ಕುಂಭ ಮೇಳ ಹಬ್ಬ : ಪಾಪದ ಕೆಟ್ಟ ಸುದ್ಧಿಯನ್ನು ಮತ್ತು ನಮ್ಮ ಶುದ್ಧೀಕರಣಕ್ಕಾಗಿ ಅಗತ್ಯತೆಯನ್ನು ತೋರಿಸುತ್ತದೆ


ಮಾನವ ಚರಿತ್ರೆಯಲ್ಲಿ ಅತಿದೊಡ್ಡ ಜಾತ್ರೆಯು ಭಾರತದಲ್ಲಿ ಮತ್ತು ಅದು ಹನ್ನೆರಡು ವರುಷಗಳಲ್ಲಿ ಒಂದು ಸಾರಿ ನಡೆಯುತ್ತದೆ. ಅಲಹಬಾದ್ ಪಟ್ಟಣದ ಗಂಗಾ ನದಿ ತೀರದ ಬಳಿಯಲ್ಲಿ 55 ದಿನಗಳು ಕುಂಭ ಮೇಳ ಹಬ್ಬದ ಸಮಯದಲ್ಲಿ ಸುಮಾರು 100 ದಶಲಕ್ಷ ಜನರು ಕೂಡಿ ಬರುವರು, ಇಂಥಾ ಕಳೆದ ಹಬ್ಬದ ಆರಂಭದ ದಿನದಲ್ಲಿ ಸುಮಾರು ಹತ್ತು ದಶಲಕ್ಷ ಜನರು ಗಂಗಾ ನದಿಯಲ್ಲಿ ಸ್ನಾನ ಮಾಡಿದರು.

This image has an empty alt attribute; its file name is mela.jpg
ಕುಂಭ ಮೇಳ ಹಬ್ಬಕ್ಕಾಗಿ ಗಂಗಾ ತೀರದಲ್ಲಿ ಭಕ್ತಾಧಿಗಳು

 ಎನ್.ಡಿ.ಟಿವಿ ಪ್ರಕಾರ, ಕುಂಭ ಮೇಳದ ದಿನಗಳಲ್ಲಿ ಸುಮಾರು 20 ದಶಲಕ್ಷ ಜನರು ಸ್ನಾನ ಮಾಡುವರೆಂದು ಸಂಘಟಿಕರು ನಿರೀಕ್ಷಿಸುವರು, ಈ ಕುಂಭ ಮೇಳದ ಸಂಖ್ಯೆಗಳು, ಮುಸಲ್ಮಾನರು ಮೆಕ್ಕಾಗೆ ಮಾಡುವ ವಾರ್ಷಿಕ ಹಜ್ ಜಾತ್ರೆಯ ಸಂಖ್ಯೆಯನ್ನು ಮೀರುತ್ತವೆ, ಇದು ಪ್ರತಿ ವರುಷ ‘ಕೇವಲ’ 3-4 ದಶಲಕ್ಷ ಆಗಿರುತ್ತದೆ.

ನಾನು ಅಲಹಬಾದ್ ಗೆ ಭೇಟಿ ನೀಡಿದ್ದೇನೆ ಮತ್ತು ಇಷ್ಟೊಂದು ಲಕ್ಷಾಂತರ ಜನರಿಗೆ ಸಾಕಾಗುವಷ್ಟು ಯಾವುದೇ ಕಟ್ಟಡಗಳು ಇಲ್ಲದೆ, ಒಮ್ಮೆಯೇ ಅಲ್ಲಿ ಹೇಗೆ ಇರುತ್ತಾರೆಂದು ನಾನು ಊಹಿಸಿಕೊಳ್ಳಲು ಆಗುವದಿಲ್ಲ, ಯಾಕೆಂದರೆ ಈ ಪಟ್ಟಣವು ಅಷ್ಟೊಂದು ದೊಡ್ಡದಲ್ಲ. ಕಳೆದ ಹಬ್ಬದಲ್ಲಿ ಈ ಜನರ ದೈನಂದಿನ ಅಗತ್ಯತೆಗಳನ್ನು ಪೂರೈಸಲು ಅಂದರೆ ಶೌಚಾಲಯಗಳು ಮತ್ತು ವೈದ್ಯರ ವ್ಯವಸ್ಥೆ ಮಾಡಲು ಹೆಚ್ಚಿನ ಪ್ರಯತ್ನಗಳು ಮಾಡಲಾಯಿತೆಂದು ಬಿ.ಬಿ.ಸಿ ವರದಿ ಮಾಡಿತು.

ಹಾಗಾದರೆ, 100 ದಶಲಕ್ಷ ಜನರು ಗಂಗಾ ನದಿಯಲ್ಲಿ ಸ್ನಾನ ಮಾಡಲು ಯಾಕೆ 120 ದಶಕೋಟಿ ರೂಪಾಯಿಗಳನ್ನು ಖರ್ಚು ಮಾಡುವರು? ನೇಪಾಳದಿಂದ ಬಂದ ಓರ್ವ ಭಕ್ತಾಧಿ ಬಿ.ಬಿ.ಸಿ ಗೆ ಹೀಗೆ ತಿಳಿಸಿದನು,

“ನಾನು ನನ್ನ ಪಾಪಗಳನ್ನು ತೊಳೆದುಕೊಂಡಿದ್ದೇನೆ.”

ರೂಟರ್ಸ್ ಹೀಗೆ ವರದಿ ಸಲ್ಲಿಸುತ್ತದೆ,

“ಈ ಜೀವನ ಮತ್ತು ಹಳೆಯ ಜೀವನದಿಂದ ನನ್ನ ಎಲ್ಲಾ ಪಾಪಗಳನ್ನು ನಾನು ತೊಳೆದು ಹಾಕುತ್ತೇನೆ,” ಎಂದು ಬೆತ್ತಲೆಯಾಗಿ ಅಲೆದಾಡುತ್ತಿದ್ದ ಓರ್ವ ಸ್ವಾಮಿ ಶಂಕರಾನಂದ ಸರಸ್ವತಿ, 77, ಚಳಿಯಲ್ಲಿ ನಡುಗುತ್ತಾ ಹೇಳಿದರು.

ಎನ್.ಡಿ.ಟಿವಿ ನಮಗೆ ಈ ರೀತಿ ಹೇಳಿತು,

ಪವಿತ್ರ ನೀರಿನಲ್ಲಿ ಮುಳುಗುವದರಿಂದ ತಮ್ಮನ್ನು ಪಾಪಗಳಿಂದ ಶುದ್ಧೀಕರಿಸುತ್ತದೆ ಎಂದು ನಂಬುವ ಆರಾಧಕರು.

ಕಳೆದ ಹಬ್ಬದಲ್ಲಿ ಬಿ.ಬಿ.ಸಿ ಸಂದರ್ಶನದಲ್ಲಿ ಯಾತ್ರಿಯಾದ ಮೋಹನ್ ಶರ್ಮಾ ಹೀಗೆ ಹೇಳಿದರು, “ನಾವು ಉಂಟು ಮಾಡಿದ ಪಾಪಗಳು ಇಲ್ಲಿ ತೊಳೆಯಲ್ಪಟ್ಟಿವೆ.”

‘ಪಾಪ’ವನ್ನು ಕುರಿತು ಮಾನವನ ಸಾರ್ವತ್ರಿಕ ಗ್ರಹಿಕೆ

ಬೇರೆ ಮಾತುಗಳಲ್ಲಿ ಹೇಳುವದಾದರೆ ಲಕ್ಷಾಂತರ ಜನರು ಹಣವನ್ನು ಖರ್ಚುಮಾಡಿ, ಜನ ಸಂದಣಿಯಿರುವ ರೈಲುಗಳಲ್ಲಿ ಪ್ರಯಾಣ ಮಾಡಿ, ಇಕ್ಕಟ್ಟಿನ ಪರಿಸ್ಥಿತಿಯನ್ನು ಸಹಿಸಿಕೊಂಡು ತಮ್ಮ ಪಾಪಗಳನ್ನು ‘ತೊಳೆಯುವದಕ್ಕಾಗಿ’ ಗಂಗಾ ನದಿಯಲ್ಲಿ ಸ್ನಾನ ಮಾಡುವರು. ಈ ಭಕ್ತಾಧಿಗಳು ಏನು ಮಾಡುತ್ತಿದ್ದಾರೆಂದು ನೋಡುವದಕ್ಕೆ ಮೊದಲು, ತಮ್ಮ ಸ್ವಂತ ಜೀವಿತಗಳಲ್ಲಿ ಗುರುತಿಸಿರುವ ಪಾಪದ ಸಮಸ್ಯೆಯನ್ನು ಪರಿಗಣಿಸೋಣ.  

ಶ್ರೀ ಸತ್ಯ ಸಾಯಿ ಬಾಬಾ ಮತ್ತು ‘ಸರಿ’ ಮತ್ತು ‘ತಪ್ಪು’

ಹಿಂದು ಬೋಧಕನಾದ ಶ್ರೀ ಸಾಯಿ ಸತ್ಯ ಬಾಬಾ ರವರ ಬರಹಗಳನ್ನು ನಾನು ಓದಿದ್ದೇನೆ. ಅವರ ನೈತಿಕ ಬೋಧನೆಗಳು ಆಶ್ಚರ್ಯವನ್ನುಂಟುಮಾಡುವದನ್ನು ನಾನು ನೋಡಿದ್ದೇನೆ. ಅವರ ಬೋಧನೆಗಳನ್ನು ಈ ಕೆಳಗೆ ಸಾರಾಂಶ ಮಾಡಿದ್ದೇನೆ. ನೀವು ಅವುಗಳನ್ನು ಓದುವಾಗ ನಿಮ್ಮಷ್ಟಕ್ಕೆ ನೀವು ಹೀಗೆ ಕೇಳಿಕೊಳ್ಳಿರಿ, “ಇವು ಜೀವನವನ್ನು ನಡೆಸಲು ಒಳ್ಳೆಯ ನೈತಿಕ ನಿಯಮಗಳಾಗಿವೆಯೋ? ನಾನು ಅವುಗಳಂತೆ ನಡೆಯಬೇಕೋ?

“ಮತ್ತು ಧರ್ಮ ( ನಮ್ಮ ನೈತಿಕ ಕರ್ತವ್ಯ ) ಎಂದರೇನು? ನೀವು ಬೋಧಿಸುವದನ್ನು ಅಭ್ಯಾಸ ಮಾಡುವದು, ನೀವು ಹೀಗೆ ಮಾಡಬೇಕೆಂದು ಹೇಳಿದಂತೆಯೇ ಅದನ್ನು ಮಾಡುವದು, ತತ್ವಗಳನ್ನು ಕಾಪಾಡಿಕೊಳ್ಳುವದು ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳುವದು. ಸದ್ಗುಣವನ್ನು ಸಂಪಾದಿಸಿಕೊಳ್ಳಿ, ಧರ್ಮನಿಷ್ಠೆಯನ್ನು ಹಂಬಲಿಸಿ; ದೇವರ ಭಯದಲ್ಲಿ ನಡೆದುಕೊಳ್ಳಿರಿ, ದೇವರನ್ನು ತಲುಪಲು ಬದುಕಿರಿ: ಇದೇ ಧರ್ಮ”

ಸತ್ಯ ಸಾಯಿ ಸ್ಪೀಕ್ಸ್ 4, ಪು, 339

 “ನಿಮ್ಮ ಕರ್ತವ್ಯವು ನಿಜವಾಗಿ ಏನಾಗಿದೆ? …    .

  • ಮೊದಲನೆಯದು, ಪ್ರೀತಿ, ಗೌರವ ಮತ್ತು ಕೃತಜ್ಞತೆಯಿಂದ ನಿಮ್ಮ ತಂದೆತಾಯಿಗಳನ್ನು ಸಲಹಿರಿ.
  • ಎರಡನೆಯದು, ಸತ್ಯವನ್ನೇ ಆಡಿರಿ ಮತ್ತು ಸದ್ಗುಣವುಳ್ಳವರಾಗಿ ನಡೆದುಕೊಳ್ಳಿರಿ.
  • ಮೂರನೆಯದು, ನಿಮಗೆ ಕಳೆಯಲು ಸ್ವಲ್ಪ ಸಮಯವಿರುವಾಗೆಲ್ಲಾ, ನಿಮ್ಮ ಮನಸ್ಸಿಲ್ಲಿರುವ ರೂಪದಿಂದ ದೇವರ ಹೆಸರನ್ನು ಉಚ್ಚರಿಸಿ.
  • ನಾಲ್ಕನೆಯದು, ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವದರಲ್ಲಿ ಅಥವಾ ಇತರರಲ್ಲಿ ತಪ್ಪುಗಳನ್ನು ಹುಡುಕುವ ಪ್ರಯತ್ನದಲ್ಲಿ ಎಂದಿಗೂ ತೊಡಗಿಸಿಕೊಳ್ಳಬೇಡಿರಿ.
  • ಅಂತಿಮವಾಗಿ, ಯಾವುದೇ ರೀತಿಯಲ್ಲಿ ಇತರರಿಗೆ ನೋವನ್ನುಂಟು ಮಾಡಬೇಡಿರಿ.”

ಸತ್ಯ ಸಾಯಿ ಸ್ಪೀಕ್ಸ್ 4, ಪುಟ 348 – 349

“ಯಾವನಾದರೂ ಅಹಂಕಾರವನ್ನು ನಿಗ್ರಹಿಸಿದರೆ, ತನ್ನ ಸ್ವಾರ್ಥದ ಆಸೆಗಳನ್ನು ಜಯಿಸಿ, ತನ್ನ ಮೃಗದ ಭಾವನೆಗಳನ್ನು ಮತ್ತು ಪ್ರಚೋಧನೆಗಳನ್ನು ನಾಶಮಾಡುವವನು ಮತ್ತು ದೇಹವನ್ನು ಸ್ವಾರ್ಥವೆಂದು ಪರಿಗಣಿಸಿ ಸ್ವಾಭಾವಿಕ ಪ್ರವೃತ್ತಿಯನ್ನು ಬಿಟ್ಟುಬಿಡುವವನು, ಖಂಡಿತವಾಗಿ ಧರ್ಮದ ಹಾದಿಯಲ್ಲಿದ್ದಾನೆ.” ಧರ್ಮ ವಾಹಿನಿ, ಪು.4

ನಾನು ಇವುಗಳನ್ನು ಓದಿದಾಗ, ಸರಳ ನೈತಿಕ ಕರ್ತವ್ಯದಂತೆ ಈ ನಿಯಮಗಳನ್ನು ನಾನು ಅನುಸರಿಸಬೇಕೆಂದು ತಿಳಿದುಕೊಂಡೆನು. ನೀವು ಇದಕ್ಕೆ ಒಪ್ಪಿಕೊಳ್ಳುವದಿಲ್ಲವೋ? ಆದರೆ ನೀವು ಇವುಗಳಂತೆ ನಿಜವಾಗಿ ನಡೆದುಕೊಳ್ಳುತ್ತಿದ್ದೀರೋ? ನೀವು (ಮತ್ತು ನಾನು) ಪರೀಕ್ಷಿಸಿಕೊಂಡಿದ್ದೇವೋ? ಮತ್ತು ಇಂಥ ಒಳ್ಳೆಯ ಬೋಧನೆಗಳಿಗೆ ತಪ್ಪಿದರೆ ಅಥವಾ ನಡೆದುಕೊಳ್ಳದೆ ಇದ್ದರೆ ಏನಾಗುತ್ತದೆ? ಶ್ರೀ ಸತ್ಯ ಸಾಯಿ ಬಾಬಾ ಈ ರೀತಿಯಲ್ಲಿ ಈ ಪ್ರಶ್ನೆಗೆ ಉತ್ತರ ಕೊಡುವದರ ಮೂಲಕ ಮುಂದುವರೆಸುತ್ತಾರೆ.

“ಸಾಮಾನ್ಯವಾಗಿ, ನಾನು ವಿನಯವಾಗಿ ಮಾತನಾಡುತ್ತೇನೆ, ಆದರೆ ಶಿಸ್ತಿನ ಈ ವಿಷಯದಲ್ಲಿ, ನಾನು ಯಾವುದೇ ರಿಯಾಯಿತಿಗಳನ್ನು ಕೊಡುವದಿಲ್ಲ… ನಾನು ಕಟ್ಟುನಿಟ್ಟಿನ ವಿಧೇಯತೆಗೆ ಒತ್ತಾಯಪಡಿಸುತ್ತೇನೆ. ನಿಮ್ಮ ಮಟ್ಟವನ್ನು ಸರಿ ಹೊಂದಿಸಲು ಕಠಿಣತೆಯನ್ನು ಕಡಿಮೆ ಮಾಡುವದಿಲ್ಲ.” ಸ

ತ್ಯ ಸಾಯಿ ಸ್ಪೀಕ್ಸ್  2, ಪುಟ 186

ಒಂದುವೇಳೆ ನೀವು ಈ ಬೇಡಿಕೆಗಳನ್ನು ಪೂರೈಸಿದರೆ ಇಂಥ ಮಟ್ಟದ ಕಠಿಣತೆಯು ಒಳ್ಳೆಯದು. ಆದರೆ ಒಂದುವೇಳೆ ನೀವು ಈ ಬೇಡಿಕೆಗಳನ್ನು ಪೂರೈಸದೆ ಇದ್ದರೆ ಏನಾಗುತ್ತದೆ? ಇಲ್ಲೇ ‘ಪಾಪದ’ ಪರಿಕಲ್ಪನೆಯು ಬರುತ್ತದೆ. ನಾನು ನೈತಿಕ ಗುರಿಯನ್ನು ತಪ್ಪಿದರೆ ಅಥವಾ ನಾನು ಮಾಡಬೇಕಾದದ್ದನ್ನು ತಿಳಿದು ಮಾಡದೆ ಇದ್ದರೆ, ಆಗ ನಾನು ‘ಪಾಪ’ ಮಾಡುತ್ತೇನೆ ಮತ್ತು ನಾನು ಪಾಪಿಯಾಗಿದ್ದೇನೆ. ತಮಗೆ ‘ಪಾಪಿಗಳೆಂದು’ ಇತರರು ಹೇಳುವದನ್ನು ಒಬ್ಬರಾದರೂ ಇಷ್ಟಪಡುವದಿಲ್ಲ – ಇದು ನಮ್ಮನ್ನು ತೊಂದರೆ ಮತ್ತು ತಪ್ಪಿತಸ್ಥರನ್ನಾಗಿ ಮಾಡುತ್ತದೆ ಮತ್ತು ಈ ಎಲ್ಲಾ ಆಲೋಚನೆಗಳಿಗೆ ನೆಪಕೊಡಲು ಪ್ರಯತ್ನಿಸುವಲ್ಲಿ ಹೆಚ್ಚಿನ ಮಾನಸಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ವ್ಯಯಮಾಡುತ್ತೇವೆ. ಬಹುಶಃ ನಾವು ಸತ್ಯ ಸಾಯಿ ಬಾಬಾರನ್ನು ಹೊರತು ಪಡಿಸಿ ಬೇರೊಬ್ಬ ಬೋಧಕರನ್ನು ಹುಡುಕುತ್ತೇವೆ, ಆದರೆ ಅವರು ‘ಒಳ್ಳೆಯ’ ಬೋಧಕರಾಗಿದ್ದರೆ, ಅವರ ನೈತಿಕ ನಿಯಮಗಳು ಹೆಚ್ಚಿನಾಂಶ ಇದೇ ರೀತಿ ಇರುತ್ತವೆ ಮತ್ತು ಅಭ್ಯಾಸಕ್ಕೆ ಹಾಕಲು ಅಷ್ಟೇ ಸಮನಾಗಿ ಕಷ್ಟಕರವಾಗಿರುತ್ತವೆ.

ಸತ್ಯವೇದ (ವೇದ ಪುಸ್ತಕ) ಹೇಳುವದೇನೆಂದರೆ ಧರ್ಮ ಅಥವಾ ವಿಧ್ಯೆಯ ಮಟ್ಟವು ಏನೇ ಆಗಿದ್ದರೂ, ನಮ್ಮೆಲ್ಲರಿಗೂ ಪಾಪದ ಗ್ರಹಿಕೆಯ ಅನುಭವವಾಗುತ್ತದೆ, ಯಾಕೆಂದರೆ ಪಾಪದ ಈ ಗ್ರಹಿಕೆಯು ನಮ್ಮ ಮನಸ್ಸಾಕ್ಷಿಯಿಂದ ಬರುತ್ತದೆ. ವೇದ ಪುಸ್ತಕವು ಇದನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತದೆ.

ಧರ್ಮಶಾಸ್ತ್ರವಿಲ್ಲದ ಅನ್ಯಜನರು (ಯೆಹೂದ್ಯರಲ್ಲದವರು) ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ (ಸತ್ಯವೇದದಲ್ಲಿರುವ ದಶಾಜ್ಞೆಗಳು) ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ – ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ. 

ರೋಮಾ 2:14-15

ಆದುದರಿಂದಲೇ ಲಕ್ಷಾಂತರ ಯಾತ್ರಿಕರು ತಮ್ಮ ಪಾಪದ ಭಾವನೆಯನ್ನು ಹೊಂದಿರುತ್ತಾರೆ. ಇದು ಕೇವಲ ವೇದ ಪುಸ್ತಕವು (ಸತ್ಯವೇದ) ಹೇಳುವಂತೆಯೇ ಆಗಿದೆ,

ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ

ರೋಮಾ 3:23

ಪ್ರಥಾಸನ ಮಂತ್ರದಲ್ಲಿ ವ್ಯಕ್ತಪಡಿಸಿರುವ ಪಾಪ  

ಈ ಕಲ್ಪನೆಯನ್ನು ಪ್ರಸಿದ್ಧವಾದ ಪ್ರಾರ್ಥಸ್ನಾನ ( ಅಥವಾ ಪ್ರಥಾಸನ ) ಮಂತ್ರದಲ್ಲಿ ವ್ಯಕ್ತಪಡಿಸಲಾಗಿದೆ, ಅದನ್ನು ನಾನು ಈ ಕೆಳಗೆ ನಕಲು ಮಾಡಿದ್ದೇನೆ,

ನಾನು ಪಾಪಿಯಾಗಿದ್ದೇನೆ. ನಾನು ಪಾಪದ ಪರಿಣಾಮವಾಗಿದ್ದೇನೆ. ನಾನು ಪಾಪದಲ್ಲಿ ಹುಟ್ಟಿದ್ದೇನೆ. ನನ್ನ ಆತ್ಮವು ಪಾಪದ ಅಧೀನದಲ್ಲಿದೆ. ನಾನು ಪಾಪಿಗಳಲ್ಲೇ  ಬಹಳ ಹೀನನು. ಓ ಕರ್ತನೇ ಸುಂದರವಾದ ಕಣ್ಣುಳ್ಳವನೇ, ಬಲಿದಾನ ಮಾಡುವ ಓ ಕರ್ತನೇ, ನನ್ನನ್ನು ರಕ್ಷಿಸು.

ನೀವು ಈ ಹೇಳಿಕೆ ಮತ್ತು ಪ್ರಾರ್ಥನೆಯ ವಿಜ್ಞಾಪನೆಯೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳುವದಿಲ್ಲವೋ?

ಸುವಾರ್ತೆಯು ‘ನಮ್ಮ ಪಾಪಗಳನ್ನು ತೊಳೆಯುತ್ತದೆ’

ಕುಂಭ ಮೇಳೆ ಯಾತ್ರಿಗಳು ಮತ್ತು ಪ್ರಥಾಸನ ಭಕ್ತಾಧಿಗಳು ತಮ್ಮ ‘ಪಾಪಗಳನ್ನು ತೊಳೆದುಕೊಳ್ಳಲು” ಹುಡುಕುತ್ತಿರುವ ಅದೇ ಸಮಸ್ಯೆಯನ್ನು ಸುವಾರ್ತೆಯು ತಿಳಿಸುತ್ತದೆ. ತಮ್ಮ ‘ನಿಲುವಂಗಿಗಳನ್ನು’ ( ಅಂದರೆ ತಮ್ಮ ನೈತಿಕ ಕ್ರಿಯೆಗಳು ) ತೊಳೆದುಕೊಳ್ಳುವವರಿಗೆ ಇದು ಆಶೀರ್ವಾದಗಳನ್ನು ವಾಗ್ದಾನ ಮಾಡಿದೆ. ಆ ಆಶೀರ್ವಾದವು ಪರಲೋಕದಲ್ಲಿರುವ (‘ಆ ಪಟ್ಟಣ’) ಅಮರತ್ವವೇ ( ಜೀವವೃಕ್ಷ ) ಆಗಿದೆ.

ತಮ್ಮ ನಿಲುವಂಗಿಗಳನ್ನು ತೊಳಕೊಂಡವರು ಧನ್ಯರು; ಅವರಿಗೆ ಜೀವವೃಕ್ಷದ ಹಕ್ಕು ಇರುವದು; ಅವರು ಬಾಗಿಲುಗಳಿಂದ ಆ ಪಟ್ಟಣದೊಳಕ್ಕೆ ಸೇರುವರು.”

ಪ್ರಕಟನೆ 22:14

ಕುಂಭ ಮೇಳ ಹಬ್ಬವು ನಮ್ಮ ಪಾಪದ ನಿಜಸ್ಥಿತಿಯ ‘ಕೆಟ್ಟ ಸುದ್ಧಿ’ ಯನ್ನು ನಮಗೆ ತೋರಿಸುತ್ತದೆ, ಮತ್ತು ಇದು ಶುದ್ಧೀಕರಣಕ್ಕಾಗಿ ನಮ್ಮನ್ನು ಎಚ್ಚರಗೊಳಿಸುತ್ತದೆ. ಸುವಾರ್ತೆಯಿಂದ ಉಂಟಾಗುವ ಈ ವಾಗ್ದಾನವು ಅಸ್ತಿತ್ವದಲ್ಲಿದ್ದರೆ ಅದು ಬಹಳ ಪ್ರಾಮುಖ್ಯುವಾಗಿದೆ, ಖಂಡಿತವಾಗಿ ಇದನ್ನು ಬಹಳ ಸ್ಪಷ್ಟವಾದ ರೀತಿಯಲ್ಲಿ ಪರಿಶೋಧಿಸುವದು ಯೋಗ್ಯವಾಗಿದೆ. ಈ ವೆಬ್ ಸೈಟ್ ನ ಉದ್ಧೇಶವು ಇದೇ ಆಗಿದೆ. Paragraph

ನೀವು ನಿತ್ಯಜೀವದಲ್ಲಿ ಆಸಕ್ತಿ ಹೊಂದಿದ್ದರೆ, ನೀವು ಪಾಪದಿಂದ ಬಿಡುಗಡೆಯಾಗಲು ಆಶಿಸಿದರೆ, ಪ್ರಜಾಪತಿ – ಅಂದರೆ ಜಗತ್ತನ್ನು ಮತ್ತು ನಮ್ಮನ್ನು ಉಂಟುಮಾಡಿದ ದೇವರು – ನಾವು ಪರಲೋಕವನ್ನು ಪಡೆದುಕೊಳ್ಳುವಂತೆ ನಮಗಾಗಿ ಹೇಗೆ ಮತ್ತು ಯಾಕೆ ಒದಗಿಸಿದ್ದಾನೆಂದು ಎಂದು ನೋಡಲು ಇದರ ಜೊತೆಗೆ ಪ್ರಯಾಣ ಮಾಡುವದು ಜ್ಞಾನವಂತಿಕೆಯಾಗಿದೆ. ಮತ್ತು ವೇದಗಳು ಸಹ ನಮಗೆ ಇದನ್ನು ಬೋಧಿಸುತ್ತವೆ. ಋಗ್ವೇದದಲ್ಲಿ ಪುರುಷಾಸುಕ್ತ, ಇದು ಪ್ರಜಾಪತಿಯ ನರಾವತಾರ ಮತ್ತು ಆತನು ನಮಗಾಗಿ ಮಾಡಿದ ಬಲಿದಾನವನ್ನು ವಿವರಿಸುತ್ತದೆ. ಈ ಯೋಜನೆಯು ಮಾನವ ಚರಿತ್ರೆಯಲ್ಲಿ ನರಾವತಾರದ, ಯೇಸು ಸತ್ ಸ್ಯಾಂಗ್ ನ ( ಯೇಸು ಕ್ರಿಸ್ತನ ) ಜೀವ ಮತ್ತು ಮರಣದ ಮೂಲಕ ಹೇಗೆ ತರಲಾಯಿತೆಂದು ಹೆಚ್ಚು ವಿವರವಾಗಿ ಸತ್ಯವೇದವು ( ವೇದ ಪುಸ್ತಕ ) ವಿವರಿಸುತ್ತದೆ. ನೀವು ಸಹ ನಿಮ್ಮ ‘ಪಾಪಗಳನ್ನು ತೊಳೆದುಕೊಳ್ಳಬಹುದು’ ಎಂದು ನೋಡುವದಕ್ಕಾಗಿ ಈ ಯೋಜನೆಯನ್ನು ಪರಿಶೋಧಿಸಲು ಮತ್ತು ಅರ್ಥಮಾಡಿಕೊಳ್ಳಲು ನೀವು ಯಾಕೆ ಸಮಯ ತೆಗೆದುಕೊಳ್ಳಬಾರದು.

Leave a Reply

Your email address will not be published. Required fields are marked *