Skip to content

ದೇವರ ಸ್ವರೂಪದಲ್ಲಿ

ಸಮಯ ಪ್ರಾರಂಭವಾಗುವ ಮೊದಲೇ ಪುರುಷಸುಕ್ತನು ಹೇಗೆ ಹಿಂದಿರುಗುತ್ತಾನೆ ಎಂದು ನಾವು ನೋಡಿದ್ದೇವೆ ಮತ್ತು ಪುರುಷನನ್ನು ಯಾಗಮಾಡಲು ನಿರ್ಧರಿಸುವ ದೇವರ ಮನಸ್ಸನ್ನು (ಪ್ರಜಾಪತಿ) ವಿವರಿಸುತ್ತದೆ. ಈ ನಿರ್ಧಾರದಿಂದ ಎಲ್ಲಾದರ ಸೃಷ್ಟಿ – ಮಾನವಕುಲದ ಸೃಷ್ಟಿ ಸೇರಿದಂತೆ ಅನುಸರಿಸಿದೆ.

ಈಗ ನಾವು ಮಾನವಕುಲದ ಸೃಷ್ಟಿಯ ಬಗ್ಗೆ ವೇದ ಪುಸ್ತಕ (ಸತ್ಯವೇದ) ಏನು ಹೇಳುತ್ತದೆ ಎಂಬುದನ್ನು ಗಮನಿಸೋಣ ಹಾಗೆ  ಸತ್ಯವೇದ ನಮ್ಮ ಬಗ್ಗೆ ಏನು ಕಲಿಸುತ್ತದೆ ಎಂಬುದರ ಬಗ್ಗೆ ನಮಗೆ ತಿಳುವಳಿಕೆ ಇದೆ.

26 ತರುವಾಯ ದೇವರು–ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು.
27 ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು, ದೇವರರೂಪದಲ್ಲಿ ಆತನು ಅವನನ್ನು ಸೃಷ್ಟಿಸಿದನು. ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು.

ಆದಿಕಾಂಡ 1: 26-27

“ದೇವರ ಸ್ವರೂಪದಲ್ಲಿ”

ಮನುಷ್ಯನು ‘ದೇವರ ಸ್ವರೂಪದಲ್ಲಿ’ ಸೃಷ್ಟಿಸಲ್ಪಟ್ಟನು ಎಂಬುದರ ಅರ್ಥವೇನು? ದೇವರು ಎರಡು ತೋಳುಗಳು, ತಲೆ ಇತ್ಯಾದಿಗಳನ್ನು ಹೊಂದಿರುವ ಭೌತಿಕ ಜೀವಿ ಎಂದು ಇದರ ಅರ್ಥವಲ್ಲ. ಬದಲಿಗೆ ಆಳವಾದ ಮಟ್ಟದಲ್ಲಿ ಜನರ ಮೂಲ ಗುಣಲಕ್ಷಣಗಳು ದೇವರ ಸಮಾನರೂಪವಾದ ಗುಣಲಕ್ಷಣಗಳಿಂದ ಹುಟ್ಟಿಕೊಂಡಿವೆ ಎಂದು ಹೇಳುತ್ತಿದೆ. ಆದ್ದರಿಂದ ಉದಾಹರಣೆಗೆ, ದೇವರು (ಸತ್ಯವೇದದಲ್ಲಿ) ಮತ್ತು ಜನರು (ವೀಕ್ಷಣೆಯಿಂದ) ಬುದ್ಧಿಶಕ್ತಿ, ಭಾವನೆಗಳು ಮತ್ತು ಇಚ್ಚಾಶಕ್ತಿಯನ್ನು ಹೊಂದಿರುತ್ತಾರೆ. ಸತ್ಯವೇದದಲ್ಲಿ ದೇವರನ್ನು ಕೆಲವೊಮ್ಮೆ ದುಃಖ, ನೋವು, ಕೋಪ ಅಥವಾ ಸಂತೋಷದಾಯಕ ಎಂದು ವರ್ಣಿಸಲಾಗಿದೆ – ಮಾನವರಾದ  ನಾವು ಅನುಭವಿಸಿ ಹಾದು ಹೋಗುವ ಅದೇ ಮನೋಭಾವನೆಗಳು. ನಾವು ಪ್ರತಿದಿನ ಆಯ್ಕೆಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಸತ್ಯವೇದದಲ್ಲಿ ದೇವರು ಇದೇ ರೀತಿ ಆಯ್ಕೆಗಳನ್ನು ಮಾಡುತ್ತಾನೆ ಮತ್ತು ನಿರ್ಧಾರಗಳಿಗೆ ಬರುತ್ತಾನೆ. ವಿವೇಚಿಸಲು ಮತ್ತು ಯೋಚಿಸಲು ನಮ್ಮ ಸಾಮರ್ಥ್ಯವು ದೇವರಿಂದ ಬಂದಿದೆ. ನಾವು ಬುದ್ಧಿಶಕ್ತಿ, ಭಾವನೆ ಮತ್ತು ಇಚ್ಚಾಶಕ್ತಿಯ ಸಾಮರ್ಥ್ಯಗಳನ್ನು ಹೊಂದಿದ್ದೇವೆ ಏಕೆಂದರೆ ದೇವರು ಅವುಗಳನ್ನು ಹೊಂದಿದ್ದಾನೆ ಮತ್ತು ನಾವು ಆತನ ಸ್ವರೂಪದಲ್ಲಿ ಮಾಡಲ್ಪಟ್ಟಿದ್ದೇವೆ.

ನಾವು ಭಾವಪೂರ್ಣ ಜೀವಿಗಳು, ಸ್ವಯಂ-ಅರಿವುಳ್ಳವರು ಮತ್ತು ‘ನಾನು’ ಹಾಗೂ ‘ನೀವು’ ಎಂಬುದರ ಬಗ್ಗೆ ಆಳವಾಗಿ ಜಾಗೃತರಾಗಿರುವುದನ್ನು ನೋಡುತ್ತೇವೆ. ನಾವು ‘ಅದರ’ ಬಗ್ಗೆ ವ್ಯಕ್ತಿಸಂಭದವಿಲ್ಲದವರಲ್ಲ. ನಾವು ಈ ರೀತಿ ಇದ್ದೇವೆ ಏಕೆಂದರೆ ದೇವರು ಈ ರೀತಿ ಇದ್ದಾನೆ. ಈ ಮಹತ್ವದ ನೋಟದಲ್ಲಿ, ಪ್ರಸಿದ್ಧ ಚಲನಚಿತ್ರ ಸ್ಟಾರ್ ವಾರ್ಸ್‌ನಲ್ಲಿರುವ ‘ಸೇನಾಪಡೆಯಂತಹ’  ಅದೈತವಾದ  ವ್ಯಕ್ತಿಸಂಭದದಂತೆ ಸತ್ಯವೇದದ ದೇವರನ್ನು ಚಿತ್ರಿಸಲಾಗಿಲ್ಲ. ದೇವರ ಕುರಿತಾಗಿರುವ  ಈ ಆರಂಭಿಕ ಬೋಧನೆಯ ಬೆಳಕಿನಲ್ಲಿ ಮಾನವರು ‘ಅದರ’ ಎನ್ನುವುದಕ್ಕಿಂತ ಭಾವಪೂರ್ಣ  ವ್ಯಕ್ತಿಗಳು ಎಂಬ ಅಂಶವು ಅರ್ಥಪೂರ್ಣವಾಗಿದೆ. ದೇವರು ಈ ರೀತಿಯಾಗಿರುವುದರಿಂದ ನಾವು ಈ ರೀತಿ ಇದ್ದೇವೆ ಮತ್ತು ನಾವು ಆತನ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.

ನಾವು ಏಕೆ ಸೌಂದರ್ಯವುಳ್ಳವರಾಗಿದ್ದೇವೆ

ನಾವು ಕಲೆ ಮತ್ತು ನಾಟಕವನ್ನೂ ಸಹಾ ಪ್ರೀತಿಸುತ್ತೇವೆ. ಸ್ವಾಭಾವಿಕವಾಗಿ ನಾವು ಸೌಂದರ್ಯವನ್ನು ಪ್ರಶಂಸಿಸುತ್ತೇವೆ ಮತ್ತು ಅದರ ಅಗತ್ಯವು ಕೂಡ ಇರುತ್ತದೆ. ಇದು ಸಂಗೀತ ಮತ್ತು ಸಾಹಿತ್ಯವನ್ನು ಸೇರಿಸಲು ಕೇವಲ ಕಾಣುವ ಸೌಂದರ್ಯವನ್ನು ಮೀರಿದೆ. ಸಂಗೀತವು ನಮಗೆ  ಹೇಗೆ ಮಹತ್ವದ್ದಾಗಿದೆ – ನಾವು ನೃತ್ಯ ಮಾಡಲು ಹೇಗೆ ಇಷ್ಟಪಡುತ್ತೇವೆ ಎಂಬುದರ ಕುರಿತು ಸಹಾ ಯೋಚಿಸಿ. ಸಂಗೀತವು ನಮ್ಮ ಜೀವನವನ್ನು ಹೆಚ್ಚು ಶ್ರೀಮಂತಗೊಳಿಸುತ್ತದೆ. ನಾವು ಒಳ್ಳೆಯ ಕಥೆಗಳನ್ನು ಪ್ರೀತಿಸುತ್ತೇವೆ, ಕಾದಂಬರಿಗಳಲ್ಲಿ ಅಥವಾ ನಾಟಕಗಳಲ್ಲಿ, ಅಥವಾ ಇಂದು ಹೆಚ್ಚು ಸಾಮಾನ್ಯವಾಗಿ, ಚಲನಚಿತ್ರಗಳಲ್ಲಿ. ಕಥೆಗಳು ನಾಯಕರು, ಖಳನಾಯಕ, ನಾಟಕಗಳನ್ನುಹೊಂದಿವೆ, ಮತ್ತು ವಿಶೇಷ ಕಥೆಗಳು ಈ ನಾಯಕರು, ಖಳನಾಯಕರು ಮತ್ತು ನಾಟಕವನ್ನು ನಮ್ಮ ಕಲ್ಪನೆಗಳಲ್ಲಿ ಸುಡುತ್ತವೆ. ಕಲೆಯನ್ನು ಅದರ ಹಲವು ರೂಪಗಳಲ್ಲಿ ನಮ್ಮ ಮನರಂಜನೆಗಾಗಿ, ಪುನರ್ಚೇತನಗೊಳಿಸಲು ಮತ್ತು ಉಲ್ಲಾಸಪಡಿಸಲು ಬಳಸುವುದು ಮತ್ತು ಪ್ರಶಂಸಿಸುವುದು ನಮಗೆ ತುಂಬಾ ಸಹಜವಾಗಿದೆ ಏಕೆಂದರೆ ದೇವರು ಒಬ್ಬ ಕಲಾವಿದ ಮತ್ತು ನಾವು ಆತನ ಸ್ವರೂಪದಲ್ಲಿದ್ದೇವೆ.

ಇದು ಕೇಳಲು ಯೋಗ್ಯವಾದ ಪ್ರಶ್ನೆಯಾಗಿದೆ. ಕಲೆ, ನಾಟಕ, ಸಂಗೀತ, ನೃತ್ಯ, ಅಥವಾ ಸಾಹಿತ್ಯದಲ್ಲಿ ನಾವು ಸ್ವಾಭಾವಿಕವಾಗಿ ಸೌಂದರ್ಯವುಳ್ಳವರಾಗಿರಲು ಕಾರಣವೇನು? ನಾನು ಭಾರತದಲ್ಲಿ ಪ್ರಯಾಣಿಸಿದಾಗಲೆಲ್ಲಾ ಪಾಶ್ಚಾತ್ಯ- ನಿರ್ಮಿತ ಚಲನಚಿತ್ರಗಳಿಗಿಂತ ಸಂಗೀತ ಮತ್ತು ನೃತ್ಯವೆಂಬ ವೈಶಿಷ್ಟ್ಯಗಳನ್ನೊಳಗೊಂಡಿರುವ ಭಾರತೀಯ ಚಲನಚಿತ್ರಗಳಲ್ಲಿ ಯಾವಾಗಲೂ ಆಶ್ಚರ್ಯಚಕಿತನಾಗಿದ್ದೆ. ಸ್ಪಷ್ಟವಾಗಿ ಮಾತನಾಡುವ ನಾಸ್ತಿಕ ಮತ್ತು ಅರಿವಿನ ಪ್ರಕ್ರಿಯೆಗಳ ತಿಳುವಳಿಕೆಯ ಮೇಲೆ ಅಧಿಕಾರ ಹೊಂದಿರುವ ಡಾನಿಯಲ್ ಡೆನ್ನೆಟ್, ಭೌತಿಕ ದೃಷ್ಟಿಯಿಂದ ಉತ್ತರಿಸುತ್ತಾರೆ:

“ಆದರೆ ಈ ಹೆಚ್ಚಿನ ಸಂಶೋಧನೆಯು ಇನ್ನೂ ಸಂಗೀತವನ್ನು ಲಘುವಾಗಿ ತೆಗೆದುಕೊಳ್ಳುತ್ತದೆ. ಇದು ಅಪರೂಪವಾಗಿ ಕೇಳುತ್ತದೆ: ಸಂಗೀತ ಏಕೆ ಅಸ್ತಿತ್ವದಲ್ಲಿದೆ? ಅಲ್ಲಿ ಒಂದು ಸಣ್ಣ ಉತ್ತರವಿದೆ, ಮತ್ತು ಅದು ನಿಜವಾಗಿದೆ, ಅದು ಬಹುದೂರ ಹೋದಂತೆ: ಅದು ಅಸ್ತಿತ್ವದಲ್ಲಿದೆ ಏಕೆಂದರೆ ನಾವು ಅದನ್ನು ಪ್ರೀತಿಸುತ್ತೇವೆ ಮತ್ತು ಆದ್ದರಿಂದ ನಾವು ಅದರಲ್ಲಿ ಹೆಚ್ಚಿನದನ್ನು ಅಸ್ತಿತ್ವಕ್ಕೆ ತರುತ್ತಾ ಇರುತ್ತೇವೆ. ಆದರೆ ನಾವು ಅದನ್ನು ಏಕೆ ಪ್ರೀತಿಸುತ್ತೇವೆ? ಏಕೆಂದರೆ ಅದು ಸುಂದರವಾಗಿರುತ್ತದೆ ಎಂದು ನಾವು ಕಾಣುತ್ತೇವೆ. ಆದರೆ ಅದು ನಮಗೆ ಏಕೆ ಸುಂದರವಾಗಿರುತ್ತದೆ? ಇದು ಸಂಪೂರ್ಣವಾಗಿ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ, ಆದರೆ ಇದು ಇನ್ನೂ ತಕ್ಕದಾದ ಉತ್ತರವನ್ನು ಹೊಂದಿಲ್ಲ.” (ಡಾನಿಯಲ್ ಡೆನ್ನೆಟ್. ಬ್ರೇಕಿಂಗ್ ದಿ ಸ್ಪೆಲ್: ರಿಲಿಜನ್ ಆಸ್ ಎ ನ್ಯಾಚುರಲ್ ಫಿನೋಮಿನನ್. ಪು. 43)

ನಮ್ಮ ಮಾನವ ಸ್ವಭಾವದ ಕುರಿತಾದ ಈ ಮೂಲಭೂತ ಪ್ರಶ್ನೆಗೆ ಮಾನವಕುಲದ ಬಗೆಗಿನ ಭೌತಿಕ ದೃಷ್ಟಿಕೋನಕ್ಕೆ ಉತ್ತರವಿಲ್ಲ. ಸತ್ಯವೇದದ ದೃಷ್ಟಿಕೋನದಿಂದ ದೇವರು ಕಲಾತ್ಮಕ ಮತ್ತು ಸೌಂದರ್ಯದವನು ಆಗಿರುವದರಿಂದ ಅವರು ವಸ್ತುಗಳನ್ನು ಸುಂದರಗೊಳಿಸಿದರು ಮತ್ತು ಸೌಂದರ್ಯವನ್ನು ಆನಂದಿಸುತ್ತಾರೆ. ನಾವು, ಆತನ ಸ್ವರೂಪದಲ್ಲಿ ಮಾಡಿದವರಾದ ಕಾರಣ ಆತನಂತೆಯೇ  ಇದ್ದೇವೆ.

ನಾವು ಏಕೆ ನೈತಿಕವಾಗಿರುತ್ತೇವೆ

ಇದಲ್ಲದೆ, ‘ದೇವರ ಪ್ರತಿರೂಪದಲ್ಲಿ ಮಾಡಲ್ಪಟ್ಟಿದೆ’ ಎಂಬುದು ಎಲ್ಲಾ ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನೈಸರ್ಗಿಕ ನೈತಿಕ ಸಾಮರ್ಥ್ಯವನ್ನು ವಿವರಿಸುತ್ತದೆ ಮತ್ತು ಇದನ್ನು ನಾವು ಗುರು ಸಾಯಿಬಾಬಾರವರ ನೈತಿಕ ಬೋಧನೆಗಳಲ್ಲಿ ನೋಡಿದ್ದೇವೆ. ನಾವು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟಿದ್ದೇವೆ ಮತ್ತು ನೈತಿಕತೆಯು ಅವನಿಗೆ ಅಂತರ್ಗತವಾಗಿದೆ, ಕಾಂತೀಯ ಉತ್ತರಕ್ಕೆ ಜೋಡಿಸಲಾದ ದಿಕ್ಸೂಚಿಯಂತೆ, ‘ನ್ಯಾಯವಾದ’, ‘ಒಳ್ಳೆಯ’, ‘ಸರಿಯಾದ’ ನಮ್ಮ ಜೋಡಣೆ ಈ ರೀತಿಯಾಗಿರುತ್ತದೆ ಏಕೆಂದರೆ ಈ ರೀತಿಯಾಗಿ ಅವನು ಇದ್ದಾನೆ. ಈ ರೀತಿ ಮಾಡಲ್ಪಟ್ಟವರು ಕೇವಲ ಧಾರ್ಮಿಕ ವ್ಯಕ್ತಿಗಳು ಮಾತ್ರವಲ್ಲ – ಎಲ್ಲರೂ. ಇದನ್ನು ಗುರುತಿಸದಿರುವುದು ತಪ್ಪುಗ್ರಹಿಕೆಗೆ ಕಾರಣವಾಗಬಹುದು. ಉದಾಹರಣೆಗೆ ಅಮೇರಿಕದ ಭೌತವಾದಿ ಸ್ಯಾಮ್ ಹ್ಯಾರಿಸ್ ಅವರ ಈ ಸವಾಲನ್ನು ತೆಗೆದುಕೊಳ್ಳಿ.

“ಧಾರ್ಮಿಕ ನಂಬಿಕೆಯು ನೈತಿಕತೆಗೆ ನಿಜವಾದ ಆಧಾರವನ್ನು ನೀಡುತ್ತದೆ ಎಂದು ನೀವು ನಂಬುವುದು ಸರಿಯಾಗಿದ್ದರೆ, ನಾಸ್ತಿಕರು ನಂಬುವವರಿಗಿಂತ ಕಡಿಮೆ ನೈತಿಕತೆಯನ್ನು ಹೊಂದಿರಬೇಕು.”

ಸ್ಯಾಮ್ ಹ್ಯಾರಿಸ್. 2005. ಲೆಟ್ಟರ್ ಟು ಎ ಕ್ರಿಸ್ಟಿಯನ್ ನೇಷನ್ ಪಿ .38-39

ಇಲ್ಲಿ ಹ್ಯಾರಿಸ್ ತಪ್ಪಾಗಿದ್ದಾರೆ. ನಮ್ಮ ನೈತಿಕತೆಯ ಪ್ರಜ್ಞೆಯು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟಿದೆ, ಧಾರ್ಮಿಕತೆಯಿಂದಲ್ಲ. ಅದಕ್ಕಾಗಿಯೇ ನಾಸ್ತಿಕರು, ನಮ್ಮೆಲ್ಲರಂತೆಯೇ, ಈ ನೈತಿಕ ಪ್ರಜ್ಞೆಯನ್ನು ಹೊಂದಿದ್ದಾರೆ ಮತ್ತು ನೈತಿಕವಾಗಿ ವರ್ತಿಸಬಹುದು. ನಾಸ್ತಿಕತೆಯೊಂದಿಗಿನ ತೊಂದರೆ ಎಂದರೆ ನಮ್ಮ ನೈತಿಕತೆ ಏಕೆ ಎಂದು ಲೆಕ್ಕ ಹಾಕುವುದು – ಆದರೆ ದೇವರ ನೈತಿಕ ಸ್ವರೂಪದಲ್ಲಿ ಮಾಡಲ್ಪಟ್ಟಿರುವುದು ಸರಳ ಮತ್ತು ನೇರವಾದ ವಿವರಣೆಯಾಗಿದೆ.

ನಾವು ಯಾಕೆ ತುಂಬಾ ಸಂಬಂಧಾತ್ಮಕರಾಗಿದ್ದೇವೆ

ಸತ್ಯವೇದದ ಪ್ರಕಾರ, ನಮ್ಮನ್ನು ನಾವು ಅರ್ಥಮಾಡಿಕೊಳ್ಳುವ ಆರಂಭಿಕ ಹಂತವೆಂದರೆ ನಾವು ದೇವರ ಸ್ವರೂಪದಲ್ಲಿದ್ದೇವೆ ಎಂದು ಗುರುತಿಸುವುದು. ಈ ಕಾರಣದಿಂದಾಗಿ, ನಾವು ದೇವರ ಬಗ್ಗೆ (ಸತ್ಯವೇದದಲ್ಲಿ ಆತನ ಬಗ್ಗೆ ಪ್ರಕಟಿಸಿದ ವಿಷಯಗಳ ಮೂಲಕ) ಅಥವಾ ಜನರ ಬಗ್ಗೆ (ವೀಕ್ಷಣೆ ಮತ್ತು ಪ್ರತಿಬಿಂಬದ ಮೂಲಕ) ಒಳನೋಟವನ್ನು ಪಡೆದುಕೊಳ್ಳುವುದರಿಂದ ನಾವು ಇತರರ ಬಗ್ಗೆ ಒಳನೋಟವನ್ನು ಪಡೆಯಬಹುದು. ಉದಾಹರಣೆಗೆ, ಜನರು ಸಂಬಂಧಗಳ ಮೇಲೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಪ್ರತಿಬಿಂಬಿಸಿ. ಒಳ್ಳೆಯ ಚಲನಚಿತ್ರವನ್ನು ನೋಡುವುದು ಸರಿ, ಆದರೆ ಅದನ್ನು ಸ್ನೇಹಿತನೊಂದಿಗೆ ನೋಡುವುದು ಉತ್ತಮವಾದ ಅನುಭವವಾಗಿದೆ. ಅನುಭವಗಳನ್ನು ಹಂಚಿಕೊಳ್ಳಲು ನಾವು ಸ್ವಾಭಾವಿಕವಾಗಿ ಸ್ನೇಹಿತರನ್ನು ಹುಡುಕುತ್ತೇವೆ. ಅರ್ಥಪೂರ್ಣ ಸ್ನೇಹ ಮತ್ತು ಕುಟುಂಬ ಸಂಬಂಧಗಳು ನಮ್ಮ ಯೋಗಕ್ಷೇಮದ ಪ್ರಜ್ಞೆಗೆ ಪ್ರಮುಖವಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ಒಂಟಿತನ ಮತ್ತು/ಅಥವಾ ಒಡೆದ ಕುಟುಂಬ ಸಂಬಂಧಗಳು ಹಾಗೂ ಸ್ನೇಹದಲ್ಲಿನ ಕುಸಿತಗಳು ನಮಗೆ ಒತ್ತು ನೀಡುತ್ತವೆ. ನಾವು ಇತರರೊಂದಿಗೆ ಹೊಂದಿರುವ ಸಂಬಂಧಗಳ ಸ್ಥಿತಿಯಿಂದ ನಾವು ಸಿಷ್ಪಕ್ಷರಾಗಿರುವುದಿಲ್ಲ ಮತ್ತು ಸ್ಠಿರವಾಗಿರುವುದಿಲ್ಲ. ಬಾಲಿವುಡ್ ಚಲನಚಿತ್ರಗಳು ನಿಖರವಾಗಿ ಜನಪ್ರಿಯವಾಗಿವೆ ಏಕೆಂದರೆ ಅವುಗಳು ಕಥಾಪಾತ್ರಗಳ ನಡುವಿನ ಸಂಬಂಧಗಳಿಗೆ (ಪ್ರೇಮಿಗಳು, ಕುಟುಂಬ ಸದಸ್ಯರ ನಡುವೆ) ಹೆಚ್ಚಿನ ಒತ್ತು ನೀಡುತ್ತವೆ.

ಈಗ, ನಾವು ದೇವರ ಸ್ವರೂಪದಲ್ಲಿದ್ದರೆ, ದೇವರೊಂದಿಗೆ ಇದೇ ಸಂಬಂಧಿತ ಮಹತ್ವವನ್ನು ನಾವು ಕಂಡುಕೊಳ್ಳುತ್ತೇವೆ, ಮತ್ತು ವಾಸ್ತವವಾಗಿ ನಾವು ಮಾಡುತ್ತೇವೆ. “ದೇವರು ಪ್ರೀತಿಸ್ವರೂಪನಾಗಿದ್ದಾನೆ…” ಎಂದು ಸತ್ಯವೇದ ಹೇಳುತ್ತದೆ (1 ಯೋಹಾನ 4: 8). ದೇವರು ಆತನ ಮತ್ತು ಇತರರ ಮೇಲೆ ಇಡುವ ಪ್ರೀತಿಯ ಪ್ರಾಮುಖ್ಯತೆಯ ಬಗ್ಗೆ ಸತ್ಯವೇದದಲ್ಲಿ ಬಹಳಷ್ಟು ಬರೆಯಲಾಗಿದೆ – ವಾಸ್ತವವಾಗಿ ಸತ್ಯವೇದದಲ್ಲಿಯೇಸು (ಯೇಸುವಿನ ಪ್ರತಿಬಿಂಬ) ಅವುಗಳನ್ನು ಎರಡು ಪ್ರಮುಖ ಆಜ್ಞೆಗಳೆಂದು ಕರೆದನು. ನೀವು ಅದರ ಬಗ್ಗೆ ಯೋಚಿಸುವಾಗ, ಪ್ರೀತಿಯು ಸಂಬಂಧಾತ್ಮಕವಾಗಿರಬೇಕು  ಏಕೆಂದರೆ ಅದಕ್ಕೆ ಅಗತ್ಯವಿರುವದು ಪ್ರೀತಿಸುವ ವ್ಯಕ್ತಿ (ಪ್ರೇಮಿ) ಮತ್ತು ಈ ಪ್ರೀತಿಯ ವಸ್ತುವಾಗಿರುವ ವ್ಯಕ್ತಿ – ಪ್ರಿಯ.

ಹೀಗೆ ನಾವು ದೇವರನ್ನು ಪ್ರೇಮಿ ಎಂದು ಭಾವಿಸಬೇಕು. ನಾವು ಆತನನ್ನು ‘ಮೂಲ ಪ್ರವರ್ತಕ’, ‘ಮೊದಲ ಕಾರಣ’, ‘ಸರ್ವಜ್ಞ ದೇವರು’, ‘ದಯಾಳು ಕರ್ತನು’ ಅಥವಾ ಬಹುಶಃ ‘ನಿರಾಕಾರ ಆತ್ಮ’ ಎಂದು ಮಾತ್ರ ಭಾವಿಸಿದರೆ ನಾವು ಸತ್ಯವೇದದ ದೇವರ ಬಗ್ಗೆ ಯೋಚಿಸುತ್ತಿಲ್ಲ – ಬದಲಿಗೆ ನಾವು ನಮ್ಮ ಮನಸ್ಸಿನಲ್ಲಿ ದೇವರನ್ನು ಮಾಡಿದ್ದೇವೆ. ಅವನು ಇವರಾಗಿದ್ದರೂ, ಅವನನ್ನು ಸಂಬಂಧದಲ್ಲಿ ಭಾವೋದ್ರಿಕ್ತನಾಗಿ ಚಿತ್ರಿಸಲಾಗಿದೆ. ಅವನು ಪ್ರೀತಿಯನ್ನು ‘ಹೊಂದ’ಲಿಲ್ಲ. ಅವನು ಪ್ರೀತಿಸ್ವರೂ‘ಪನು’. ಜನರೊಂದಿಗಿನ ದೇವರ ಎರಡು ಪ್ರಮುಖ ಸಂಬಂಧದ ಸತ್ಯವೇದದ ರೂಪಕಗಳೇನೆಂದರೆ ತಂದೆ ಮತ್ತು ಮಕ್ಕಳು ಹಾಗೂ ಗಂಡ ಮತ್ತು ಹೆಂಡತಿ. ಅವು ಉತ್ಸಾಹದಿಂದ ತಾತ್ವಿಕ ‘ಮೊದಲ ಕಾರಣ’ ಸಾದೃಶ್ಯಗಳಲ್ಲ ಆದರೆ ಮಾನವ ಸಂಬಂಧಗಳ ಆಳವಾದ ಮತ್ತು ಅತ್ಯಂತ ನಿಕಟವಾದವುಗಳಾಗಿವೆ.

ನಾವು ಇಲ್ಲಿಯವರೆಗೆ ಹಾಕಿದ ಅಡಿಪಾಯ ಇಲ್ಲಿದೆ. ಮನಸ್ಸು, ಭಾವನೆಗಳು ಮತ್ತು ಇಚ್ಚಾಶಕ್ತಿಯನ್ನು ಒಳಗೊಂಡಿರುವ ದೇವರ ಸ್ವರೂಪದಲ್ಲಿ ಜನರನ್ನು ರಚಿಸಲಾಗಿದೆ. ನಾವು ಮನೋಭಾವದವರು ಮತ್ತು ಸ್ವಯಂ-ಅರಿವುಳ್ಳವರು. ನಮ್ಮ ‘ನೈತಿಕ ವ್ಯಾಕರಣ’ ದೊಂದಿಗೆ ನಾವು ನೈತಿಕ ಜೀವಿಗಳು, ‘ಸರಿಯಾದ’ ಮತ್ತು ‘ನ್ಯಾಯೋಚಿತ’ ವುಳ್ಳವರು ಹಾಗೂ ಯಾವುದು ಅಲ್ಲ ಎಂಬುದರ ಸಹಜ ದೃಷ್ಟಿಕೋನವನ್ನು ಹೊಂದಿದ್ದೇವೆ. ಸೌಂದರ್ಯ, ನಾಟಕ, ಕಲೆ ಮತ್ತು ಕಥೆಯನ್ನು ಅದರ ಎಲ್ಲಾ ಪ್ರಕಾರಗಳಲ್ಲಿ ಅಭಿವೃದ್ಧಿಪಡಿಸಲು ಮತ್ತು ಪ್ರಶಂಸಿಸಲು ನಮಗೆ ಸಹಜ ಸಾಮರ್ಥ್ಯವಿದೆ. ಮತ್ತು ನಾವು ಸಹಜವಾಗಿ ಮತ್ತು ಸ್ವಾಭಾವಿಕವಾಗಿ ಇತರರೊಂದಿಗೆ ಸಂಬಂಧ ಮತ್ತು ಸ್ನೇಹವನ್ನು ಹುಡುಕುತ್ತೇವೆ ಮತ್ತು ಬೆಳೆಸುತ್ತೇವೆ. ನಾವೆಲ್ಲರೂ ಇದಾಗಿದ್ದೇವೆ ಏಕೆಂದರೆ ದೇವರು ಇದೆಲ್ಲವುಗಳಾಗಿದ್ದಾನೆ  ಮತ್ತು ನಾವು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟಿದ್ದೇವೆ. ಈ ಎಲ್ಲಾ ಕಡಿತಗಳು ನಾವು ಈ ಅಡಿಪಾಯವನ್ನು ಹಾಕಿದಾಗ ನಮ್ಮ ಬಗ್ಗೆ ನಾವು ಗಮನಿಸುವುದರೊಂದಿಗೆ ಹೊಂದಿಕೆಯಾಗುತ್ತವೆ. ಕೆಲವು ತೊಂದರೆಗಳನ್ನು ನೋಡಲು ನಾವು ಮುಂದಿನ ಸಂಚಿಕೆಯಲ್ಲಿ ಮುಂದುವರಿಯುತ್ತೇವೆ.

Key Words: ಮುಖ್ಯ ಪದಗಳು

Image of God  : ದೇವರ ಸ್ವರೂಪ

Moral               : ನೈತಿಕ

Relational        : ಸಂಬಂಧಾತ್ಮಕ

Leave a Reply

Your email address will not be published. Required fields are marked *