ಪೈಸಿಸ್, ಅಥವಾ ಮೀನ, ಪ್ರಾಚೀನ ರಾಶಿಚಕ್ರ ಕಥೆಯ ಏಳನೇ ಅಧ್ಯಾಯವಾಗಿದೆ, ಇದು ರಾಶಿಚಕ್ರ ಘಟಕದ ಭಾಗವಾಗಿದ್ದು, ಬರಲಿರುವಾತನ ವಿಜಯದ ಫಲಿತಾಂಶಗಳನ್ನು ನಮಗೆ ಬಹಿರಂಗಪಡಿಸುತ್ತದೆ. ಮೀನ ರಾಶಿಯು ಎರಡು ಮೀನುಗಳ ಚಿತ್ರವನ್ನು ರೂಪಿಸುತ್ತದೆ, ಹಾಗೂ ಇದನ್ನು ಉದ್ದವಾದ ಪಟ್ಟಿಯಿಂದ ಒಟ್ಟಿಗೆ ಬಂಧಿಸಲಾಗಿದೆ. ಪ್ರಾಚೀನ ರಾಶಿಚಕ್ರದ ಇಂದಿನ ಓದುವಿಕೆಯಲ್ಲಿ, ನೀವು ಪ್ರೀತಿ, ಅದೃಷ್ಟ, ಸಂಪತ್ತು, ಆರೋಗ್ಯವನ್ನು ಕಾಣಲು, ಮತ್ತು ನಿಮ್ಮ ಕುಂಡ್ಲಿಯ ಮೂಲಕ ನಿಮ್ಮ ವ್ಯಕ್ತಿತ್ವದ ಬಗ್ಗೆ ಒಳನೋಟವನ್ನು ಕಂಡುಹಿಡಿಯಲು ಮೀನ ರಾಶಿಯ ಜಾತಕವನ್ನು ಅನುಸರಿಸುತ್ತೀರಿ.
ಆದರೆ ಇದು ಪ್ರಾಚೀನರಿಗೆ ಏನನ್ನು ಅರ್ಥೈಸುತ್ತದೆ ?
ಉದ್ದವಾದ ಪಟ್ಟಿಯ ಮೂಲಕ ಸಂಪರ್ಕ ಹೊಂದಿದ ಎರಡು ಮೀನುಗಳ ಚಿತ್ರ ಎಲ್ಲಿಂದ ಬಂತು?
ಎಚ್ಚರಿಕೆಯಿಂದ! ಇದಕ್ಕೆ ಉತ್ತರಿಸುವುದರಿಂದ ನಿಮ್ಮ ಜ್ಯೋತಿಷ್ಯವನ್ನು ಅನಿರೀಕ್ಷಿತ ರೀತಿಯಲ್ಲಿ ತೆರೆಯುತ್ತದೆ – ನಿಮ್ಮನ್ನು ಬೇರೆ ಪ್ರಯಾಣಕ್ಕೆ ಹತ್ತಿಸಿ ನಂತರ ನಿಮ್ಮ ಕುಂಡ್ಲಿಯನ್ನು ಪರಿಶೀಲಿಸುವಾಗ ನೀವು ಉದ್ದೇಶಿಸಿದ್ದೀರಿ…
ನಾವು ಪ್ರಾಚೀನ ಜ್ಯೋತಿಷ್ಯವನ್ನು ಅನ್ವೇಷಿಸಿದ್ದೇವೆ, ಮತ್ತು ಕನ್ಯಾ ರಾಶಿಯಿಂದ ಕುಂಭ ರಾಶಿಯ ವರೆಗಿನ ಪ್ರಾಚೀನ ಕುಂಡ್ಲಿಯನ್ನು ಪರಿಶೀಲಿಸಿದ್ದೇವೆ, ನಾವು ಮೀನರಾಶಿಯೊಂದಿಗೆ ಮುಂದುವರಿಯುತ್ತೇವೆ. ನಕ್ಷತ್ರಗಳ ಈ ಪ್ರಾಚೀನ ಜ್ಯೋತಿಷ್ಯದಲ್ಲಿ ಪ್ರತಿ ಅಧ್ಯಾಯವು ಎಲ್ಲ ಜನರಿಗಾಗಿ ನೀಡಲಾಗಿದೆ. ಆದ್ದರಿಂದ ನೀವು ಆಧುನಿಕ ಜಾತಕ ಅರ್ಥದಲ್ಲಿ ಮೀನ ರಾಶಿಯವರು ‘ಅಲ್ಲ’ದಿದ್ದರೂ ಸಹ, ಮೀನ ರಾಶಿಯ ನಕ್ಷತ್ರಗಳಲ್ಲಿನ ಪ್ರಾಚೀನ ಕಥೆಯನ್ನು ತಿಳಿದುಕೊಳ್ಳುವುದು ಯೋಗ್ಯವಾಗಿದೆ.
ನಕ್ಷತ್ರಗಳಲ್ಲಿ ಮೀನರಾಶಿ ನಕ್ಷತ್ರಪುಂಜ
ಮೀನ ರಾಶಿ ಅಥವಾ ಮೀನ್ನನ್ನು ರೂಪಿಸುವ ನಕ್ಷತ್ರಗಳು ಇಲ್ಲಿವೆ. ನೀವು ಈ ಚಿತ್ರದಲ್ಲಿ ಉದ್ದನೆಯ ಪಟ್ಟಿಯ ಮೂಲಕ ಒಟ್ಟಿಗೆ ಹಿಡಿದಿರುವ ಎರಡು ಮೀನುಗಳನ್ನು ಹೋಲುವ ಯಾವುದನ್ನಾದರೂ ನೋಡಬಹುದೇ?
‘ಮೀನ ರಾಶಿ’ಯಲ್ಲಿ ನಕ್ಷತ್ರಗಳನ್ನು ರೇಖೆಗಳೊಂದಿಗೆ ಸಂಪರ್ಕಿಸುವುದರಿಂದ ಮೀನುಗಳು ಸ್ಪಷ್ಟವಾಗುವುದಿಲ್ಲ. ಹೇಗೆ ಆರಂಭಿಕ ಜ್ಯೋತಿಷಿಗಳು ಈ ನಕ್ಷತ್ರಗಳಿಂದ ಎರಡು ಮೀನುಗಳ ಬಗ್ಗೆ ಯೋಚಿಸಿದರು?
ಆದರೆ ಈ ಚಿಹ್ನೆ ಮಾನವ ಇತಿಹಾಸದಲ್ಲಿ ನಮಗೆ ತಿಳಿದಿರುವಷ್ಟು ಹಿಂದಕ್ಕೆ ಹೋಗುತ್ತದೆ. 2000 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾದ, ಐಗುಪ್ತದ ಡೆಂಡೆರಾ ದೇವಾಲಯದಲ್ಲಿನ ರಾಶಿಚಕ್ರ ಇಲ್ಲಿದೆ, ಎರಡು ಮೀನ ರಾಶಿಯ ಮೀನುಗಳನ್ನು ಕೆಂಪು ಬಣ್ಣದ ವೃತ್ತದಲ್ಲಿ ತೋರಿಸಲಾಗಿದೆ. ಹೇಗೆ ಅವುಗಳನ್ನು ಪಟ್ಟಿಯು ಒಟ್ಟಿಗೆ ಬಂಧಿಸುತ್ತದೆ ಎಂಬುದನ್ನು ನೀವು ಸಹಾ ಬಲಭಾಗದಲ್ಲಿರುವ ರೇಖಾಚಿತ್ರದಲ್ಲಿ ನೋಡಬಹುದು.
ಮೀನ ರಾಶಿಯ ಸಾಂಪ್ರದಾಯಿಕ ಚಿತ್ರಣವನ್ನು ಕೆಳಗೆ ನೀಡಲಾಗಿದೆ, ಆ ಜ್ಯೋತಿಷ್ಯವನ್ನು ನಮಗೆ ತಿಳಿದಷ್ಟು ಹಿಂದೆಯೇ ಬಳಸಲ್ಪಟ್ಟಿದೆ.
ಎರಡು ಮೀನುಗಳ ಅರ್ಥವೇನು?
ಮತ್ತು ಪಟ್ಟಿಯನ್ನು ಅವರ ಎರಡು ಬಾಲಗಳಿಗೆ ಅಂಟಿಸಲಾಗಿದೆಯೇ?
ನಿಮಗೂ ಮತ್ತು ನನಗೂ ಏನು ಮಹತ್ವವನ್ನುಂಟು ಮಾಡಿದೆ?
ಮೀನರಾಶಿಯ ಮೂಲ ಅರ್ಥ
ಮಕರ ರಾಶಿಯು ಮೀನಿನ ಬಾಲವು ಸಾಯುತ್ತಿರುವ ಮೇಕೆಯ ತಲೆಯಿಂದ ಜೀವವನ್ನು ಪಡೆಯಿತು ಎಂದು ತೋರಿಸಿದೆ. ಕುಂಭ ರಾಶಿ ನೀರನ್ನು ಮೀನು – ಪಿಸ್ಕಿಸ್ ಆಸ್ಟ್ರಿನಸ್ನಗೆ ಸುರಿಯಲಾಗಿದೆ ಎಂದು ತೋರಿಸಿದೆ. ಮೀನುಗಳು ಜೀವಜಲವನ್ನು ಸ್ವೀಕರಿಸುವ ಬಹುಸಂಖ್ಯೆಯನ್ನು ಪ್ರತಿನಿಧಿಸುತ್ತವೆ. ದೇವರು ಅವನಿಗೆ ವಾಗ್ದಾನ ಮಾಡಿದಾಗ ಶ್ರೀ ಅಬ್ರಹಾಮನು ಇದನ್ನು ಮುನ್ಸೂಚಿಸಿದನು
3.ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು ಎಂದು ಹೇಳಿದನು.
ಆದಿಕಾಂಡ 12:3
18.ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂವಿುಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು ಎಂಬದಾಗಿ ಯೆಹೋವನು ತನ್ನಾಣೆಯಿಟ್ಟು ಹೇಳಿದ್ದಾನೆ ಅಂದನು.
ಆದಿಕಾಂಡ 22:18
ಬರುವಾತನ ಮೂಲಕ ಬಹುಸಂಖ್ಯೆಯು ರಕ್ಷಿಸಲ್ಪಟ್ಟರು ಆತನು ಅವರನ್ನು ಎರಡು ಗುಂಪುಗಳಾಗಿ ಪ್ರತ್ಯೇಕಿಸಿದನು
6.ಆತನೇ ಈಗ ಹೀಗನ್ನುತ್ತಾನೆ – ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪಕಾರ್ಯವೇ ಸರಿ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.
ಯೆಶಾಯ 49: 6
ಯೆಶಾಯನು ‘ಯಾಕೋಬನ ಕುಲಗಳ’ (ಅಂದರೆ ಯಹೂದಿಗಳು) ಹಾಗೂ ‘ಅನ್ಯಜನರ’ ಬಗ್ಗೆ ಬರೆದಿದ್ದಾನೆ. ಇವುಗಳು ಮೀನ ರಾಶಿಯ ಎರಡು ಮೀನುಗಳು. ಯೇಸು ತನ್ನ ಶಿಷ್ಯರನ್ನು ಕರೆದಾಗ ಆತನು ಅವರಿಗೆ ಹೇಳಿದನು
19.ಅವರಿಗೆ ಆತನು – ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು ಎಂದು ಹೇಳುತ್ತಲೇ
ಮತ್ತಾಯನು 4:19
ಯೇಸುವಿನ ಮೊದಲ ಅನುಯಾಯಿಗಳು ತನಗೆ ಸೇರಿದವರು ಎಂದು ತೋರಿಸಲು ಮೀನಿನ ಚಿಹ್ನೆಯನ್ನು ಬಳಸಿದರು. ಪ್ರಾಚೀನ ಸಮಾಧಿ ಗೂಡುಗಳ ಚಿತ್ರಗಳು ಇಲ್ಲಿವೆ.
ಮೀನರಾಶಿಯ ಎರಡು ಮೀನುಗಳು, ಯಾಕೋಬನ ಕುಲಗಳು ಮತ್ತು ಯೇಸುವನ್ನು ಅನುಸರಿಸುವ ಇತರ ರಾಷ್ಟ್ರಗಳಲ್ಲಿರುವವರಿಗೆ ಆತನಿಂದ ಸಮಾನ ಜೀವನವನ್ನು ನೀಡಲಾಗಿದೆ. ಪಟ್ಟಿಯು ಸಹಾ ಎರಡು ಮೀನುಗಳನ್ನು ಸಮಾನವಾಗಿ ಬಿಗಿಯಾಗಿ ಹಿಡಿದಿದೆ.
ಪಟ್ಟಿ – ಹಾದುಹೋಗುವ ಬಂಧನ
ಮೀನ ರಾಶಿ ನಕ್ಷತ್ರಪುಂಜದಲ್ಲಿ ಪಟ್ಟಿ, ಎರಡೂ ಮೀನುಗಳನ್ನು ಒಟ್ಟಿಗೆ ಬಂಧಿಸುತ್ತದೆ. ಪಟ್ಟಿ ಎರಡು ಮೀನುಗಳನ್ನು ಸೆರೆಯಲ್ಲಿಟ್ಟುಕೊಂಡಿದೆ. ಆದರೆ ನಾವು ಮೇಷ ರಾಶಿಯಾದ ಟಗರಿನ ಪಟ್ಟಿಗೆ ಬರುತ್ತಿರುವುದನ್ನು ನೋಡುತ್ತೇವೆ. ಇದು ಮೇಷ ರಾಶಿಯಿಂದ ಮೀನುಗಳನ್ನು ಮುಕ್ತಗೊಳಿಸುವ ದಿನದ ಬಗ್ಗೆ ಹೇಳುತ್ತದೆ.
ಇದು ಇಂದು ಯೇಸುವಿನ ಎಲ್ಲಾ ಅನುಯಾಯಿಗಳ ಅನುಭವವಾಗಿದೆ. ಸತ್ಯವೇದವು ನಮ್ಮ ವರ್ತಮಾನ ಕಾಲದ ಬಂಧನವನ್ನು ಕಷ್ಟ, ಕೊಳೆತ ಮತ್ತು ಸಾವಿಗೆ ವಿವರಿಸುತ್ತದೆ. ಆದರೆ ಈ ಬಂಧನದಿಂದ ಸ್ವಾತಂತ್ರ್ಯ ದಿನಕ್ಕಾಗಿ ಇನ್ನೂ ವಾಗ್ಧಾನದಲ್ಲಿ ಎದುರು ನೋಡುತ್ತಿದ್ದೇವೆ (ಪಟ್ಟಿಯ ಮೂಲಕ ಮೀನ ರಾಶಿಯಲ್ಲಿ ಪ್ರತಿನಿಧಿಸಲ್ಪಡುತ್ತದೆ).
18.ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ. 19.ದೇವಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಜಗತ್ತು ಬಹು ಲವಲವಿಕೆಯಿಂದ ಎದುರುನೋಡುತ್ತಿರುವದು. 20.ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಫೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. 21.ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ. 22.ಜಗತ್ತೆಲ್ಲಾ ಇಂದಿನವರೆಗೂ ನರಳುತ್ತಾ ಪ್ರಸವ ವೇದನೆಪಡುತ್ತಾ ಇರುತ್ತದೆಂದು ನಾವು ಬಲ್ಲೆವು. 23.ಇದು ಮಾತ್ರವಲ್ಲದೆ ಪ್ರಥಮ ಫಲವಾಗಿರುವ ಪವಿತ್ರಾತ್ಮವರವನ್ನು ಹೊಂದಿದ ನಾವಾದರೂ ದೇವಪುತ್ರರ ಪದವಿಯನ್ನು ಅಂದರೆ ದೇಹಕ್ಕೆ ಬರಬೇಕಾದ ವಿಮೋಚನೆಯನ್ನು ಎದುರುನೋಡುತ್ತಾ ನಮ್ಮೊಳಗೆ ನರಳುತ್ತೇವೆ. 24.ನಾವು ರಕ್ಷಣೆಯನ್ನು ಹೊಂದಿದವರಾದರೂ ಇನ್ನು ಎದುರುನೋಡುವವರಾಗಿದ್ದೇವೆ. ಎದುರುನೋಡುವ ಪದವಿ ಪ್ರತ್ಯಕ್ಷವಾಗಿದ್ದರೆ ಎದುರುನೋಡುವದೇಕೆ? ಪ್ರತ್ಯಕ್ಷವಾದದ್ದನ್ನು ಎದುರುನೋಡುವದುಂಟೇ? 25.ಆದರೆ ಕಾಣದಿರುವದನ್ನು ನಾವು ಎದುರುನೋಡುವವರಾಗಿದ್ದರೆ ತಾಳ್ಮೆಯಿಂದ ಕಾದುಕೊಂಡಿರುವೆವು.
ರೋಮಾಪುರದವರಿಗೆ 8:18-25
ನಾವು ನಮ್ಮ ದೇಹಗಳು ಮರಣದಿಂದ ವಿಮೋಚನೆ ಹೊಂದುವದಕ್ಕಾಗಿ ಕಾಯುತ್ತೇವೆ. ಇದು ಮತ್ತಷ್ಟು ವಿವರಿಸುವಂತೆ
50.ಸಹೋದರರೇ, ನಾನು ಹೇಳುವದೇನಂದರೆ – ರಕ್ತ ಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು; ಲಯವಾಗುವ ವಸ್ತು ನಿರ್ಲಯಪದವಿಗೆ ಬಾಧ್ಯವಾಗುವದಿಲ್ಲ. 51.ಕೇಳಿರಿ, ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ – ನಾವೆಲ್ಲರೂ ನಿದ್ರೆ ಹೋಗುವದಿಲ್ಲ; 52.ಆದರೆ ಕಡೇ ತುತೂರಿಯ ಧ್ವನಿಯಾಗುವಾಗ ನಾವೆಲ್ಲರು ಒಂದು ಕ್ಷಣದಲ್ಲೇ ರೆಪ್ಪೆ ಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು. 53.ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ. 54.ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವದು. ಆ ಮಾತು ಏನಂದರೆ – ಮರಣವು ನುಂಗಿಯೇ ಹೋಯಿತು, ಜಯವಾಯಿತು ಎಂಬದೇ. 55.ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ? 56.ಮರಣದ ಕೊಂಡಿ ಪಾಪವೇ; ಮತ್ತು ಪಾಪದ ಬಲಕ್ಕೆ ಆಧಾರವು ಧರ್ಮಶಾಸ್ತ್ರವೇ. 57.ಆದರೆ ದೇವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ; ಆತನಿಗೆ ಸ್ತೋತ್ರ.
1 ಕೊರಿಂಥದವರಿಗೆ 15:50-57
ಮೀನ ರಾಶಿಯ ಮೀನುಗಳ ಸುತ್ತ ಪಟ್ಟಿಯು ನಮ್ಮ ವರ್ತಮಾನ ಕಾಲದ-ದಿನದ ಪರಿಸ್ಥಿತಿಯನ್ನು ಚಿತ್ರಿಸುತ್ತದೆ. ಆದರೆ ನಾವು ನಮ್ಮನ್ನು ಮುಕ್ತಗೊಳಿಸಲು ಮೇಷ ರಾಶಿಯ ಆಗಮನವನ್ನು ನಿರೀಕ್ಷೆಯಿಂದ ಕಾದಿರುತ್ತೇವೆ. ಈ ಸ್ವಾತಂತ್ರ್ಯವು ಮೀನ ರಾಶಿಯಲ್ಲಿರುವ ಎಲ್ಲರಿಗೂ ಬಂಧನದಿಂದ ಸಾವಿಗೆ ತರುತ್ತದೆ. ಯೇಸುವಿನ ವಿಜಯವು ನಮಗೆ ಜೀವಜಲವನ್ನು ನೀಡುವದು ಮಾತ್ರವಲ್ಲ, ಆದರೆ ನಾವು ನಮ್ಮ ಪ್ರಸ್ತುತ ಬಂಧನದಿಂದ ಬಿಡುಗಡೆಯಾಗುವ ದಿನ ಕೊಳೆಯುವ, ತೊಂದರೆ ಮತ್ತು ಬರಲಿರುವ ಸಾವಿಗೆ ಎಂದೂ ಸಹಾ ಮೀನ ರಾಶಿಗಳ ಚಿಹ್ನೆಯು ಘೋಷಿಸಿತು.
ಮೀನ ರಾಶಿಯ ಜಾತಕ
ಜಾತಕವು ಗ್ರೀಕ್ ಪದವಾದ ‘ಹೋರೋ’ (ಸಮಯ) ದಿಂದ ಬಂದಿರುವುದರಿಂದ ಮತ್ತು ಪ್ರವಾದಿಯ ಬರಹಗಳು ನಮಗೆ ಪ್ರಮುಖ ಸಮಯವನ್ನು ಸೂಚಿಸುತ್ತವೆ, ನಾವು ಮೀನ ರಾಶಿಯ ‘ಹೋರೊ’ವನ್ನು ಗಮನಿಸುತ್ತೇವೆ. ಮೀನುಗಳು ನೀರಿನಲ್ಲಿ ಜೀವಂತವಾಗಿವೆ, ಆದರೆ ಇನ್ನೂ ಪಟ್ಟಿಗಳಿಂದ ಬಂಧಿಸಲ್ಪಟ್ಟಿದ್ದು ಮೀನ ರಾಶಿಯ ಹೋರೋ ಓದುವಿಕೆಯನ್ನು ಗುರುತಿಸುತ್ತದೆ. ನಿಜವಾದ ಜೀವನ ಆದರೆ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕಾಯುತ್ತಿದೆ.
2.ನಿಮಗೆ ಬಹಿಷ್ಕಾರ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ. 3.ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವದರಿಂದ ಇಂಥದನ್ನು ನಿಮಗೆ ಮಾಡುವರು. 4.ಆ ಕಾಲ ಬಂದಾಗ ಆತನು ನಮಗೆ ಇಂಥಿಂಥದನ್ನು ಹೇಳಿದನಲ್ಲಾ ಎಂದು ನೀವು ನೆನಪಿಗೆ ತರುವಂತೆ ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ. ನಾನು ನಿಮ್ಮ ಸಂಗಡ ಇದ್ದದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ.
ಯೋಹಾನ 16:2-4
11.ಅವರು ನಿಮ್ಮನ್ನು ಸಭಾಮಂದಿರಗಳ ಅಧ್ಯಕ್ಷರ ಮುಂದಕ್ಕೂ ಅಧಿಕಾರಿಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ಹಿಡುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರಕೊಡಬೇಕು? ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ. 12.ಯಾಕಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು ಅಂದನು.
ಲೂಕ 12:11-12
ನಾವು ಕುಂಭ ರಾಶಿಯ ಸಮಯದಲ್ಲಿ ಮತ್ತು ಮೀನ ರಾಶಿಯ ಸಮಯದಲ್ಲಿಯೂ ವಾಸಿಸುತ್ತೇವೆ. ಕುಂಭ ರಾಶಿ ಮೀನುಗಳಿಗೆ ಜೀವ ತರಲು ನೀರನ್ನು (ದೇವರ ಆತ್ಮ) ತಂದಿತು. ಆದರೆ ನಾವು ಮಾತ್ರ ರಾಶಿಚಕ್ರದ ಕಥೆಯ ಮಧ್ಯದಲ್ಲಿದ್ದೇವೆ ಮತ್ತು ಧನು ರಾಶಿಯ ಅಂತಿಮ ವಿಜಯವು ಇನ್ನೂ ಭವಿಷ್ಯದಲ್ಲಿದೆ. ಯೇಸು ಮುನ್ಸೂಚನೆ ನೀಡಿದಂತೆ, ಈಗ ಈ ಸಮಯಗಳಲ್ಲಿ ನಾವು ತೊಂದರೆ, ಕಷ್ಟ, ಕಿರುಕುಳ ಮತ್ತು ದೈಹಿಕ ಮರಣವನ್ನು ಎದುರಿಸುತ್ತೇವೆ. ಮೀನುಗಳನ್ನು ಹಿಡಿಯುವ ಪಟ್ಟಿಗಳು ನಿಜವಾದದ್ದಾಗಿದೆ. ಆದರೆ ಪಟ್ಟಿಗಳು ತಾತ್ಕಾಲಿಕವಾಗಿ ಹಿಡಿದಿಟ್ಟುಕೊಂಡಿದ್ದರೂ ಸಹ ನಾವು ಇನ್ನೂ ಜೀವಜಲವನ್ನು ರುಚಿ ನೋಡುತ್ತೇವೆ. ಪವಿತ್ರಾತ್ಮನು ವಾಸಿಸುತ್ತಾನೆ, ಕಲಿಸುತ್ತಾನೆ ಮತ್ತು ನಮಗೆ ಮಾರ್ಗದರ್ಶನ ಮಾಡುತ್ತಾನೆ – ಸಾವಿನ ನಡುವೆಯೂ ಸಹಾ. ಮೀನ ರಾಶಿಯ ಸಮಯಕ್ಕೆ ಸ್ವಾಗತ.
ನಿಮ್ಮ ಮೀನರಾಶಿ ಓದುವಿಕೆ
ಇಂದು ನೀವು ಮತ್ತು ನಾನು ಮೀನ ರಾಶಿಯ ಜಾತಕ ಓದುವಿಕೆಯನ್ನು ಈ ಕೆಳಗಿನವುಗಳೊಂದಿಗೆ ಅನ್ವಯಿಸಬಹುದು.
ಮೀನ ರಾಶಿಯ ಜಾತಕವು ನೀವು ದೇವರ ರಾಜ್ಯವನ್ನು ಪ್ರವೇಶಿಸಲು ಅನೇಕ ಕಷ್ಟಗಳ ಮೂಲಕ ಹೋಗಬೇಕು ಎಂದು ಘೋಷಿಸುತ್ತದೆ. ವಾಸ್ತವವಾಗಿ ತೊಂದರೆಗಳು, ಕಷ್ಟಗಳು, ಯಾತನೆಗಳು ಮತ್ತು ಸಾವು ಸಹಾ ಆ ರಾಜ್ಯಕ್ಕೆ ನಿಮ್ಮ ಪ್ರಯಾಣದಲ್ಲಿ ಬೇಕಾದ ಕೆಲವು ಸಾಮಾನ್ಯ ಲಕ್ಷಣಗಳು. ಇದು ನಿಮ್ಮನ್ನು ಕೆಳಗಿಳಿಸಲು ಬಿಡಬೇಡಿ. ಇದು ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಎಂಬ ಮೂರು ಗುಣಲಕ್ಷಣಗಳನ್ನು ನಿಮ್ಮಲ್ಲಿ ಬೆಳೆಸಲು ಸಾಧ್ಯವಾಗುವುದರಿಂದ : ಅದು ನಿಜವಾಗಿಯೂ ನಿಮ್ಮ ಪ್ರಯೋಜನಕ್ಕಾಗಿರುತ್ತದೆ. ನೀವು ಸೋತುಹೋಗದಿರುವದಾದರೆ – ಇದನ್ನು ಮೀನ ರಾಶಿಯ ಪಟ್ಟಿಗಳು ನಿಮ್ಮಲ್ಲಿ ಮಾಡಬಹುದು. ನೀವು ಮೇಲ್ನೋಟಕ್ಕೆ ವ್ಯರ್ಥವಾಗಬಹುದಾದರೂ, ಆಂತರಿಕವಾಗಿ ದಿನದಿಂದ ದಿನಕ್ಕೆ ನವೀಕರಿಸಲ್ಪಡುತ್ತೀರಿ. ನಿಮ್ಮಲ್ಲಿ ಆತ್ಮದ ಮೊದಲ ಫಲಗಳು ಇರುವುದೇ ಇದಕ್ಕೆ ಕಾರಣ. ಆದ್ದರಿಂದ ನೀವು ನಿಮ್ಮ ದೇಹದ ವಿಮೋಚನೆಗಾಗಿ ಕುತೂಹಲದಿಂದ ಕಾಯುತ್ತಿದ್ದಂತೆ, ನೀವು ಆಂತರಿಕವಾಗಿ ನರಳುತ್ತಿರುವಾಗಲೂ ಸಹಾ, ಈ ನೈಜ ಸಮಸ್ಯೆಗಳು ನಿಮ್ಮನ್ನು ರಾಜ ಮತ್ತು ಆತನ ರಾಜ್ಯದೊಂದಿಗೆ ಹೊಂದಿಕೊಳ್ಳುವಂತೆ ಮಾಡಿದ,ಅವುಗಳು ನಿಮ್ಮ ಒಳಿತಿಗಾಗಿ ಕೆಲಸ ಮಾಡುತ್ತವೆ ಎಂಬುದನ್ನು ಗುರುತಿಸಿ.
ಈ ಸತ್ಯದೊಂದಿಗೆ ನೀವೇ ಮುಂದುವರಿಯಿರಿ: ಸಾವಿನಿಂದ ಯೇಸುವಿನ ಪುನರುತ್ಥಾನದ ಮೂಲಕ ಜೀವಂತ ಭರವಸೆಗೆ, ಮತ್ತು ಎಂದಿಗೂ ನಾಶವಾಗದ, ಹಾಳಾಗುವ ಅಥವಾ ಕಳೆಗು೦ದುವಂತಹ ಪಿತ್ರಾರ್ಜಿತಕ್ಕೆ, ರಾಜನು ತನ್ನ ಮಹಾ ಕರುಣೆಯಿಂದ ನಿಮಗೆ ಹೊಸ ಜೀವನವನ್ನು ಕೊಟ್ಟಿದ್ದಾನೆ. ನಂಬಿಕೆಯ ಮೂಲಕ ದೇವರ ಶಕ್ತಿಯಿಂದ ರಕ್ಷಿಸಲ್ಪಟ್ಟ, ಮತ್ತು ಕೊನೆಯ ಸಮಯದಲ್ಲಿ ಬಹಿರಂಗಗೊಳ್ಳಲು ಸಿದ್ಧವಾಗಿರುವ ರಕ್ಷಣೆಯು ಬರುವವರೆಗೂ ನಿಮಗಾಗಿ ಈ ಪಿತ್ರಾರ್ಜಿತವನ್ನು ಸ್ವರ್ಗದಲ್ಲಿ ಇರಿಸಲಾಗಿದೆ. ನೀವು ಈಗ ಸ್ವಲ್ಪ ಸಮಯದವರೆಗೆ ಎಲ್ಲಾ ರೀತಿಯ ಪರೀಕ್ಷೆಗಳಲ್ಲಿ ದುಃಖವನ್ನು ಅನುಭವಿಸಬೇಕಾಗಬಹುದಾದರೂ, ಈ ಎಲ್ಲಾದರಲ್ಲೂ ಬಹಳವಾಗಿ ಸಂತೋಷಪಡುತ್ತೀರಿ, ಇವುಗಳು ನಿಮ್ಮ ನಂಬಿಕೆಯ ಪ್ರಾಮಾಣಿಕತೆಯನ್ನು ಸಾಬೀತುಪಡಿಸಿವೆ – ಚಿನ್ನಕ್ಕಿಂತ ಹೆಚ್ಚಿನ ಮೌಲ್ಯ, ಅದು ಬೆಂಕಿಯಿಂದ ಶುದ್ದಿಕರಿಸಲ್ಪಟ್ಟರೂ ನಾಶವಾಗುತ್ತದೆ. ಅವುಗಳು ರಾಜನ ಬರೋಣದಲ್ಲಿ ಪ್ರಶಂಸೆ, ವೈಭವ ಮತ್ತು ಗೌರವಕ್ಕೆ ಕಾರಣವಾಗುತ್ತವೆ.
ರಾಶಿಚಕ್ರದ ಕಥೆಯ ಮೂಲಕ ಮತ್ತಷ್ಟು ಮತ್ತು ಮೀನ ರಾಶಿಗೆ ಆಳವಾಗಿ
ಹೇಗೆ ನಾವು ಈ ವಿಮೋಚನೆಯು ಮೇಷ ರಾಶಿಯಲ್ಲಿ ತೆರೆದಿರುವದನ್ನು ನೋಡುತ್ತೇವೆ. ಪ್ರಾಚೀನ ಜ್ಯೋತಿಷ ಜ್ಯೋತಿಷ್ಯದ ಆಧಾರವನ್ನು ಇಲ್ಲಿ ತಿಳಿಯಿರಿ. ಕನ್ಯಾ ರಾಶಿಯೊಂದಿಗೆ ಅದರ ಪ್ರಾರಂಭವನ್ನು ಓದಿ.
ಮೀನ ರಾಶಿಗೆ ಅನುಗುಣವಾದ ಹೆಚ್ಚಿನ ಬರಹಗಳನ್ನು ಸಹ ಓದಿ: