ದೀಪಾವಳಿ ಮತ್ತು ಕರ್ತನಾದ ಯೇಸು

This image has an empty alt attribute; its file name is diwali-lamps-e1468196438426.jpg

ನಾನು ಭಾರತ ದೇಶದಲ್ಲಿ ಕೆಲಸಮಾಡುತ್ತಿರುವಾಗ ಮೊದಲನೆಯ ಸಾರಿ ‘ಬಹಳ ಹತ್ತಿರದಿಂದ’ ಅದರ ಅನುಭವವಾಯಿತು. ನಾನು ಅಲ್ಲಿ ಒಂದು ತಿಂಗಳು ಉಳಿದುಕೊಳ್ಳಬೇಕಾಯಿತು ಮತ್ತು ನಾನು ಅಲ್ಲಿದ್ದ ಆರಂಭದ ಸಮಯದಲ್ಲಿ ದೀಪಾವಳಿಯನ್ನು ನಾನಿದ್ದ ಸ್ಥಳದ ಸುತ್ತಮುತ್ತಲು ಎಲ್ಲೆಡೆ ಆಚರಿಸುತ್ತಿದ್ದರು. ಹೆಚ್ಚಾಗಿ ಪಟಾಕಿಗಳನ್ನು ಸಿಡಿಸುತ್ತಿದ್ದರು – ಗಾಳಿಯು ದಟ್ಟವಾಗಿ ಹೊಗೆಯಿಂದ ತುಂಬಿತ್ತು ಮತ್ತು ಇದು ನನ್ನ ಕಣ್ಣುಗಳನ್ನು ಸ್ವಲ್ಪ ಉರಿಯುವಂತೆ ಮಾಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಹೀಗೆ ಈ ಎಲ್ಲಾ ಸಂತೋಷವು ನನ್ನ ಸುತ್ತಲೂ ಇರುವಾಗ ನಾನು ಈ ದೀಪಾವಳಿಯನ್ನು, ಅದು ಏನಾಗಿತ್ತು ಮತ್ತು ಅದರ ಅರ್ಥ ಏನಾಗಿತ್ತೆಂದು ಕಲಿತುಕೊಳ್ಳಲು ಬಯಸಿದೆನು. ಮತ್ತು ನಾನು ಅದನ್ನು ಪ್ರೀತಿಸಲಾರಂಭಿಸಿದೆನು.

‘ದೀಪಗಳ ಹಬ್ಬವು’ ನನಗೆ ಪ್ರೇರಣೆಯನ್ನು ಕೊಟ್ಟಿತು ಯಾಕೆಂದರೆ ಯೇಶು ಸೆಟ್ ಸ್ಯಾಂಗ್ ಅಂದರೆ ಕರ್ತನಾದ ಯೇಸು ಎಂದು ಪ್ರಸಿದ್ಧನಾಗಿದ್ದ ಆತನನ್ನು ನಾನು ನಂಬುವವನು ಮತ್ತು ಹಿಂಬಾಲಿಸುವವನು ಆಗಿದ್ದೆನು. ಮತ್ತು ಆತನ ಬೋಧನೆಯ ಮುಖ್ಯ ಸಂದೇಶವೇನೆಂದರೆ ನಮ್ಮೊಳಗಿರುವ ಕತ್ತಲೆಯನ್ನು ಆತನ ಬೆಳಕು ಜಯಿಸುತ್ತದೆ. ಆದುದರಿಂದ ದೀಪಾವಳಿಯು ಹೆಚ್ಚಿನಷ್ಟು ಕರ್ತನಾದ ಯೇಸುವಿನ ಹಾಗೆ ಇರುತ್ತದೆ.

ನಮ್ಮೊಳಗಿರುವ ಕತ್ತಲೆಯೊಂದಿಗೆ ನಾವು ಸಮಸ್ಯೆಯನ್ನು ಹೊಂದಿದ್ದೇವೆಂದು ನಮ್ಮಲ್ಲಿ ಅನೇಕರು ಗ್ರಹಿಸಿಕೊಳ್ಳುತ್ತೇವೆ. ಆದುದರಿಂದಲೇ ಅನೇಕ ದಶಲಕ್ಷ ಜನರು ಕುಂಭ ಮೇಳ ಹಬ್ಬದಲ್ಲಿ ಭಾಗವಹಿಸುವರು – ಯಾಕೆಂದರೆ ನಮ್ಮಲ್ಲಿ ಪಾಪವಿದೆಯೆಂದು ಮತ್ತು ನಾವು ಅವುಗಳನ್ನು ತೊಳೆದು ನಮ್ಮನ್ನು ನಾವು ಶುದ್ಧಿಪಡಿಸಿಕೊಳ್ಳಬೇಕಾಗಿದೆ ಎಂದು ಲಕ್ಷಾಂತರ ಜನರು ತಿಳಿದಿದ್ದಾರೆ. ಹಾಗೂ ಪ್ರಾರ್ಥಸ್ನಾನ ಎಂದು (ಅಥವಾ ಪ್ರಥಾಸನ) ಮಂತ್ರವು ಚಿರಪರಿಚಿತವಾಗಿರುವ ಪ್ರಾಚೀನ ಪ್ರಾರ್ಥನೆಯಾಗಿದೆ, ಇದು ನಮ್ಮೊಳಗಿರುವ ಈ ಪಾಪ ಅಥವಾ ಕತ್ತಲೆಯನ್ನು ಅರಿಕೆಮಾಡುತ್ತದೆ.

ನಾನು ಪಾಪಿಯಾಗಿದ್ದೇನೆ. ನಾನು ಪಾಪದ ಪರಿಣಾಮವಾಗಿದ್ದೇನೆ. ನಾನು ಪಾಪದಲ್ಲಿ ಹುಟ್ಟಿದ್ದೇನೆ. ನನ್ನ ಆತ್ಮವು ಪಾಪದ ಅಧೀನದಲ್ಲಿದೆ. ನಾನು ಪಾಪಿಗಳಲ್ಲೇ  ಬಹಳ ಹೀನನು. ಓ ಕರ್ತನೇ, ಸುಂದರವಾದ ಕಣ್ಣುಳ್ಳವನೇ, ಬಲಿದಾನ ಮಾಡುವ ಓ ಕರ್ತನೇ, ನನ್ನನ್ನು ರಕ್ಷಿಸು.

ಆದರೆ ಈ ಕತ್ತಲೆಯ ಆಲೋಚನೆಗಳು ಅಥವಾ ನಮ್ಮೊಳಗಿರುವ ಪಾಪವು ಉತ್ತೇಜಿಸುವಂತದ್ದಲ್ಲ. ಬಹುಶಃ ನಾವು ಕೆಲವೊಮ್ಮೆ ಇದನ್ನು ‘ಕೆಟ್ಟ ಸುದ್ಧಿ’ ಎಂದು ಆಲೋಚಿಸುತ್ತೇವೆ. ಆದುದರಿಂದಲೇ ಬೆಳಕು ಕತ್ತಲೆಯನ್ನು ಜಯಿಸುತ್ತದೆ ಎಂಬ ಆಲೋಚನೆಯು ನಮಗೆ ಹೆಚ್ಚು ನಿರೀಕ್ಷೆಯನ್ನು ಕೊಡುತ್ತದೆ ಮತ್ತು ನಾವು ಇದನ್ನು ಆಚರಿಸುತ್ತೇವೆ.  ಹೀಗೆ ದೀಪಗಳ ಜೊತೆಯಲ್ಲಿ ಸಿಹಿ ತಿನಿಸುಗಳು ಮತ್ತು ಪಟಾಕಿಗಳ ಮೂಲಕ ಬೆಳಕು ಕತ್ತಲೆಯನ್ನು ಜಯಿಸುತ್ತದೆ ಎಂಬ ಈ ನಿರೀಕ್ಷೆಯನ್ನು ದೀಪಾವಳಿಯು ವ್ಯಕ್ತಪಡಿಸುತ್ತದೆ.

ಕರ್ತನಾದ ಯೇಸು – ಲೋಕದಲ್ಲಿ ಬೆಳಕಾಗಿದ್ದಾನೆ

ಕರ್ತನಾದ ಯೇಸು ಇದನ್ನೇ ಮಾಡಿದ್ದಾನೆ. ವೇದ ಪುಸ್ತಕದಲ್ಲಿರುವ (ಅಥವಾ ಸತ್ಯವೇದ) ಸುವಾರ್ತೆಯು ಯೇಸುವನ್ನು ಈ ಕೆಳಗಿನ ರೀತಿಯಲ್ಲಿ ವಿವರಿಸುತ್ತದೆ:

1 ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು. 2 ಆತನೇ ಆದಿಯಲ್ಲಿ ದೇವರೊಂದಿಗೆ ಇದ್ದನು. 3 ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ್ಲ. 4 ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯ ರಿಗೆ ಬೆಳಕಾಗಿತ್ತು. 5 ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಆ ಕತ್ತಲು ಅದನ್ನು ಗ್ರಹಿಸಲಿಲ್ಲ.

ಯೋಹಾನ 1:1-5

ಆದುದರಿಂದ ನೋಡಿರಿ, ಈ ‘ವಾಕ್ಯವು’ ದೀಪಾವಳಿಯು ವ್ಯಕ್ತಪಡಿಸುವ ನಿರೀಕ್ಷೆಯ ನೆರವೇರಿಕೆಯಾಗಿದೆ. ಮತ್ತು ಈ ನಿರೀಕ್ಷೆಯು ದೇವರಿಂದ ಈ ‘ವಾಕ್ಯದಲ್ಲಿ’ ಬರುತ್ತದೆ, ಕ್ರಮೇಣವಾಗಿ ಇದನ್ನು ಯೋಹಾನನು ಕರ್ತನಾದ ಯೇಸು ಎಂದು ಗುರುತಿಸುತ್ತಾನೆ. ಈ ಸುವಾರ್ತೆಯು ಹೀಗೆ ಹೇಳುವದರ ಮೂಲಕ ಮುಂದುವರೆಯುತ್ತದೆ,

9 ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು. 10 ಆತನು ಲೋಕದಲ್ಲಿ ಇದ್ದನು; ಲೋಕವು ಆತನಿಂದ ಉಂಟಾಯಿತು; ಲೋಕವು ಆತನನ್ನು ಅರಿಯಲಿಲ್ಲ. 11 ಆತನು ತನ್ನ ಸ್ವಂತದವರ ಬಳಿಗೆ ಬಂದನು. ಆತನ ಸ್ವಂತದವರು ಆತನನ್ನು ಅಂಗೀಕರಿಸಲಿಲ್ಲ. 12 ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು. 13 ಇವರು ರಕ್ತದಿಂದಾಗಲಿ ಇಲ್ಲವೆ ಶರೀರದ ಇಚ್ಛೆಯಿಂದಾಗಲಿ ಇಲ್ಲವೆ ಮನುಷ್ಯನ ಇಚ್ಛೆಯಿಂದಾ ಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.    

ಯೋಹಾನ 1:9-13

ಕರ್ತನಾದ ಯೇಸು ಹೇಗೆ ‘ಪ್ರತಿಯೊಬ್ಬರಿಗೂ ಬೆಳಕನ್ನು ಕೊಡಲು’ ಬಂದನೆಂದು ಇದು ವಿವರಿಸುತ್ತದೆ. ಇದು ಕೇವಲ ಕ್ರೈಸ್ತರಿಗೆ ಎಂದು ಕೆಲವರು ಆಲೋಚಿಸುತ್ತಾರೆ, ಆದರೆ ಈ ಕೊಡುಗೆಯು ‘ದೇವರ ಮಕ್ಕಳಾಗಲು’ ಈ ‘ಲೋಕದಲ್ಲಿರುವ’ ‘ಪ್ರತಿಯೊಬ್ಬರಿಗೂ’ ಆಗಿದೆ ಎಂದು ಗಮನಿಸಿರಿ. ಈ ಕೊಡುಗೆಯು ಒಂದಾಗಿದೆ, ದೀಪಾವಳಿಯಂತೆ ತಮ್ಮೊಳಗೆ ಬೆಳಕು ಕತ್ತಲೆಯನ್ನು ಜಯಿಸುವಂತೆ ಆಸಕ್ತಿಯುಳ್ಳ ಕನಿಷ್ಠ ಪ್ರತಿಯೊಬ್ಬರಿಗೂ ಆಗಿದೆ.

ಕರ್ತನಾದ ಯೇಸುವಿನ ಜೀವಿತವನ್ನು ನೂರಾರು ವರ್ಷಗಳ ಹಿಂದೆಯೇ ಪ್ರವಾದಿಸಲಾಗಿತ್ತು

ಕರ್ತನಾದ ಯೇಸುವನ್ನು ಕುರಿತಾದ ಅಸಾಧಾರಣವಾದ ಸಂಗತಿಯೆಂದರೆ ಆತನ ನರಾವತಾರವನ್ನು ಅನೇಕ ರೀತಿಗಳಲ್ಲಿ ಮತ್ತು ಉದಾಹರಣೆಗಳ ಮೂಲಕ ಮಾನವ ಚರಿತ್ರೆಯ ಆರಂಭದಲ್ಲೇ ಭವಿಷ್ಯ ನುಡಿಯಲಾಯಿತು ಮತ್ತು ಮುನ್ಸೂಚನೆ ಕೊಡಲಾಯಿತು. ಮತ್ತು ಅವುಗಳನ್ನು ಇಬ್ರಿಯ ವೇದಗಳಲ್ಲಿ ಬರೆಯಲಾಗಿದೆ. ಹೀಗೆ ಆತನು ಈ ಭೂಮಿಯ ಮೇಲೆ ಇರುವದಕ್ಕಿಂತ ಮುಂಚಿತವಾಗಿಯೇ ಆತನನ್ನು ಕುರಿತು ಬರೆಯಲಾಗಿತ್ತು. ಮತ್ತು ಆತನ ನರಾವತಾರದ ಕೆಲವು ಮುನ್ನುಡಿಗಳು ಋಗ್ವೇದದಲ್ಲಿರುವ ಅನೇಕ ಪ್ರಾಚೀನ ಗೀತೆಗಳಲ್ಲಿ ಸಹ ನೆನಪಿಸಿಕೊಳ್ಳಲಾಗಿದೆ, ಇವು ಪುರುಷನ ಬರೋಣವನ್ನು ಹೊಗಳುತ್ತೇವೆ ಮತ್ತು ಮಾನವ ಕುಲದ ಅಂದರೆ ಪ್ರಳಯದ ಮನು, ಇದೇ ವ್ಯಕ್ತಿಯನ್ನು ಸತ್ಯವೇದವು – ವೇದ ಪುಸ್ತಕವು – ‘ನೋಹ’ ಎಂದು ಕರೆಯುವ. ಈ ರೀತಿಯಾದ ಕೆಲವು ಆದಿಯ ಘಟನೆಗಳನ್ನು ದಾಖಲಿಸಿದೆ. ಈ ಪ್ರಾಚೀನ ಘಟನೆಗಳು ಜನರ ಪಾಪಗಳ ಕತ್ತಲೆಯನ್ನು ವರ್ಣಿಸುತ್ತದೆ, ಹೀಗೆ ಪುರುಷನ ಅಥವಾ ಕರ್ತನಾದ ಯೇಸುವಿನ ಬರೋಣದ ನಿರೀಕ್ಷೆಯನ್ನು ಕೊಡುತ್ತದೆ.

ಋಗ್ವೇದದ ಮುನ್ಸೂಚನೆಗಳಲ್ಲಿ ದೇವರ ಮತ್ತು ಪರಿಪೂರ್ಣನಾದ ಮನುಷ್ಯನ ನರಾವತಾರದ ಪುರುಷನು ಬಲಿದಾನವಾಗುವನೆಂದು ತಿಳಿಸುತ್ತದೆ. ಈ ಬಲಿದಾನವು ನಮ್ಮ ಪಾಪಗಳ ಕರ್ಮಕ್ಕಾಗಿ ಕೊಡುವ ಕ್ರಯವಾಗಿದೆ ಮತ್ತು ನಮ್ಮ ಅಂತರ್ಯವನ್ನು ಶುದ್ಧೀಕರಿಸಲು ಸಾಕಾಗಿರುತ್ತದೆ. ತೊಳೆದುಕೊಳ್ಳುವದು ಮತ್ತು ಪೂಜೆಗಳು ಒಳ್ಳೆಯದು, ಆದರೆ ಅವು ನಮ್ಮ ಹೊರಗಿನವುಗಳಿಗೆ ಸೀಮಿತವಾಗಿವೆ. ನಮ್ಮ ಅಂತರ್ಯವನ್ನು ಶುದ್ಧೀಕರಿಸಲು ನಮಗೆ ಉತ್ತಮವಾದ ಯಜ್ಞವು ಅಗತ್ಯವಾಗಿದೆ.

ಇಬ್ರಿಯ ವೇದಗಳಲ್ಲಿ ಕರ್ತನಾದ ಯೇಸುವನ್ನು ಕುರಿತು ಪ್ರವಾದಿಸಲಾಗಿದೆ

ಋಗ್ವೇದದಲ್ಲಿರುವ ಈ ಗೀತೆಗಳ ಜೊತೆಗೆ, ಇಬ್ರಿಯ ವೇದಗಳು ಬರುವ ಈತನನ್ನು ಕುರಿತು ಪ್ರವಾದಿಸಿದವು. ಇಬ್ರಿಯ ವೇದಗಳಲ್ಲಿ ಪ್ರಮುಖವಾದವು ರಷಿ ಯೆಶಾಯನು (ಕ್ರಿ.ಪೂ 750 ರಲ್ಲಿ ಬದುಕಿದನು, ಅಂದರೆ ಕರ್ತನಾದ ಯೇಸು ಈ ಭೂಮಿಯ ಮೇಲೆ ನಡೆದ 750 ವರುಷಗಳ ಹಿಂದೆ ಆಗಿತ್ತು). ಈ ಬರುವಾತನನ್ನು ಕುರಿತು ಅವನು ಅನೇಕ ಒಳನೋಟಗಳನ್ನು ಹೊಂದಿದ್ದನು. ಅವನು ಕರ್ತನಾದ ಯೇಸುವನ್ನು ಕುರಿತು ಪ್ರಕಟಿಸಿದಾಗ ದೀಪಾವಳಿಯನ್ನು ನಿರೀಕ್ಷಿಸಿದನು:

ಕತ್ತಲೆಯಲ್ಲಿ ನಡೆಯುವ ಜನರು ದೊಡ್ಡ ಬೆಳಕನ್ನು ಕಂಡರು; ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಪ್ರಕಾಶಿ ಸುತ್ತದೆ.

ಯೆಶಾಯ 9:2

ಈ ಸಂಗತಿಯು ಯಾಕೆ ಹೀಗಿತ್ತು? ಅವನು ಮುಂದುವರೆಸಿ

ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.

ಯೆಶಾಯ 9:6

ಆದರೆ ಆತನು ನರಾವತಾರವಾಗಿದ್ದರೂ ಸಹ ಆತನು ನಮಗೆ ನಮ್ಮ ಕತ್ತಲೆಯ ಅಗತ್ಯತೆಗಳಲ್ಲಿ ಸಹಾಯ ಮಾಡಲು ನಮಗಾಗಿ ಸೇವಕನಾಗುವನು.

4 ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು. 5 ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು. 6 ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.

ಯೆಶಾಯ 53:4-6

ಯೆಶಾಯನು ಕರ್ತನಾದ ಯೇಸುವಿನ ಕ್ರೂಜೆಯನ್ನು ವಿವರಿಸುತ್ತಿದ್ದಾನೆ. ಈ ಕಾರ್ಯ ಸಂಭವಿಸಿದ 750 ವರುಷಗಳ ಹಿಂದೆಯೇ ಹೇಳಿದನು ಮತ್ತು ಅವನು ಆ ಕ್ರೂಜೆಯನ್ನು ನಮ್ಮನ್ನು ಗುಣಪಡಿಸುವ ಯಜ್ಞವೆಂದು ಸಹ ವಿವರಿಸಿದನು. ಮತ್ತು ಈ ಸೇವಕನು ಅರ್ಪಿಸುವ ಈ ಕೆಲಸವು ದೇವರು ಅವನಿಗೆ ಹೀಗೆ ಹೇಳುವ ಸಂಗತಿಯಾಗಿತ್ತು.

ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು.

ಯೆಶಾಯ 49:6

ಆದುದರಿಂದ ನೋಡಿರಿ! ಇದು ನನಗೂ ಮತ್ತು ನಿಮಗೂ ಆಗಿದೆ. ಇದು ಪ್ರತಿಯೊಬ್ಬರಿಗೂ ಆಗಿದೆ.

ಪೌಲನ ಉದಾಹರಣೆ

ಕರ್ತನಾದ ಯೇಸುವಿನ ಬಲಿದಾನವು ತನಗಾಗಿ ಎಂದು ಖಚಿತವಾಗಿ ಆಲೋಚಿಸಿದ ಒಬ್ಬ ವ್ಯಕ್ತಿ ಎಂದರೆ ಅವನೇ ಪೌಲನಾಗಿದ್ದನು, ಈತನು ಯೇಸುವಿನ ನಾಮವನ್ನು ವಿರೋಧಿಸಿದ ವ್ಯಕ್ತಿಯಾಗಿದ್ದನು. ಆದರೆ ಅವನು ಕರ್ತನಾದ ಯೇಸುವನ್ನು ಸಂಧಿಸಿದನು, ಇದು ಅವನನ್ನು ನಂತರ ಹೀಗೆ ಬರೆಯುವಂತೆ ಮಾಡಿತು.

ಕತ್ತಲೆ ಯೊಳಗಿಂದ ಬೆಳಕು ಹೊಳೆಯಲಿ ಎಂದು ಆಜ್ಞಾಪಿಸಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವ ಜ್ಞಾನವೆಂಬ ಪ್ರಕಾಶವನ್ನು ಕೊಡುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು.

2 ಕೊರಿಂಥ 4:6

ಪೌಲನು ಕರ್ತನಾದ ಯೇಸುವನ್ನು ವೈಯಕ್ತಿಕವಾಗಿ ಸಂಧಿಸಿದನು, ಇದು ಅವನನ್ನು ಬೆಳಕು ‘ತನ್ನ ಹೃದಯದಲ್ಲಿ ಪ್ರಕಾಶಿಸುವಂತೆ ಮಾಡಿತು.’

ನೀವು ಈ ಬೆಳಕಿನ ಯೇಸುವನ್ನು ಅನುಭವಿಸುವದು

ಹಾಗಾದರೆ ಕರ್ತನಾದ ಯೇಸು ಪಡೆದುಕೊಂಡ ಮತ್ತು ಪೌಲನು ಅನುಭವಿಸಿದ, ಈ ಕತ್ತಲೆಯಿಂದ ‘ರಕ್ಷಣೆಯನ್ನು’ ಪಡೆದುಕೊಳ್ಳಲು ಮತ್ತು ಯೆಶಾಯನು ಪ್ರವಾದಿಸಿದಂತೆ ಪಾಪವು  ಬೆಳಕಾಗಲು ನಾವು ಏನು ಮಾಡಬೇಕಾಗಿದೆ? ಪೌಲನು ಈ ಪ್ರಶ್ನೆಗೆ ಮತ್ತೊಂದು ಪತ್ರಿಕೆಯಲ್ಲಿ ಉತ್ತರಗಳನ್ನು ಬರೆಯುತ್ತಾನೆ.

ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.

ರೋಮಾ 6:23

ಇದು ‘ಉಚಿತಾರ್ಥವರವೆಂದು’ ಅವನು ಹೇಗೆ ಹೇಳುತ್ತಾನೆಂದು ಗಮನಿಸಿ. ನಿರೂಪಣೆಯ ಪ್ರಕಾರ ಉಚಿತಾರ್ಥವರವನ್ನು ಸಂಪಾದಿಸಿಕೊಳ್ಳಲು ಆಗುವದಿಲ್ಲ. ನೀವು ಅದನ್ನು ಸಂಪಾದಿಸಿಕೊಳ್ಳದಿದ್ದರೂ ಅಥವಾ ನೀವು ಅದಕ್ಕೆ ಅರ್ಹರಾಗದಿದ್ದರೂ ಯಾರಾದರೂ ನಿಮಗೆ ಉಚಿತವಾಗಿ ಬಹುಮಾನವನ್ನು ಸುಮ್ಮನೆ ಕೊಡಬಹುದು. ಆದರೆ ಆ ಬಹುಮಾನವನ್ನು ನೀವು ‘ಅಂಗೀಕರಿಸದೆ’ ಇದ್ದರೆ ಅದು ಎಂದಿಗೂ ನಿಮ್ಮ ಸ್ವಾಧೀನದಲ್ಲಿರುವದಿಲ್ಲ. ಇಲ್ಲಿ ಅದನ್ನು ಹೆಚ್ಚು ವಿವರವಾಗಿ ತಿಳಿಸಲಾಗಿದೆ, ಆದರೆ ಯೋಹಾನನು ಈ ಹಿಂದೆ ಹೀಗೆ ಬರೆದನು,

ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು.

ಯೋಹಾನ 1:12

ಆದುದರಿಂದ ನೀವು ಕೇವಲ ಆತನನ್ನು ಅಂಗೀಕರಿಸಿರಿ. ಉಚಿತವಾಗಿ ಕೊಡಲ್ಪಡುವ ಈ ವರಕ್ಕಾಗಿ ನೀವು ಆತನನ್ನು ಬೇಡಿಕೊಳ್ಳುವದರ ಮೂಲಕ ಹೀಗೆ ಮಾಡಬಹುದು. ನೀವು ಕೇಳುವದಕ್ಕೆ ಕಾರಣವೆಂದರೆ ಆತನು ಬದುಕಿದ್ದಾನೆ. ಹೌದು, ಆತನು ನಮ್ಮ ಪಾಪಗಳಿಗಾಗಿ ಬಲಿಯಾದನು, ಆದರೆ ಮೂರು ದಿನಗಳ ನಂತರ ತಿರಿಗಿ ಜೀವಕ್ಕೆ ಬಂದನು, ಬಾಧೆಪಡುವ ಸೇವಕನನ್ನು ಕುರಿತು ಅವನು ಬರೆದಾಗ ನೂರಾರು ವರುಷಗಳ ಹಿಂದೆ ರಷಿ ಯೆಶಾಯನು ಹೀಗೆ ಪ್ರವಾದಿಸಿದನು,

ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.

ಯೆಶಾಯ 53:11

ಆದುದರಿಂದ ಕರ್ತನಾದ ಯೇಸು ಬದುಕಿದ್ದಾನೆ ಮತ್ತು ನೀವು ಆತನನ್ನು ಕರೆದಾಗ ಕಿವಿಗೊಡುವನು. ನೀವು ಆತನಿಗೆ ಪ್ರಾರ್ಥಸ್ನಾನ (ಅಥವಾ ಪ್ರಥಾಸನ) ಮಂತ್ರದ ಪ್ರಾರ್ಥನೆ ಮಾಡಬಹುದು ಮತ್ತು ಆತನು ಕಿವಿಗೊಟ್ಟು ರಕ್ಷಿಸುವನು ಯಾಕೆಂದರೆ ಆತನು ನಿಮಗಾಗಿ ತನ್ನನ್ನೇ ಬಲಿಯಾಗಿ ಅರ್ಪಿಸಿಕೊಂಡನು ಮತ್ತು ಈಗ ಎಲ್ಲಾ ಅಧಿಕಾರವನ್ನು ಹೊಂದಿದ್ದಾನೆ:

ನಾನು ಪಾಪಿಯಾಗಿದ್ದೇನೆ. ನಾನು ಪಾಪದ ಪರಿಣಾಮವಾಗಿದ್ದೇನೆ. ನಾನು ಪಾಪದಲ್ಲಿ ಹುಟ್ಟಿದ್ದೇನೆ. ನನ್ನ ಆತ್ಮವು ಪಾಪದ ಅಧೀನದಲ್ಲಿದೆ. ನಾನು ಪಾಪಿಗಳಲ್ಲೇ  ಬಹಳ ಹೀನನು.  ಓ ಕರ್ತನೇ ಸುಂದರವಾದ ಕಣ್ಣುಳ್ಳವನೇ, ಬಲಿದಾನ ಮಾಡುವ ಓ ಕರ್ತನೇ, ನನ್ನನ್ನು ರಕ್ಷಿಸು.

ದಯವಿಟ್ಟು ಇಲ್ಲಿ ಇತರೆ ಲೇಖನಗಳನ್ನು ನೋಡಿರಿ. ಅವು ಮಾನವ ಚರಿತ್ರೆಯ ಆರಂಭದಲ್ಲಿ ಆರಂಭವಾಗುತ್ತವೆ ಮತ್ತು ಕತ್ತಲೆಯಿಂದ ನಮ್ಮನ್ನು ರಕ್ಷಿಸಿ ಬೆಳಕಿಗೆ ತರುವ, ನಮಗೆ ಉಚಿತಾರ್ಥವರವಾಗಿ ಕೊಡಲ್ಪಟ್ಟ ದೇವರ ಈ ಯೋಜನೆಯನ್ನು ಸಂಸ್ಕೃತ ಮತ್ತು ಇಬ್ರಿಯ ವೇದಗಳಿಂದ ತೋರಿಸುತ್ತದೆ.

ಈ ದೀಪಾವಳಿಯಲ್ಲಿ, ನೀವು ದೀಪಗಳನ್ನು ಬೆಳಗಿಸಿ ಮತ್ತು ಉಡುಗೊರೆಗಳನ್ನು ಬದಲಾಯಿಸಿಕೊಳ್ಳುವಾಗ, ಅನೇಕ ವರುಷಗಳ ಹಿಂದೆ ಪೌಲನು ಇದನ್ನು ಅನುಭವಿಸಿ ತನ್ನನ್ನು ಮಾರ್ಪಡಿಸಿಕೊಂಡನು, ಮತ್ತು ಕರ್ತನಾದ ಯೇಸುವಿನ ಮೂಲಕ ನಿಮಗೂ ಸಹ ಕೊಟ್ಟಿರುವ ಅಂತರ್ಯದ ಬೆಳಕಿನ ಈ ವರವನ್ನು ನೀವು ಅನುಭವಿಸಿರಿ. ದೀಪಾವಳಿ ಶುಭಾಶಯಗಳು!

Leave a Reply

Your email address will not be published. Required fields are marked *