ಕಾಳಿ, ಸಾವು ಮತ್ತು ಪಸ್ಕಹಬ್ಬದ ಸೂಚನೆ

ಕಾಳಿಯನ್ನು ಸಾಮಾನ್ಯವಾಗಿ ಸಾವಿನ ದೇವತೆ ಎಂದು ಕರೆಯಲಾಗುತ್ತದೆ, ಆದರೆ ಹೆಚ್ಚು ನಿಖರವಾಗಿ ಸಮಯ ಎಂದು ಅರ್ಥವನ್ನೊಳಗೊಂಡತ ಕಲ್ ಎಂಬ ಸಂಸ್ಕೃತ ಪದದಿಂದ ಬಂದಿದೆ. ಕಾಳಿಯ ಚಿಹ್ನೆಗಳು ಭಯಂಕರವಾಗಿವೆ, ಏಕೆಂದರೆ ಅವಳು ಸಾಮಾನ್ಯವಾಗಿ ಕತ್ತರಿಸಿದ ತಲೆಗಳ ಹಾರ ಮತ್ತು ಕತ್ತರಿಸಿದ ತೋಳುಗಳ ಅಂಗಿಯನ್ನು ಧರಿಸಿ ರಕ್ತದ-ತೊಟ್ಟಿಕ್ಕುವ, ಹೊಸದಾಗಿ ಕತ್ತರಿಸಿದ ತಲೆಯನ್ನು ಎತ್ತಿ ಹಿಡಿದು, ತನ್ನ ಪತಿ ಶಿವನ ಪೀಡಿತ ದೇಹದ ಮೇಲೆ ಒಂದು ಪಾದವನ್ನು ಇಟ್ಟಿರುವದಾಗಿ ಚಿತ್ರಿಸಲ್ಪಟ್ಟಿದ್ದಾಳೆ. ಇಬ್ರೀಯವೇದ – ಸತ್ಯವೇದದಲ್ಲಿ ಸಾವಿನ ಮತ್ತೊಂದು ಕಥೆಯನ್ನು ಅರ್ಥಮಾಡಿಕೊಳ್ಳಲು ಕಾಳಿ ನಮಗೆ ಸಹಾಯ ಮಾಡುತ್ತದೆ.

ಪೀಡಿತ ಶಿವನ ಮೇಲೆ ಕತ್ತರಿಸಿದ ತಲೆಗಳು ಮತ್ತು ಕೈಕಾಲುಗಳಿಂದ ಕಾಳಿ ಅಲಂಕರಿಸಲ್ಪಟ್ಟಿದ್ದಾಳೆ

ರಾಕ್ಷಸರ-ರಾಜನಾದ ಮಹಿಷಾಸುರನು ದೇವರುಗಳ ವಿರುದ್ಧ ಯುದ್ಧಕ್ಕೆ ಬೆದರಿಕೆ ಹಾಕಿದನೆಂದು ಕಾಳಿ ಪುರಾಣವು ವಿವರಿಸುತ್ತದೆ. ಆದ್ದರಿಂದ ಅವರು ತಮ್ಮ ಮೂಲತತ್ವಗಳಿಂದ ಕಾಳಿಯನ್ನು ಸೃಷ್ಟಿಸಿದರು. ಕಾಳಿ ಒಂದು ದೊಡ್ಡ ರಕ್ತದೋಕುಳಿಯಲ್ಲಿ, ರಾಕ್ಷಸ-ಸೈನ್ಯದ ಶ್ರೇಣಿಯನ್ನು ಕ್ರೂರವಾಗಿ ಸೀಳಿಸಿ, ತನ್ನ ಹಾದಿಯಲ್ಲಿದ್ದ ಎಲ್ಲರನ್ನೂ ನಾಶಮಾಡಿದಳು. ಅವಳು ನಾಶಪಡಿಸಿದ ರಾಕ್ಷಸರ –ರಾಜನಾದ ಮಹಿಷಾಸುರನೊಂದಿಗಿನ ಯುದ್ಧದ ಪರಾಕಾಷ್ಠೆಯು ಹಿಂಸಾತ್ಮಕ ಮುಖಾಮುಖಿಯಲ್ಲಿಯಾಗಿತ್ತು. ಕಾಳಿ ತನ್ನ ವಿರೋಧಿಗಳನ್ನು ರಕ್ತಮಯ ದೇಹದ- ಭಾಗಗಳಾಗಿ ನಾಶಪಡಿಸಿದಳು, ಆದರೆ ಅವಳು ರಕ್ತದಿಂದ ಅಮಲೇರಿದಳು, ಆದ್ದರಿಂದ ಅವಳ ಸಾವು ಮತ್ತು ವಿನಾಶದ ಹಾದಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ಶಿವನು ಸ್ವಯಂಪ್ರೇರಿತನಾಗಿ ಯುದ್ಧಭೂಮಿಯಲ್ಲಿ ಚಲನರಹಿತನಾಗಿರುವವರೆಗೂ ಅವಳನ್ನು ಹೇಗೆ ತಡೆಯುವುದು ಎಂದು ದೇವರುಗಳಿಗೆ ತಿಳಿದಿರಲಿಲ್ಲ. ಆದ್ದರಿಂದ ಸತ್ತ ಎದುರಾಳಿಗಳ ತಲೆಗಳು ಮತ್ತು ತೋಳುಗಳಿಂದ ಅಲಂಕರಿಸಲ್ಪಟ್ಟ ಕಾಳಿ, ಪೀಡಿತ ಶಿವನ ಮೇಲೆ ಒಂದು ಕಾಲು ಇಟ್ಟು ಅವನನ್ನು ನೋಡಿದಾಗ ತನ್ನ ಪ್ರಜ್ಞೆಯನ್ನು ಹಿಂತಿರುಗಿ ಪಡೆದಳು ಮತ್ತು ವಿನಾಶವು ಕೊನೆಗೊಂಡಿತು.

ಇಬ್ರೀಯ ವೇದದಲ್ಲಿನ  ಪಸ್ಕಹಬ್ಬದ ವಿವರವು ಕಾಳಿ ಮತ್ತು ಶಿವನ ಈ ಕಥೆಗೆ ಮಾದರಿಯಾಗಿದೆ. ಪಸ್ಕಹಬ್ಬದ ಕಥೆಯು ದೇವದೂತ ಬಗ್ಗೆ ದಾಖಲಿಸುತ್ತದೆ, ಅದು ಕಾಳಿಯಂತೆ, ದುಷ್ಟ ರಾಜನನ್ನು ವಿರೋಧಿಸುವಲ್ಲಿ ವ್ಯಾಪಕವಾದ ಮರಣವನ್ನು ತರುತ್ತದೆ. ಕಾಳಿಯನ್ನು ತಡೆಯಲು ಶಿವನು ದುರ್ಬಲ ಸ್ಥಾನವನ್ನು ತೆಗೆದುಕೊಳ್ಳುವಂತೆಯೇ, ಸಾವಿನ ಈ ದೇವದೂತನು, ಅಸಹಾಯಕ ಕುರಿಮರಿಯನ್ನು ಬಲಿ ಕೊಟ್ಟಿರುವ ಯಾವುದೇ ಮನೆಯಿಂದ ತಡೆಯಲ್ಪಡುತ್ತಾನೆ. ಈ ಕಾಳಿ ಕಥೆಯ ಅರ್ಥವು ಅಹಂನ ವಿಜಯಕ್ಕೆ ಸಂಬಂಧಿಸಿದೆ ಎಂದು ಋಷಿಗಳು ನಮಗೆ ತಿಳಿಸುತ್ತಾರೆ. ನಜರೇತಿನ ಯೇಸುವಿನ ಆಗಮನ – ಯೇಸುವಿನ ಪ್ರತಿಬಂಬ – ಮತ್ತು ಅವನ ಅಹಂಕಾರವನ್ನು ತ್ಯಜಿಸುವಲ್ಲಿ ಹಾಗೂ ನಮ್ಮ ಪರವಾಗಿ ತನ್ನನ್ನು ತ್ಯಾಗ ಮಾಡುವಲ್ಲಿ ಅವರ ದೀನಭಾವವನ್ನು ಸೂಚಿಸುವ ಮೂಲಕ ಪಸ್ಕಹಬ್ಬದ ಕಥೆಗೆ ಒಂದು ಅರ್ಥವಿದೆ. ಪಸ್ಕಹಬ್ಬದ ಕಥೆಯನ್ನು ತಿಳಿದುಕೊಳ್ಳುವುದು ಯೋಗ್ಯವಾಗಿದೆ.

ವಿಮೋಚನಕಾಂಡದ ಪಸ್ಕಹಬ್ಬ

ಋಷಿ ಅಬ್ರಹಾಮನ ಮಗನ ತ್ಯಾಗವು ಯೇಸುವಿನ ತ್ಯಾಗವನ್ನು ಸೂಚಿಸುವ ಸಂಕೇತವೆಂದು ನಾವು ನೋಡಿದ್ದೇವೆ. ಅಬ್ರಹಾಮನ ನಂತರ, ಅವನ ಮಗನಾದ ಇಸಾಕನ ಮೂಲಕ, ಇಸ್ರಾಯೇಲ್ಯರು ಎಂದು ಕರೆಯಲ್ಪಡುವ ಅವನ ವಂಶಸ್ಥರು, ಅಪಾರ ಸಂಖ್ಯೆಯ ಜನರಾಗಿ ವೃದ್ಧಿಯಾದರು ಆದರೆ ಐಗುಪ್ತದಲ್ಲಿ ಗುಲಾಮರಾಗಿದ್ದರು.

ಆದ್ದರಿಂದ ನಾವು ಈಗ ಇಸ್ರಾಯೇಲ್ಯರ ನಾಯಕನಾದ ಮೋಶೆ ಕೈಗೊಂಡ ನಾಟಕೀಯ ಹೋರಾಟಕ್ಕೆ ಬಂದಿದ್ದೇವೆ, ಇದನ್ನು ಸತ್ಯವೇದದ ವಿಮೋಚನಕಾಂಡ ಎಂಬ ಇಬ್ರೀಯ ವೇದದಲ್ಲಿ ದಾಖಲಿಸಲಾಗಿದೆ. ಸುಮಾರಿಗೆ ಕ್ರಿ.ಪೂ 1500 ರಲ್ಲಿ ಅಬ್ರಹಾಮನ ನಂತರ, ಐಗುಪ್ತದ 500 ವರ್ಷಗಳ ಗುಲಾಮಗಿರಿಯಿಂದ ಮೋಶೆಯು ಇಸ್ರಾಯೇಲ್ಯರನ್ನು ಹೇಗೆ ಹೊರಗೆ ಕರೆದೊಯ್ದನೆಂದು ದಾಖಲಿಸುತ್ತದೆ. ಐಗುಪ್ತದ ಫರೋಹನನ್ನು (ಆಡಳಿತಗಾರ) ಎದುರಿಸಲು ಮೋಶೆಗೆ ಸೃಷ್ಟಿಕರ್ತನು ಆಜ್ಞಾಪಿಸಿದ್ದನು ಮತ್ತು ಅದು ಇಬ್ಬರ ನಡುವೆ ಘರ್ಷಣೆಗೆ ಕಾರಣವಾಯಿತು, ಅದು ಐಗುಪ್ತದಲ್ಲಿ ಒಂಬತ್ತು ದೊಡ್ದರೋಗಗಳು ಅಥವಾ ವಿಪತ್ತುಗಳನ್ನು ತಂದಿತು. ಆದರೆ ಫರೋಹನು ಇಸ್ರಾಯೇಲ್ಯರನ್ನು ಬಿಡುಗಡೆಗೊಳಿಸಲು ಒಪ್ಪಲಿಲ್ಲ ಆದ್ದರಿಂದ ದೇವರು 10 ನೇ ಮತ್ತು ಅಂತಿಮವಾದ ದೊಡ್ಡರೋಗವನ್ನು ತರಲಿದ್ದಾನೆ. ಇಲ್ಲಿ10 ನೇ ರೋಗದ ಸಂಪೂರ್ಣ ವಿವರವಿದೆ.

ದೇವರು ಆದೇಶಿಸಿದ್ದೇನೆಂದರೆ 10 ನೇ ವಿಪತ್ತಿನಲ್ಲಿ ಸಂಹಾರಕ ದೂತನು (ಆತ್ಮ) ಐಗುಪ್ತದ ಎಲ್ಲಾ ಮನೆಗಳ ಮೂಲಕ ಹಾದುಹೋಗುವನು . ಕುರಿಮರಿಯನ್ನು ಬಲಿ ಕೊಟ್ಟ ಮನೆಗಳಲ್ಲಿ ಮತ್ತು ಅದರ ರಕ್ತವನ್ನು ಆ ಮನೆಯ ದ್ವಾರಗಳ ಮೇಲೆ ಹಚ್ಚಿದ ಮನೆಗಳನ್ನು ಹೊರತುಪಡಿಸಿ ಇಡೀ ಭೂಮಿಯಲ್ಲಿರುವ ಪ್ರತಿ ಮನೆಯ ಪ್ರತಿ ಚೊಚ್ಚಲ ಮಗನು ನಿರ್ದಿಷ್ಟ ರಾತ್ರಿಯಲ್ಲಿ ಸಾಯುತ್ತಾನೆ. ಇದನ್ನು ಫರೋಹನು ಪಾಲಿಸದಿದ್ದಲ್ಲಿ ಮತ್ತು ಕುರಿಮರಿಯ ರಕ್ತವನ್ನು ಅವನ ಬಾಗಿಲಿಗೆ ಹಚ್ಚದಿದ್ದರೆ, ಅವನ ಮಗ ಮತ್ತು ಸಿಂಹಾಸನದ ಬಾಧ್ಯಸ್ಥ ಸಾಯುವದರ ಮೂಲಕ ವಿನಾಶವನ್ನು ಕಾಣುವನು. ಮತ್ತು ಬಲಿಕೊಡಲ್ಪಟ್ಟ ಕುರಿಮರಿಯ ರಕ್ತವನ್ನು ಬಾಗಿಲಿನ ಚೌಕಟ್ಟುಗಳಲ್ಲಿ ಹಚ್ಚದಿದ್ದರೆ- ಐಗುಪ್ತದ ಪ್ರತಿಯೊಂದು ಮನೆಯೂ ತನ್ನ ಚೊಚ್ಚಲ ಮಗನನ್ನು ಕಳೆದುಕೊಳ್ಳುತ್ತದೆ. ಐಗುಪ್ತವು ರಾಷ್ಟ್ರೀಯ ದುರಂತವನ್ನು ಎದುರಿಸಿತು.

ಆದರೆ ಕುರಿಮರಿಯನ್ನು ಯಾಗ ಮಾಡಿದ ಮನೆಗಳಲ್ಲಿ ಮತ್ತು ಅದರ ರಕ್ತವನ್ನು ಮನೆ ಬಾಗಿಲಿಗೆ ಹಚ್ಚಲ್ಪಟ್ಟಿದ್ದರೆ ಎಲ್ಲರೂ ಸುರಕ್ಷಿತವಾಗಿರುತ್ತಾರೆ ಎಂಬ ವಾಗ್ದಾನವು ನೀಡಲ್ಪಟ್ಟಿತ್ತು. ಸಂಹಾರಕ ದೂತನು ಆ ಮನೆಯ ಮೇಲೆ ಹಾದುಹೋಗುವನು. ಆದ್ದರಿಂದ ಆ ದಿನವನ್ನು ಪಸ್ಕಹಬ್ಬ ಎಂದು ಕರೆಯಲಾಯಿತು (ಕುರಿಮರಿಯ ರಕ್ತವನ್ನು ಹಚ್ಚಿದ ಎಲ್ಲಾ ಮನೆಗಳ ಮೇಲೆ ಸಾವು ಹಾದುಹೋದ ಕಾರಣ).

ಪಸ್ಕಹಬ್ಬದ ಚಿಹ್ನೆ

ಈ ಕಥೆಯನ್ನು ಕೇಳಿದವರು ಬಾಗಿಲುಗಳ ಮೇಲಿನ ರಕ್ತವು ಸಂಹಾರಕ ದೂತನಿಗೆ ಸೂಚನೆಯಾಗಿದೆ ಎಂದು ಭಾವಿಸುತ್ತಾರೆ. ಆದರೆ 3500 ವರ್ಷಗಳ ಹಿಂದೆ ಬರೆದ ವೃತ್ತಾಂತದಿಂದ ತೆಗೆದುಕೊಂಡ ಕುತೂಹಲಕಾರಿ ವಿವರವನ್ನು ಗಮನಿಸಿ.

ಕರ್ತನು ಮೋಶೆಗೆ ಹೇಳಿದನು… “… ನಾನು ಕರ್ತನು. ನಿಮ್ಮ ಮನೆಗಳಿಗೆ ಹಚ್ಚಿರುವ ರಕ್ತವು ಒಂದು ವಿಶೇಷ ಸೂಚನೆಯಾಗಿದೆ. ನಾನು ಆ ರಕ್ತವನ್ನು ನೋಡಿದಾಗ ನಿಮ್ಮ ಮನೆಯನ್ನು ದಾಟಿಹೋಗುವೆನು.

ವಿಮೋಚನಕಾಂಡ 12:13

ದೇವರು ಬಾಗಿಲಿನ ಮೇಲೆ ರಕ್ತವನ್ನು ನೋಡಿದಾಗ ಸಾವು ಹಾದುಹೋಗುತ್ತದೆ, ರಕ್ತವು ದೇವರಿಗೆ ಸೂಚನೆಯಲ್ಲ. ಅದು ಸ್ಪಷ್ಟವಾಗಿ ಹೇಳುತ್ತದೆ, ರಕ್ತವು ‘ನಿಮಗೋಸ್ಕರವಾಗಿರುವ ಸಂಕೇತ’ – ಜನರು. ಈ ವಿವರವನ್ನು ಓದುವ ನಮ್ಮೆಲ್ಲರಿಗೂ ಇದು ಒಂದು ಸೂಚನೆಯಾ  ಗಿದೆ. ಆದರೆ ಅದು ಹೇಗೆ ಒಂದು ಸೂಚನೆಯಾಗಿದೆ? ನಂತರ ಕರ್ತನು ಅವರಿಗೆ ಹೀಗೆ ಆದೇಶಿಸಿದನು:

  27 ನೀವು ಅವ ರಿಗೆ–ಕರ್ತನು ಐಗುಪ್ತದೇಶದಲ್ಲಿ ಐಗುಪ್ತ್ಯರನ್ನು ಸಂಹರಿಸಿ ನಮ್ಮ ಮನೆಗಳನ್ನು ಕಾಪಾಡುವದಕ್ಕಾಗಿ ಇಸ್ರಾಯೇಲ್‌ ಮಕ್ಕಳ ಮನೆಗಳನ್ನು ದಾಟಿಹೋದ ಕರ್ತನ ಪಸ್ಕವೇ ಇದು ಎಂದು ನೀವು ಹೇಳಬೇಕು ಅಂದನು. ಆಗ ಜನರು ತಲೆಬಾಗಿಸಿ ಆರಾಧಿಸಿದರು.

ವಿಮೋಚನಕಾಂಡ 12: 24-27

ಪಸ್ಕಹಬ್ಬದಲ್ಲಿ ಕುರಿಮರಿಯೊಂದಿಗೆ ಯಹೂದಿ ಮನುಷ್ಯ

ಪ್ರತಿವರ್ಷವೂ ಅದೇ ದಿನ ಪಸ್ಕಹಬ್ಬವನ್ನು ಆಚರಿಸಲು ಇಸ್ರಾಯೇಲ್ಯರಿಗೆ ಆದೇಶಿಸಲಾಯಿತು. ಯಹೂದಿ ಕ್ಯಾಲೆಂಡರ್, ಹಿಂದೂ ಕ್ಯಾಲೆಂಡರ್ನಂತಹ ಚಂದ್ರನ ಕ್ಯಾಲೆಂಡರ್ ಆಗಿದೆ, ಆದ್ದರಿಂದ ಇದು ಪಾಶ್ಚಿಮಾತ್ಯ ಕ್ಯಾಲೆಂಡರ್ಗಿಂತ ಸ್ವಲ್ಪ ಭಿನ್ನವಾಗಿದೆ, ಮತ್ತು ಹಬ್ಬದ ದಿನವು ಪ್ರತಿ ವರ್ಷ ಪಾಶ್ಚಾತ್ಯ ಕ್ಯಾಲೆಂಡರ್ನಲ್ಲಿ ಬದಲಾಗುತ್ತದೆ. ಆದರೆ ಇಂದಿಗೂ, 3500 ವರ್ಷಗಳ ನಂತರವೂ, ಯಹೂದಿ ಜನರು ಈ ಘಟನೆಯ ನೆನಪಿಗಾಗಿ ಮತ್ತು ಆ ಸಮಯದಲ್ಲಿ ನೀಡಿದ ಆಜ್ಞೆಗೆ ವಿಧೇಯರಾಗಿ ತಮ್ಮ ವರ್ಷದ ಅದೇ ದಿನಾಂಕದಂದು ಪಸ್ಕಹಬ್ಬವನ್ನು ಆಚರಿಸುತ್ತಿದ್ದಾರೆ.

ಕರ್ತನಾದ ಯೇಸುವನ್ನು ಸೂಚಿಸುವ ಪಸ್ಕಹಬ್ಬದ ಚಿಹ್ನೆ

ಇತಿಹಾಸದ ಮೂಲಕ ಈ ಹಬ್ಬದ ಹಾದಿಯು ಅಸಾಧಾರಣವಾದದೆಂದು ನಾವು ಗಮನಿಸಬಹುದು. ಇದನ್ನು ಸುವಾರ್ತೆಯಲ್ಲಿ ನೀವು ಗಮನಿಸಬಹುದು, ಅಲ್ಲಿ ಅದು ಯೇಸುವಿನ ಬಂಧನ ಮತ್ತು ವಿಚಾರಣೆಯ ವಿವರಗಳನ್ನು ದಾಖಲಿಸುತ್ತದೆ (ಆ ಮೊದಲ ಪಸ್ಕಹಬ್ಬದ ವ್ಯಾದಿಯಾಗಿ 1500 ವರ್ಷಗಳ ನಂತರ):

28 ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ನ್ಯಾಯಾಲಯಕ್ಕೆ ಸಾಗಿಸಿಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ತಾವು ಮೈಲಿಗೆಯಾಗಿ ಪಸ್ಕದ ಊಟ ಮಾಡುವದಕ್ಕೆ ಅಡ್ಡಿಯಾದೀತೆಂದು ಅವರು ನ್ಯಾಯಾಲಯದ ಒಳಗೆ ಹೋಗಲಿಲ್ಲ

ಯೋಹಾನ 18:28

39 ಆದರೆ ಪಸ್ಕ ದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟುಕೊಡುವ ಪದ್ಧತಿ ಉಂಟಷ್ಟೆ; ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವದು ನಿಮಗೆ ಇಷ್ಟವೋ ಎಂದು ಕೇಳಿ ದನು.

ಯೋಹಾನ 18:39

ಬೇರೆ ರೀತಿಯಲ್ಲಿ ಹೇಳುವುದಾದರೆ, ಯಹೂದಿ ಕ್ಯಾಲೆಂಡರ್ನಲ್ಲಿ ಪಸ್ಕಹಬ್ಬದ ದಿನದಂದು  ಯೇಸುವನ್ನು ಬಂಧಿಸಿ ಶಿಲುಬೆಗೇರಿಸಲು ಕಳುಹಿಸಲಾಯಿತು. ಯೇಸುವಿಗೆ ನೀಡಲಾದ ಶಿರೋನಾಮೆಗಳಲ್ಲಿ ಒಂದು

  29 ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ–ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.
30 ನನ್ನ ಹಿಂದೆ ಒಬ್ಬ ಮನುಷ್ಯನು ಬರು ತ್ತಾನೆ; ಆತನು ನನಗಿಂತ ಮೊದಲೇ ಇದ್ದದರಿಂದ ನನಗಿಂತ ಮುಂದಿನವನು ಎಂದು ನಾನು ಯಾರ ವಿಷಯದಲ್ಲಿ ಹೇಳಿದೆನೋ ಆತನೇ ಈತನು.

ಯೋಹಾನ 1: 29-30

ಪಸ್ಕಹಬ್ಬವು ನಮಗೆ ಹೇಗೆ ಸೂಚನೆಯಾಗಿದೆ ಎಂಬುದನ್ನು ಇಲ್ಲಿ ನಾವು ನೋಡುತ್ತೇವೆ. ಯೇಸು, ದೇವರ ಕುರಿಮರಿ’  ವರ್ಷದ ಅದೇ ದಿನದಲ್ಲಿ  ಶಿಲುಬೆಗೇರಿಸಲ್ಪಟ್ಟನು (ಅಂದರೆ ಯಾಗಮಾಡಲ್ಪಟ್ಟನು). ಅದು 1500 ವರ್ಷಗಳ ಹಿಂದೆ ಸಂಭವಿಸಿದ ಮೊದಲ ಪಸ್ಕಹಬ್ಬದ ನೆನಪಿಗಾಗಿ ಯಹೂದಿಗಳೆಲ್ಲರೂ ಕುರಿಮರಿಯನ್ನು ಬಲಿ ಕೊಡುತ್ತಿದ್ದರು. ಇದು ಪ್ರತಿ ವರ್ಷ ಸಂಭವಿಸುವ ಎರಡು ರಜಾದಿನಗಳ ವಾರ್ಷಿಕ ಸಮಯವನ್ನು ವಿವರಿಸುತ್ತದೆ. ಯಹೂದಿ ಪಸ್ಕಹಬ್ಬದ ಉತ್ಸವ ಪ್ರತಿವರ್ಷವೂ ಪುನರುಥಾನದ ಹಬ್ಬದಂತೆಯೇ ಅದೇ ಸಮಯದಲ್ಲಿ ನಡೆಯುತ್ತದೆ – ಕ್ಯಾಲೆಂಡರನ್ನು ಪರಿಶೀಲಿಸಿ. (ಯಹೂದಿ ಕ್ಯಾಲೆಂಡರ್‌ನಲ್ಲಿ ಚಂದ್ರ-ಆಧಾರಿತ ಅಧಿಕ ವರ್ಷಗಳ ಚಕ್ರದಿಂದಾಗಿ ಪ್ರತಿ 19 ನೇ ವರ್ಷದಲ್ಲಿ ಒಂದು ತಿಂಗಳ ವ್ಯತ್ಯಾಸವಿದೆ). ಇದರಿಂದಲೇ ಪ್ರತಿವರ್ಷ ಪುನರುಥಾನ ಹಬ್ಬದ ದಿನವುಬದಲಾಗುತ್ತಿರುತ್ತವೆ ಏಕೆಂದರೆ ಇದು ಪಸ್ಕಹಬ್ಬದ ಮೇಲೆ ಆಧಾರಗೊಂಡಿದೆ, ಮತ್ತು ಪಸ್ಕಹಬ್ಬವು ಯಹೂದಿಗಳ  ಕ್ಯಾಲೆಂಡರನ್ನು ಅವಲಂಬಿಸಿದೆ.  ಅದು ಪಾಶ್ಚಾತ್ಯ ಕ್ಯಾಲೆಂಡರ್ಗಿಂತ ವರ್ಷವನ್ನು ವಿಭಿನ್ನವಾಗಿ ಲೆಕ್ಕಾಚಾರ ಮಾಡುತ್ತದೆ.

ಸೂಚನೆಗಳು’ ಏನು ಮಾಡುತ್ತವೆ ಎಂಬುದರ ಕುರಿತು ಈಗ ಒಂದು ನಿಮಿಷ ಯೋಚಿಸಿ. ಇಲ್ಲಿ ಕೆಳಗೆ ಕೆಲವು ಚಿಹ್ನೆಗಳನ್ನು ನೀವು ನೋಡಬಹುದು.

ಭಾರತದ ಸಂಕೇತ

ಮೆಕ್ಡೊನಾಲ್ಡ್ಸ್ ಮತ್ತು ನೈಕ್ ಬಗ್ಗೆ ಯೋಚಿಸುವಂತೆ ಮಾಡಲು ವಾಣಿಜ್ಯ ಚಿಹ್ನೆಗಳು

ಧ್ವಜವು ಭಾರತದ ಚಿಹ್ನೆ ಅಥವಾ ಸಂಕೇತವಾಗಿದೆ. ಕಿತ್ತಳೆ ಮತ್ತು ಹಸಿರು ಪಟ್ಟಿಯನ್ನು ಅಡ್ಡವಾಗಿ ಹೊಂದಿರುವ ಆಯತವನ್ನು ನಾವು ‘ನೋಡುವುದಿಲ್ಲ’. ಇಲ್ಲ, ನಾವು ಧ್ವಜವನ್ನು ನೋಡುವಾಗ ಭಾರತದ ಬಗ್ಗೆ ಯೋಚಿಸುತ್ತೇವೆ. ‘ಗೋಲ್ಡನ್ ಆರ್ಚ್‌’ಗಳ ಚಿಹ್ನೆಯು ನಮ್ಮನ್ನು ಮೆಕ್‌ಡೊನಾಲ್ಡ್ಸ್ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ನಡಾಲ್ ಅವರ ತಲೆಯಪಟ್ಟಿಯಲ್ಲಿರುವ ‘√’ ಚಿಹ್ನೆಯು ನೈಕ್‌ನ  ಸಂಕೇತವಾಗಿದೆ. ನಾವು ನಡಾಲ್ನಲ್ಲಿ ಈ ಚಿಹ್ನೆಯನ್ನು ನೋಡುವಾಗ ಅವರ ಬಗ್ಗೆ ಯೋಚಿಸಬೇಕೆಂದು ನೈಕ್ ಬಯಸುತ್ತಾನೆ. ನಮ್ಮ ಆಲೋಚನೆಯನ್ನು ಅಪೇಕ್ಷಿತ ವಸ್ತುವಿಗೆ ನಿರ್ದೇಶಿಸಲು ಚಿಹ್ನೆಗಳು ನಮ್ಮ ಮನಸ್ಸಿನಲ್ಲಿ ಸೂಚಕಗಳಾಗಿವೆ.

ಚಿಹ್ನೆ ಜನರಿಗೆ, ಸೃಷ್ಟಿಕರ್ತನಾದ ದೇವರಿಗೆ ಅಲ್ಲ ಎಂದು ಇಬ್ರೀಯ ವೇದದ ವಿಮೋಚನಕಾಂಡದಲ್ಲಿನ ಪಸ್ಕಹಬ್ಬದ ವಿವರವು  ಸ್ಪಷ್ಟವಾಗಿ ಹೇಳುತ್ತದೆ  (ಆದರೂ ಅವನು ರಕ್ತವನ್ನು ಹುಡುಕುತ್ತಾನೆ ಮತ್ತು ಅದನ್ನು ನೋಡಿದರೆ ಮನೆಯ ಮೇಲೆ ಹಾದು ಹೋಗುತ್ತಾನೆ). ಎಲ್ಲಾ ಚಿಹ್ನೆಗಳಂತೆ, ನಾವು ಪಸ್ಕಹಬ್ಬವನ್ನು ನೋಡುವಾಗ ನಾವು ಏನು ಯೋಚಿಸಬೇಕೆಂದು ಅವನು ಬಯಸಿದನು? ಅದೇ ದಿನ ಯೇಸುವಿನ ಕುರಿಮರಿಗಳನ್ನು ಬಲಿ ಕೊಡುವ ಗಮನಾರ್ಹ ಸಮಯದೊಂದಿಗೆ, ಇದು ಯೇಸುವಿನ ತ್ಯಾಗಕ್ಕೆ ಒಂದು ಸೂಚಕವಾಗಿದೆ.

ನಾನು ಕೆಳಗೆ ತೋರಿಸಿದಂತೆ ಇದು ನಮ್ಮ ಮನಸ್ಸಿನಲ್ಲಿ ಕೆಲಸ ಮಾಡುತ್ತದೆ. ಚಿಹ್ನೆಯು ನಮ್ಮನ್ನು ಯೇಸುವಿನ ತ್ಯಾಗದ ಕಡೆಗೆ ತೋರಿಸುತ್ತದೆ.

ಯೇಸುವಿನ ತ್ಯಾಗದ ನಿಖರವಾದ ಸಮಯವು ಪಸ್ಕಹಬ್ಬದ ಸಂಕೇತವಾಗಿದೆ

ಆ ಮೊದಲ ಪಸ್ಕಹಬ್ಬದಲ್ಲಿ ಕುರಿಮರಿಗಳನ್ನು ಬಲಿ ನೀಡಲಾಯಿತು ಮತ್ತು ರಕ್ತವು ಹರಡಿತು ಆದ್ದರಿಂದ ಜನರು ಬದುಕಲು ಸಾಧ್ಯವಾಯಿತು. ಮತ್ತು ಹೀಗೆ, ಯೇಸುವನ್ನು ಸೂಚಿಸುವ ಈ ಚಿಹ್ನೆಯು, ‘ದೇವರ ಕುರಿಮರಿ’ ಯನ್ನು ಸಹ ಸಾವಿಗೆ ಯಜ್ಞವಾಗಿ ನೀಡಲಾಯಿತು ಮತ್ತು ಅವನ ರಕ್ತ ಚೆಲ್ಲಲಾಯಿತು ಆದ್ದರಿಂದ ನಾವು ಜೀವನವನ್ನು ಪಡೆಯಬಹುದು ಎಂದು ನಮಗೆ ತಿಳಿಸಲಾಗಿದೆ.

ಅಬ್ರಹಾಮನ ಸೂಚನೆಯಲ್ಲಿ ಅಬ್ರಹಾಮನು ತನ್ನ ಮಗನ ಯಜ್ಞದಿಂದ ಪರೀಕ್ಷಿಸಲ್ಪಟ್ಟ ಸ್ಥಳ ಮೊರಿಯಾ ಪರ್ವತ. ಕುರಿಮರಿ ಸಾಯಲ್ಪಟ್ಟಿತು ಆದ್ದರಿಂದ ಅಬ್ರಹಾಮನ ಮಗನು ಬದುಕಲು ಸಾಧ್ಯವಾಯಿತು.

ಅಬ್ರಹಾಮನ ಸೂಚನೆಯು ಸ್ಥಳವನ್ನು ತೋರಿಸುತ್ತಿತ್ತು

ಮೋರಿಯಾ ಪರ್ವತವು ಯೇಸುವನ್ನು ಬಲಿಕೊಟ್ಟ ಅದೇ ಸ್ಥಳವಾಗಿತ್ತು. ಆ ಸಂಕೇತವು ಸ್ಥಳವನ್ನು ಸೂಚಿಸುವ ಮೂಲಕ ಅವನ ಸಾವಿನ ಅರ್ಥವನ್ನು ನಮಗೆ ‘ನೋಡುವಂತೆ’ ಮಾಡುವದಾಗಿದೆ. ಪಸ್ಕಹಬ್ಬದಲ್ಲಿ ನಾವು ಯೇಸುವಿನ ತ್ಯಾಗಕ್ಕೆ ಮತ್ತೊಂದು ಸೂಚನೆಯನ್ನು ಕಾಣುತ್ತೇವೆ – ವರ್ಷದ ಅದೇ ದಿನವನ್ನು ಸೂಚಿಸುವ ಮೂಲಕ. ಕುರಿಮರಿ ಯಜ್ಞವನ್ನು ಮತ್ತೊಮ್ಮೆ ಬಳಸಲಾಗುತ್ತದೆ – ಯೇಸುವಿನ ಯಜ್ಞವನ್ನು ಸೂಚಿಸಲು- ಇದು ಕೇವಲ ಒಂದು ಘಟನೆಯ ಹೊಂದಿಕೆಯಲ್ಲ ಎಂದು ತೋರಿಸುತ್ತದೆ. ಯೇಸುವಿನ ಯಜ್ಞವನ್ನು ಸೂಚಿಸಲು. ಎರಡು ವಿಭಿನ್ನ ರೀತಿಯಲ್ಲಿ (ಸ್ಥಳದ ಮೂಲಕ ಮತ್ತು ಸಮಯದ ಮೂಲಕ) ಪವಿತ್ರ ಇಬ್ರೀಯ ವೇದಗಳಲ್ಲಿನ ಎರಡು ಪ್ರಮುಖ ಹಬ್ಬಗಳು ನೇರವಾಗಿ ಯೇಸುವಿನ ತ್ಯಾಗವನ್ನು ಸೂಚಿಸುತ್ತವೆ. ಇತಿಹಾಸದಲ್ಲಿ ಬೇರೆ ಯಾವುದೇ ವ್ಯಕ್ತಿಯ ಸಾವು ಅಂತಹ ನಾಟಕೀಯ ಶೈಲಿಯಲ್ಲಿ ಅಂತಹ ಸಮಾನಾಂತರಗಳಿಂದ ಮುನ್ಸೂಚನೆಯಾಗಿರುವ ಬಗ್ಗೆ ನನಗೆ ಯೋಚಿಸಲಾಗುವುದಿಲ್ಲ. ನಿಮ್ಮಿಂದ ಸಾಧ್ಯವೆ?

ನಿಜವಾಗಿಯೂ ಯೇಸುವಿನ ಯಾಗವು ದೇವರಿಂದ ರಚಿಸಲ್ಪಟ್ಟಿದೆ ಮತ್ತು ನೇಮಿಸಲ್ಪಟ್ಟಿದೆ  ಎಂಬ ಭರವಸವನ್ನು ನಾವು ಹೊಂದಲು ಈ ಚಿಹ್ನೆಗಳನ್ನು ನೀಡಲಾಗಿದೆ. ಯೇಸುವಿನ ತ್ಯಾಗವು ನಮ್ಮನ್ನು ಸಾವಿನಿಂದ ಹೇಗೆ ರಕ್ಷಿಸುತ್ತದೆ ಮತ್ತು ಪಾಪದಿಂದ ನಮ್ಮನ್ನು ಹೇಗೆ ಶುದ್ಧೀಕರಿಸುತ್ತದೆ ಎಂಬುದನ್ನು ದೃಶ್ಯೀಕರಿಸಲು ಸಹಾಯ ಮಾಡುವ ಒಂದು ಉದಾಹರಣೆಯನ್ನು ನೀಡುವಂತಾಗಿದೆ – ಅದನ್ನು ಸ್ವೀಕರಿಸುವ ಎಲ್ಲರಿಗೂ ದೇವರಿಂದ ದೊರಕುವ ಉಡುಗೊರೆಯಾಗಿದೆ.

ಮುಖ್ಯಪದಗಳು: ಕಾಳಿ, ಪಸ್ಕಹಬ್ಬ, ಕುರಿಮರಿ, ಅಬ್ರಹಾಮ, ಯಜ್ಞ

Leave a Reply

Your email address will not be published. Required fields are marked *