ಸಂಬಂಧಿತ ಭಾವನೆಗಳ ವ್ಯತ್ಯಾಸಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಗೊಂದಲಕ್ಕೆ ಕಾರಣವಾಗಬಹುದು. ಇದಕ್ಕೆ ಉತ್ತಮ ಉದಾಹರಣೆಯನ್ನು ದಕ್ಷಿಣ ಏಷ್ಯಾದ ಭಾಷೆಗಳು ನೀಡುತ್ತವೆ.
ಅನೇಕ ಪಾಶ್ಚಾತ್ಯರು ಹಿಂದಿ (ಭಾಷೆ) ಮತ್ತು ಹಿಂದೂ (ಧರ್ಮ ಅಥವಾ ಜೀವನದ ಧಾರ್ಮಿಕ ವಿಧಾನ) ಗಳನ್ನು ಪ್ರತ್ಯೇಕಿಸುವುದಿಲ್ಲ. ಪದಗಳು ತುಂಬಾ ಹೋಲುತ್ತವೆ ಮತ್ತು ‘ಎರಡೂ ಭಾರತದಿಂದ ಬಂದದರಿಂದ’ ಅವು ಒಂದೇ ಆಗಿರುತ್ತವೆ ಎಂದು ಭಾವಿಸುತ್ತಾರೆ. ನೀವು ‘ಅವನು ಹಿಂದೂ ಮಾತನಾಡುತ್ತಾನೆ’ ಮತ್ತು ‘ಅವಳು ಹಿಂದಿ’ ಎಂದು ಜನರು ಹೇಳುವುದನ್ನು ಕೇಳುತ್ತೀರಿ, ಇದು ಅವರ ಪದಗಳ ತಪ್ಪು ತಿಳುವಳಿಕೆಯನ್ನು ತೋರಿಸುತ್ತದೆ.
ಕೆಲವು ಪಾಶ್ಚಾತ್ಯರು ದಕ್ಷಿಣ ಏಷ್ಯಾದಾದ್ಯಂತ ಅನೇಕ ಭಾಷೆಗಳು ಮಾತನಾಡಲಾಗುತ್ತವೆ ಎಂದು ಸಹ ತಿಳಿದಿರುವುದಿಲ್ಲ. ಪ್ರತಿಯೊಬ್ಬರೂ ‘ಅಲ್ಲಿ’ ಹಿಂದಿ (ಅಥವಾ ಹಿಂದೂ) ಮಾತನಾಡುತ್ತಾರೆ ಎಂದು ಹೆಚ್ಚಾಗಿ ಊಹಿಸಲಾಗಿದೆ. ಲಕ್ಷಾಂತರ ಜನರು ಮಲಯಾಳಂ, ತಮಿಳು, ತೆಲುಗು, ಒಡಿಯ, ಮರಾಠಿ, ಬಂಗಾಳಿ, ಗುಜರಾತಿ, ಕನ್ನಡ, ಪಂಜಾಬಿ, ನೇಪಾಳಿ ಮುಂತಾದ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ ಎಂದು ಅವರು ಪ್ರಶಂಸಿಸುವುದಿಲ್ಲ.
ಸಹಜವಾಗಿ ಹಿಂದೂ ಧರ್ಮದಿಂದ ಹಿಂದಿಯು ಪ್ರಭಾವಿತವಾಗಿದೆ ಮತ್ತು ಹೆಚ್ಚಾಗಿ ಹಿಂದೂ ಭಾವನೆಗಳನ್ನು ಹಿಂದಿಯಲ್ಲಿ ವ್ಯಕ್ತಪಡಿಸಲಾಗುತ್ತದೆ. ಆದಾಗ್ಯೂ, ಹಿಂದೂಗಳಲ್ಲದ ಅನೇಕ ಹಿಂದಿ ಭಾಷಣಕಾರರಿದ್ದಾರೆ. ಅಂತೆಯೇ ಹಿಂದೂ ಭಕ್ತರು ಇತರ ಭಾಷೆಗಳಲ್ಲೂ ಸಹಾ (ತಮಿಳು, ಮಲಯಾಳಂ, ಇತ್ಯಾದಿ.) ಪ್ರಾರ್ಥನೆ ಮತ್ತು ಪೂಜೆ ಮಾಡುತ್ತಾರೆ. ಒಂದರ ಮೇಲೊಂದು ಕಾಳಜಿ ಮತ್ತು ಪ್ರಭಾವವನ್ನು ಹೊಂದಿದೆ – ಆದರೆ ಅವು ಒಂದೇ ಆಗಿರುವುದಿಲ್ಲ.
ದಕ್ಷಿಣ ಏಷ್ಯಾದ ಭಾಷಾ ಲಿಪಿಗಳು
ಈ ಭಾಷೆಗಳು, ವೈವಿಧ್ಯಮಯವಾಗಿದ್ದರೂ, ಅವುಗಳ ಇತಿಹಾಸದಿಂದ ಒಂದಾಗುತ್ತವೆ. ದಕ್ಷಿಣ ಏಷ್ಯಾದ ಎಲ್ಲಾ ಬರವಣಿಗೆ ವ್ಯವಸ್ಥೆಗಳು ಬ್ರಾಹ್ಮಿ ಲಿಪಿಯಿಂದ ಬಂದವು. ಇದು ಕ್ರಿ.ಪೂ. ಮೊದಲ ಸಹಸ್ರಮಾನದ ಮಧ್ಯದಲ್ಲಿ ಪ್ರಾಚೀನ ಫೀನಿಷಿಯನ್ (= ಪ್ಯಾಲಿಯೊ-ಇಬ್ರೀಯ) ದಿಂದ ಬಂದಿದೆ.
ಏಷ್ಯಾದ ಒಳಸಂಚುಗಳಲ್ಲಿ ಪ್ರಮುಖ ಸಿದ್ಧಾಂತವು ಇಬ್ರೀಯ ವನವಾಸವನ್ನು ಆಧರಿಸಿದ್ದರೂ, ಹೇಗೆ ಈ ಲಿಪಿ ದಕ್ಷಿಣ ಏಷ್ಯಾಕ್ಕೆ ಬಂದಿತು ಎಂಬುದು ಸ್ಪಷ್ಟವಾಗಿಲ್ಲ. ಬ್ರಾಹ್ಮಿ ಲಿಪಿಯನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸಲಾಗಿದೆ: ಉತ್ತರ ಮತ್ತು ದಕ್ಷಿಣ ಬ್ರಾಹ್ಮಿ ಲಿಪಿಗಳು. ಉತ್ತರ ಬ್ರಾಹ್ಮಿ ಲಿಪಿ ದೇವನಾಗ್ರಿ ಮತ್ತು ನಂದಿನಗರಿಗಳಾಗಿ ರೂಪಿಸಲ್ಪಟ್ಟಿತು ನಂತರ ಅದು ಸಂಸ್ಕೃತ ಮತ್ತು ಉತ್ತರ ಭಾರತದ ಭಾಷೆಗಳಾಗಿ ಮಾರ್ಪಟ್ಟಿತು (ಹಿಂದಿ, ಮರಾಠಿ, ಗುಜರಾತಿ, ಬಂಗಾಳಿ, ನೇಪಾಳಿ, ಪಂಜಾಬಿ). ದ್ರಾವಿಡ ಭಾಷೆಗಳು ದಕ್ಷಿಣ ಬ್ರಾಹ್ಮಿ ಲಿಪಿಯನ್ನು ಅಳವಡಿಸಿಕೊಂಡವು, ಮುಖ್ಯವಾಗಿ ಇಂದು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಕೇಳಿಬಂದಿದೆ.
ಕ್ರೈಸ್ತ ಧರ್ಮ ಮತ್ತು ಸುವಾರ್ತೆ ಕೂಡ ಒಂದೇ ಅಲ್ಲ
ಹಿಂದಿ ಮತ್ತು ಹಿಂದೂ ಪರಸ್ಪರ ಪ್ರಭಾವ ಬೀರಿವೆ, ಆದರೆ ಅವು ಒಂದೇ ಅಲ್ಲ, ಹಾಗೆಯೇ ಸುವಾರ್ತೆ ಮತ್ತು ಕ್ರೈಸ್ತ ಧರ್ಮವು ಒಂದೇ ಅಲ್ಲ. ಕ್ರೈಸ್ತ ಧರ್ಮವು ಸಂದೇಶಕ್ಕೆ ಸಾಂಸ್ಕೃತಿಕ ಪ್ರತಿಕ್ರಿಯೆಯಾಗಿದೆ. ಆದ್ದರಿಂದ ಕ್ರೈಸ್ತ ಧರ್ಮದಲ್ಲಿ ಆಚಾರಗಳು, ನಂಬಿಕೆಗಳು ಮತ್ತು ಅಭ್ಯಾಸಗಳಿವೆ ಆದರೆ ಸುವಾರ್ತೆಯಲ್ಲಿಲ್ಲ. ಉದಾಹರಣೆಗೆ, ಪುನರುತ್ಥಾನ ಮತ್ತು ಕ್ರಿಸ್ಮಸ್ನಂತಹ ಪ್ರಸಿದ್ಧ ಹಬ್ಬಗಳನ್ನು ತೆಗೆದುಕೊಳ್ಳಿ, ಬಹುಶಃ ಕ್ರೈಸ್ತ ಧರ್ಮದ ಅತ್ಯಂತ ಪ್ರಸಿದ್ಧ ಚಿತ್ರಣಗಳು. ಈ ಹಬ್ಬಗಳು ಸುವಾರ್ತೆಯಲ್ಲಿ ಬಹಿರಂಗಪಡಿಸಿದ ದೇವರ ಅವತಾರವಾದ ಯೇಸುಕ್ರಿಸ್ತನ ಜನನ, ಮರಣ ಮತ್ತು ಪುನರುತ್ಥಾನವನ್ನು ನೆನಪಿಸುತ್ತವೆ. ಆದರೆ ಈ ಹಬ್ಬಗಳ ಬಗ್ಗೆ ಎಲ್ಲಿಯೂ ಸುವಾರ್ತೆಯ ಸಂದೇಶವು, ಅಥವಾ ವೇದ ಪುಸ್ತಕದಲ್ಲಿ (ಸತ್ಯವೇದ) ಯಾವುದೇ ಉಲ್ಲೇಖ ಅಥವಾ ಆಜ್ಞೆಯನ್ನು ನೀಡುವುದಿಲ್ಲ. ಸುವಾರ್ತೆ ಮತ್ತು ಕ್ರೈಸ್ತ ಧರ್ಮದ ನಡುವೆ ಕಾಳಜಿ ಹೊಂದಲಾಗಿದೆ ಆದರೆ ಅವು ಒಂದೇ ಆಗಿಲ್ಲ. ವಾಸ್ತವವಾಗಿ, ಸಂಪೂರ್ಣ ಸತ್ಯವೇದ (ವೇದ ಪುಸ್ತಕ) ‘ಕ್ರೈಸ್ತ’ ಎಂಬ ಪದವನ್ನು ಕೇವಲ ಮೂರು ಬಾರಿ ಉಲ್ಲೇಖಿಸುತ್ತದೆ.
ದಕ್ಷಿಣ ಏಷ್ಯಾದ ಭಾಷೆಗಳು ತಮ್ಮ ಲಿಪಿಗಳ ಅಭಿವೃದ್ಧಿಯಲ್ಲಿ ದೀರ್ಘ ಮತ್ತು ಸಮ್ಮಿಶ್ರ ಇತಿಹಾಸವನ್ನು ಹೊಂದಿದಂತೆ, ಸುವಾರ್ತೆಯು ಸಹಾ ಕ್ರೈಸ್ತ ಧರ್ಮಕ್ಕಿಂತಲೂ ಹೆಚ್ಚು ಹಳೆಯದು. ಸುವಾರ್ತೆಯ ಸಂದೇಶವನ್ನು ಮೊದಲು ಮಾನವ ಇತಿಹಾಸದ ಪ್ರಾರಂಭದಲ್ಲಿ ಘೋಷಿಸಲಾಯಿತು, ಹೀಗಾಗಿ ಋಗ್ವೇದದ ಅತ್ಯಂತ ಹಳೆಯ ಭಾಗಗಳಲ್ಲಿ ಕಂಡುಬರುತ್ತದೆ. 4000 ವರ್ಷಗಳ ಹಿಂದೆ, ಅಬ್ರಹಾಮನು ಇದನ್ನು ಚಲನೆಗೆ ತಂದನು, ಅವನ ವಂಶಸ್ಥರು (ಅ)ಬ್ರಾಹಮಿಕ್ ಲಿಪಿಯನ್ನು ದಕ್ಷಿಣ ಏಷ್ಯಾಕ್ಕೆ ತಂದರು. ದಕ್ಷಿಣ ಏಷ್ಯಾದ ಭಾಷೆಗಳಂತೆ, ಸುವಾರ್ತೆಯು ಬಂದು ಮತ್ತು ಹೋದ ವಿವಿಧ ಲಿಪಿಗಳನ್ನು, ಮತ್ತು ಏರಿದ ಮತ್ತು ಬಿದ್ದ ಸಾಮ್ರಾಜ್ಯಗಳನ್ನು ವ್ಯಾಪಿಸಿದೆ. ಆದರೆ ಮೊದಲಿನಿಂದಲೂ ಅದರ ವ್ಯಾಪ್ತಿ ಎಲ್ಲಾ ರಾಷ್ಟ್ರಗಳ ಜನರಿಗೆ, ಅವರ ಸಂಸ್ಕೃತಿ, ಭಾಷೆ, ಲಿಂಗ, ಜಾತಿ, ಅಥವಾ ಸಾಮಾಜಿಕ ಸ್ಥಾನಮಾನಗಳಲ್ಲಿ ಹರಡಿದೆ. ಸುವಾರ್ತೆಯು ವಿವಾಹದೊಂದಿಗೆ ಮುಕ್ತಾಯಗೊಳ್ಳುವ ಪ್ರೇಮಕಥೆಯಾಗಿದೆ.
ಸುವಾರ್ತೆ ಎಂದರೇನು?
ಈ ಜಾಲತಾಣವು ಸುವಾರ್ತೆಯ ಕುರಿತಾಗಿದೆ, ಕ್ರೈಸ್ತ ಧರ್ಮದ ಬಗ್ಗೆ ಅಲ್ಲ. ಮೂಲತಃ ಸುವಾರ್ತೆಯನ್ನು ವಿವರಿಸಲು ಬಳಸಲಾದ ಪದಗಳೆಂದರೆ ದಾರಿ ಮತ್ತು ನೇರ ದಾರಿ (ಧರ್ಮವನ್ನು ಯೋಚಿಸಿ). ಸುವಾರ್ತೆಯನ್ನು ಅನುಸರಿಸುವ ಅನುಯಾಯಿಗಳನ್ನು ವಿಶ್ವಾಸಿಗಳು, ಶಿಷ್ಯರು (ಭಕ್ತರು ಎಂದು ಯೋಚಿಸಿ) ಎಂದು ಕರೆಯಲಾಗುತ್ತದೆ. ಸುವಾರ್ತೆಯ ಕೇಂದ್ರ ಆಶಯ ಒಬ್ಬ ವ್ಯಕ್ತಿ, ನಜರೇತಿನ ಯೇಸು, ದೇವರ ಅವತಾರ, ನಿಮಗೂ ಮತ್ತು ನನಗೂ ಭಕ್ತಿಯನ್ನು ಪ್ರದರ್ಶಿಸಿದ ಗುರು. ಆತನ ಬರೋಣವನ್ನು ಸಮಯದ ಆರಂಭದಿಂದಲೇ ಯೋಜಿಸಲಾಗಿತ್ತು. ಒಬ್ಬನು ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಇನ್ನೊಂದು ಧರ್ಮದವರು – ಅಥವಾ ಯಾವುದೂ ಇಲ್ಲಎಂಬುದನ್ನು ಲೆಕ್ಕಿಸದೆ ಆತನನ್ನು ಅರ್ಥಮಾಡಿಕೊಳ್ಳುವುದು ಯೋಗ್ಯವಾಗಿದೆ.
ನೀವು ಜೀವನ, ಪಾಪ ಮತ್ತು ಮರಣದಿಂದ ಸ್ವಾತಂತ್ರ್ಯ ಮತ್ತು ದೇವರೊಂದಿಗಿನ ಸಂಬಂಧ, ಸುವಾರ್ತೆಯ ವಿಷಯಗಳ ಬಗ್ಗೆ ಆಶ್ಚರ್ಯಪಟ್ಟರೆ, ಈ ಜಾಲತಾಣವು ನಿಮಗಾಗಿ ಆಗಿದೆ. ಕ್ರೈಸ್ತ ಧರ್ಮದ ಸಂಸ್ಕೃತಿಯನ್ನು ಬದಿಗಿಟ್ಟು, ನೀವು ಸುವಾರ್ತೆಯು ಆಸಕ್ತಿದಾಯಕ ಮತ್ತು ಸಾಕಷ್ಟು ತೃಪ್ತಿಕರವಾಗಿರುತ್ತದೆ ಎಂದು ಕಾಣಬಹುದು. ನೀವು ಇದನ್ನು ಕೆಳಗಿನ ದಕ್ಷಿಣ ಏಷ್ಯಾದ: ಇಂಗ್ಲಿಷ್, ಹಿಂದಿ, ರೊಮನ್ನಾಗ್ರಿ, ಬಂಗಾಳಿ, ಮರಾಠಿ, ಗುಜರಾತಿ, ಪಂಜಾಬಿ, ನೇಪಾಳಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಅನ್ವೇಷಿಸಬಹುದು.