Skip to content

ದಶಾಜ್ಞೆಗಳು: ಕಲಿಯುಗದಲ್ಲಿ ಕೊರೊನಾವೈರಸ್ನ ಪರೀಕ್ಷೆಯಂತೆ

ಸಾಮಾನ್ಯವಾಗಿ ನಾವು ಕಲಿಯುಗದಲ್ಲಿ ಅಥವಾ ಕಾಳಿಯ ಕಾಲದಲ್ಲಿ ವಾಸಿಸುತ್ತಿದ್ದೇವೆ ಎಂದು ಒಪ್ಪಿಕೊಳ್ಳಲಾಗಿದೆ. ಸತ್ಯಯುಗ, ತ್ರೇತ ಯುಗ ಮತ್ತು ದ್ವಾರಪರ ಯುಗದಿಂದ ಪ್ರಾರಂಭವಾಗುವ ನಾಲ್ಕರ ಕೊನೆಯ ಯುಗ ಇದು. ಸ್ಥಿರವಾದ ನೈತಿಕ ಮತ್ತು ಸಾಮಾಜಿಕ ಕ್ಷಯವೇ ಮೊದಲ ಸತ್ಯದ ಯುಗದಿಂದ (ಸತ್ಯಯುಗ), ನಮ್ಮ ಕಲಿಯುಗದವರೆಗೆ ಸಾಮಾನ್ಯವಾಗಿ ಕಂಡುಬರುತ್ತಿರುವದು. ಕಲಿಯುಗದಲ್ಲಿ ಮಾನವ ನಡವಳಿಕೆಯನ್ನು ಮಹಾಭಾರತದಲ್ಲಿನ ಮಾರ್ಕಂಡೇಯರವರು ಈ ರೀತಿ ವಿವರಿಸುತ್ತಾರೆ:

ಕೋಪ, ಕ್ರೋಧ ಮತ್ತು ಅಜ್ಞಾನ ಬೆಳೆಯುವದು

ಪ್ರತಿ ದಿನ ಕಳೆದಂತೆ ಧರ್ಮ, ಸತ್ಯತೆ, ಸ್ವಚ್ಚತೆ, ಸಹನೆ, ಕರುಣೆ, ದೈಹಿಕ ಶಕ್ತಿ ಮತ್ತು ಸ್ಮರಣೆ ಕಡಿಮೆಯಾಗುತ್ತದೆ.

ಜನರು ಯಾವುದೇ ಸಮರ್ಥನೆಯಿಲ್ಲದೆ ಕೊಲೆಯ ಆಲೋಚನೆಗಳನ್ನು ಹೊಂದಿರುತ್ತಾರೆ ಮತ್ತು ಅದರಲ್ಲಿ ಯಾವುದೇ ತಪ್ಪನ್ನು ಕಾಣುವುದಿಲ್ಲ.

ಕಾಮವನ್ನು ಸಾಮಾಜಿಕವಾಗಿ ಸ್ವೀಕರಿಸಬಹುದೆಂಬ ಅಭಿಪ್ರಾಯವನ್ನು ಹೊಂದಿರುತ್ತಾರೆ ಮತ್ತು ಲೈಂಗಿಕ ಸಂಭೋಗವನ್ನು ಜೀವನದ ಕೇಂದ್ರ ಅವಶ್ಯಕತೆಯಾಗಿ ನೋಡಲಾಗುತ್ತದೆ.

ಪಾಪವು ಘಾತೀಯವಾಗಿ ಹೆಚ್ಚಾಗುವದು, ಆಷ್ಟರೊಳಗೆ ಸದ್ಗುಣವು  ಕ್ಷಯಿಸುತ್ತದೆ ಮತ್ತು ಅಭಿವೃದ್ಧಿ ನಿಂತುಹೋಗುತ್ತದೆ.

ಜನರು ಅಮಲೇರಿಸುವ ಮದ್ಯಪಾನಕ್ಕೆ ಮತ್ತು ಮಾದಕವಸ್ತುಗಳಿಗೆ ಚಟಹಿಡಿದವರಾಗುವರು

ಇನ್ನು ಮುಂದೆ ಗುರುಗಳು ಗೌರವಿಸಲ್ಪಡುವದಿಲ್ಲ  ಮತ್ತು ಅವರ ವಿದ್ಯಾರ್ಥಿಗಳು ಅವರಿಗೆ  ಕೇಡುಮಾಡಲು ಪ್ರಯತ್ನಿಸುತ್ತಾರೆ. ಅವರ ಬೋಧನೆಗಳನ್ನು ಅವಮಾನಿಸಲಾಗುವುದು, ಮತ್ತು ಕಾಮದ ಅನುಯಾಯಿಗಳು ಎಲ್ಲಾ ಮನುಷ್ಯನ ಮನಸ್ಸಿನ ನಿಯಂತ್ರಣವನ್ನು ಕಸಿದುಕೊಳ್ಳುತ್ತಾರೆ.

ಎಲ್ಲಾ ಮಾನವರು ತಮ್ಮನ್ನು ದೇವರುಗಳೆಂದು ಘೋಷಿಸಿಕೊಳ್ಳುತ್ತಾರೆ ಅಥವಾ ದೇವರುಗಳು ನೀಡಿದ ವರ ಎಂದು ಬೋಧಿಸುತ್ತಾರೆ ಮತ್ತು ಅದನ್ನು ಬೋಧನೆಗಳ ಬದಲು ವ್ಯವಹಾರವನ್ನಾಗಿ ಮಾಡುತ್ತಾರೆ.

ಇನ್ನು ಮುಂದೆ ಜನರು ಮದುವೆಯಾಗುವುದಿಲ್ಲ ಮತ್ತು ಲೈಂಗಿಕ ಸಂತೋಷಕ್ಕಾಗಿ ಮಾತ್ರ ಪರಸ್ಪರ ಬದುಕುತ್ತಾರೆ.

ಮೋಶೆ ಮತ್ತು ದಶಾಜ್ಞೆಗಳು

ಇಬ್ರೀಯ ವೇದಗಳು ನಮ್ಮ ಪ್ರಸ್ತುತ ಯುಗವನ್ನು ಅದೇ ರೀತಿಯಲ್ಲಿ ವಿವರಿಸುತ್ತವೆ. ನಾವು ಪಾಪ ಮಾಡುವ ಪ್ರವೃತ್ತಿಯಿಂದಾಗಿ, ಪಸ್ಕಹಬ್ಬದೊಂದಿಗೆ ಅವರು ಐಗುಪ್ತದಿಂದ  ತಪ್ಪಿಸಿಕೊಂಡ ಸ್ವಲ್ಪ ಸಮಯದ ನಂತರ ದೇವರು ಮೋಶೆಗೆ ದಶಾಜ್ಞೆಗಳನ್ನು ಕೊಟ್ಟನು. ಮೋಶೆಯ ಗುರಿ ಇಸ್ರಾಯೇಲ್ಯರನ್ನು ಐಗುಪ್ತದಿಂದ ಹೊರಗೆ ಕರೆದೊಯ್ಯುವುದು ಮಾತ್ರವಲ್ಲ, ಹೊಸ ಜೀವನಕ್ಕೆ ಮಾರ್ಗದರ್ಶನ ನೀಡುವುದು ಕೂಡ ಆಗಿತ್ತು. ಆದ್ದರಿಂದ ಇಸ್ರಾಯೇಲ್ಯರನ್ನು ರಕ್ಷಿಸಿದ ಪಸ್ಕಹಬ್ಬದ ಐವತ್ತು ದಿನಗಳ ನಂತರ, ಮೋಶೆ ಅವರನ್ನು ಸಿನಾಯಿ ಪರ್ವತಕ್ಕೆ (ಹೋರೆಬ್ ಪರ್ವತ ಸಹ) ಕರೆದೊಯ್ದನು. ಅಲ್ಲಿ ಅವರು ದೇವರಿಂದ ಕಾನೂನು ಪಡೆದರು. ಕಲಿಯುಗದ ಸಮಸ್ಯೆಗಳನ್ನು ಬಹಿರಂಗಪಡಿಸಲು ಈ ಕಾನೂನನ್ನು ಸ್ವೀಕರಿಸಲಾಯಿತು.

ಮೋಶೆಯು ಯಾವ ಆಜ್ಞೆಗಳನ್ನು ಪಡೆದನು ? ಸಂಪೂರ್ಣ ಕಾನೂನು ಬಹಳಷ್ಟಿದ್ದರೂ, ಮೋಶೆಯು ಮೊದಲು ದೇವರು ಕಲ್ಲಿನ ಹಲಗೆಗಳ ಮೇಲೆ ಬರೆದ ನಿರ್ದಿಷ್ಟವಾದ ನೈತಿಕ ಆಜ್ಞೆಗಳನ್ನು ಸ್ವೀಕರಿಸಿದನು, ಇದನ್ನು ದಶಾಜ್ಞೆಗಳು (ಅಥವಾ ದಶ ಶಾಸನಗಳು) ಎಂದು ಕರೆಯಲಾಗುತ್ತದೆ. ಇವುಗಳು ಕಾನೂನಿನ ಸಾರಾಂಶವನ್ನು – ಸಣ್ಣ ವಿವರಗಳಿಗೆ ಮುಂಚಿನ ನೈತಿಕ ಧರ್ಮವನ್ನು ರೂಪಿಸುತ್ತದೆ ಮತ್ತು ಕಲಿಯುಗದಲ್ಲಿ ಸಾಮಾನ್ಯವಾಗಿ ಕಂಡುಬರುವ ದುಷ್ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುವಂತೆ ಮನವೊಲಿಸುವ ದೇವರ ಸಕ್ರಿಯ ಶಕ್ತಿಯಾಗಿದೆ.

ದಶಾಜ್ಞೆಗಳು

ದೇವರು ಕಲ್ಲಿನ ಮೇಲೆ ಬರೆದ ದಶಾಜ್ಞೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ, ನಂತರ ಮೋಶೆಯು ಇಬ್ರೀಯ ವೇದಗಳಲ್ಲಿ ದಾಖಲಿಸಿದ್ದಾನೆ.

ವರು ಈ ಎಲ್ಲಾ ವಾಕ್ಯಗಳನ್ನು ಹೇಳಿದನು. ಅವು ಯಾವವಂದರೆ–
2 ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ.
3 ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.
4 ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.
5 ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು.
6 ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆ ಗಳನ್ನು ಕೈಕೊಳ್ಳುವವರಿಗೆ ಸಾವಿರ ತಲೆಗಳ ವರೆಗೆ ದಯೆತೋರಿಸುವೆನು.
7 ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ.
8 ಸಬ್ಬತ್‌ ದಿನವನ್ನು ಪರಿಶುದ್ಧವಾಗಿ ಇರುವಂತೆ ಜ್ಞಾಪಕದಲ್ಲಿಟ್ಟುಕೋ.
9 ನೀನು ಆರು ದಿನಗಳು ದುಡಿದು ನಿನ್ನ ಕೆಲಸಗಳನ್ನೆಲ್ಲಾ ಮಾಡಿಕೋ.
10 ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್‌ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು.
11 ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್‌ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.
12 ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು.
13 ಕೊಲೆ ಮಾಡಬಾರದು.
14 ವ್ಯಭಿಚಾರ ಮಾಡಬಾರದು.
15 ಕದಿಯಬಾರದು.
16 ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು.
17 ನೀನು ನಿನ್ನ ನೆರೆಯವನ ಮನೆಯನ್ನು ಆಶಿಸ ಬಾರದು, ನಿನ್ನ ನೆರೆಯವನ ಹೆಂಡತಿಯನ್ನೂ ಆಶಿಸ ಬಾರದು; ಅವನ ದಾಸನನ್ನಾಗಲಿ ದಾಸಿಯನ್ನಾಗಲಿ ಎತ್ತನ್ನಾಗಲಿ ಕತ್ತೆಯನ್ನಾಗಲಿ ನಿನ್ನ ನೆರೆಯವನಿಗೆ ಇರುವ ಯಾವದನ್ನೂ

ವಿಮೋಚನಕಾಂಡ 20: 1-1 7

ದಶಾಜ್ಞೆಗಳ ಮಾದರಿ

ಇಂದು ನಾವು ಕೆಲವೊಮ್ಮೆ ಇವುಗಳು ಆಜ್ಞೆಗಳು ಎಂಬುದನ್ನು ಮರೆಯುತ್ತೇವೆ. ಅವುಗಳು ಸಲಹೆಗಳಲ್ಲ. ಹಾಗೆಯೇ ಗುಣವರ್ಣನೆಯೂ ಅಲ್ಲ. ಆದರೆ ನಾವು ಈ ಆಜ್ಞೆಗಳನ್ನು ಎಷ್ಟರ ಮಟ್ಟಿಗೆ ಪಾಲಿಸಬೇಕು? ಈ ಕೆಳಗಿನವುಗಳು  ದಶಾಜ್ಞೆಗಳನ್ನು ನೀಡುವ ಮೊದಲು ಬರುತ್ತದೆ

  3 ಮೋಶೆಯು ದೇವರ ಸನ್ನಿಧಿಗೆ ಹೋದನು. ಆಗ ಕರ್ತನು ಪರ್ವತದ ಮೇಲಿನಿಂದ ಅವನನ್ನು ಕರೆದು ಅವನಿಗೆ–ನೀನು ಯಾಕೋಬನ ಮನೆತನದವರಾದ ಇಸ್ರಾಯೇಲ್‌ ಮಕ್ಕಳಿಗೆ ಹೀಗೆ ಹೇಳು–
4 ನಾನು ಐಗುಪ್ತ್ಯರಿಗೆ ಮಾಡಿದ್ದನ್ನು ನೀವು ನೋಡಿದ್ದೀರಿ; ನಿಮ್ಮನ್ನು ಹದ್ದುಗಳ ರೆಕ್ಕೆಗಳ ಮೇಲೆ ನಾನು ಹೇಗೆ ಹೊತ್ತುಕೊಂಡು ನನ್ನ ಬಳಿಗೆ ಬರಮಾಡಿದೆನೆಂಬದನ್ನೂ ನೀವು ನೋಡಿದ್ದೀರಿ;
5 ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು

ವಿಮೋಚನಕಾಂಡ 19: 3,5

ಇದನ್ನು ದಶಾಜ್ಞೆಗಳ ನಂತರ ನೀಡಲಾಗಿದೆ

  7 ಇದಲ್ಲದೆ ಒಡಂಬಡಿಕೆಯ ಪ್ರುಸ್ತಕವನ್ನು ತೆಗೆದುಕೊಂಡು ಜನರ ಮುಂದೆ ಓದಿದನು. ಆಗ ಅವರು–ಕರ್ತನು ಹೇಳುವದನ್ನೆಲ್ಲಾ ನಾವು ಮಾಡಿ ವಿಧೇಯರಾಗುವೆವು ಅಂದರು.

ವಿಮೋಚನಕಾಂಡ 24: 7

ಕೆಲವೊಮ್ಮೆ ಶಾಲಾ ಪರೀಕ್ಷೆಗಳಲ್ಲಿ, ಶಿಕ್ಷಕರು ಅನೇಕ ಪ್ರಶ್ನೆಗಳನ್ನು ನೀಡುತ್ತಾರೆ (ಉದಾಹರಣೆಗೆ 20) ಆದರೆ ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾಗುತ್ತದೆ. ಉದಾಹರಣೆಗೆ, ನಾವು 20 ರಲ್ಲಿ ಯಾವುದೇ 15 ಪ್ರಶ್ನೆಗಳನ್ನು ಉತ್ತರಿಸಲು ಆಯ್ಕೆ ಮಾಡಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಅವನಿಗೆ/ಅವಳಿಗೆ ಸುಲಭವಾದ 15 ಪ್ರಶ್ನೆಗಳನ್ನು ಉತ್ತರಿಸಲು ಆಯ್ಕೆ ಮಾಡಬಹುದು. ಈ ರೀತಿಯಾಗಿ ಶಿಕ್ಷಕರು ಪರೀಕ್ಷೆಯನ್ನು ಸುಲಭಗೊಳಿಸುತ್ತಾರೆ.

ಇದೇ ರೀತಿ ಅನೇಕರು ದಶಾಜ್ಞೆಗಳ ಬಗ್ಗೆ ಯೋಚಿಸುತ್ತಾರೆ. ದೇವರು ದಶಾಜ್ಞೆಗಳನ್ನು ನೀಡಿದ ನಂತರ, “ಈ ಹತ್ತರಲ್ಲಿ ನಿಮ್ಮ ಆಯ್ಕೆಗೆ ಅನುಗುಣವಾಗಿ ಯಾವುದಾದರು ಆರಕ್ಕೆ ಪ್ರಯತ್ನಿಸಿ” ಎಂಬದಾಗಿ ಭಾವಿಸುತ್ತಾರೆ. ದೇವರು ನಮ್ಮ ‘ಒಳ್ಳೆಯ ಕಾರ್ಯಗಳನ್ನು’ ನಮ್ಮ ‘ಕೆಟ್ಟ ಕಾರ್ಯಗಳಿಗೆ’ ಸಮತೋಲನಗೊಳಿಸುತ್ತಾನೆಂದು ನಾವು ಊಹಿಸುತ್ತೇವೆ. ನಮ್ಮ ಉತ್ತಮ ಅರ್ಹತೆಗಳು ನಮ್ಮ ಕೊರತೆಗಳನ್ನು ಮೀರಿಸಿದರೆ ಅಥವಾ ರದ್ದುಗೊಳಿಸಿದರೆ, ದೇವರನ್ನು ಗಳಿಸಲು ಇದು ಯೋಗ್ಯವಾಗಿದೆ ಎಂದು ನಾವು ಭಾವಿಸುತ್ತೇವೆ.

ಆದಾಗ್ಯೂ, ದಶಾಜ್ಞೆಗಳನ್ನು ಪ್ರಾಮಾಣಿಕವಾಗಿ ಓದುವುದರಿಂದ ಇದು ಹೇಗೆ ನೀಡಲ್ಪಟ್ಟಿಲ್ಲ ಎಂದು ತೋರಿಸುತ್ತದೆ. ಜನರು ಎಲ್ಲಾ ಆಜ್ಞೆಗಳನ್ನು – ಎಲ್ಲಾ ಸಮಯದಲ್ಲೂ ಪಾಲಿಸಬೇಕು ಮತ್ತು ಉಳಿಸಿಕೊಳ್ಳಬೇಕು. ಇದರ ಸಂಪೂರ್ಣ ತೊಂದರೆಯೆಂದರೆ ಅನೇಕರು ದಶಾಜ್ಞೆಗಳನ್ನು ತಳ್ಳಿಹಾಕುವಂತೆ ಮಾಡಿದೆ. ಆದರೆ ಕಲಿಯುಗವು ತರುವ ಪರಿಸ್ಥಿತಿಗಾಗಿ ಅವುಗಳನ್ನು ಕಲಿಯುಗದಲ್ಲಿ ನೀಡಲಾಯಿತು.

ದಶಾಜ್ಞೆಗಳು ಮತ್ತು ಕೊರೊನಾವೈರಸ್ ಪರೀಕ್ಷೆ

2020 ರಲ್ಲಿ ಪ್ರಪಂಚದಾದ್ಯಂತ ಉಲ್ಬಣಗೊಳ್ಳುತ್ತಿರುವ ಕೊರೊನಾವೈರಸ್ ಸಾಂಕ್ರಾಮಿಕ ರೋಗದೊಂದಿಗೆ ಹೋಲಿಸುವ ಮೂಲಕ ಕಲಿಯುಗದಲ್ಲಿ ಕಟ್ಟುನಿಟ್ಟಾದ ದಶಾಜ್ಞೆಗಳ ಉದ್ದೇಶವನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಕೊರೊನಾವೈರಸ್ ನಿಮಿತ್ತವಾಗಿ – ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳ ಲಕ್ಷಣಗಳನ್ನು ಹೊಂದಿರುವ ಕಾಯಿಲೆಯಾಗಿದೆ ಕೋವಿಡ್-19. ನಾವು ನೋಡಲಾಗದಷ್ಟು ಚಿಕ್ಕದಾಗಿದೆ.  

ಯಾರಾದರೂ ಜ್ವರದಿಂದ ಬಳಲುತ್ತಿದ್ದಾರೆ ಮತ್ತು ಅವರಿಗೆ ಕೆಮ್ಮು ಇದೆ ಎಂದು ಭಾವಿಸೋಣ. ಈ ವ್ಯಕ್ತಿಯು ಸಮಸ್ಯೆ ಏನು ಎಂದು ಆಶ್ಚರ್ಯ ಪಡುತ್ತಾನೆ. ಅವನು/ಅವಳು ಸಾಧಾರಣ ಜ್ವರ ಹೊಂದಿರುವರೇ ಅಥವಾ ಅವರು ಕೊರೊನಾವೈರಸ್ಗೆ ಸೋಂಕಿಸಲ್ಪಟ್ಟಿದ್ದಾರೆಯೇ? ಹಾಗಿದ್ದರೆ ಅದು ಗಂಭೀರವಾದ ಸಮಸ್ಯೆ – ಜೀವಕ್ಕೆ ಅಪಾಯಕಾರಿಯೂ ಕೂಡ . ಕೊರೊನಾವೈರಸ್ ತುಂಬಾ ವೇಗವಾಗಿ ಹರಡುತ್ತಿರುವದರಿಂದ ಪ್ರತಿಯೊಬ್ಬರೂ ಒಳಗಾಗುವ ಸಾಧ್ಯತೆ ಇದೆ. ಇದನ್ನು ಕಂಡುಹಿಡಿಯಲು ಅವರು ವಿಶೇಷ ಪರೀಕ್ಷೆಯನ್ನು ಮಾಡುತ್ತಾರೆ, ಅದು ಅವರ ದೇಹದಲ್ಲಿ ಕೊರೊನಾವೈರಸ್ ಇದೆಯೇ ಎಂದು ನಿರ್ಧರಿಸುತ್ತದೆ. ಕೊರೊನಾವೈರಸ್ ಪರೀಕ್ಷೆಯು ಅವರ ರೋಗವನ್ನು ಗುಣಪಡಿಸುವುದಿಲ್ಲ, ಅವರು ಕೊರೊನಾವೈರಸನ್ನು ಹೊಂದಿದ್ದರೆ ಅದು ಕೋವಿಡ್-19ಗೆ ಕಾರಣವಾಗುತ್ತದೆ, ಅಥವಾ ಅವರಿಗೆ ಸಾಮಾನ್ಯ ಜ್ವರವಿದೆಯೆಂದು ಖಚಿತವಾಗಿ ಹೇಳುತ್ತದೆ.

ಇದು ದಶಾಜ್ಞೆಗಳಂತೆಯೇ ಇರುತ್ತದೆ. 2020 ರಲ್ಲಿ ಕೊರೊನಾವೈರಸ್ ಪ್ರಚಲಿತದಲ್ಲಿರುವಂತೆ ಕಲಿಯುಗದಲ್ಲಿ ನೈತಿಕ ಕ್ಷಯವು ಪ್ರಚಲಿತವಾಗಿದೆ. ಈ ಸಾಧಾರಣವಾದ ನೈತಿಕ ಯುಗದಲ್ಲಿ ನಾವು ನೀತಿವಂತರೆ ಅಥವಾ ನಾವೂ ಸಹ ಪಾಪದಿಂದ ಕಳಂಕಿತರಾಗಿದ್ದೇವೆಯೇ ಎಂದು ತಿಳಿಯಲು ಬಯಸುತ್ತೇವೆ. ದಶಾಜ್ಞೆಗಳು ನೀಡಲ್ಪಟ್ಟಿರುವದರಿಂದ ನಮ್ಮ ಜೀವನವನ್ನು ಪರಿಶೀಲಿಸುವ ಮೂಲಕ ನಾವು ಪಾಪದಿಂದ ಮತ್ತು ಅದರೊಂದಿಗೆ ಬರುವ ಕರ್ಮದಿಂದ ಮುಕ್ತರಾಗಿದ್ದರೆ ಅಥವಾ ಪಾಪವು ನಮ್ಮ ಮೇಲೆ ಹಿಡಿತವನ್ನು ಹೊಂದಿದ್ದರೆ ನಾವು ತಿಳಿದುಕೊಳ್ಳಬಹುದು. ದಶಾಜ್ಞೆಗಳು ಕೊರೊನಾವೈರಸ್ ಪರೀಕ್ಷೆಯಂತೆಯೇ ಕಾರ್ಯನಿರ್ವಹಿಸುತ್ತವೆ – ಆದ್ದರಿಂದ ನಿಮಗೆ ರೋಗ (ಪಾಪ) ಇದೆಯೇ ಅಥವಾ ನೀವು ಅದರಿಂದ ಮುಕ್ತರಾಗಿದ್ದೀರಾ ಎಂದು ನಿಮಗೆ ತಿಳಿದಿದೆ.

ಅಕ್ಷರಶಃ ಪಾಪ ಎಂದರೆ ‘ತಪ್ಪಿಹೋದ’ ಎಂದರ್ಥ ನಾವು ಇತರರನ್ನು, ನಮ್ಮನ್ನು ಮತ್ತು ದೇವರನ್ನು ಹೇಗೆ ಪರಿಗಣಿಸುತ್ತೇವೆ ಎಂಬುದರಲ್ಲಿ ದೇವರು ನಮ್ಮಿಂದ ನಿರೀಕ್ಷಿಸುವ ಗುರಿಯಾಗಿದೆ. ಆದರೆ ನಮ್ಮ ಸಮಸ್ಯೆಯನ್ನು ಗುರುತಿಸುವ ಬದಲು ನಾವು ನಮ್ಮನ್ನು ಇತರರೊಂದಿಗೆ ಹೋಲಿಸುತ್ತೇವೆ (ತಪ್ಪು ತೂಕಕ್ಕೆ ವಿರುದ್ಧವಾಗಿ ನಮ್ಮನ್ನು ಅಳೆಯುತ್ತೇವೆ), ಧಾರ್ಮಿಕ ಅರ್ಹತೆಯನ್ನು ಪಡೆಯಲು ಹೆಚ್ಚು ಶ್ರಮಿಸುತ್ತೇವೆ, ಅಥವಾ ಬಿಟ್ಟುಕೊಡುತ್ತೇವೆ ಮತ್ತು ಸಂತೋಷಕ್ಕಾಗಿ ಮಾತ್ರ ಬದುಕುತ್ತೇವೆ. ಆದ್ದರಿಂದ ದೇವರು ದಶಾಜ್ಞೆಗಳನ್ನು ಕೊಟ್ಟನು:

  20 ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ.

ರೋಮಾಪುರದವರಿಗೆ 3: 20

ನಾವು ದಶಾಜ್ಞೆಗಳ ಪ್ರಮಾಣಕ್ಕೆ ವಿರುದ್ಧವಾಗಿ ನಮ್ಮ ಜೀವನವನ್ನು ಪರಿಶೀಲಿಸಿದರೆ ಅದು ಆಂತರಿಕ ಸಮಸ್ಯೆಯನ್ನು ತೋರಿಸುವ ಕೊರೊನಾವೈರಸ್ ಪರೀಕ್ಷೆಯನ್ನು ತೆಗೆದುಕೊಳ್ಳುವಂತಿದೆ. ದಶಾಜ್ಞೆಗಳು ನಮ್ಮ ಸಮಸ್ಯೆಯನ್ನು ‘ಸರಿಪಡಿಸುವುದಿಲ್ಲ’, ಆದರೆ ಸಮಸ್ಯೆಯನ್ನು ಸ್ಪಷ್ಟವಾಗಿ ತಿಳಿಸುತ್ತವೆ ಆದ್ದರಿಂದ ದೇವರು ಒದಗಿಸಿದ ಪರಿಹಾರವನ್ನು ನಾವು ಸ್ವೀಕರಿಸುತ್ತೇವೆ. ಸ್ವಯಂ ವಂಚನೆಯಲ್ಲಿ ಮುಂದುವರಿಯುವ ಬದಲು, ಕಾನೂನು ನಮ್ಮನ್ನು ಜಾಗರೂಕರಾಗಿ ನೋಡಲು ಅನುಮತಿಸುತ್ತದೆ.

ದೇವರ ಉಡುಗೊರೆ ಪಶ್ಚಾತ್ತಾಪದ ಮೂಲಕ ನೀಡಲಾಗಿದೆ

ದೇವರು ಒದಗಿಸಿರುವ ಪರಿಹಾರವೆಂದರೆ ಯೇಸುಕ್ರಿಸ್ತನ ಮರಣ ಮತ್ತು ಪುನರುತ್ಥಾನದ ಮೂಲಕ ಪಾಪಗಳನ್ನು ಕ್ಷಮಿಸುವ ಉಡುಗೊರೆ – ಯೇಸುವಿನ ಪ್ರತಿಬಿಂಬ . ನಾವು ಯೇಸುವಿನ ಕೆಲಸದಲ್ಲಿ ನಂಬಿಕೆಯಿಟ್ಟರೆ ಅಥವಾ ವಿಶ್ವಾಸವನ್ನು ಹೊಂದಿದ್ದರೆ ಈ ಜೀವನದ ಉಡುಗೊರೆಯನ್ನು ನಮಗೆ ಸರಳವಾಗಿ ನೀಡಲಾಗುತ್ತದೆ.

  16 ಆದರೆ ಯಾವನಾದರೂ ಯೇಸು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ಹೊರತು ನ್ಯಾಯ ಪ್ರಮಾಣದ ಕ್ರಿಯೆಗಳಿಂದ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲವೆಂಬದು ನಮಗೆ ತಿಳಿದಿರುವದ ರಿಂದ ನಾವು ಸಹ ನ್ಯಾಯ ಪ್ರಮಾಣದ ಕ್ರಿಯೆ ಗಳಿಂದಲ್ಲ, ಆದರೆ ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ನೀತಿವಂತರೆಂದು ನಿರ್ಣಯಿ

ಗಲಾತ್ಯದವರಿಗೆ 2: 16

ಶ್ರೀ ಅಬ್ರಹಾಮನು ದೇವರ ಮುಂದೆ ನಿರ್ದೋಷಿಯಾಗಿ ಕಾಣಲ್ಪಟ್ಟಂತೆ ನಮಗೂ ಕೂಡ ನೀತಿವಂತಿಕೆಯು ನೀಡಲ್ಪಡುವದು. ಆದರೆ ನಾವು ಪಶ್ಚಾತ್ತಾಪಪಡುವ ಅಗತ್ಯವಿರುತ್ತದೆ. ಅನೇಕ ವೇಳೆ ಪಶ್ಚಾತ್ತಾಪವನ್ನು ತಪ್ಪಾಗಿ ಅರ್ಥೈಸಲಾಗುತ್ತದೆ, ಆದರೆ ಸರಳವಾದ ಅರ್ಥದಲ್ಲಿ ಪಶ್ಚಾತ್ತಾಪ ಎಂದರೆ ‘ನಮ್ಮ ಮನಸ್ಸನ್ನು ಬದಲಾಯಿಸುವುದು’ ಎಂದರೆ ಪಾಪದಿಂದ ದೂರ ಸರಿಯುವುದು ಮತ್ತು ದೇವರ ಕಡೆಗೆ ತಿರುಗುವುದು  ಆಗ ಆತನು ಉಡುಗೊರೆಯನ್ನು ನೀಡುವನು. ವೇದ ಪುಸ್ತಕ (ಬೈಬಲ್) ವಿವರಿಸಿದಂತೆ:

  19 ಆದದರಿಂದ ನಿಮ್ಮ ಪಾಪಗಳು ಅಳಿಸಲ್ಪಡು ವಂತೆ ನೀವು ಮಾನಸಾಂತರಪಟ್ಟು ತಿರುಗಿಕೊಳ್ಳಿರಿ; ಆಗ ಕರ್ತನ ಸನ್ನಿಧಾನದಿಂದ ನಿಮಗೆ ವಿಶ್ರಾಂತಿಕಾಲಗಳು ಒದಗುವವು.

ಅಪೊಸ್ತಲರಕೃತ್ಯಗಳು 3: 19

ನಿಮಗೂ ಮತ್ತು ನನಗಿರುವ ವಾಗ್ದಾನವೆಂದರೆ, ನಾವು ಪಶ್ಚಾತ್ತಾಪಪಟ್ಟು, ದೇವರ ಕಡೆಗೆ ತಿರುಗಿದರೆ, ನಮ್ಮ ಪಾಪಗಳನ್ನು ನಮ್ಮ ವಿರುದ್ಧ ಎಣಿಸಲಾಗುವುದಿಲ್ಲ ಮತ್ತು ನಾವು ಜೀವವನ್ನು ಸ್ವೀಕರಿಸುತ್ತೇವೆ. ದೇವರು, ತನ್ನ ವಿಶಾಲವಾದ ಕರುಣೆಯಿಂದ, ಕಲಿಯುಗದಲ್ಲಿ ನಮಗೆ ಪಾಪದ ಪರೀಕ್ಷೆ ಮತ್ತು ಲಸಿಕೆ ಎರಡನ್ನೂ ಕೊಟ್ಟಿದ್ದಾನೆ.

Leave a Reply

Your email address will not be published. Required fields are marked *