Skip to content

ಸಂಸ್ಕೃತ ಮತ್ತು ಇಬ್ರೀಯ ವೇದಗಳ ಒಮ್ಮುಖ: ಏಕೆ?

ಸಂಸ್ಕೃತ ವೇದಗಳಲ್ಲಿನ ಮನುವಿನ ವರ್ಣನೆ ಮತ್ತು ಇಬ್ರೀಯ ವೇದಗಳಲ್ಲಿನ ನೋಹನ ವರ್ಣನೆಯ ನಡುವಿನ ಹೋಲಿಕೆಯನ್ನು ನಾವು ನೋಡಿದ್ದೇವೆ. ಈ ಹೋಲಿಕೆಯು ಪ್ರವಾಹದ ವರ್ಣನೆಗಳಿಗಿಂತ ಆಳವಾಗಿ ಹೋಗುತ್ತದೆ. ಪ್ರಾರಂಭದ ಸಮಯದಲ್ಲಿ ಪುರುಷನ ತ್ಯಾಗದ ವಾಗ್ದಾನಕ್ಕೂ ಇಬ್ರೀಯದ ಆದಿಕಾಂಡ ಪುಸ್ತಕದಲ್ಲಿ ನೀಡಲಾಗಿರುವ ವಾಗ್ದಾನ ಸಂತತಿಯೊಂದಿಗೆ ಹೋಲಿಕೆ ಇದೆ. ಹಾಗಾದರೆ ನಾವು ಈ ಹೋಲಿಕೆಗಳನ್ನು ನೋಡಲು ಕಾರಣವೇನು? ಸಹಘಟನೆಯೇ? ಒಂದು ವರ್ಣನೆಯು ಇನ್ನೊಂದನ್ನು ಅನುಸರಿಸುತ್ತಿದೆಯೇ ಅಥವಾ ಕದಿಯುತ್ತದೆಯೇ? ಇಲ್ಲಿ ಸಲಹೆಯನ್ನು ನೀಡಲಾಗಿದೆ.

ಬಾಬೆಲ್ ಗೋಪುರ – ಪ್ರವಾಹದ ನಂತರ

ನೋಹನ ವರ್ಣನೆಯನ್ನು ಅನುಸರಿಸಿ, ವೇದ ಪುಸ್ತಕವು (ಸತ್ಯವೇದ) ತನ್ನ ಮೂವರು ಗಂಡುಮಕ್ಕಳ ವಂಶಸ್ಥರನ್ನು ದಾಖಲಿಸುತ್ತಾ ಹೋಗುತ್ತದೆ ಮತ್ತು “ಜನಾಂಗಗಳ ಸಂತತಿಯ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ” ಎಂದು ಹೇಳುತ್ತದೆ. (ಆದಿಕಾಂಡ 10:32). ಮನುಗೆ ಮೂವರು ಗಂಡು ಮಕ್ಕಳಿದ್ದರು ಅವರಿಂದಲೇ ಮಾನವಕುಲ ವಂಶವು ಹುಟ್ಟಿತು ಎಂದು ಸಂಸ್ಕೃತ ವೇದಗಳು ಘೋಷಿಸುತ್ತವೆ. ಆದರೆ ಈ ‘ಹರಡುವಿಕೆ’ ಹೇಗೆ ಸಂಭವಿಸಿತು?

ಪ್ರಾಚೀನ ಇಬ್ರೀಯ ವೇದಗಳು ನೋಹನ ಈ ಮೂವರು ಪುತ್ರರ ವಂಶಸ್ಥರ ಹೆಸರುಗಳನ್ನು ಪಟ್ಟಿಮಾಡುತ್ತವೆ – ಇಲ್ಲಿ ಸಂಪೂರ್ಣ ಪಟ್ಟಿಯಿದೆ. ಈ ವಂಶಸ್ಥರು ದೇವರ (ಪ್ರಜಾಪತಿ) ಆಜ್ಞೆಗೆ ಹೇಗೆ ಅವಿಧೇಯರಾದರೆಂದು ವರ್ಣನೆಯು ವಿವರಿಸುತ್ತಾ ಹೋಗುತ್ತದೆ –          ಸೃಷ್ಟಿಕರ್ತ, ‘ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ’ ಎಂದು ಅವರಿಗೆ ಆಜ್ಞಾಪಿಸಿದ್ದಾನೆ (ಆದಿಕಾಂಡ 9: 1). ಅದಕ್ಕೆ ಬದಲಾಗಿ ಈ ಜನರು ಗೋಪುರವನ್ನು ನಿರ್ಮಿಸಲು ಒಟ್ಟಿಗಿದ್ದರು. ನೀವು ಅದನ್ನು ಇಲ್ಲಿ ಓದಬಹುದು. ಈ ಗೋಪುರವು ‘ಆಕಾಶವನ್ನು ಮುಟ್ಟಿತು’ (ಆದಕಾಂಡ 11: 4) ಇದರರ್ಥ ನೋಹನ ಈ ವಂಶಸ್ಥರು ಸೃಷ್ಟಿಕರ್ತನ ಬದಲಾಗಿ ನಕ್ಷತ್ರಗಳನ್ನು ಮತ್ತು ಸೂರ್ಯ, ಚಂದ್ರ, ಗ್ರಹಗಳು ಇತ್ಯಾದಿಗಳನ್ನು ಪೂಜಿಸುವ ಉದ್ದೇಶದಿಂದ ಗೋಪುರವನ್ನು ನಿರ್ಮಿಸುತ್ತಿದ್ದರು. ನಕ್ಷತ್ರ ಆರಾಧನೆಯು ಮೆಸೊಪೊಟಾಮಿಯಾದಲ್ಲಿ ಪ್ರಾರಂಭವಾಯಿತು (ಈ ವಂಶಸ್ಥರು ವಾಸಿಸುತ್ತಿದ್ದ ಸ್ಥಳ) ಮತ್ತು ನಂತರ ಅದು ಪ್ರಪಂಚದಾದ್ಯಂತ ಹರಡಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಆದ್ದರಿಂದ ಸೃಷ್ಟಿಕರ್ತನನ್ನು ಆರಾಧಿಸುವ ಬದಲು, ನಮ್ಮ ಪೂರ್ವಿಕರು ನಕ್ಷತ್ರಗಳನ್ನು ಪೂಜಿಸಿದರು. ಅನಂತರ ಆರಾಧನೆಯ ಭ್ರಷ್ಟಾಚಾರವನ್ನು ಬದಲಾಯಿಸಲಾಗದೆ, ನಿರಾಶೆಗೊಳಿಸಲು, ಸೃಷ್ಟಿಕರ್ತನು ಇದನ್ನು ನಿರ್ಧರಿಸಿದನು ಎಂದು ವರ್ಣನೆಯು ಹೇಳುತ್ತದೆ

…ಅವರ ಭಾಷೆಯನ್ನು ತಾರುಮಾರು ಮಾಡೋಣ; ಆಗ ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಿಲ್ಲ.

ಆದಿಕಾಂಡ 11: 7

ಇದರ ಪರಿಣಾಮವಾಗಿ, ನೋಹನ ಈ ಮೊದಲ ವಂಶಸ್ಥರು ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಈ ರೀತಿಯಾಗಿ ಸೃಷ್ಟಿಕರ್ತನು

ಜನರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು

ಆದಿಕಾಂಡ 11: 8

ಒಮ್ಮೆ ಈ ಜನರು ಪರಸ್ಪರ ಮಾತನಾಡಲು ಸಾಧ್ಯವಾಗದಿದ್ದಾಗ, ಹೊಸದಾಗಿ ರೂಪುಗೊಂಡ ಭಾಷಾ ಗುಂಪುಗಳೊಳಗೆ, ಅವರು ಪರಸ್ಪರ ದೂರ ವಲಸೆ ಹೋದರು, ಮತ್ತು ಹೀಗೆ ಅವರು ‘ಚದುರಿಹೋದರು’. ಇಂದು ಪ್ರಪಂಚದ ವಿವಿಧ ಜನರ ಗುಂಪುಗಳು ವಿಭಿನ್ನ ಭಾಷೆಗಳಲ್ಲಿ ಏಕೆ ಮಾತನಾಡುತ್ತಾರೆ ಎಂಬುದನ್ನು ಇದು ವಿವರಿಸುತ್ತದೆ, ಪ್ರತಿ ಗುಂಪು ಮೆಸೊಪೊಟಾಮಿಯಾದ ತಮ್ಮ ಮೂಲ ಕೇಂದ್ರದಿಂದ (ಕೆಲವೊಮ್ಮೆ ಅನೇಕ ತಲೆಮಾರುಗಳು) ಇಂದು ಅವರು ಕಂಡುಬರುವ ಸ್ಥಳಗಳಿಗೆ ಹರಡಿದರು. ಹೀಗೆ ಅವರವರ ಇತಿಹಾಸಗಳು ನಿರ್ದಿಷ್ಟ ಕಾಲದಿಂದ ಭಿನ್ನವಾಗಿವೆ. ಆದರೆ ಪ್ರತಿಯೊಂದು ಭಾಷಾ ಗುಂಪು (ಈ ಮೊದಲ ರಾಷ್ಟ್ರಗಳನ್ನು ರಚಿಸಿದ) ಈ ಹಂತದವರೆಗೆ ಸಾಮಾನ್ಯ ಇತಿಹಾಸವನ್ನು ಹೊಂದಿತ್ತು. ಈ ಸಾಮಾನ್ಯ ಇತಿಹಾಸವು ಪುರುಷನ ಯಾಗದ ಮೂಲಕ ಮೋಕ್ಷದ ವಾಗ್ದಾನ ಮತ್ತು ಮನು (ನೋಹ) ನ ಪ್ರವಾಹದ ವರ್ಣನೆಯನ್ನು ಒಳಗೊಂಡಿತ್ತು. ಸಂಸ್ಕೃತ ಋಷಿಗಳು ತಮ್ಮ ವೇದಗಳ ಮೂಲಕ ಈ ಘಟನೆಗಳನ್ನು ನೆನಪಿಸಿಕೊಂಡರು ಮತ್ತು ಇಬ್ರಿಯರು ತಮ್ಮ ವೇದದ ಮೂಲಕ ಇದೇ ಘಟನೆಗಳನ್ನು (ಋಷಿ ಮೋಶೆಯ ಕಾನೂನು) ನೆನಪಿಸಿಕೊಂಡರು.

ವಿವಿಧ ಪ್ರವಾಹ ವರ್ಣನೆಗಳ ಸಾಕ್ಷ್ಯ – ಪ್ರಪಂಚದಾದ್ಯಂತ

ಕುತೂಹಲಕಾರಿಯಾಗಿ, ಪ್ರಾಚೀನ ಇಬ್ರೀಯ ಮತ್ತು ಸಂಸ್ಕೃತ ವೇದಗಳಲ್ಲಿ ಮಾತ್ರ ಪ್ರವಾಹದ ವರ್ಣನೆಯನ್ನು ನೆನಪಿಸಿಕೊಳ್ಳಲಾಗುವುದಿಲ್ಲ. ಪ್ರಪಂಚದಾದ್ಯಂತದ ವಿವಿಧ ಜನರ ಗುಂಪುಗಳು ಪ್ರಖ್ಯಾತ ಪ್ರವಾಹವನ್ನು ತಮ್ಮದೇ ಆದ ಚರಿತ್ರೆಗಳಲ್ಲಿ ನೆನಪಿಸಿಕೊಳ್ಳುತ್ತಾರೆ. ಇದನ್ನು ಕೆಳಗಿನ ನಕ್ಷೆ ವಿವರಿಸುತ್ತದೆ.

ಸತ್ಯವೇದದಲ್ಲಿನ ಪ್ರವಾಹದ ವರ್ಣನೆಗೆ ಪ್ರಪಂಚದಾದ್ಯಂತದ ಸಂಸ್ಕೃತಿಗಳಿಂದ ಪ್ರವಾಹದ  ವರ್ಣನೆಗಳನ್ನು ಹೋಲಿಸಲಾಗಿದೆ

 ಮೇಲ್ಭಾಗದಲ್ಲಿ ಇದು ಪ್ರಪಂಚದಾದ್ಯಂತ ವಾಸಿಸುವ ವಿವಿಧ ಭಾಷಾ ಗುಂಪುಗಳನ್ನು ತೋರಿಸುತ್ತದೆ – ಪ್ರತಿ ಭೂಖಂಡದಲ್ಲೂ. ನಕ್ಷೆ ಯಲ್ಲಿನ ಸಣ್ಣಕೋಣೆಗಳು ಇಬ್ರೀಯ ಪ್ರವಾಹದ ವರ್ಣನೆಯ ನಿರ್ದಿಷ್ಟ ವಿವರವು (ನಕ್ಷೆಯ ಎಡಭಾಗದಲ್ಲಿ ಪಟ್ಟಿಮಾಡಲಾಗಿದೆ) ತಮ್ಮದೇ ಆದ ಪ್ರವಾಹದ ವರ್ಣನೆಯನ್ನು ಹೊಂದಿದೆಯೆ ಎಂದು ಸೂಚಿಸುತ್ತದೆ. ಕಪ್ಪು ಕೋಣೆಗಳು ಈ ವಿವರವು ಅವರ ಪ್ರವಾಹದ ವರ್ಣನೆಯಲ್ಲಿದೆ ಎಂದು ಸೂಚಿಸುತ್ತದೆ, ಆದರೆ ಖಾಲಿ ಕೋಣೆಗಳು ಈ ವಿವರವು ತಮ್ಮ ಸ್ಥಳೀಯ ಪ್ರವಾಹ ವರ್ಣನೆಯಲ್ಲಿಲ್ಲ ಎಂದು ಸೂಚಿಸುತ್ತದೆ. ಬಹುತೇಕ ಈ ಎಲ್ಲಾ ಗುಂಪುಗಳು ಪ್ರವಾಹವು ಸೃಷ್ಟಿಕರ್ತನ ನ್ಯಾಯತೀರ್ಪು ಆದರೆ ಕೆಲವು ಮನುಷ್ಯರನ್ನು ಬೃಹತ್ ದೋಣಿಯಲ್ಲಿ ಉಳಿಸಲಾಗಿದೆ ಎಂಬ ‘ಸ್ಮರಣೆಯನ್ನು’ ಕನಿಷ್ಟಪಕ್ಷ ಸಾಮಾನ್ಯವಾಗಿ ಹೊಂದಿರುವುದನ್ನು ನೀವು ನೋಡಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಪ್ರವಾಹದ ‘ನೆನಪು’ ಸಂಸ್ಕೃತ ಮತ್ತು ಇಬ್ರೀಯ ವೇದಗಳಲ್ಲಿ ಮಾತ್ರವಲ್ಲ, ಆದರೆ ಪ್ರಪಂಚದಾದ್ಯಂತ ಮತ್ತು ಪ್ರತ್ಯೇಕವಾಗಿ ಭೂಖಂಡಗಳಲ್ಲಿನ ಇತರ ಸಾಂಸ್ಕೃತಿಕ ಚರಿತ್ರೆಗಳಲ್ಲಿ ಕಂಡುಬರುತ್ತದೆ. ಇದು ನಮ್ಮ ಭೂತಕಾಲದಲ್ಲಿ ಸಂಭವಿಸಿದ ಈ ಘಟನೆಯನ್ನು ಸೂಚಿಸುತ್ತದೆ.

ಹಿಂದಿ ಕ್ಯಾಲೆಂಡರ್ ಸಾಕ್ಷ್ಯ

ಹಿಂದಿ ಕ್ಯಾಲೆಂಡರ್ – ತಿಂಗಳ ದಿನಗಳು ಮೇಲಿನಿಂದ ಕೆಳಕ್ಕೆ ಹೋಗುತ್ತವೆ, ಆದರೆ ಅಲ್ಲಿ 7-ದಿನಗಳ ವಾರವಿದೆ

ಪಾಶ್ಚಿಮಾತ್ಯ ಕ್ಯಾಲೆಂಡರ್‌ನೊಂದಿಗಿನ ಹಿಂದಿ ಕ್ಯಾಲೆಂಡರ್‌ನ ವ್ಯತ್ಯಾಸ ಮತ್ತು ಹೋಲಿಕೆಯು ಅದೂ ಅಲ್ಲದೆ ದೂರದ ಗತಕಾಲದ ಸ್ಮರಣೆಗೆ ಈ ಹಂಚಿಕೆಯ ಸಾಕ್ಷಿಯಾಗಿದೆ. ಹೆಚ್ಚಿನ ಹಿಂದಿ ಕ್ಯಾಲೆಂಡರ್‌ಗಳನ್ನು ರಚಿಸಲಾಗಿದೆ ಅದರಂತೆ ದಿನಗಳು ಅಡ್ಡವಾದ ಸಾಲುಗಳ ಬದಲಾಗಿ (ಎಡದಿಂದ ಬಲಕ್ಕೆ) ಕೆಳಗೆ ಇಳಿಯುವ ಸಾಲುಗಳಾಗಿವೆ (ಮೇಲಿನಿಂದ ಕೆಳಕ್ಕೆ), ಇದು ಪಶ್ಚಿಮದಲ್ಲಿ ಕ್ಯಾಲೆಂಡರ್‌ಗಳ ಸಾರ್ವತ್ರಿಕ ರಚನೆಯಾಗಿದೆ. ಭಾರತದ ಕೆಲವು ಕ್ಯಾಲೆಂಡರ್‌ಗಳು ಸಂಖ್ಯೆಗಳಿಗೆ ಹಿಂದಿ ಲಿಪಿಯನ್ನು ಬಳಸುತ್ತವೆ (१, २, ३ …). ಮತ್ತು ಕೆಲವರು ಪಾಶ್ಚಾತ್ಯ ಸಂಖ್ಯೆಗಳನ್ನು ಬಳಸುತ್ತಾರೆ (1, 2, 3 …) ಕ್ಯಾಲೆಂಡರನ್ನು ಸೂಚಿಸಲು ಯಾವುದೇ ‘ಸರಿಯಾದ’ ಮಾರ್ಗವಿಲ್ಲದ ಕಾರಣ ಈ ವ್ಯತ್ಯಾಸಗಳನ್ನು ನಿರೀಕ್ಷಿಸಬಹುದು. ಆದರೆ ಎಲ್ಲಾ ಕ್ಯಾಲೆಂಡರ್‌ಗಳು ಪ್ರಮುಖ ಹೋಲಿಕೆಯನ್ನು ಹೊಂದಿವೆ. ಹಿಂದಿ ಕ್ಯಾಲೆಂಡರ್ 7- ದಿನಗಳ ವಾರವನ್ನು ಬಳಸುತ್ತದೆ – ಪಾಶ್ಚಿಮಾತ್ಯ ಜಗತ್ತಿನಂತೆಯೇ. ಏಕೆ? ಪಾಶ್ಚಿಮಾತ್ಯರಂತೆ ಕ್ಯಾಲೆಂಡರನ್ನು ವರ್ಷಗಳು ಮತ್ತು ತಿಂಗಳುಗಳಾಗಿ ಏಕೆ ವಿಂಗಡಿಸಲಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು ಏಕೆಂದರೆ ಇವುಗಳು ಸೂರ್ಯನ ಸುತ್ತಲಿನ ಭೂಮಿಯ ಮತ್ತು ಭೂಮಿಯ ಸುತ್ತಲಿನ ಚಂದ್ರನ ಸುತ್ತುವಿಕೆಯನ್ನು ಆಧರಿಸಿವೆ – ಹೀಗೆ ಎಲ್ಲಾ ಜನರಿಗೆ ಸಾಮಾನ್ಯವಾದ ಖಗೋಳವಿದ್ಯೆಯ ಅಡಿಪಾಯವನ್ನು ನೀಡುತ್ತದೆ. ಆದರೆ 7- ದಿನಗಳ ವಾರಕ್ಕೆ ಯಾವುದೇ ಖಗೋಳ ಸಮಯದ ಆಧಾರವಿಲ್ಲ. ಇದು ಸಂಪ್ರದಾಯ ಮತ್ತು ಪರಂಪರೆಯಿಂದ ಬಂದಿದೆ, ಅದು ಇತಿಹಾಸದಲ್ಲಿ ಬಹಳ ಹಿಂದಕ್ಕೆ ಹೋಗುತ್ತದೆ (ಎಷ್ಟು ಹಿಂದಕ್ಕೆ ಎಂದು ಯಾರಿಗೂ ತಿಳಿದಿಲ್ಲವೆಂದು ತೋರುತ್ತದೆ).

ಮತ್ತು ಬೌದ್ಧ ಥಾಯ್ ಕ್ಯಾಲೆಂಡರ್

 ಥಾಯ್ ಕ್ಯಾಲೆಂಡರ್ ಎಡದಿಂದ ಬಲಕ್ಕೆ ಹೋಗುತ್ತದೆ, ಆದರೆ ಪಶ್ಚಿಮಕ್ಕಿಂತ ವಿಭಿನ್ನ ವರ್ಷವನ್ನು ಹೊಂದಿದೆ – ಆದರೆ ಇನ್ನೂ 7 ದಿನಗಳ ವಾರ

ಬೌದ್ಧ ರಾಷ್ಟ್ರವಾಗಿರುವುದರಿಂದ, ಥಾಯ್ ಜನರು ಬುದ್ಧನ ಜೀವನದಿಂದ ತಮ್ಮ ವರ್ಷಗಳನ್ನು ಗುರುತಿಸುತ್ತಾರೆ, ಇದರಿಂದಾಗಿ ಅವರ ವರ್ಷಗಳು ಯಾವಾಗಲೂ ಪಶ್ಚಿಮಕ್ಕಿಂತ 543 ವರ್ಷಗಳು ಹೆಚ್ಚಿರುತ್ತವೆ (ಅಂದರೆ 2019 ಸಿಇ ವರ್ಷ 2562 ಬಿಇ – ಬೌದ್ಧರ ಕಾಲದಲ್ಲಿ — ಥಾಯ್ ಕ್ಯಾಲೆಂಡರ್‌ನಲ್ಲಿ). ಆದರೆ ಮತ್ತೆ ಅವರೂ ಸಹಾ 7- ದಿನಗಳ ವಾರವನ್ನೂ ಬಳಸುತ್ತಾರೆ. ಅವರು ಅದನ್ನು ಎಲ್ಲಿಂದ ಪಡೆದರು? ಈ ಸಮಯ ಘಟಕಕ್ಕೆ ನಿಜವಾದ ಖಗೋಳವಿದ್ಯೆಯ ಆಧಾರವಿಲ್ಲದಿದ್ದಾಗ ಹಲವು ವಿಧಗಳಲ್ಲಿ ವಿಭಿನ್ನವಾಗಿರುವ ಕ್ಯಾಲೆಂಡರ್‌ಗಳು ವಿವಿಧ ದೇಶಗಳಲ್ಲಿ 7 ದಿನಗಳ ವಾರವನ್ನು ಆಧಾರಿಸಲು ಕಾರಣವೇನು?

ವಾರದ ಮೇಲೆ ಪ್ರಾಚೀನ ಗ್ರೀಕರ ಸಾಕ್ಷ್ಯ

ಪ್ರಾಚೀನ ಗ್ರೀಕರು ಸಹ ತಮ್ಮ ಕ್ಯಾಲೆಂಡರ್‌ನಲ್ಲಿ 7- ದಿನಗಳ ವಾರವನ್ನು ಬಳಸಿದರು.

ಸುಮಾರು ಕ್ರಿ.ಪೂ 400 ರಲ್ಲಿ ವಾಸಿಸುತ್ತಿದ್ದ ಪ್ರಾಚೀನ ಗ್ರೀಕ್ ವೈದ್ಯ ಹಿಪೊಕ್ರೆಟಿಸ್‌ನನ್ನು, ಆಧುನಿಕ ಔಷಧದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಪುಸ್ತಕಗಳನ್ನು ಬರೆದಿದ್ದಾರೆ, ಇಂದಿಗೂ ಸಂರಕ್ಷಿಸಲಾಗಿದೆ, ಅವರ ವೈದ್ಯಕೀಯ ಅವಲೋಕನಗಳನ್ನು ದಾಖಲಿಸಿದ್ದಾರೆ. ಹಾಗೆ ಮಾಡುವಾಗ ಅವರು ‘ವಾರ’ ವನ್ನು ಸಮಯ ಘಟಕವಾಗಿ ಬಳಸಿದರು. ಒಂದು ನಿರ್ದಿಷ್ಟವಾದ ಕಾಯಿಲೆಯ ಬೆಳೆಯುತ್ತಿರುವ ರೋಗಲಕ್ಷಣಗಳ ಬಗ್ಗೆ ಬರೆಯುತ್ತಾ ಅವರು ಹೀಗೆ ವಿವರಿಸಿದರು:

ನಾಲ್ಕನೇ ದಿನವು ಏಳನೆಯದನ್ನು ಸೂಚಿಸುತ್ತದೆ; ಎಂಟನೆಯದು ಎರಡನೇ ವಾರದ ಪ್ರಾರಂಭ; ಆದ್ದರಿಂದ, ಹನ್ನೊಂದು ಎರಡನೇ ವಾರದ ನಾಲ್ಕನೆಯದಾಗಿ, ಸಹಾ ಸೂಚಿಸುತ್ತದೆ; ಮತ್ತೆ, ಹದಿನೇಳನೇಯದು ಹದಿನಾಲ್ಕನೆಯದರಿಂದ ನಾಲ್ಕನೆಯದಾಗಿ, ಮತ್ತು ಹನ್ನೊಂದನೆಯದರಿಂದ ಏಳನೆಯದಾಗಿ ಸೂಚಿಸುತ್ತದೆ

ಹಿಪೊಕ್ರೆಟಿಸ್, ಆಫ್ರಾರಿಸಮ್ಸ್. #24

ಅರಿಸ್ಟಾಟಲ್, ಕ್ರಿ.ಪೂ 350 ರಲ್ಲಿ ನಿಯಮಿತವಾಗಿ ಸಮಯವನ್ನು ಗುರುತಿಸಲು ‘ವಾರವನ್ನು’ ಬಳಸುತ್ತದೆ ಎಂದು ಬರೆದರು. ಒಂದು ಉದಾಹರಣೆಯನ್ನು ಎತ್ತಿ ಹೇಳಲು ಅವರು ಬರೆಯುತ್ತಾರೆ:

ಒಂದು ವಾರಕ್ಕಿಂತ ಮುಂಚೆಯೇ ಶೈಶವಾವಸ್ಥೆಯಲ್ಲಿ ಮಗುವಿಗೆ ಹೆಚ್ಚಿನ ಸಾವುಗಳು ಸಂಭವಿಸುತ್ತವೆ, ಆದ್ದರಿಂದ ಆ ವಯಸ್ಸಿನಲ್ಲಿ ಬದುಕುಳಿಯುವ ಉತ್ತಮ ಅವಕಾಶವನ್ನು ಹೊಂದಿದೆ ಎಂಬ ನಂಬಿಕೆಯಿಂದ ಮಗುವಿಗೆ ಹೆಸರಿಸುವುದು ವಾಡಿಕೆಯಾಗಿದೆ.

ಅರಿಸ್ಟಾಟಲ್, ಪ್ರಾಣಿಗಳ ಚರಿತ್ರೆ, ಭಾಗ 12, ಹೆಚ್ಚುಕಡಿಮೆ 350 ಕ್ರಿ.ಪೂ

ಹಾಗಾದರೆ ಭಾರತ ಮತ್ತು ಥೈಲ್ಯಾಂಡ್‌ನಿಂದ ದೂರದಲ್ಲಿರುವ, ಈ ಪ್ರಾಚೀನ ಗ್ರೀಕ್ ಬರಹಗಾರರು, ‘ವಾರ’ ಎಂಬ ಆಲೋಚನೆಯನ್ನು ಎಲ್ಲಿ ಪಡೆದರು, ಅಂದರೆ ‘ವಾರ’ ಎಂದರೇನು ಎಂಬದಾಗಿ ತಮ್ಮ ಗ್ರೀಕ್ ಓದುಗರು ತಿಳಿಯಬೇಕೆಂಬ ನಿರೀಕ್ಷೆಯಿಂದ ಅವರು ಇದನ್ನು ಉಪಯೋಗಿಸಿದರು. ಬಹುಶಃ ಈ ಎಲ್ಲಾ ಸಂಸ್ಕೃತಿಗಳು ತಮ್ಮ ಹಿಂದಿನ ಕಾಲದಲ್ಲಿ (ಅವರು ಘಟನೆಯನ್ನು ಮರೆತಿರಬಹುದು) 7-ದಿನಗಳ ವಾರವನ್ನು ಸ್ಥಿರಪಡಿಸಿದ ಐತಿಹಾಸಿಕ ಘಟನೆ ಇರಬಹುದೇ?

ಇಬ್ರೀಯ ವೇದಗಳು ಅಂತಹ ಒಂದು ನ್ಯಾಯವಾದ ಘಟನೆಯನ್ನು ವಿವರಿಸುತ್ತದೆ – ಪ್ರಪಂಚದ ಮೊದಲಿನ ಸೃಷ್ಟಿ. ಆ ವಿವರವುಳ್ಳ ಮತ್ತು ಪ್ರಾಚೀನ ವರ್ಣನೆಯಲ್ಲಿ, ಸೃಷ್ಟಿಕರ್ತನು ಜಗತ್ತನ್ನು ಸೃಷ್ಟಿಸುತ್ತಾನೆ ಮತ್ತು 7 ದಿನಗಳಲ್ಲಿ ಮೊದಲ ಜನರನ್ನು ರೂಪಿಸುತ್ತಾನೆ (7 ನೇ ದಿನದ ವಿಶ್ರಾಂತಿಯೊಂದಿಗೆ 6 ದಿನಗಳು). ಆ ಕಾರಣದಿಂದಾಗಿ, ಮೊದಲ ಮಾನವರು ತಮ್ಮ ಕ್ಯಾಲೆಂಡರ್‌ನಲ್ಲಿ ಆ 7- ದಿನಗಳ ವಾರದ ಸಮಯ ಘಟಕವನ್ನು ಬಳಸಿದ್ದಾರೆ. ತರುವಾಯ ಭಾಷೆಗಳ ಗೊಂದಲದಿಂದ ಮಾನವಕುಲವು ಚದುರಿದಾಗ, ‘ಚದುರುವಿಕೆ’ಗೆ ಮುಂಚಿನ ಈ ಪ್ರಮುಖ ಘಟನೆಗಳನ್ನು ವಿವಿಧ ಭಾಷಾ ಗುಂಪುಗಳು ನೆನಪಿಸಿಕೊಳ್ಳುತ್ತವೆ, ಇದರಲ್ಲಿ ಮುಂಬರುವ ಯಾಗದ ವಾಗ್ಧಾನ, ದುರಂತದ ಪ್ರವಾಹದ ವರ್ಣನೆ, ಮತ್ತು 7 ದಿನಗಳ ವಾರ. ಈ ನೆನಪುಗಳು ಆರಂಭಿಕ ಮಾನವಕುಲದ ಜೀವಂತ ಕಲಾಕೃತಿಗಳು ಮತ್ತು ಈ ವೇದಗಳಲ್ಲಿ ದಾಖಲಾಗಿರುವಂತೆ ಈ ಘಟನೆಗಳ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಈ ವಿವರಣೆಯು ಇಬ್ರೀಯ ಮತ್ತು ಸಂಸ್ಕೃತ ವೇದಗಳ ನಡುವಿನ ಸಾಮ್ಯತೆಯನ್ನು ವಿವರಿಸಲು ಖಂಡಿತವಾಗಿಯೂ ಅತ್ಯಂತ ಸರಳವಾದ ಮಾರ್ಗವಾಗಿದೆ. ಇಂದು ಕೆಲವರು ಈ ಪ್ರಾಚೀನ ಬರಹಗಳನ್ನು ಕೇವಲ ಮೂಡನಂಬಿಕೆಯ ಪುರಾಣಶಾಸ್ತ್ರ ಎಂದು ತಳ್ಳಿಹಾಕುತ್ತಾರೆ ಆದರೆ ಅವುಗಳ ಹೋಲಿಕೆಗಳು ನಮ್ಮನ್ನು ಅವುಗಳನ್ನು ಗಂಭೀರವಾಗಿ ಪರಿಗಣಿಸಲು ಕಾರಣವಾಗಬೇಕು.

ಆರಂಭದ ಮಾನವಕುಲವು ಸಾಮಾನ್ಯ ಇತಿಹಾಸವನ್ನು ಹೊಂದಿದ್ದರು, ಇದರಲ್ಲಿ ಸೃಷ್ಟಿಕರ್ತನಿಂದ ಮೋಕ್ಷದ ವಾಗ್ದಾನವು ಸೇರಿದೆ. ಆದರೆ ಹೇಗೆ ವಾಗ್ದಾನವು ಪೂರೈಸಲಾಗುತ್ತದೆ? ಭಾಷೆಗಳ ಗೊಂದಲದಿಂದ ಉಂಟಾದ ಚದುರುವಿಕೆಯ ನಂತರ ಬದುಕಿದ್ದ ಪವಿತ್ರ ಮನುಷ್ಯನ ವರ್ಣನೆಯೊಂದಿಗೆ ನಾವು ಮುಂದುವರಿಯುತ್ತೇವೆ. ನಾವು ಇದನ್ನು ಮುಂದೆ ತೆಗೆದುಕೊಳ್ಳುತ್ತೇವೆ.

. ಆದರೆ ಹೇಗೆ ವಾಗ್ದಾನವು ಪೂರೈಸಲಾಗುತ್ತದೆ? ಭಾಷೆಗಳ ಗೊಂದಲದಿಂದ ಉಂಟಾದ ಚದುರುವಿಕೆಯ ನಂತರ ಬದುಕಿದ್ದ ಪವಿತ್ರ ಮನುಷ್ಯನ ವರ್ಣನೆಯೊಂದಿಗೆ ನಾವು ಮುಂದುವರಿಯುತ್ತೇವೆ. ನಾವು ಇದನ್ನು ಮುಂದೆ ತೆಗೆದುಕೊಳ್ಳುತ್ತೇವೆ.

[ಇದೇ ರೀತಿಯ ಒಮ್ಮುಖಗಳನ್ನು ತೋರಿಸುವ ಪ್ರಾಚೀನ ನೆನಪುಗಳ ಕಡೆ ಮತ್ತಷ್ಟು ನೋಡಲು – ಆದರೆ ಈ ಬಾರಿ ಚೀನಾದ ಭಾಷೆಯಲ್ಲಿನ ಲಿಪಿಶಾಸ್ತ್ರದ ಬರವಣಿಗೆಯ ಮೂಲಕ ಇಲ್ಲಿ ನೋಡಿ]

Leave a Reply

Your email address will not be published. Required fields are marked *