ಬರಲಿರುವ ಶ್ರೇಷ್ಟ ರಾಜ: ನೂರಾರು ವರ್ಷಗಳ ಮುಂಚಿತವಾಗಿ ಹೆಸರಿಸಲಾಗಿದೆ

ವಿಷ್ಣು ಪುರಾಣ ವೆನಾ ರಾಜನ ಕುರಿತು ಮಾಹಿತಿ ನೀಡುತ್ತದೆ. ವೆನಾ ಉತ್ತಮ ರಾಜನಾಗಿ ಪ್ರಾರಂಭವಾದರೂ, ಭ್ರಷ್ಟ ಪ್ರಭಾವಗಳ  ಕಾರಣದಿಂದಾಗಿ ಅವನು ತುಂಬಾ ದುಷ್ಟನಾದನು, ಅವನು ತ್ಯಾಗ ಮತ್ತು ಪ್ರಾರ್ಥನೆಗಳನ್ನು ನಿಷೇಧಿಸಿದನು. ಅವನು ವಿಷ್ಣುವಿಗಿಂತ ಶ್ರೇಷ್ಠನೆಂದು ಸಹ ಪ್ರತಿಪಾದಿಸಿದನು. ಋಷಿಗಳು ಮತ್ತು ಬ್ರಾಹ್ಮಣರು/ಪುರೋಹಿತರು ಅವನೊಂದಿಗೆ ತರ್ಕಿಸಲು ಪ್ರಯತ್ನಿಸಿದರು, ರಾಜನಾಗಿ ಅವನು ಸಮಂಜಸವಾದ ಧರ್ಮಕ್ಕೆ ಬೋಧನೆ ಮತ್ತು ಉದಾಹರಣೆಯನ್ನು ನೀಡಬೇಕು, ಅದನ್ನು ದುರ್ಬಲಗೊಳಿಸಬಾರದು ಎಂದು ಹೇಳಿದರು. ಆದಾಗ್ಯೂ ವೆನಾ ಕೇಳುತ್ತಿರಲಿಲ್ಲ. ಆದ್ದರಿಂದ ಪುರೋಹಿತರು, ಧರ್ಮವನ್ನು ಕಾಪಾಡಲು ನಿರಾಶಾದಾಯಕರಾದರು ಮತ್ತು ಅವರು ಅವನನ್ನು ಪಶ್ಚಾತ್ತಾಪ ಪಡುವಂತೆ ಮನವೊಲಿಸಲು ಸಾಧ್ಯವಾಗದ ಕಾರಣ, ದುಷ್ಟ ರಾಜ್ಯವನ್ನು ಇಲ್ಲದಂತೆ ಮಾಡಲು ಅವನನ್ನು ಕೊಂದರು.

ಅದು ರಾಜ್ಯಕ್ಕೆ ಆಡಳಿತಗಾರರಿಲ್ಲದಂತೆ ಮಾಡಿತು. ಆದ್ದರಿಂದ ಪುರೋಹಿತರು ರಾಜನ ಬಲಗೈಯನ್ನು ಉಜ್ಜಿದರು ಮತ್ತು ಪ್ರಿಥು/ ಪ್ರುಥು ಎಂಬ ಶ್ರೇಷ್ಟ ವ್ಯಕ್ತಿ ಹೊರಬಂದನು. ಪ್ರಿಥುವನ್ನು ವೆನಾ ಅವರ ಉತ್ತರಾಧಿಕಾರಿಯಾಗಿ ನೇಮಿಸಲಾಯಿತು. ಅಂತಹ ನೈತಿಕ ವ್ಯಕ್ತಿಯು ರಾಜನಾಗುವದರಲ್ಲಿ ಎಲ್ಲರೂ ಅತ್ಯಾನಂದಪಟ್ಟರು ಮತ್ತು ಬ್ರಹ್ಮ ಕೂಡ ಪ್ರಿಥುವಿನ ಪಟ್ಟಾಭಿಷೇಕ ಸಮಾರಂಭಗಳಲ್ಲಿ  ಕಾಣಿಸಿಕೊಂಡರು. ಪ್ರಿಥುವಿನ ಆಳ್ವಿಕೆಯ ಕಾಲದಲ್ಲಿ ರಾಜ್ಯವು ಸುವರ್ಣಯುಗವನ್ನು ಪ್ರವೇಶಿಸಿತು.

ಇಬ್ರೀಯ ಋಷಿಗಳಾದ ಯೆಶಾಯ ಮತ್ತು ಯೆರೆಮಿಾಯರು ಇದೇ ರೀತಿಯ ಸಂದಿಗ್ಧತೆಯನ್ನು ಎದುರಿಸಿದರೆಂದು ಇದು ವಿವರಿಸುತ್ತದೆ. ಇಸ್ರಾಯೇಲ್ ರಾಜರು, ಆರಂಭದಲ್ಲಿ ಶ್ರೇಷ್ಟರು ಮತ್ತು ದಶಾಜ್ಞೆಗಳ ಧರ್ಮವನ್ನು ಅನುಸರಿಸುತ್ತಿದ್ದವರು, ಭ್ರಷ್ಟರಾಗುವುದನ್ನು ಅವರು ನೋಡಿದ್ದರು. ಮರವನ್ನು ಕಡಿದಂತೆ, ರಾಜವಂಶ ಬೀಳುತ್ತದೆಂದು ಅವರು ಪ್ರವಾದಿಸಿದರು. ಆದರೆ ಅವರು ಭವಿಷ್ಯದ ಶ್ರೇಷ್ಟ ರಾಜನ ಬಗ್ಗೆ ಸಹಾ ಪ್ರವಾದಿಸಿದ್ದಾರೆ, ಅದು ಬಿದ್ದ ಮರದ ತುಂಡಿನಿಂದ ಚಿಗುರುವ ಒಂದು ರೆಂಬೆ.

ಪುರೋಹಿತರು ಮತ್ತು ರಾಜರ ನಡುವಿನ ಪಾತ್ರದ ಸ್ಪಷ್ಟವಾದ ಪ್ರತ್ಯೇಕತೆಯನ್ನು ಸಹಾ ವೆನಾನ ಕಥೆಯು ವಿವರಿಸುತ್ತದೆ. ರಾಜ ವೆನಾ ಅವರು ಪುರೋಹಿತರಿಂದ ತೆಗೆದುಹಾಕಲ್ಪಟ್ಟಾಗ ಆಡಳಿತ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಕಾರಣ ಅದು ಅವರ ಅರ್ಹತೆಯಾಗಿರಲಿಲ್ಲ . ರಾಜ ಮತ್ತು ಪುರೋಹಿತನ ನಡುವಿನ ಪಾತ್ರದ ಇದೇ ರೀತಿಯ ಪ್ರತ್ಯೇಕತೆಯು ಯೆಶಾಯ ಮತ್ತು ಯೆರೆಮಿಾಯನ ಕಾಲದಲ್ಲಿಯೂ ಸಹಾ ಜಾರಿಯಲ್ಲಿತ್ತು. ಈ ಕಥೆಗಳಲ್ಲಿನ ವ್ಯತ್ಯಾಸವೆಂದರೆ ಪ್ರಿಥುವಿಗೆ ಅವನ ಜನನದ ನಂತರ ಹೆಸರನ್ನು ಇಡಲಾಗಿದೆ, ಆದರೆ ಇಬ್ರೀಯ ಋಷಿಗಳು ಬರಲಿರುವ ಶ್ರೇಷ್ಟ ರಾಜನ ಜನನಕ್ಕೆ ನೂರಾರು ವರ್ಷಗಳ ಮುಂಚೆ ಹೇಗೆ ಹೆಸರಿಸಿದ್ದಾರೆಂದು ನಾವು ನೋಡುತ್ತೇವೆ.

ಯೆಶಾಯನು ಮೊದಲು ಬರಲಿರುವ ರೆಂಬೆಯ ಬಗ್ಗೆ ಬರೆದನು. ದಾವೀದನ ಬಿದ್ದ ರಾಜವಂಶದ ‘ಅವನು’, ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಹೊಂದಿದ್ದನು. ನಂತರ ಯೆರೆಮಿಾಯನು ಈ ರೆಂಬೆಯು  ಕರ್ತನು – ಸೃಷ್ಟಿಕರ್ತ ದೇವರ ಇಬ್ರೀಯ ಹೆಸರು ಮತ್ತು ನಮ್ಮ ನೀತಿವಂತನೆಂದು ಕರೆಯುತ್ತಾನೆಂಬದಾಗಿ ತಿಳಿಸುತ್ತಾನೆ.

ಜೆಕರ್ಯನು ರೆಂಬೆಯ ಕುರಿತು ಮುಂದುವರೆಸಿದ್ದಾನೆ

ಜೆಕರ್ಯನು ದೇವಾಲಯವನ್ನು ಪುನರ್ನಿರ್ಮಿಸಲು ಬಾಬೆಲಿನ ಗಡಿಪಾರಿನ ನಂತರ ಹಿಂದಿರುಗಿದನು

ಕ್ರಿ.ಪೂ 520 ರಲ್ಲಿ ಋಷಿ ಜೆಕರ್ಯನು, ಯಹೂದಿಗಳು ತಮ್ಮ ಮೊದಲ ಗಡಿಪಾರಿನಿಂದ ಯೆರೂಸಲೇಮಿಗೆ ಹಿಂತಿರುಗಲು ಪ್ರಾರಂಭಿಸಿದ ಸಮಯದಲ್ಲಿ ವಾಸಿಸುತ್ತಿದ್ದನು. ಅವರ ಹಿಂತಿರುಗುವಿಕೆಯ ನಂತರ, ತಮ್ಮ ನಾಶವಾದ ದೇವಾಲಯವನ್ನು ಪುನರ್ನಿರ್ಮಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ಮಹಾಯಾಜಕನಿಗೆ ಯೆಹೋಶುವ ಎಂದು ಹೆಸರಿಸಲಾಯಿತು, ಮತ್ತು ಅವನು ದೇವಾಲಯದ ಯಾಜಕರ ಕೆಲಸವನ್ನು ಪುನಃ ಪ್ರಾರಂಭಿಸುತ್ತಿದ್ದನು. ಋಷಿ-ಪ್ರವಾದಿಯಾದ ಜೆಕರ್ಯನು, ಹಿಂತಿರುಗುತ್ತಿರುವ ಯಹೂದಿ ಜನರನ್ನು ಮುನ್ನಡೆಸುವಲ್ಲಿ,  ಮಹಾಯಾಜಕನಾದ, ಯೆಹೋಶುವನೊಡನೆ ಸಹಭಾಗಿತ್ವ ಹೊಂದಿದ್ದನು. ಈ ಯೆಹೋಶುವನ ಬಗ್ಗೆ – ದೇವರು – ಜೆಕರ್ಯನ ಮೂಲಕ ಹೇಳಿದ್ದು ಇಲ್ಲಿದೆ:

 8 ಪ್ರಧಾನ ಯಾಜಕ ನಾದ ಓ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ; ಅವರು ಆಶ್ಚರ್ಯವನ್ನುಂಟು ಮಾಡುವ ಮನುಷ್ಯರಾಗಿ ದ್ದಾರೆ; ಇಗೋ, ನಾನು ಕೊಂಬೆಯೆಂಬ ನನ್ನ ಸೇವಕ ನನ್ನು ಬರಮಾಡುವೆನು.
9 ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವವು; ಇಗೋ, ನಾನು ಅದರ ಕೆತ್ತನೆಯಿಂದ ಕೆತ್ತುವೆನು; ಆ ದೇಶದ ಅಪರಾಧ ವನ್ನು ಒಂದೇ ದಿನದಲ್ಲಿ ತೊಲಗಿಸುವೆನು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.

ಜೆಕರ್ಯನು 3: 8-9

ರೆಂಬೆ ! ಯೆಶಾಯನಿಗಿಂತ 200 ವರ್ಷಗಳ ಮುಂಚೆ ಪ್ರಾರಂಭಗೊಂಡಿತು, ಯೆರೆಮೀಯನಿಂದ 60 ವರ್ಷಗಳ ಮುಂಚೆ  ಮುಂದುವರೆಯಿತು, ಈಗ ರಾಜವಂಶವು ಕತ್ತರಿಸಲ್ಪಟ್ಟಿದ್ದರೂ ಸಹ ಜೆಕರ್ಯನು ಮತ್ತಷ್ಟು ‘ರೆಂಬೆಯೊಂದೆಗೆ’ ಮುಂದುವರಿಯುತ್ತಾನೆ. ಈ ರೆಂಬೆಯು ಆಲದ ಮರದಂತೆ ಸತ್ತ ತುಂಡಿನಿಂದ ಬೇರುಗಳನ್ನು ಹರಡುವ ಮೂಲಕ ಮುಂದುವರೆಯಿತು. ಈಗ ರೆಂಬೆಯನ್ನು  ‘ನನ್ನ ಸೇವಕ’ – ದೇವರ ಸೇವಕ ಎಂದು ಕರೆಯಲಾಗುತ್ತದೆ. ಕ್ರಿ.ಪೂ 520 ರಲ್ಲಿ, ಮಹಾಯಾಜಕ ಯೆಹೋಶುವ  ಜೆಕರ್ಯನ ಸಹೋದ್ಯೋಗಿ, ಯೆರುಸಲೇಮಿನಲ್ಲಿ ಕೆಲವು ರೀತಿಯಲ್ಲಿ ಈ ಬರುವ ರೆಂಬೆಯ ಸಾಂಕೇತಿಕವಾಗಿದ್ದಾನೆ.

ಮತ್ತೆ ಹೇಗೆ?

ಕರ್ತನು ‘ಒಂದೇ ದಿನದಲ್ಲಿ’ ಪಾಪಗಳನ್ನು ಹೇಗೆ ತೆಗೆದುಹಾಕುತ್ತಾನೆ?

ರೆಂಬೆ: ಯಾಜಕ ಮತ್ತು ರಾಜನನ್ನು ಒಟ್ಟುಗೂಡಿಸುವುದು

ಇಬ್ರೀಯ ವೇದಗಳಲ್ಲಿ ಇದನ್ನು ಅರ್ಥಮಾಡಿಕೊಳ್ಳಲು ಯಾಜಕ ಮತ್ತು ರಾಜನ ಪಾತ್ರಗಳನ್ನು ಕಟ್ಟುನಿಟ್ಟಾಗಿ ಬೇರ್ಪಡಿಸಲಾಗಿದೆ ಎಂದು ನಾವು ತಿಳಿದುಕೊಳ್ಳಬೇಕು. ರಾಜರಲ್ಲಿ ಯಾರೂ ಯಾಜಕರಾಗಲು ಸಾಧ್ಯವಿಲ್ಲ, ಮತ್ತು ಯಾಜಕರು ರಾಜರಾಗಲು ಸಾಧ್ಯವಿಲ್ಲ. ದೇವರಿಗೆ ಯಾಗಗಳನ್ನು ಅರ್ಪಿಸುವ ಮೂಲಕ ದೇವರು ಮತ್ತು ಮನುಷ್ಯನ ನಡುವೆ ಮಧ್ಯಸ್ಥಿಕೆ ವಹಿಸುವುದು ಯಾಜಕನ ಪಾತ್ರವಾಗಿತ್ತು ಮತ್ತು ಸಿಂಹಾಸನದಿಂದ ನ್ಯಾಯದೊಂದಿಗೆ ಆಳುವುದು ರಾಜನ ಜವಾಬ್ದಾರಿಯಾಗಿದೆ. ಎರಡೂ ಬಹುಮುಖ್ಯವಾಗಿದೆ; ಎರಡೂ ವಿಭಿನ್ನವಾಗಿವೆ. ಆದರೂ ಅದನ್ನು ಜೆಕರ್ಯನು ಭವಿಷ್ಯದಲ್ಲಿ ಬರೆದಿದ್ದಾರೆ:  

 9 ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಯಿತು.
10 ಹೇಗಂದರೆ–ಆ ಸೆರೆಯವರಿಂದ ಅಂದರೆ ಬಾಬೆಲಿ ನಿಂದ ಬಂದಿರುವ ಹೆಲ್ದಾಯನಿಂದಲೂ ತೋಬೀಯ ನಿಂದಲೂ ಯೆದಾಯನಿಂದಲೂ ತಕ್ಕೊಂಡು ಅದೇ ದಿವಸದಲ್ಲಿ ನೀನು ಬಂದು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿ
11 ಬೆಳ್ಳಿಬಂಗಾರವನ್ನು ತಕ್ಕೊಂಡು ಕಿರೀಟಗಳನ್ನು ಮಾಡಿ ಅವುಗಳನ್ನು ಯೆಹೋಚಾದಾಕನ ಮಗನಾದ ಪ್ರಧಾನ ಯಾಜಕ ನಾದ ಯೆಹೋಶುವನ ತಲೆಯ ಮೇಲೆ ಇಟ್ಟು
12 ಅವನಿಗೆ ಹೇಳತಕ್ಕದ್ದೇನಂದರೆ–ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ–ಇಗೋ, ಚಿಗುರೆಂದು ಹೆಸರುಳ್ಳ ಮನುಷ್ಯನು, ಅವನು ತನ್ನ ಸ್ಥಳದೊಳಗಿಂದ ಚಿಗುರು ವನು, ಆತನೇ ಕರ್ತನ ದೇವಾಲಯವನ್ನು ಕಟ್ಟುವನು.
13 ಹೌದು, ಆತನು ಕರ್ತನ ದೇವಾಲಯವನ್ನು ಕಟ್ಟು ವನು; ಆತನು ಮಹಿಮೆಯನ್ನು ಧರಿಸುವನು; ಕೂತು ಕೊಂಡು ತನ್ನ ಸಿಂಹಾಸನದಲ್ಲಿ ಆಳುವನು, ತನ್ನ ಸಿಂಹಾಸನದಲ್ಲಿ ಯಾಜಕನಾಗಿರುವನು; ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವದು.

ಜೆಕರ್ಯನು 6: 9, 11-13

ಹಿಂದಿನ ಉದಾಹರಣೆಯ ವಿರುದ್ಧ, ಜೆಕರ್ಯನ ದಿನದಲ್ಲಿ (ಯೆಹೋಶುವ) ಮಹಾಯಾಜಕನು ರಾಜನ ಕಿರೀಟವನ್ನು ಸಾಂಕೇತಿಕವಾಗಿ ರೆಂಬೆಯಂತೆ ಧರಿಸಬೇಕಾಗಿತ್ತು. (ಯೆಹೋಶುವನು ‘ಮುಂಬರುವ ವಿಷಯಗಳ ಸಾಂಕೇತಿಕವಾಗಿದ್ದನು’ ಎಂದು ನೆನಪಿಡಿ). ಮಹಾಯಾಜಕನಾದ, ಯೆಹೋಶುವನು, ರಾಜನ ಕಿರೀಟವನ್ನು ಧರಿಸುವುದರಲ್ಲಿ, ರಾಜ ಮತ್ತು ಯಾಜಕನನ್ನು ಒಬ್ಬ ವ್ಯಕ್ತಿಯಾಗಿ ಭವಿಷ್ಯದ ಒಗ್ಗೂಡಿಸುವಿಕೆಯನ್ನು ಮುನ್ಸೂಚಿಸಿದನು – ರಾಜನ ಸಿಂಹಾಸನದ ಮೇಲೆ ಒಬ್ಬ ಯಾಜಕ. ಇದಲ್ಲದೆ, ಜೆಕರ್ಯನು ‘ಯೆಹೋಶುವನು’ ಎಂಬುದು ರೆಂಬೆಯ ಹೆಸರು ಎಂದು ಬರೆದನು. ಅದರ ಅರ್ಥವೇನು?

ಯೆಹೋಶುವಮತ್ತು ಯೇಸುವಿನಹೆಸರುಗಳು

ಸತ್ಯವೇದ ಭಾಷಾಂತರದ ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕು. ಕ್ರಿ.ಪೂ 250 ರಲ್ಲಿ ಮೂಲ ಇಬ್ರೀಯ ವೇದಗಳನ್ನು ಗ್ರೀಕ್ ಭಾಷೆಗೆ ಭಾಷಾಂತರಿಸಲಾಯಿತು, ಮತ್ತು ಇದನ್ನು ಸೆಪ್ಟುಜೆಂಟ್  ಅಥವಾ ಎಲ್ಎಕ್ಸ್ಎಕ್ಸ್ ಎಂದು ಕರೆಯಲಾಯಿತು. ಇನ್ನೂ ವ್ಯಾಪಕವಾಗಿ ಓದಿದಾಗ, ಎಲ್‌ಎಕ್ಸ್‌ಎಕ್ಸ್‌ನಲ್ಲಿ ‘ಕ್ರಿಸ್ತನನ್ನು’ ಮೊದಲು ಹೇಗೆ ಬಳಸಲಾಗಿದೆ ಎಂದು ನಾವು ನೋಡಿದ್ದೇವೆ ಮತ್ತು ಇಲ್ಲಿ ನಾವು ‘ಯೆಹೋಶುವನಿಗೆ’ ಅದೇ ವಿಶ್ಲೇಷಣೆಯನ್ನು ಅನುಸರಿಸುತ್ತೇವೆ.

ಯೆಹೋಶುವ = ‘ಯೇಸು‘. ಇಬ್ಬರೂ ಯೋಶುವ ಎಂಬ ಇಬ್ರೀಯ ಹೆಸರಿನಿಂದ ಬಂದವರು

ಯೆಹೋಶುವ ಎಂಬುದು [ಕನ್ನಡ] ‘ಯೋಶುವ’ ಎಂಬ ಮೂಲ ಇಬ್ರೀಯ ಹೆಸರಿನ ಲಿಪ್ಯಂತರವಾಗಿದೆ. ಕ್ರಿ.ಪೂ 520 ರಲ್ಲಿ ಜೆಕರ್ಯನು‘ಯೆಹೋಶುವನ’ ಕುರಿತು ಇಬ್ರೀಯ ಭಾಷೆಯಲ್ಲಿ ಹೇಗೆ ಬರೆದಿದ್ದಾನೆ ಎಂದು ಕ್ವಡ್ರಂಟ್ # 1 ತೋರಿಸುತ್ತದೆ. ಇದನ್ನು [ಕನ್ನಡ] (# 1 => # 3) ‘ಯೆಹೋಶುವ’ ಎಂದು ಲಿಪ್ಯಂತರಗೊಳಿಸಲಾಗಿದೆ. ಇಬ್ರೀಯ ಭಾಷೆಯಲ್ಲಿರುವ ‘ಯೋಶುವ’ [ಕನ್ನಡ] ಯೆಹೋಶುವನಂತೆಯೇ ಇದೆ. ಕ್ರಿ.ಪೂ 250 ರಲ್ಲಿ ಎಲ್‌ಎಕ್ಸ್‌ಎಕ್ಸ್ ಅನ್ನು ಇಬ್ರೀಯ ಭಾಷೆಯಿಂದ ಗ್ರೀಕ್‌ ಭಾಷೆಗೆ ಭಾಷಾಂತರಿಸಿದಾಗ ಯೋಶುವನನ್ನು ಈಸೂಸ್ (# 1 => # 2) ಗೆ ಲಿಪ್ಯಂತರಗೊಳಿಸಲಾಯಿತು. ಇಬ್ರೀಯ ಭಾಷೆಯಲ್ಲಿನ ‘ಯೋಶುವ’ ಗ್ರೀಕ್ ಭಾಷೆಯಲ್ಲಿನ ಈಸೂಸ್ ಅಂತೆಯೇ ಇದೆ. ಗ್ರೀಕ್ ಅನ್ನು [ಕನ್ನಡ] ಗೆ ಭಾಷಾಂತರಿಸಿದಾಗ, ಈಸೂಸ್ ಅನ್ನು ‘ಯೇಸು’ (# 2 => # 3) ಎಂದು  ಲಿಪ್ಯಂತರಗೊಳಿಸಲಾಗುತ್ತದೆ. ಗ್ರೀಕ್ ಭಾಷೆಯಲ್ಲಿ ಈಸೂಸ್ [ಕನ್ನಡ] ಯೇಸುವಿನಂತೆಯೇ ಇದೆ.

ಇಬ್ರೀಯ ಭಾಷೆಯಲ್ಲಿ ಮಾತನಾಡುವಾಗ ಯೇಸುವನ್ನು ‘ಯೋಶುವ’ ಎಂದು ಕರೆಯಲಾಗುತ್ತಿತ್ತು, ಆದರೆ ಗ್ರೀಕ್ ಹೊಸ ಒಡಂಬಡಿಕೆಯಲ್ಲಿ ಆತನ ಹೆಸರನ್ನು ‘ಈಸೂಸ್’ ಎಂದು ಬರೆಯಲಾಗಿದೆ – ಗ್ರೀಕ್ ಹಳೆಯ ಒಡಂಬಡಿಕೆಯ ಎಲ್‌ಎಕ್ಸ್‌ಎಕ್ಸ್ ಆ ಹೆಸರನ್ನು ನಿಖರವಾಗಿ ಬರೆದಂತೆಯೇ. ಹೊಸ ಒಡಂಬಡಿಕೆಯನ್ನು ಗ್ರೀಕ್ನಿಂದ [ಕನ್ನಡ] ಭಾಷಾಂತರಿಸಿದಾಗ (# 2 => # 3) ‘ಈಸೂಸ್’ ಅನ್ನು ಪರಿಚಿತವಾದ ಯೇಸುವಿಗೆ ಲಿಪ್ಯಂತರಗೊಳಿಸಲಾಗುತ್ತದೆ. ಆದ್ದರಿಂದ ಯೇಸುಎಂಬ ಹೆಸರು = ‘ಯೆಹೋಶುವ, ‘ಯೇಸು’ವಿನೊಂದಿಗೆ ಮಧ್ಯಂತರ ಗ್ರೀಕ್  ಹೆಜ್ಜೆಯ ಮೂಲಕ ಹೋಗುತ್ತದೆ, ಮತ್ತು ‘ಯೆಹೋಶುವ’ ನೇರವಾಗಿ ಇಬ್ರೀಯ ಭಾಷೆಯಿಂದ ಬರುತ್ತಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ನಜರೇತಿನ ಯೇಸು, ಮತ್ತು ಕ್ರಿ. ಪೂ 520 ರ ಮಹಾಯಾಜಕ ಯೆಹೋಶುವ ಇಬ್ಬರೂ ಒಂದೇ ಹೆಸರನ್ನು ಹೊಂದಿದ್ದರು, ಅವರ ಸ್ಥಳೀಯ ಇಬ್ರೀಯ ಭಾಷೆಯಲ್ಲಿ ಇವರನ್ನು ‘ಯೋಶುವ’ ಎಂದು ಕರೆಯಲಾಯಿತು. ಗ್ರೀಕ್ ಭಾಷೆಯಲ್ಲಿ, ಇಬ್ಬರನ್ನೂ ‘ಈಸೂಸ್’ ಎಂದು ಕರೆಯಲಾಗುತ್ತಿತ್ತು.

ನಜರೇತಿನ ಯೇಸು ರೆಂಬೆಯಾಗಿದ್ದಾನೆ

ಈಗ ಜೆಕರ್ಯನ ಪ್ರವಾದನೆಯು ಅರ್ಥಪೂರ್ಣವಾಗಿದೆ. ಕ್ರಿ.ಪೂ 520 ರಲ್ಲಿ ಮಾಡಿದ ಮುನ್ಸೂಚನೆಯೆಂದರೆ, ಮುಂಬರುವ ರೆಂಬೆಯ ಹೆಸರು ಯೇಸು, ನೇರವಾಗಿ ನಜರೇತಿನ ಯೇಸುವಿಗೆ ಸೂಚಿಸುತ್ತದೆ.

ಇಷಯ ಮತ್ತು ದಾವೀದ ಯೇಸುವಿನ ಪೂರ್ವಜರಾಗಿದ್ದರಿಂದ ಯೇಸು ‘ಇಷಯನ ತುಂಡಿನಿಂದ’ ಬರುತ್ತಾನೆ. ಯೇಸು ತಿಳುವಳಿಕೆ ಮತ್ತು ಜ್ಞಾನವನ್ನು ಹೊಂದಿದ್ದನು, ಅದು ಅವನನ್ನು ಪ್ರತ್ಯೇಕಿಸುವ ಹಂತವಾಗಿತ್ತು. ಅವನ ಚಾಣಾಕ್ಷತೆ, ಸಮತೋಲನ ಮತ್ತು ಒಳನೋಟವು ವಿಮರ್ಶಕರು ಮತ್ತು ಅನುಯಾಯಿಗಳನ್ನು ನಿರಂತರವಾಗಿ ಮೆಚ್ಚಿಸುತ್ತಿತ್ತು. ಸುವಾರ್ತೆಗಳಲ್ಲಿನ ಅದ್ಭುತಗಳ ಮೂಲಕ ಅವನ ಶಕ್ತಿಯನ್ನು ನಿರಾಕರಿಸಲಾಗದು. ಒಬ್ಬನು ಅವುಗಳನ್ನು ನಂಬದಿರಲು ಆಯ್ಕೆ ಮಾಡಬಹುದು; ಆದರೆ ಅವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಸಾಧಾರಣ ಜ್ಞಾನ ಮತ್ತು ಶಕ್ತಿಯನ್ನು ಹೊಂದುವ ಗುಣಕ್ಕೆ ಯೇಸು ಸರಿಹೊಂದುತ್ತಾನೆಂದು  ಯೆಶಾಯನು ಮುನ್ಸೂಚಿಸಿದಂತೆ ಒಂದು ದಿನ ಈ ರೆಂಬೆಯಿಂದ ಬರಬಹುದು.  

ಈಗ ನಜರೇತಿನ ಯೇಸುವಿನ ಜೀವನದ ಬಗ್ಗೆ ಯೋಚಿಸಿ. ಅವನು ಖಂಡಿತವಾಗಿಯೂ ರಾಜನೆಂದು ಪ್ರತಿಪಾದಿಸಿದ್ದಾನೆ – ವಾಸ್ತವವಾಗಿ ರಾಜ. ಇದೇ ‘ಕ್ರಿಸ್ತ’ ಎಂಬುದರ ಅರ್ಥ. ಆದರೆ ನಿಜವಾಗಿಯೂ ಅವನು ಭೂಮಿಯಲ್ಲಿದ್ದಾಗ ಮಾಡಿದ್ದೇನೆಂದರೆ ಯಾಜಕೋದ್ಯೋಗ. ಯಾಜಕನು ಜನರ ಪರವಾಗಿ ಸ್ವೀಕಾರಾರ್ಹ ಯಾಗಗಳನ್ನು ಅರ್ಪಿಸಿದನು. ಅದರಲ್ಲಿ ಯೇಸುವಿನ ಮರಣವು ಮಹತ್ವದ್ದಾಗಿತ್ತು, ಅದು ಕೂಡ, ನಮ್ಮ ಪರವಾಗಿ, ದೇವರಿಗೆ ಅರ್ಪಣೆಯಾಗಿದೆ. ಆತನ ಮರಣವು ಯಾವುದೇ ವ್ಯಕ್ತಿಯ ಪಾಪ ಮತ್ತು ಅಪರಾಧಕ್ಕೆ ಪ್ರಾಯಶ್ಚಿತ್ತ ಮಾಡುತ್ತದೆ. ಜೆಕರ್ಯನು ಪ್ರವಾದಿಸಿದಂತೆ – ಅಕ್ಷರಶಃ ಭೂಮಿಯ ಪಾಪಗಳನ್ನು ‘ಒಂದೇ ದಿನದಲ್ಲಿ’ ತೆಗೆದುಹಾಕಲಾಯಿತು – ಯೇಸು ಮರಣ ಹೊಂದಿದ ಮತ್ತು ಎಲ್ಲಾ ಪಾಪಗಳಿಗೆ ಪಾವತಿಸಿದ ದಿನ. ಆತನ ಮರಣದಲ್ಲಿ ಯಾಜಕನಾಗಿ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದನು, ಹೆಚ್ಚಾಗಿ ಆತನನ್ನು ‘ಕ್ರಿಸ್ತನು’/ರಾಜ ಎಂದು ಕೂಡ ಕರೆಯಲಾಗುತ್ತದೆ. ತನ್ನ ಪುನರುತ್ಥಾನದಲ್ಲಿ, ಮರಣದ ಮೇಲೆ ತನ್ನ ಶಕ್ತಿ ಮತ್ತು ಅಧಿಕಾರವನ್ನು ತೋರಿಸಿದನು. ಅವನು ಎರಡು ಪಾತ್ರಗಳನ್ನು ಒಟ್ಟಿಗೆ ತಂದನು. ಬಹಳ ಹಿಂದೆಯೇ ದಾವೀದನು ‘ಕ್ರಿಸ್ತ’ ಎಂದು ಕರೆಯುತ್ತಿದ್ದ ರೆಂಬೆ,  ಯಾಜಕ-ರಾಜನಾಗಿದ್ದಾನೆ. ಮತ್ತು ಆತನ ಜನನದ 500 ವರ್ಷಗಳ ಹಿಂದೆಯೇ ಜೆಕರ್ಯನಿಂದ ಆತನ ಹೆಸರನ್ನು ಮುನ್ಸೂಚಿಸಲಾಗಿತ್ತು.

ಪ್ರವಾದಿಯ ಪುರಾವೆಗಳು

ಆತನ ದಿನದಲ್ಲಿ, ಇಂದಿನಂತೆ, ಯೇಸು ತನ್ನ ಅಧಿಕಾರವನ್ನು ಪ್ರಶ್ನಿಸುವ ವಿಮರ್ಶಕರನ್ನು ಹೊಂದಿದ್ದನು. ಆತನ ಉತ್ತರವು ಮೊದಲು ಬಂದ ಪ್ರವಾದಿಗಳಿಗೆ ಸೂಚಿಸುತ್ತಿತ್ತು, ಅವರು ಆತನ ಜೀವನವನ್ನು ಮುನ್ಸೂಚಿಸಿದ್ದಾರೆಂದು ಪ್ರತಿಪಾದಿಸಿದರು. ಯೇಸು ತನ್ನನ್ನು ವಿರೋಧಿಸುವವರಿಗೆ ಹೇಳಿದ ಒಂದು ಉದಾಹರಣೆ ಇಲ್ಲಿದೆ:

…ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿ ಕೊಡುವವುಗಳಾಗಿವೆ…  

ಯೋಹಾನ 5:39

ಬೇರೆ ರೀತಿಯಲ್ಲಿ ಹೇಳುವುದಾದರೆ, ನೂರಾರು ವರ್ಷಗಳ ಹಿಂದೆಯೇ ಇಬ್ರೀಯ ವೇದಗಳಲ್ಲಿ ತನ್ನ ಜೀವನದ ಕುರಿತು ಪ್ರವಾದಿಸಿಸ್ಪಟ್ಟಿದೆಯೆಂದು ಯೇಸು ಪ್ರತಿಪಾದಿಸಿದನು. ಭವಿಷ್ಯದಲ್ಲಿ ಮಾನವನ ಒಳನೋಟವು ನೂರಾರು ವರ್ಷಗಳನ್ನು ಮುನ್ಸೂಚಿಸಲು ಸಾಧ್ಯವಿಲ್ಲದ ಕಾರಣ, ಯೇಸು ತಾನು ನಿಜವಾಗಿಯೂ ಮಾನವಕುಲದ ದೇವರ ಯೋಜನೆಯಾಗಿ ಬಂದಿದ್ದಾನೆಂದು ಪರಿಶೀಲಿಸಲು ಇದು ಸಾಕ್ಷಿಯಾಗಿದೆ ಎಂದು ಹೇಳಿದನು. ಇದನ್ನು ವೈಯಕ್ತಿಕವಾಗಿ ಪರಿಶೀಲಿಸಲು ಇಂದು ಇಬ್ರೀಯ ವೇದಗಳು ನಮಗೆ ಲಭ್ಯವಿದೆ.

ಇಲ್ಲಿಯವರೆಗೆ ಇಬ್ರೀಯ ಪ್ರವಾದಿಗಳು ಪ್ರವಾದಿಸಿದ್ದನ್ನು ಸಂಕ್ಷಿಪ್ತವಾಗಿ ಹೇಳೋಣ. ಯೇಸುವಿನ ಬರೋಣವನ್ನು ಮಾನವ ಇತಿಹಾಸದ ಆರಂಭದಲ್ಲಿ ಸುಳಿವು ನೀಡಲಾಯಿತು. ಆಗ ಅಬ್ರಹಾಮನು ಯೇಸುವನ್ನು ಬಲಿ ಕೊಡಬೇಕಾದ ಸ್ಥಳವನ್ನು ಮುನ್ಸೂಚಿಸಿದನು ಹಾಗೆಯೇ ಪಸ್ಕಹಬ್ಬವು ವರ್ಷದ ದಿನವನ್ನು ಮುನ್ಸೂಚಿಸಿತು. ಕೀರ್ತನೆ 2 ರಲ್ಲಿ ‘ಕ್ರಿಸ್ತ’ ಎಂಬ ಶೀರ್ಷಿಕೆಯನ್ನು ಬರಲಿರುವ ರಾಜನನ್ನು ಮುನ್ಸೂಚಿಸಲು ಬಳಸಲಾಗಿದೆ ಎಂದು ನಾವು ನೋಡಿದ್ದೇವೆ. ನಾವು ಆತನ ವಂಶಾವಳಿ, ಯಾಜಕ ವೃತ್ತಿ, ಮತ್ತು ಹೆಸರನ್ನು ಮುನ್ಸೂಚಿಸಲಾಗಿದೆಯೆಂದು ನೋಡಿದ್ದೇವೆ. ನಜರೇತಿನ ಯೇಸುವಿನಂತೆ ಅನೇಕ ಪ್ರವಾದಿಗಳ ಜೀವನವನ್ನು ದೂರದಿಂದಲೇ  ಪ್ರವಾದಿಸಲಾಗುವ ಯಾರ ಬಗ್ಗೆಯಾದರೂ ಇತಿಹಾಸದಲ್ಲೆಲ್ಲಾ ನಿಮಗೆ ಯೋಚಿಸಲಾಗುವುದೇ?

ಸಮಾರೋಪ: ಜೀವವೃಕ್ಷವನ್ನು ಎಲ್ಲರಿಗೂ ನೀಡಲಾಗುತ್ತದೆ

ಆಲದ ಮರದಂತೆ, ಅಮರ ಮತ್ತು ನಿರಂತರವಾದ ಮರದ ಚಿತ್ರಣವು, ಸತ್ಯವೇದದ ಕೊನೆಯ ಅಧ್ಯಾಯಕ್ಕೆ ಮುಂದುವರಿಯುತ್ತದೆ, ಮತ್ತೆ ಭವಿಷ್ಯದೆಡೆ ಮುಂದಾಲೋಚನೆ ಮಾಡುವದಾಗಿದೆ, ಮುಂದಿನ ಬ್ರಹ್ಮಾಂಡದ ಬಗ್ಗೆ, ಮತ್ತೆ ಮುನ್ಸೂಚನೆ ನೀಡುತ್ತಾ, ‘ಜೀವನದ ನೀರಿನ ನದಿ’ ಎಲ್ಲಿದೆ

 2 ಅದರ ಬೀದಿಯ ಮಧ್ಯದಲ್ಲಿಯೂ ಆ ನದಿಯ ಉಭಯ ಪಾರ್ಶ್ವಗಳಲ್ಲಿಯೂ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಇದ್ದವು

ಪ್ರಕಟನೆ 22: 2

ಎಲ್ಲಾ ರಾಷ್ಟ್ರಗಳ ಜನರು – ನೀವು ಸೇರಿದಂತೆ – ಸಾವಿನಿಂದ ವಿಮೋಚನೆ ಮತ್ತು ಜೀವವೃಕ್ಷದ ಶ್ರೀಮಂತಿಕೆ ಎರಡನ್ನೂ ಅನುಭವಿಸಲು ಆಹ್ವಾನಿಸಲಾಗಿದೆ – ನಿಜವಾದ ಅಮರ ಆಲದ ಮರ. ಆದರೆ ಹೇಗೆ ಮೊದಲು ರೆಂಬೆಯನ್ನು‘ಕತ್ತರಿಸಬೇಕಾದ’ ಅಗತ್ಯವಿದೆಯೆಂದು ಇಬ್ರೀಯ ಪ್ರವಾದಿಗಳು ಪ್ರವಾದಿಸಿದ್ದಾರೆಂಬುದರ ಬಗ್ಗೆ ನಾವು ಮುಂದಿನ ಸಂಚಿಕೆಯಲ್ಲಿ ನೋಡಲಿದ್ದೇವೆ

Leave a Reply

Your email address will not be published. Required fields are marked *