಗಳು, ಬೌದ್ಧರು, ಕ್ರೈಸ್ತರು, ಮುಸ್ಲಿಮರು, ಅಥವಾ ಒಂದು ಜಾತಿಯವರಂತೆಯೂ ನಿರ್ದಿಷ್ಟ ಧರ್ಮದವರ ಕಡೆಗೆ ಗಮನಸೆಳೆಯುತ್ತದೆ. ‘ಅವನು’ ಸಂತತಿಯು ಆಗಿರುವಂತೆಯೇ ‘ಅದು’ ಅಲ್ಲ (ಸಂತತಿಯು ಒಬ್ಬ ವ್ಯಕ್ತಿಯಾಗಿದ್ದಾನೆ). ಸಂತತಿಯು ಪ್ರತ್ಯೇಕ ತತ್ವಶಾಸ್ತ್ರ, ಬೋಧನೆ, ತಂತ್ರಜ್ಞಾನ, ರಾಜಕೀಯ ವ್ಯವಸ್ಥೆ ಅಥವಾ ಧರ್ಮ ಎಂಬ ಸಾಧ್ಯತೆಯನ್ನು ತೆಗೆದುಹಾಕುತ್ತದೆ. ಈ ರೀತಿಯ ‘ಅದು’ ಬಹುಶಃ, ಜಗತ್ತನ್ನು ಸ್ಥಿರಪಡಿಸಲು ನಮ್ಮ ಆಯ್ಕೆಯಾಗಿರಬಹುದು. ನಮ್ಮ ಪರಿಸ್ಥಿತಿಯನ್ನು ಸರಿಪಡಿಸುವುದು ಒಂದು ರೀತಿಯ ‘ಅದು’ ಎಂದು ನಾವು ನೆನಸುತ್ತೇವೆ, ಆದ್ದರಿಂದ ಶತಮಾನಗಳಿಂದಲೂ ಉತ್ತಮ ಮಾನವ ಚಿಂತಕರು ವಿಭಿನ್ನ ರಾಜಕೀಯ ವ್ಯವಸ್ಥೆಗಳು, ಶಿಕ್ಷಣ ವ್ಯವಸ್ಥೆಗಳು, ತಂತ್ರಜ್ಞಾನಗಳು, ಧರ್ಮಗಳು ಇತ್ಯಾದಿಗಳಿಗಾಗಿ ವಾದಿಸಿದ್ದಾರೆ. ಆದರೆ ಈ ವಾಗ್ಧಾನವು ಸಂಪೂರ್ಣವಾಗಿ ವಿಭಿನ್ನ ದಿಕ್ಕಿನಲ್ಲಿ ತೋರಿಸುತ್ತದೆ. ದೇವರ ಮನಸ್ಸಿನಲ್ಲಿ ಬೇರೆ ಏನೋ ಇತ್ತು – ‘ಅವನು’. ಮತ್ತು ಈ ‘ಅವನು’ ಸರ್ಪದ ತಲೆಯನ್ನುಜಜ್ಜುವನು.

ಹಾಗೂ, ಹೇಳದಿದ್ದನ್ನು ಗಮನಿಸುವುದು ಆಸಕ್ತಿದಾಯಕವಾಗಿದೆ. ದೇವರು ಸ್ತ್ರೀಗೆ ವಾಗ್ದಾನ ಮಾಡಿದಂತೆ ಪುರುಷನಿಗೆ ಸಂತತಿಯ ವಾಗ್ದಾನವನ್ನು ನೀಡುವುದಿಲ್ಲ. ಇದು ಅತ್ಯಂತ ಅಸಾಧಾರಣವಾಗಿದೆ ವಿಶೇಷವಾಗಿ ಸತ್ಯವೇದದ, ಮತ್ತು ಪ್ರಾಚೀನ ಪ್ರಪಂಚದಾದ್ಯಂತ ಪುತ್ರರು ಪಿತೃಗಳ ಮೂಲಕ ಬರುತ್ತಿದ್ದಾರೆ ಎಂಬುದಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಆದರೆ ಈ ವಿಷಯದಲ್ಲಿ ಪುರುಷನಿಂದ ಬರುವ ಸಂತತಿಯ (‘ಅವನು’) ವಾಗ್ಧಾನವಿಲ್ಲ. ಪುರುಷನನ್ನು ಪ್ರಸ್ತಾಪಿಸದೆ, ಕೇವಲ ಸ್ತ್ರೀಯಿಂದ ಸಂತಾನವು ಬರುವದು ಎಂದು ಅದು ಹೇಳುತ್ತದೆ.

ಐತಿಹಾಸಿಕವಾಗಿ ಅಥವಾ ಪೌರಾಣಿಕವಾಗಿ ಅಸ್ತಿತ್ವದಲ್ಲಿದ್ದ ಎಲ್ಲಾ ಮಾನವರಲ್ಲಿ, ಒಬ್ಬರು ಮಾತ್ರ ತಾಯಿಯನ್ನು ಹೊಂದಿದ್ದಾರೆಂದು ಹೇಳಿಕೊಂಡರು ಆದರೆ ಅದೇ ಸಮಯದಲ್ಲಿ ಶಾರೀರಿಕ ತಂದೆಯನ್ನು ಹೊಂದಿರಲಿಲ್ಲ. ಇದು ಯೇಸುವೇ ಆಗಿದ್ದನು (ಯೇಸುವಿನ ಪ್ರತಿಬಿಂಬ) ಹೊಸ ಒಡಂಬಡಿಕೆಯು (ಈ ವಾಗ್ದಾನವನ್ನು ನೀಡಿದ ಸಾವಿರಾರು ವರ್ಷಗಳ ನಂತರ ಬರೆಯಲ್ಪಟ್ಟಿದೆ) ಒಬ್ಬ ಕನ್ಯೆಯಿಂದ ಜನಿಸಿದನೆಂದು – ಹೀಗೆ ತಾಯಿ ಆದರೆ ಮಾನವ ತಂದೆ ಇಲ್ಲ ಎಂದು ಘೋಷಿಸುತ್ತದೆ. ಪ್ರಾರಂಭದ ಸಮಯದಲ್ಲಿಯೇ ಯೇಸುವನ್ನು ಈ ಒಗಟಿನಲ್ಲಿ ಮುನ್ಸೂಚನೆಯಾಗಿ ನೀಡಲಾಗಿದೆಯೇ? ಇದು ಸಂತತಿಯು ‘ಅವನು’, ಎಂದು ‘ಅವಳು’, ‘ಅವರು’ ಅಥವಾ ‘ಅದು’ ಅಲ್ಲ ಎಂಬ ವೀಕ್ಷಣೆಗೆ ಹೊಂದಿಕೊಳ್ಳುತ್ತದೆ. ಆ ದೃಷ್ಟಿಕೋನದಿಂದ, ಒಗಟಿನ ಕೆಲವು ಅಂಶಗಳು ಸಂಭವಿಸುತ್ತವೆ.

ಅವನ ಹಿಮ್ಮಡಿಯನ್ನು ಕಚ್ಚುವಿ‘ ??

ಸೈತಾನ / ಸರ್ಪವು ‘ಅವನ ಹಿಮ್ಮಡಿಯನ್ನು’ ಕಚ್ಚುವನು ಎಂಬುದರ ಅರ್ಥವೇನು? ನಾನು ಆಫ್ರಿಕಾದ ಕಾಡುಗಳಲ್ಲಿ ಕೆಲಸ ಮಾಡುವವರೆಗೂ ನನಗೆ ಅರ್ಥವಾಗಲಿಲ್ಲ. ನಾವು ತೇವವುಳ್ಳ ಶಾಖದಲ್ಲಿಯೂ ದಪ್ಪದಾದ ರಬ್ಬರ್ ಬೂಟುಗಳನ್ನು ಧರಿಸಬೇಕಾಗಿತ್ತು – ಏಕೆಂದರೆ ಅಲ್ಲಿನ ಸರ್ಪಗಳು ಉದ್ದನೆಯ ಹುಲ್ಲಿನಲ್ಲಿ ಇರುತ್ತವೆ ಮತ್ತು ನಿಮ್ಮ ಪಾದವನ್ನು ಕಚ್ಚುವವು – ಅಂದರೆ ನಿಮ್ಮ ಹಿಮ್ಮಡಿಯನ್ನು- ಮತ್ತು ನಿಮ್ಮನ್ನು ಕೊಲ್ಲುವದು. ಅಲ್ಲಿನ ನನ್ನ ಮೊದಲನೇ ದಿನದಲ್ಲಿ ನಾನು ಬಹುತೇಕ ಸರ್ಪದ ಮೇಲೆ ಹೆಜ್ಜೆ ಇಟ್ಟಿದ್ದೇನೆ, ಮತ್ತು ಬಹುಶಃ ಅದರಿಂದ ಸಾಯಬಹುದಿತ್ತು. ಅದರ ನಂತರ ಒಗಟು ನನಗೆ ಅರ್ಥವಾಯಿತು. ‘ಅವನು’ ಸರ್ಪವನ್ನು ನಾಶಮಾಡುವನು (‘ನಿನ್ನ ತಲೆಯನ್ನು ಜಜ್ಜುವನು’), ಆದರೆ ಅವನು ಬೆಲೆಯನ್ನು ಪಾವತಿಸಬೇಕಾಗುವದು, ಅವನು ಕೊಲ್ಲಲ್ಪಡುವನು (‘ಅವನ ಹಿಮ್ಮಡಿಯನ್ನು ಕಚ್ಚುವಿ’). ಅದು ಯೇಸುವಿನ ತ್ಯಾಗದ ಮೂಲಕ ಸಾಧಿಸಿದ ವಿಜಯವನ್ನು ಮುನ್ಸೂಚಿಸುತ್ತದೆ.

ಸರ್ಪದ ಸಂತತಿ?

ಆದರೆ ಈ ಸೈತಾನನ ಸಂತತಿಯ ಇನ್ನೊಬ್ಬ ಶತ್ರು ಯಾರು? ಅದನ್ನು ಸರ್ವವ್ಯಾಪಕವಾಗಿ ಕಂಡುಹಿಡಿಯಲು ನಮಗೆ ಇಲ್ಲಿ ಸಮಯ ಇಲ್ಲದಿದ್ದರೂ, ನಂತರದ ಪುಸ್ತಕಗಳು ಬರುವ ವ್ಯಕ್ತಿಯ ಬಗ್ಗೆ ಮಾತನಾಡುತ್ತವೆ. ಈ ವಿವರಣೆಯನ್ನು ಗಮನಿಸಿ:

ನಮ್ಮ ಕರ್ತನಾದ ಯೇಸು ಕ್ರಿಸ್ತನ ಆಗಮನದ ವಿಷಯವಾಗಿಯೂ ಮತ್ತು ನಾವು ಆತನ ಎದುರಿನಲ್ಲಿ ಕೂಡಿಕೊಳ್ಳುವುದರ ವಿಷಯವಾಗಿಯೂ… ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ ಯಾಕೆಂದರೆ ಮೊದಲು ನಂಬಿಕೆಯ ಭ್ರಷ್ಟತೆಯುಂಟಾಗಿ ನಾಶನದ ಮಗನಾದ ಅಧರ್ಮ ಪುರುಷನು ಬಯಲಿಗೆ ಬಾರದ ಹೊರತು ಆ ದಿನವು ಬರುವುದಿಲ್ಲ. ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.

2 ಥೆಸಲೋನಿಕದವರಿಗೆ 2: 1-4; ಕ್ರಿ.ಶ. ಸುಮಾರು 50 ರಲ್ಲಿ ಗ್ರೀಸ್ನಲ್ಲಿ ಪೌಲರು ಬರೆದಿದ್ದಾರೆ

ಈ ನಂತರದ ಪುಸ್ತಕಗಳು ಸ್ತ್ರೀಯ ಸಂತತಿ ಮತ್ತು ಸೈತಾನನ ಸಂತತಿಯ ನಡುವಿನ ಘರ್ಷಣೆಗೆ ಕ್ಷಣಗಣನೆ ಬಗ್ಗೆ ಸ್ಪಷ್ಟವಾಗಿ ಹೇಳುತ್ತವೆ. ಆದರೆ ಇದನ್ನು ಮೊದಲು ಮಾನವನ ಇತಿಹಾಸದ ಪ್ರಾರಂಭದಲ್ಲಿ, ಆದಿಕಾಂಡದ ವಾಗ್ಧಾನ್ದಲ್ಲಿ ಭ್ರೂಣದಂತಹ ರೂಪದಲ್ಲಿ ಭರ್ತಿಮಾಡಲು ಕಾಯುತ್ತಿರುವ ವಿವರಗಳೊಂದಿಗೆ ಉಲ್ಲೇಖಿಸಲಾಗಿದೆ. ಆದ್ದರಿಂದ ಇತಿಹಾಸದ ವೃದ್ಧಿ, ಸೈತಾನ ಮತ್ತು ದೇವರ ನಡುವಿನ ಅಂತಿಮ ಸ್ಪರ್ಧೆಯ ಕ್ಷಣಗಣನೆ, ಆರಂಭಿಕ ಪುಸ್ತಕದಲ್ಲಿ ಮುಂಗಾಣಲಾಗಿದೆ.

ಈ ಹಿಂದೆ ನಾವು ಪುರುಷಸುಕ್ತ ಎಂಬ ಪ್ರಾಚೀನ ಸ್ತೋತ್ರದ ಮೂಲಕ ಪ್ರಯಾಣಿಸಿದ್ದೇವೆ. ಈ ಸ್ತೋತ್ರವು ಒಬ್ಬ ಪರಿಪೂರ್ಣ ಮನುಷ್ಯನ ಬರುವಿಕೆಯನ್ನು ಮುನ್ಸೂಚಿಸುತ್ತದೆ ಎಂದು ನಾವು ನೋಡಿದ್ದೇವೆ – ಪುರುಷ – ಒಬ್ಬ ಮನುಷ್ಯನು ‘ಮಾನವ ಶಕ್ತಿಯಿಂದ ಬರುವದಿಲ್ಲ’. ಈ ಮನುಷ್ಯನನ್ನು ತ್ಯಾಗದಲ್ಲಿಯೂ ಕೂಡ ನೀಡಲಾಗುತ್ತದೆ. ವಾಸ್ತವವಾಗಿ ಇದನ್ನು ಆರಂಭದಲ್ಲಿ ದೇವರ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ನಿರ್ಧರಿಸಲಾಗಿದೆ ಎಂದು ನಾವು ನೋಡಿದ್ದೇವೆ. ಈ ಎರಡು ಪುಸ್ತಕಗಳು ಒಂದೇ ವ್ಯಕ್ತಿಯ ಬಗ್ಗೆ ಮಾತನಾಡುತ್ತಿವೆಯೇ? ಹೌದು ಎಂದು ನಾನು ನಂಬುತ್ತೇನೆ. ಪುರುಷಸುಕ್ತ ಮತ್ತು ಆದಿಕಾಂಡ ಒಂದೇ ಘಟನೆಯನ್ನು ನೆನಪಿಸುತ್ತವೆ – ದೇವರು ಒಂದು ದಿನ ಮನುಷ್ಯನಾಗಿ ಅವತರಿಸಬೇಕೆಂದು ನಿರ್ಧರಿಸಿದರಿಂದ ಈ ಮನುಷ್ಯನನ್ನು ತ್ಯಾಗದಲ್ಲಿ ಕೊಡಬಹುದು – ಎಲ್ಲಾ ಮಾನವನ ಧರ್ಮ ಏನೇ ಇರಲಿ ಇದು ಸಾರ್ವತ್ರಿಕ ಅವಶ್ಯಕತೆಯಾಗಿದೆ. ಆದರೆ ಈ ವಾಗ್ದಾನವು ಋಗ್ವೇದ ಮತ್ತು ಸತ್ಯವೇದದ ನಡುವಿನ ಹೋಲಿಕೆ ಮಾತ್ರವಲ್ಲ ಮಾನವ ಇತಿಹಾಸದಲ್ಲಿ ಮುಂಚಿನದನ್ನು ಇತರ ಘಟನೆಗಳನ್ನು ಒಟ್ಟಿಗೆ ದಾಖಲಿಸಿದ್ದಾರೆ, ಅದನ್ನು ನಾವು ಮುಂದೆ ನೋಡುತ್ತೇವೆ.

Leave a Reply

Your email address will not be published. Required fields are marked *