ವೇದಗಳು ಋಗ್ವೇದದಲ್ಲಿನ ಪುರುಷಸೂಕ್ತನ ಆರಂಭದಲ್ಲಿಯೇ ಬರುವ ವ್ಯಕ್ತಿಯನ್ನು ಮುನ್ಸೂಚಿಸಿದವು. ನಂತರ ನಾವು ಇಬ್ರೀಯ ವೇದಗಳೊಂದಿಗೆ ಮುಂದುವರೆದಿದ್ದೇವೆ, ಸಂಸ್ಕೃತ ಮತ್ತು ಇಬ್ರೀಯ ವೇದಗಳೆರೆಡೂ (ಸತ್ಯವೇದ) ಯೇಸುವಿನ ಪ್ರತಿಬಿಂಬದಿಂದ (ನಜರೇತಿನ ಯೇಸು) ಪೂರೈಸಲಾಯಿತೆಂದು ಸೂಚಿಸಿದವು.
ಹಾಗಾದರೆ ಈ ಯೇಸು ಪ್ರವಾದಿಸಲ್ಪಟ್ಟ ಪುರುಷ ಅಥವಾ ಕ್ರಿಸ್ತನೇ? ಆತನ ಬರೋಣವು ಕೇವಲ ಒಂದು ನಿರ್ದಿಷ್ಟ ಗುಂಪಿಗೆ, ಅಥವಾ ಎಲ್ಲರಿಗೂ – ಎಲ್ಲಾ ಜಾತಿಗಳನ್ನು ಒಳಗೊಂಡಂತೆ, ವರ್ಣದಿಂದ ಅವರ್ಣಕ್ಕೂ ಕೂಡ ಸಂಬಂಧಿಸಿದೆಯೇ?
ಪುರುಷಸೂಕ್ತದಲ್ಲಿ ಜಾತಿ (ವರ್ಣ)
ಪುರುಷಸೂಕ್ತನು ಪುರುಷನ ಬಗ್ಗೆ ಹೀಗೆ ಹೇಳಿದನು:
ಪುರುಷಸೂಕ್ತ ವಚನಗಳು 11-12 – ಸಂಸ್ಕೃತ | ಸಂಸ್ಕೃತ ಲಿಪ್ಯಂತರ | ಭಾಷಾಂತರ |
यत पुरुषं वयदधुः कतिधा वयकल्पयन | मुखं किमस्य कौ बाहू का ऊरू पादा उच्येते || बराह्मणो.अस्य मुखमासीद बाहू राजन्यः कर्तः | ऊरूतदस्य यद वैश्यः पद्भ्यां शूद्रो अजायत || | 11 yat puruṣaṃ vyadadhuḥ katidhā vyakalpayan | mukhaṃ kimasya kau bāhū kā ūrū pādā ucyete || 12 brāhmaṇo.asya mukhamāsīd bāhū rājanyaḥ kṛtaḥ | ūrūtadasya yad vaiśyaḥ padbhyāṃ śūdro ajāyata | 11 ಅವರು ಪುರುಷನನ್ನು ವಿಭಜಿಸಿದಾಗ ಎಷ್ಟು ಭಾಗಗಳಾಗಿ ಮಾಡಿದರು? ಅವರು ಆತನ ಬಾಯಿ, ತೋಳುಗಳನ್ನು ಏನೆಂದು ಕರೆಯುವರು? ಆತನ ತೊಡೆ ಮತ್ತು ಪಾದಗಳನ್ನು ಏನೆಂದು ಹೆಸರಿಸುವರು? 12 ಬ್ರಾಹ್ಮಣನು ಆತನ ಬಾಯಿಯಾಗಿದ್ದನು, ರಾಜನ್ಯನು ಆತನ ಎರಡೂ ತೋಳುಗಳಾಗಿ ಮಾಡಲ್ಪಟ್ಟನು. ಆತನ ತೊಡೆಗಳು ವೈಶ್ಯವಾಯಿತು, ಆತನ ಪಾದಗಳಿಂದ ಶೂದ್ರ ಉತ್ಪತ್ತಿಯಾಗಲ್ಪಟ್ಟನು. |
ಇದು ಸಂಸ್ಕೃತ ವೇದಗಳಲ್ಲಿ ಜಾತಿ ಅಥವಾ ವರ್ಣದ ಆರಂಭಿಕ ಪ್ರಸ್ತಾಪವಾಗಿದೆ. ಇದು ಪುರುಷನ ದೇಹದಿಂದ ನಾಲ್ಕು ಜಾತಿಗಳನ್ನು ಬೇರ್ಪಡಿಸುತ್ತದೆ ಎಂದು ವಿವರಿಸುತ್ತದೆ: ಆತನ ಬಾಯಿಯಿಂದ ಬ್ರಾಹ್ಮಣ ಜಾತಿ/ವರ್ಣ, ಆತನ ತೋಳುಗಳಿಂದ ರಾಜನ್ಯ (ಇಂದು ಕ್ಷತ್ರಿಯ ಜಾತಿ/ವರ್ಣ ಎಂದು ಕರೆಯಲ್ಪಡುತ್ತದೆ), ಆತನ ತೊಡೆಗಳಿಂದ ವೈಶ್ಯ ಜಾತಿ/ವರ್ಣ, ಮತ್ತು ಆತನ ಪಾದಗಳಿಂದ ಶೂದ್ರ ಜಾತಿ. ಯೇಸು ಪುರುಷನಾಗಲು ಆತನು ಎಲ್ಲರನ್ನೂ ಪ್ರತಿನಿಧಿಸಬೇಕು.
ಆತನು ಪ್ರತಿನಿಧಿಸುವನೇ?
ಯೇಸು ಬ್ರಾಹ್ಮಣ ಮತ್ತು ಕ್ಷತ್ರಿಯನಾಗಿ
‘ಕ್ರಿಸ್ತನು’ ಎಂಬುದು ಪ್ರಾಚೀನ ಇಬ್ರೀಯ ಶೀರ್ಷಿಕೆಯಾಗಿದ್ದು, ಇದರ ಅರ್ಥ ‘ಆಡಳಿತಗಾರ’ – ಆಡಳಿತಗಾರರ ಆಡಳಿತಗಾರ ಎಂಬುದಾಗಿ ನಾವು ನೋಡಿದ್ದೇವೆ. ‘ಕ್ರಿಸ್ತನ’ ಹಾಗೆ ಯೇಸು ಕ್ಷತ್ರಿಯರೊಂದಿಗೆ ಸಂಪೂರ್ಣವಾಗಿ ಗುರುತಿಸಲ್ಪಡುತ್ತಾನೆ ಮತ್ತು ಪ್ರತಿನಿಧಿಸುತ್ತಾನೆ. ರೆಂಬೆಯಂತೆ ಯೇಸುವೂ ಸಹಾ ಯಾಜಕನಾಗಿ ಬರುವನೆಂದು ಪ್ರವಾದಿಸಿದ್ದನ್ನು ನಾವು ನೋಡಿದ್ದೇವೆ, ಆದ್ದರಿಂದ ಆತನು ಬ್ರಾಹ್ಮಣನೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುತ್ತಾನೆ ಮತ್ತು ಪ್ರತಿನಿಧಿಸುತ್ತಾನೆ. ವಾಸ್ತವವಾಗಿ, ಇಬ್ರೀಯ ಪ್ರವಾದನೆಯು ಆತನು ಯಾಜಕ ಮತ್ತು ರಾಜ ಎಂಬ ಎರಡು ಪಾತ್ರಗಳನ್ನು ಒಬ್ಬ ವ್ಯಕ್ತಿಯಾಗಿ ಒಟ್ಟುಗೂಡಿಸುವನು ಎಂದು ಸೂಚಿಸುತ್ತದೆ.
13 ಹೌದು, ಆತನು ಕರ್ತನ ದೇವಾಲಯವನ್ನು ಕಟ್ಟು ವನು; ಆತನು ಮಹಿಮೆಯನ್ನು ಧರಿಸುವನು; ಕೂತು ಕೊಂಡು ತನ್ನ ಸಿಂಹಾಸನದಲ್ಲಿ ಆಳುವನು, ತನ್ನ ಸಿಂಹಾಸನದಲ್ಲಿ ಯಾಜಕನಾಗಿರುವನು; ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವದು.()
ಜೆಕರ್ಯ 6:13
ವೈಶ್ಯನಾಗಿ ಯೇಸು
ಬರುವಾತನು, ವ್ಯಾಪಾರಿಯಂತೆ, ಮಾರಾಟಗಾರನು ಎಂದು ಇಬ್ರೀಯ ಋಷಿಗಳು/ಪ್ರವಾದಿಗಳು ಸಹಾ ಪ್ರವಾದಿಸಿದರು. ಅವರು ಮುನ್ಸೂಚನೆ ನೀಡಿದರು:
3 ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ.
ಯೆಶಾಯ 43: 3
ದೇವರು ಬರುವಾತನೊಂದಿಗೆ ಪ್ರವಾದನೆಯಂತೆ ಮಾತನಾಡುತ್ತಿದ್ದಾನೆ, ಆತನು ವಿಷಯಗಳಲ್ಲಿ ವ್ಯಾಪಾರ ಮಾಡುವುದಿಲ್ಲ, ಆದರೆ ಆತನು ತನ್ನ ಜೀವನವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ – ಜನರಿಗಾಗಿ ವ್ಯಾಪಾರ ಮಾಡುತ್ತಾನೆಂದು ಹೇಳುತ್ತಿದ್ದಾನೆ. ಆದ್ದರಿಂದ ಬರುವಾತನು ವ್ಯಾಪಾರಿಯಾಗಿರುವನು, ಜನರನ್ನು ಸ್ವತಂತ್ರಗೊಳಿಸುವ ವ್ಯಾಪಾರ. ಆತನು ವ್ಯಾಪಾರಿಯಾಗಿ ವೈಶ್ಯನನ್ನು ಗುರುತಿಸಲ್ಪಡುತ್ತಾನೆ ಮತ್ತು ಪ್ರತಿನಿಧಿಸಲ್ಪಡುತ್ತಾನೆ.
ಶೂದ್ರ – ಸೇವಕ
ಋಷಿಗಳು/ಪ್ರವಾದಿಗಳು ಸಹಾ ಆತನ ಬರೋಣದ ಪಾತ್ರವನ್ನು ಸೇವಕ, ಅಥವಾ ಶೂದ್ರನಂತೆ ಎಂದು ಬಹಳ ವಿವರವಾಗಿ ಮುನ್ಸೂಚಿಸಿದ್ದಾರೆ. ರೆಂಬೆಯು ಸೇವಕನಾಗಿರುತ್ತದೆ ಎಂದು ಪ್ರವಾದಿಗಳು ಹೇಗೆ ಮುನ್ಸೂಚನೆ ನೀಡಿದ್ದಾರೆಂದು ನಾವು ನೋಡಿದ್ದೇವೆ, ಆತನ ಸೇವೆಯು ಪಾಪಗಳನ್ನು ತೆಗೆದುಹಾಕುತ್ತದೆ:
8 ಪ್ರಧಾನ ಯಾಜಕ ನಾದ ಓ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ; ಅವರು ಆಶ್ಚರ್ಯವನ್ನುಂಟು ಮಾಡುವ ಮನುಷ್ಯರಾಗಿ ದ್ದಾರೆ; ಇಗೋ, ನಾನು ಕೊಂಬೆಯೆಂಬ ನನ್ನ ಸೇವಕ ನನ್ನು ಬರಮಾಡುವೆನು.
ಜೆಕರ್ಯ 3: 8-9
9 ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವವು; ಇಗೋ, ನಾನು ಅದರ ಕೆತ್ತನೆಯಿಂದ ಕೆತ್ತುವೆನು; ಆ ದೇಶದ ಅಪರಾಧ ವನ್ನು ಒಂದೇ ದಿನದಲ್ಲಿ ತೊಲಗಿಸುವೆನು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
ಯಾಜಕ, ಆಡಳಿತಗಾರ ಮತ್ತು ವ್ಯಾಪಾರಿಯೂ ಆಗಿದ್ದ, ಬರಲಿರುವ ರೆಂಬೆಯು ಸೇವಕ – ಶೂದ್ರನೂ ಸಹ ಆಗಿದ್ದಾನೆ. ಯೆಶಾಯನು ತನ್ನ ಸೇವಕನ (ಶೂದ್ರ) ಪಾತ್ರವನ್ನು ಬಹಳ ವಿವರವಾಗಿ ಪ್ರವಾದಿಸಿದ್ದಾನೆ. ಈ ಪ್ರವಾದನೆಯಲ್ಲಿ ದೇವರು ಎಲ್ಲಾ ‘ದೂರದ’ ರಾಷ್ಟ್ರಗಳು ಈ ಶೂದ್ರನ ಸೇವೆಯತ್ತ ಗಮನ ಹರಿಸಲು (ಅದು ನಮ್ಮದು!) ಸಲಹೆ ನೀಡುತ್ತಾನೆ.
ದ್ವೀಪ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ದೂರದ ಜನಗಳೇ, ಕಿವಿಗೊಡಿರಿ! ನಾನು ಗರ್ಭದಲ್ಲಿದ್ದಾಗಲೇ ಕರ್ತನು ನನ್ನನ್ನು ಕರೆ ದನು. ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.
ಯೆಶಾಯ 49: 1-6
2 ಆತನು ನನ್ನ ಬಾಯನ್ನು ಹರಿತವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈ ನೆರಳಿನಲ್ಲಿ ನನ್ನನ್ನು ಮರೆಯಾಗಿಟ್ಟಿದ್ದಾನೆ; ಆತನು ನುಣುಪಾದ ಬಾಣವನ್ನಾಗಿ ನನ್ನನ್ನು ರೂಪಿಸಿ ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.
3 ಆತನು ನನಗೆ–ನೀನು ನನ್ನ ಸೇವಕನು, ನಾನು ಮಹಿಮೆ ಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ ಎಂದು ಹೇಳಿದನು.
4 ಅದಕ್ಕೆ ನಾನು–ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ನಿಷ್ಪ್ರಯೋಜನವಾಗಿಯೂ ವ್ಯರ್ಥವಾ ಗಿಯೂ ಕಳಕೊಂಡೆನೆಂದು ಹೇಳಿದೆನು. ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಕರ್ತನ ಬಳಿಯಲ್ಲಿಯೂ ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು.
5 ಯಾಕೋಬನ್ನು ತನ್ನ ಕಡೆಗೆ ತಿರಿಗಿ ಸೇರಿಸಿಕೊಳ್ಳ ಬೇಕೆಂತಲೂ ಇಸ್ರಾಯೇಲು ತನ್ನ ಕಡೆಗೆ ಕೂಡಿಕೊಳ್ಳು ವಂತೆಯೂ ಆತನು ಗರ್ಭದಲ್ಲಿಯೇ ನನ್ನನ್ನು ತನ್ನ ಸೇವಕನನ್ನಾಗಿ ರೂಪಿಸಿದನು. ಆದರೂ ನಾನು ಕರ್ತನ ದೃಷ್ಟಿಯಲ್ಲಿ ಗೌರವವುಳ್ಳವನಾಗಿರುವೆನು; ನನ್ನ ದೇವರೇ ನನಗೆ ಬಲವಾಗಿರುವನು.
6 ಆತನೇ ಈಗ ಹೀಗನ್ನುತ್ತಾನೆ–ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬನ ಕುಲಗಳನ್ನು ಉನ್ನತಪಡಿ ಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪ ಕಾರ್ಯವೇ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು.
ಇಬ್ರೀಯ/ಯಹೂದಿ ಜನಾಂಗದಿಂದ ಬರಲಿದ್ದರೂ, ಇದು ಈ ಸೇವಕನ ಸೇವೆಯು ‘ಭೂಮಿಯ ತುದಿಗಳಿಗೆ ತಲುಪುತ್ತದೆ’ ಎಂದು ಮುನ್ಸೂಚಿಸಲಾಗಿದೆ. ನಿಶ್ಚಯವಾಗಿ ಪ್ರವಾದಿಸಲ್ಪಟ್ಟಂತೆ ಯೇಸುವಿನ ಸೇವೆಯು ಭೂಮಿಯ ಮೇಲಿನ ಎಲ್ಲಾ ರಾಷ್ಟ್ರಗಳನ್ನು ಮುಟ್ಟಿದೆ. ಸೇವಕನಾಗಿ, ಯೇಸು ಎಲ್ಲಾ ಶೂದ್ರರೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಂಡಿದ್ದಾನೆ ಮತ್ತು ಪ್ರತಿನಿಧಿಸುತ್ತಾನೆ.
ಅವರ್ಣ ಕೂಡ …
ಎಲ್ಲಾ ಜನರಿಗಾಗಿ ಮಧ್ಯಸ್ಥಿಕೆ ವಹಿಸಲು ಯೇಸು ಅವರ್ಣ, ಅಥವಾ ಪರಿಶಿಷ್ಟ ಜಾತಿ, ಬುಡಕಟ್ಟು ಮತ್ತು ದಲಿತರನ್ನು ಸಹಾ ಪ್ರತಿನಿಧಿಸಬೇಕು. ಅವನು ಹೇಗೆ? ಇಬ್ರೀಯ ವೇದಗಳು ಅವನನ್ನು ಸಂಪೂರ್ಣವಾಗಿ ಮುರಿದು ತಿರಸ್ಕರಿಸುತ್ತವೆ ಎಂದು ಮುನ್ಸೂಚಿಸಿದೆ , ನಮ್ಮಲ್ಲಿ ಉಳಿದವರು ಅವನನ್ನು ಅವರ್ಣನೆಂದು ವೀಕ್ಷಿಸಲಾಗುತ್ತದೆ.
ಯಾವ ರೀತಿಯಲ್ಲಿ?
ಕೆಲವು ವಿವರಣೆಗಳೊಂದಿಗೆ ಸಂಪೂರ್ಣ ಪ್ರವಾದನೆಯು ಇಲ್ಲಿದೆ. ಅದು ‘ಅವನು’ ಮತ್ತು ‘ಅವನ’ ಬಗ್ಗೆ ಮಾತನಾಡುವುದನ್ನು ಗಮನಿಸಿ ಆದ್ದರಿಂದ ಅದು ಮುಂಬರುವ ಮನುಷ್ಯನ ಬಗ್ಗೆ ಪ್ರವಾದಿಸುತ್ತಿದೆ. ಪ್ರವಾದನೆಯು ‘ಚಿಗುರಿನ’ ರೂಪವನ್ನು ಬಳಸುವುದರಿಂದ ಅದು ಯಾಜಕ ಮತ್ತು ಆಡಳಿತಗಾರನಾಗಿದ್ದ ರೆಂಬೆಯನ್ನು ಸೂಚಿಸುತ್ತಿದೆ ಎಂದು ನಮಗೆ ತಿಳಿದಿದೆ. ಆದರೆ ವಿವರಣೆ ಅವರ್ಣವಾಗಿದೆ.
ಬರಲಿರುವವನು ತಿರಸ್ಕರಿಸಲ್ಪಟ್ಟವನು
ಮ್ಮ ಸುದ್ಧಿಯನ್ನು ಯಾರು ನಂಬಿದ್ದಾರೆ? ಕರ್ತನ ತೋಳು ಯಾರಿಗೆ ಪ್ರಕಟವಾ ಯಿತು?
ಯೆಶಾಯ 53:1-3
2 ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ.
3 ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.
ದೇವರ ಮುಂದೆ (ಅಂದರೆ ಆಲದ ರೆಂಬೆ) ‘ಚಿಗುರಾಗಿದ್ದರೂ’, ಈ ಮನುಷ್ಯನನ್ನು ‘ತಿರಸ್ಕರಿಸಲಾಗುವುದು’ ಮತ್ತು ‘ತಳ್ಳಿಹಾಕಲಾಗುತ್ತದೆ’, ಇತರರಿಂದ ತುಂಬಾ ‘ದುಃಖ’ ಮತ್ತು ‘ಕಡಿಮೆ ಗೌರವದಲ್ಲಿರುತ್ತಾನೆ’. ಅವನನ್ನು ಅಕ್ಷರಶಃ ಅಸ್ಪೃಶ್ಯನೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಈ ಬರಲಿರುವವನು ಪರಿಶಿಷ್ಟ ಪಂಗಡದ (ವನವಾಸಿ) ಮತ್ತು ಹಿಂದುಳಿದ ಜಾತಿಗಳ – ದಲಿತರನ್ನು ಅಸ್ಪೃಶ್ಯರಂತೆ ಮುರಿಯಲ್ಪಟ್ಟವರಾಗೆ ಪ್ರತಿನಿಧಿಸಲು ಸಮರ್ಥನಾಗಿದ್ದನು.
4 ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು.
ಯೆಶಾಯ 53:4-5
5 ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು.
ಕೆಲವೊಮ್ಮೆ ನಾವು ಇತರರ ದುರದೃಷ್ಟವನ್ನು ತೀರ್ಪು ಮಾಡುತ್ತೇವೆ, ಅಥವಾ ಸಮಾಜದಲ್ಲಿ ಕೆಳಮಟ್ಟದಲ್ಲಿರುವವರನ್ನು, ಅವರ ಪಾಪಗಳ, ಪರಿಣಾಮವಾಗಿ, ಅಥವಾ ಕರ್ಮವಾಗಿ ನೋಡುತ್ತೇವೆ. ಅಂತೆಯೇ, ಈ ಮನುಷ್ಯನ ತೊಂದರೆಗಳು ತುಂಬಾ ದೊಡ್ಡದಾಗಿದ್ದು, ಅವನು ದೇವರಿಂದ ಶಿಕ್ಷಿಸಲ್ಪಟ್ಟಿದ್ದಾನೆಂದು ನಾವು ಭಾವಿಸುತ್ತೇವೆ. ಇದಕ್ಕಾಗಿಯೇ ಅವನನ್ನು ತಿರಸ್ಕರಿಸಲಾಗುವುದು. ಆದರೆ ಅವನು ತನ್ನ ಸ್ವಂತ ಪಾಪಗಳಿಗಾಗಿ ಶಿಕ್ಷಿಸಲ್ಪಡುವದಿಲ್ಲ – ಆದರೆ ನಮಗಾಗಿ. ಆತನು ನಮ್ಮ ಗುಣಪಡಿಸುವಿಕೆ ಮತ್ತು ಶಾಂತಿಗಾಗಿ ಭಯಂಕರವಾದ ಹೊರೆಯನ್ನು ಸಹಿಸುವನು.
ಇದು ನಜರೇತಿನ ಯೇಸುವಿನ ಶಿಲುಬೆಗೇರಿಸುವಿಕೆಯಲ್ಲಿ ನೆರವೇರಿತು, ಅವನು ಶಿಲುಬೆಯ ಮೇಲೆ ‘ಚುಚ್ಚಲ್ಪಟ್ಟನು ’, ಪೆಟ್ಟು ತಿಂದನು ಮತ್ತು ನರಳಲ್ಪಟ್ಟನು. ಆದರೂ ಆತನು ಬದುಕಿದ 750 ವರ್ಷಗಳ ಹಿಂದೆಯೇ ಈ ಪ್ರವಾದನೆಯು ಬರೆಯಲಾಗಿದೆ. ಕಡಿಮೆ ಗೌರವದಲ್ಲಿ ಮತ್ತು ಆತನ ದುಃಖದಲ್ಲಿ, ಯೇಸು ಈ ಪ್ರವಾದನೆಯನ್ನು ಪೂರೈಸಿದನು ಮತ್ತು ಈಗ ಎಲ್ಲಾ ಹಿಂದುಳಿದ ಜಾತಿ ಮತ್ತು ಬುಡಕಟ್ಟು ಜನಾಂಗವನ್ನು ಪ್ರತಿನಿಧಿಸಬಹುದು.
6 ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.
ಯೆಶಾಯ 53:6-7
7 ಆತನು ಪೀಡಿಸಲ್ಪಟ್ಟವನೂ ಮತ್ತು ಹಿಂಸಿಸಲ್ಪಟ್ಟವನೂ ಆಗಿದ್ದನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ; ವಧಿಸುವದಕ್ಕೆ ತರಲ್ಪ ಡುವ ಕುರಿಮರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನ ವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ.
ಇದು ನಮ್ಮ ಪಾಪ ಮತ್ತು ನಾವು ಧರ್ಮದಿಂದ ದಾರಿ ತಪ್ಪುವುದರಿಂದ ಈ ಮನುಷ್ಯನು ನಮ್ಮ ಅಕ್ರಮಗಳನ್ನು ಅಥವಾ ಪಾಪಗಳನ್ನು ಹೊತ್ತುಕೊಳ್ಳಬೇಕಾದ ಅಗತ್ಯವಿದೆ. ಅವನು ನಮ್ಮ ಜಾಗದಲ್ಲಿ ಹತ್ಯೆಗೆ ಶಾಂತಿಯುತವಾಗಿ ಹೋಗಲು ಸಿದ್ಧನಾಗಿರುವನು, ಪ್ರತಿಭಟನೆ ಮಾಡುವುದಿಲ್ಲ ಅಥವಾ ‘ಬಾಯಿ ತೆರೆಯುವುದಿಲ್ಲ’. ನಿಖರವಾಗಿ ಇದು ಹೇಗೆ ಯೇಸು ಶಿಲುಬೆಗೆ ಸಿದ್ಧನಾಗಿ ಹೋದನು ಎಂಬುದರಲ್ಲಿ ನೆರವೇರಿತು.
8 ಆತನು ಸೆರೆಯಿಂದಲೂ ನ್ಯಾಯತೀರ್ಪಿ ನಿಂದಲೂ ತೆಗೆಯಲ್ಪಟ್ಟನು; ಆತನ ಸಂತತಿಯನ್ನು ತಿಳಿಯಪಡಿಸಿದವರು ಯಾರು? ಆತನು ಜೀವಿತರ ದೇಶದಿಂದ ಕಡಿಯಲ್ಪಟ್ಟವನು (ತೆಗೆಯಲ್ಪಟ್ಟನು); ತನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಪೆಟ್ಟು ತಿಂದನು.
ಯೆಶಾಯ 53:8
ಪ್ರವಾದನೆಯು ಅವನನ್ನು ‘ಜೀವಂತ ದೇಶದಿಂದ ಕತ್ತರಿಸಲಾಗುವುದು’, ಎಂಬದಾಗಿ ಹೇಳಿದೆ, ಇದು ಯೇಸು ಶಿಲುಬೆಯಲ್ಲಿ ಮರಣಹೊಂದಿದಾಗ ನೆರವೇರಲ್ಪಟ್ಟಿತು.
9 ಆತನು ಮರಣವನ್ನು ಧನಿಕರೊಂದಿಗೂ ಆತನ ಸಮಾಧಿಯನ್ನು ದುಷ್ಟರೊಂದಿಗೂ ಮಾಡಿಕೊಂಡನು. ಆತನು ಯಾವ ಬಲಾತ್ಕಾರವನ್ನೂ ಮಾಡಲಿಲ್ಲ ಇಲ್ಲವೆ ಆತನ ಬಾಯಲ್ಲಿ ಯಾವ ವಂಚನೆಯೂ ಇರಲಿಲ್ಲ.
ಯೆಶಾಯ 53:9
‘ಅವನು ಯಾವುದೇ ರೀತಿಯ ಹಿಂಸೆಯನ್ನು ಮಾಡಲಿಲ್ಲ’ ಮತ್ತು ‘ಅವನ ಬಾಯಲ್ಲಿ ಯಾವುದೇ ರೀತಿಯ ಮೋಸ ಇರಲಿಲ್ಲ’ ಆದರೂ ಯೇಸು ಒಬ್ಬ ‘ದುಷ್ಟ’ ಮನುಷ್ಯನೆಂದು ಖಂಡಿಸಲ್ಪಟ್ಟು ಮರಣಹೊಂದಿದನು. ಆದರೂ, ಅವನನ್ನು ಒಬ್ಬ ಶ್ರೀಮಂತ, ಯಾಜಕನಾದ ಅರಿಮಥಾಯದ ಯೋಸೇಫನ ಸಮಾಧಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಯೇಸು ‘ದುಷ್ಟರೊಂದಿಗೆ ಸಮಾಧಿಯನ್ನು ನಿಯೋಜಿಸಲ್ಪಟ್ಟಿದ್ದಾನೆ’ ಆದರೆ ‘ಅವನ ಮರಣದಲ್ಲಿ ಶ್ರೀಮಂತರೊಂದಿಗೆ’ ಎನ್ನುವಂತಹ ಎರಡನ್ನೂ ಸಹಾ ಪೂರೈಸಿದನು.
10 ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು.
ಯೆಶಾಯ 53:10
ಈ ಕ್ರೂರವಾದ ಮರಣವು ಯಾವುದೋ ಭಯಾನಕ ಅಪಘಾತ ಅಥವಾ ದುರದೃಷ್ಟವಲ್ಲ. ಅದು ‘ಕರ್ತನ ಚಿತ್ತವಾಗಿತ್ತು’.
ಏಕೆ?
ಏಕೆಂದರೆ ಈ ಮನುಷ್ಯನ ‘ಜೀವನವು’ ‘ಪಾಪಕೋಸ್ಕರವಾಗಿರುವ ಅರ್ಪಣೆಯಾಗಿರುತ್ತದೆ’.
ಯಾರ ಪಾಪ?
ಅನೇಕ ರಾಷ್ಟ್ರಗಳಲ್ಲಿ ‘ದಾರಿ ತಪ್ಪಿದ’ ನಮ್ಮಲ್ಲಿರುವವರು. ಯೇಸು ಶಿಲುಬೆಯಲ್ಲಿ ಮರಣಹೊಂದಿದಾಗ, ರಾಷ್ಟ್ರೀಯತೆ, ಧರ್ಮ ಅಥವಾ ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ನಮ್ಮೆಲ್ಲರನ್ನೂ ಪಾಪದಿಂದ ಶುದ್ಧೀಕರಿಸಲು ಆಗಿದೆ.
ತಿರಸ್ಕಾರಕ್ಕೊಳಗಾದವನು ವಿಜಯಶಾಲಿ
11 ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.
ಯೆಶಾಯ 53:11
ಈಗ ಪ್ರವಾದನೆಯ ಸ್ವರವು ವಿಜಯಶಾಲಿಯಾಗಲು ಮಾರ್ಪಡಿಸಿದೆ. ಭಯಾನಕವಾಗಿ ‘ಬಳಲಿದ’ ನಂತರ (‘ತಿರಸ್ಕರಿಸಲ್ಪಟ್ಟು’ ಮತ್ತು ‘ಜೀವಂತ ಭೂಮಿಯಿಂದ ಕತ್ತರಿಸಲ್ಪಟ್ಟು’ ಮತ್ತು ‘ಸಮಾಧಿಯನ್ನು’ ನಿಯೋಜಿಸಲಾಗಿದೆ), ಈ ಸೇವಕನು‘ ಜೀವನದ ಬೆಳಕನ್ನು’ ಕಾಣುವನು.
ಅವನು ಮತ್ತೆ ಜೀವನಕ್ಕೆ ಬರುವನು! ಮತ್ತು ಹಾಗೆ ಮಾಡುವಾಗ ಈ ಸೇವಕನು ಅನೇಕರನ್ನು ‘ಸಮರ್ಥಿಸುತ್ತಾನೆ’.
‘ಸಮರ್ಥಿಸು’ ಎಂಬುದು ‘ನೀತಿವಂತಿಕೆ’ ಪಡೆಯುವದಾಗಿದೆ. ಋಷಿ ಅಬ್ರಹಾಮನು ‘ಗುರುತಿಸಲ್ಪಟ್ಟನು’ ಅಥವಾ ‘ನೀತಿವಂತಿಕೆಯನ್ನು’ ನೀಡಲಾಯಿತು. ಅವನ ನಂಬಿಕೆಯಿಂದಾಗಿ ಅದನ್ನು ಅವನಿಗೆ ನಿಸ್ಸಂಶಯವಾಗಿ ನೀಡಲಾಯಿತು. ಅದೇ ರೀತಿಯಾಗಿ ಅಸ್ಪೃಶ್ಯನಂತೆ ಕೆಳಮಟ್ಟದಲ್ಲಿರುವ ಈ ಸೇವಕನು ‘ಅನೇಕರಿಗೆ’ ಸಮರ್ಥನೆ ನೀಡುತ್ತಾನೆ, ಅಥವಾ ನೀತಿವಂತಿಕೆಯಿಂದ ಗುರುತಿಸಲ್ಪಡುತ್ತಾನೆ. ಇದು ನಿಖರವಾಗಿ ಯೇಸು ತನ್ನನ್ನು ಶಿಲುಬೆಗೇರಿಸಿದ ನಂತರ ಸತ್ತವರೊಳಗಿಂದ ಎದ್ದು ಸಾಧಿಸಿದ್ದನ್ನು ಮತ್ತು ಈಗ ನಮ್ಮನ್ನು ಸಮರ್ಥಿಸುತ್ತಾನೆ.
12 ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು
ಯೆಶಾಯ 53:12
ಇದನ್ನು ಯೇಸು ಜೀವಿಸಿದ್ದ 750 ವರ್ಷಗಳ ಹಿಂದೆಯೇ ಬರೆಯಲಾಗಿದ್ದರೂ, ಇದು ದೇವರ ಯೋಜನೆ ಎಂದು ತೋರಿಸಲು ಅವನಿಂದ ಅದನ್ನು ನಿಖರವಾಗಿ ಪೂರೈಸಲಾಯಿತು. ಇದು ಯೇಸು ಅವರ್ಣವನ್ನು ಪ್ರತಿನಿಧಿಸಬಹುದೆಂದು ಸಹ ತೋರಿಸುತ್ತದೆ, ಆಗಾಗ್ಗೆ ಕಡಿಮೆ ಗೌರವವನ್ನು ಹೊಂದಿರುತ್ತಾರೆ. ವಾಸ್ತವವಾಗಿ, ಅವನು ಅವರ ಹಾಗೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಪಾಪಗಳನ್ನು ಸಹ ಪ್ರತಿನಿಧಿಸಲು, ಸಹಿಸಲು ಮತ್ತು ಶುದ್ಧೀಕರಿಸಲು ಬಂದನು.
ಅವನು ನಿಮಗೆ ಮತ್ತು ನನಗೆ ಜೀವನದ ಉಡುಗೊರೆಯನ್ನು ನೀಡಲು ದೇವರ ಯೋಜನೆಯ ಕೇಂದ್ರವಾಗಿ ಬಂದನು – ಪಾಪದ ಅಪರಾಧ ಮತ್ತು ಕರ್ಮದಿಂದ ಶುದ್ಧೀಕರಣ. ಅಂತಹ ಅಮೂಲ್ಯ ಉಡುಗೊರೆಯನ್ನು ಸಂಪೂರ್ಣವಾಗಿ ಪರಿಗಣಿಸುವದು ಮತ್ತು ಅರ್ಥಮಾಡಿಕೊಳ್ಳುವುದು ಯೋಗ್ಯವಲ್ಲವೇ? ಇದನ್ನು ಮಾಡಲು ಇಲ್ಲಿ ಹಲವಾರು ಮಾರ್ಗಗಳಿವೆ: