ನಾನು ಮೊದಲು ಪವಿತ್ರ ಖುರ್ ಆನ್ ನನ್ನು ಓದಿದಾಗ ವಿವಿಧ ರೀತಿಯಲ್ಲಿ ನನಗೆ ಪೆಟ್ಟುತಿಂದ ಹಾಗಾಯಿತು. ಮೊದಲಿಗೆ, ನಾನು ಇಂಜೀಲ್ ನಲ್ಲಿ (ಸುವಾರ್ತೆ) ಅನೇಕ ನೇರವಾದ ಉಲ್ಲೇಖಗಳನ್ನು ಕಂಡುಕೊಂಡೆ. ಆದರೆ ಇದು ‘ಇಂಜೀಲ್’ ನಿಂದ ಪ್ರಸ್ತಾಪಿಸಿದ ನಿರ್ದಿಷ್ಟವಾದ ಮಾದರಿಯೇ ನಿಜವಾಗಿಯೂ ನನಗೆ ಕುತೂಹಲ ಕೆರಳಿಸಿತು. ಇಂಜೀಲ್ ಅನ್ನು ನೇರವಾಗಿ ಉಲ್ಲೇಖಿಸುವ ಖುರ್ ಆನ್ ನಿನಲ್ಲಿರುವ ಎಲ್ಲಾ ಅಯತ್ಗಳನ್ನು ಕೆಳಗೆ ನೀಡಲಾಗಿದೆ. ನಾನು ಗಮನಿಸಿದ ಮಾದರಿಯನ್ನು ಬಹುಶಃ ನೀವು ಗಮನಿಸಬಹುದು.
ಅವನು ನಿಮಗೆ ಈ ಗ್ರಂಥವನ್ನು ಸತ್ಯದೊಂದಿಗೆ ಇಳಿಸಿಕೊಟ್ಟಿರುವನು (ಹಂತ ಹಂತವಾಗಿ). ಇದು ತನ್ನ ಹಿಂದಿನವುಗಳನ್ನು (ಗತ ಕಾಲದ ದಿವ್ಯ ಗ್ರಂಥಗಳನ್ನು) ಸಮರ್ಥಿಸುತ್ತದೆ. (ಈ ಹಿಂದೆ) ತೌರಾತ್ (ಮೋಶೆಯ) ಮತ್ತು ಇಂಜೀಲ್ಗಳನ್ನು (ಯೇಸುವಿನ) ಇಳಿಸಿ ಕೊಟ್ಟವನೂ ಅವನೇ. (ಅವು) ಈ ಹಿಂದೆ ಮಾನವರಿಗೆ ಮಾರ್ಗದರ್ಶಿಯಾಗಿದ್ದವು. (ಇದೀಗ) ಅವನು ಈ ‘ಫುರ್ಕಾನ್’ ಅನ್ನು ಇಳಿಸಿಕೊಟ್ಟಿದ್ದಾನೆ. ಖಂಡಿತವಾಗಿಯೂ, ಅಲ್ಲಾಹನ ವಚನಗಳನ್ನು ಧಿಕ್ಕರಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ. ಅಲ್ಲಾಹನಂತೂ ಪ್ರಚಂಡನೂ (ಕೆಡುಕಿಗೆ) ಪ್ರತೀಕಾರ ತೀರಿಸುವವನೂ ಆಗಿದ್ದಾನೆ.
ಸುರ 3: 3-4ಅಲ್-ಇಮ್ರಾನ್
‘‘ಅವನು (ಅಲ್ಲಾಹನು) ಅವರಿಗೆ [ಯೇಸು] ಗ್ರಂಥವನ್ನು ಮತ್ತು ಯುಕ್ತಿಯನ್ನು ಹಾಗೂ ತೌರಾತ್ ಮತ್ತು ಇಂಜೀಲ್ಗಳನ್ನು ಕಲಿಸುವನು’’.
ಸುರ 3: 48 ಅಲ್ ಇಮ್ರಾನ್
‘‘ಗ್ರಂಥದವರೇ! ನೀವೇಕೆ ನಮ್ಮೊಡನೆ ಇಬ್ರಾಹೀಮ್ರ ಕುರಿತು ಜಗಳಾಡುತ್ತೀರಿ? ತೌರಾತ್ ಮತ್ತು ಇಂಜೀಲ್ಗಳನ್ನು ಅವರ ಅನಂತರವಷ್ಟೇ ಇಳಿಸಲಾಗಿತ್ತು. ನೀವು ಆಲೋಚಿಸುವುದಿಲ್ಲವೇ?’’
ಸುರ 3:65 ಅಲ್ ಇಮ್ರಾನ್
ಅವರ (ಗತಕಾಲದ ದೂತರುಗಳ) ಹೆಜ್ಜೆ ಗುರುತುಗಳ ಮೇಲೆ ನಾವು ಮರ್ಯಮರ ಪುತ್ರ ಈಸಾರನ್ನು ಕಳಿಸಿದೆವು – ತೌರಾತ್ನ ಪೈಕಿ ಅವರ (ಯಹೂದಿಗಳ) ಬಳಿ ಉಳಿದಿದ್ದ ಭಾಗವನ್ನು ದೃಢೀಕರಿಸುವವರಾಗಿ. ಹಾಗೆಯೇ ನಾವು ಅವರಿಗೆ (ಈಸಾರಿಗೆ) ಇಂಜೀಲ್ ಅನ್ನು ನೀಡಿದೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ಅದು ತೌರಾತ್ನ ಪೈಕಿ ಅವರ ಬಳಿ ಉಳಿದಿರುವ ಭಾಗವನ್ನು ಸಮರ್ಥಿಸುತ್ತದೆ ಮತ್ತು ಅದು ದೇವಭಕ್ತರ ಪಾಲಿಗೆ ಮಾರ್ಗದರ್ಶಿ ಹಾಗೂ ಉಪದೇಶವಾಗಿದೆ.
ಸುರ 5: 46 ಮಾಇದಃ
ಒಂದು ವೇಳೆ ಅವರು [ಗ್ರಂಥದವರೇ] ತೌರಾತ್ ಮತ್ತು ಇಂಜೀಲ್ಗಳನ್ನು ಹಾಗೂ ಅವರಿಗೆ ಅವರೊಡೆಯನ ಕಡೆಯಿಂದ ಏನನ್ನು ಇಳಿಸಿಕೊಡಲಾಗಿದೆಯೋ.
ಸೂರತ್ 5: 66ಮಾಇದಃ
‘‘ಗ್ರಂಥದವರೇ, ನೀವು ತೌರಾತ್ ಅನ್ನು, ಇಂಜೀಲ್ ಅನ್ನು ಮತ್ತು ನಿಮ್ಮ ಒಡೆಯನು ನಿಮ್ಮೆಡೆಗೆ ಇಳಿಸಿಕೊಟ್ಟಿರುವುದನ್ನು ಸಂಸ್ಥಾಪಿಸುವ ತನಕ ನಿಮಗೆ ಯಾವ ನೆಲೆಯೂ ಇಲ್ಲ.’’
ಸೂರತ್ 5: 68 ಮಾಇದಃ
ನಾನು [ಅಲ್ಲಾಹನು] ನಿಮಗೆ [ಯೇಸು] ಗ್ರಂಥ ಹಾಗೂ ಜಾಣ್ಮೆಯನ್ನು ಮತ್ತು ತೌರಾತ್ ಹಾಗೂ ಇಂಜೀಲ್ಗಳನ್ನು ಕಲಿಸಿಕೊಟ್ಟೆನು..
ಸೂರತ್ 5: 110 ಮಾಇದಃ
ತೌರಾತ್, ಇಂಜೀಲ್ ಮತ್ತು ಕುರ್ಆನ್ನಲ್ಲಿ ಅವರಿಗೆ ನೀಡಲಾಗಿರುವ ವಾಗ್ದಾನವು ಸತ್ಯವಾಗಿದೆ.
ಸೂರತ್ 9: 111 ಅತ್ತೌಬಃ
ತೌರಾತ್ನಲ್ಲಿ ಅವರ ಲಕ್ಷಣವು ಹೀಗೆಯೇ ಇದೆ ಮತ್ತು ಇಂಜೀಲ್ನಲ್ಲಿ ಅವರ ಲಕ್ಷಣವು ಹೀಗಿದೆ; ತನ್ನ ತೆನೆಯನ್ನು ಮೊಳೆಯಿಸುವ ಒಂದು ಹೊಲದಂತೆ. ಅದು ಅದನ್ನು ಬಲಪಡಿಸುತ್ತಿರುತ್ತದೆ. ಕೊನೆಗೆ ಅದು ಬಲಿಷ್ಠವಾಗಿ ಸ್ವತಃ ತನ್ನ ಕಾಂಡದ ಮೇಲೆ ನಿಲ್ಲುತ್ತದೆ.
ಸೂರತ್ 48: 29 ಫತಹ್
ಖುರ್ ಆನ್ ನಿಂದ ನೀವು ಇಂಜೀಲ್ನ ಎಲ್ಲಾ ಉಲ್ಲೇಖಗಳನ್ನು ಒಟ್ಟಿಗೆ ಇಡುವಾಗ ಎದ್ದು ಕಾಣುವ ಸಂಗತಿಯೆಂದರೆ, ‘ಇಂಜೀಲ್’ ಎಂದಿಗೂ ಏಕಾಂಗಿಯಾಗಿ ನಿಲ್ಲುವುದಿಲ್ಲ. ಪ್ರತಿಯೊಂದು ನಿದರ್ಶನದಲ್ಲೂ ‘ತೌರತ್’ (ಕಾನೂನು) ಎಂಬ ಪದವು ಅದರ ಮುಂಚಿತವಾಗಿರುತ್ತದೆ. ಪ್ರವಾದಿ ಮೋಶೆಯ (ಸ) ಪುಸ್ತಕಗಳ ‘ಕಾನೂನುಗಳನ್ನು’ಸಾಮಾನ್ಯವಾಗಿ ಮುಸ್ಲಿಮರಲ್ಲಿ ‘ತೌರತ್’ ಮತ್ತು ಯಹೂದಿ ಜನರಲ್ಲಿ ‘ತೋರಾ’ ಎಂದು ಕರೆಯಲ್ಪಡುವದಾಗಿದೆ. ಪವಿತ್ರ ಪುಸ್ತಕಗಳಲ್ಲಿ ಇಂಜೀಲ್ (ಸುವಾರ್ತೆ) ವಿಶಿಷ್ಟವಾಗಿದೆ, ಅದರಲ್ಲಿ ಅದನ್ನು ಸ್ವತಃ ಎಂದಿಗೂ ಉಲ್ಲೇಖಿಸಲ್ಲಿಲ್ಲ. ಇದಕ್ಕೆ ವ್ಯತ್ಯಾಸವಾಗಿ ನೀವು ತೌರತ್ (ಕಾನೂನು) ಮತ್ತು ಖುರಾನಿನ ಬಗ್ಗೆ ಉಲ್ಲೇಖಗಳನ್ನು ಕಾಣಬಹುದು. ಕೆಲವು ಉದಾಹರಣೆಗಳು ಇಲ್ಲಿವೆ.
ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು – ಸತ್ಕರ್ಮಿಯ ಪಾಲಿಗೆ ನಮ್ಮ ಅನುಗ್ರಹವನ್ನು ಪರಿಪೂರ್ಣಗೊಳಿಸಲಿಕ್ಕಾಗಿ, ಎಲ್ಲ ವಿಷಯಗಳ ವಿವರವನ್ನು ಒದಗಿಸಲಿಕ್ಕಾಗಿ ಮತ್ತು ಮಾರ್ಗದರ್ಶನ ಹಾಗೂ ಅನುಗ್ರಹವಾಗಿ: ಇದನ್ನು ಅನುಸರಿಸಿರಿ ಮತ್ತು ಧರ್ಮ ನಿಷ್ಠರಾಗಿರಿ – ನೀವು ಕರುಣೆಗೆ ಪಾತ್ರರಾಗ ಬಹುದು.’’ [ಸೂರತ್ 6: 154-155 (ಜಾನುವಾರುಗಳು)]
ಅವರೇನು, ಕುರ್ಆನ್ನ ಕುರಿತು ಚಿಂತನೆ ನಡೆಸುವುದಿಲ್ಲವೆ? ಒಂದು ವೇಳೆ ಇದು ಅಲ್ಲಾಹನ ಹೊರತು ಬೇರೆ ಯಾರ ಕಡೆಯಿಂದ ಬಂದಿದ್ದರೂ, ಅವರು ಇದರಲ್ಲಿ ಹಲವು ವಿರೋಧಾಭಾಸಗಳನ್ನು ಕಾಣುತ್ತಿದ್ದರು. [ಸೂರತ್ 4: 82 (ಮಹಿಳೆಯರು)]
ಬೇರೆ ರೀತಿಯಲ್ಲಿ ಹೇಳುವುದಾದರೆ, ಪವಿತ್ರ ಖುರ್ ಆನ್ ‘ಇಂಜೀಲ್’ ಅನ್ನು ಉಲ್ಲೇಖಿಸಿದಾಗ, ಅದು ಯಾವಾಗಲೂ ಅದರೊಂದಿಗೆ ಮತ್ತು ಯಾವಾಗಲೂ ‘ತೌರತ್’ನ (ಕಾನೂನು) ನಂತರ ಉಲ್ಲೇಖಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಇದು ವಿಶಿಷ್ಟವಾದುದು ಏಕೆಂದರೆ ಖುರ್ ಆನ್ ಇತರ ಪವಿತ್ರ ಪುಸ್ತಕಗಳನ್ನು ಉಲ್ಲೇಖಿಸುವುದರ ಹೊರತಾಗಿ ತನ್ನನ್ನು ತಾನೇ ಉಲ್ಲೇಖಿಸುತ್ತದೆ ಮತ್ತು ಇದು ಇತರ ಪವಿತ್ರ ಪುಸ್ತಕಗಳನ್ನು ಉಲ್ಲೇಖಿಸದೆ ತೌರತ್ (ಕಾನೂನು) ಯನ್ನು ಸಹ ಉಲ್ಲೇಖಿಸುತ್ತದೆ.
ಪ್ರವಾದಿಗಳಿಂದ ನಮಗೆ ಒಂದು ಸೂಚನೆ?
ಹಾಗಾದರೆ ಈ ಮಾದರಿಯು (‘ತೌರತ್’ ನಂತರ ಯಾವಾಗಲೂ ಉಲ್ಲೇಖಿಸಲ್ಪಡುವ ‘ಇಂಜೀಲ್’) ಗಮನಾರ್ಹವಾದುದಾಗಿದೆಯೇ? ಕೆಲವರು ಇದನ್ನು ಕೇವಲ ಆಕಸ್ಮಿಕ ಘಟನೆ ಎಂದು ಅಥವಾ ಈ ರೀತಿಯಾಗಿ ಇಂಜೀಲ್ಅನ್ನು ಉಲ್ಲೇಖಿಸುವ ಸರಳ ಪದ್ಧತಿಯ ಕಾರಣದಿಂದಾಗಿ ತಳ್ಳಿಹಾಕಬಹುದು. ಗ್ರಂಥಗಳಲ್ಲಿ ಈ ರೀತಿಯ ಮಾದರಿಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲು ನಾನು ಕಲಿತಿದ್ದೇನೆ. ಬಹುಶಃ ಅಲ್ಲಾಹನು ಸ್ವತಃ ಸ್ಥಾಪಿಸಿದ ಮತ್ತು ನಿರ್ಮಿಸಿದ ಒಂದು ತತ್ವವನ್ನು ಅರಿತುಕೊಳ್ಳಲು ನಮಗೆ ಸಹಾಯ ಮಾಡುವ ಇದು ನಮಗೆ ಒಂದು ಪ್ರಮುಖ ಸೂಚನೆಯಾಗಿದೆ – ನಾವು ಮೊದಲು ತೌರತ್ (ಕಾನೂನು) ಗೆ ಹೋಗುವುದರ ಮೂಲಕ ಮಾತ್ರ ಇಂಜೀಲ್ಅನ್ನು ಅರ್ಥಮಾಡಿಕೊಳ್ಳಬಹುದು. ತೌರತ್ ಒಂದು ಅಗತ್ಯವಿರುವದಾಗಿದ್ದು, ನಾವು ಇಂಜೀಲ್ಅನ್ನು ಅರ್ಥಮಾಡಿಕೊಳ್ಳುವ ಮೊದಲು ತಿಳಿದುಕೊಳ್ಳಬೇಕು. ಹಾಗೆಯೇ ಮೊದಲು ತೌರತ್ ಅನ್ನು ಪರಿಶೀಲಿಸುವುದು ಮತ್ತು ಇಂಜೀಲ್ (ಸುವಾರ್ತೆ) ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಲು ನಾವು ಏನು ಕಲಿಯಬಹುದು ಎಂಬುದನ್ನು ನೋಡುವುದು ಯೋಗ್ಯವಾಗಿರುತ್ತದೆ. ಈ ಆರಂಭಿಕ ಪ್ರವಾದಿಗಳು ನಮಗೆ ‘ಸೂಚನೆಯಾಗಿದ್ದಾರೆ’ ಎಂದು ಖುರ್ ಆನ್ ಹೇಳುತ್ತದೆ. ಅದು ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿ:
ಆದಮ್ರ ಸಂತತಿಗಳೇ! ನಿಮ್ಮ ಬಳಿಗೆ, ನಿಮ್ಮೊಳಗಿಂದಲೇ, ನಿಮಗೆ ನನ್ನ ವಚನಗಳನ್ನು ಕೇಳಿಸುವ ದೂತರು ಬಂದಾಗ, ಧರ್ಮನಿಷ್ಠನಾಗಿ ತನ್ನ ಸುಧಾರಣೆ ಮಾಡಿಕೊಂಡವನು – ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು. ನಮ್ಮ ವಚನಗಳನ್ನು ಸುಳ್ಳೆಂದವರು ಮತ್ತು ಅದಕ್ಕೆದುರಾಗಿ ಅಹಂಕಾರ ತೋರಿದವರು – ಅವರೇ ನರಕವಾಸಿಗಳು. ಅವರು ಸದಾ ಕಾಲ ಅದರಲ್ಲೇ ಇರುವರು.
ಸೂರಾ 7: 35-36 ಔನ್ನತ್ಯಗಳ
ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಪ್ರವಾದಿಗಳು ತಮ್ಮ ಜೀವನದ ಬಗ್ಗೆ ಸೂಚನೆಗಳು ಮತ್ತು ಆದಾಮನ ಮಕ್ಕಳಿಗೋಸ್ಕರ ಸಂದೇಶವನ್ನು ಹೊಂದಿದ್ದರು (ಮತ್ತು ನಾವೆಲ್ಲರೂ ಅವನ ಮಕ್ಕಳು!). ಜ್ಞಾನ ಮತ್ತು ವಿವೇಕವನ್ನು ಹೊಂದಿರುವವರು ಈ ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ ನಾವು ತೌರತ್ (ಕಾನೂನು) ಮೂಲಕ ಹೋಗುವುದರ ಮುಖಾಂತರ ಇಂಜೀಲ್ಅನ್ನು ಪರಿಗಣಿಸೋಣ – ಮೊದಲ ಪ್ರವಾದಿಗಳನ್ನು ಮೊದಲಿನಿಂದಲೂ ಪರಿಗಣಿಸಿ ಅವರು ನಮಗೆ ಯಾವ ಸೂಚನೆಗಳನ್ನು ನೀಡಿದ್ದಾರೆ ಎಂಬುದನ್ನು ನೋಡಲು ನೇರ ಮಾರ್ಗವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ನಾವು ಸಮಯದ ಆರಂಭದಿಂದಲೂ ಆದಾಮನ ಸೂಚನೆಗಳೊಂದಿಗೆ ಪ್ರಾರಂಭಿಸುತ್ತೇವೆ. ತೌರತ್, ಜಬೂರ್ ಮತ್ತು ಇಂಜೀಲ್ ಎಂಬ ಪುಸ್ತಕಗಳು ಭ್ರಷ್ಟಗೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಮೂಲಕ ನೀವು ಖಂಡಿತವಾಗಿಯೂ ಪ್ರಾರಂಭಿಸಲು ಬಯಸಬಹುದು. ಈ ಮಹತ್ವದ ಪ್ರಶ್ನೆಯ ಬಗ್ಗೆ ಪವಿತ್ರ ಖುರ್ ಆನ್ ಏನು ಹೇಳುತ್ತದೆ? ಮತ್ತು ಸುನ್ನತ್? ತೌರತ್ ಬಗ್ಗೆ ತೀರ್ಪಿನ ದಿನದಂದು ಮಾಹಿತಿ ಪಡೆಯಲು ಸಮಯ ತೆಗೆದುಕೊಂಡಿರುವುದು ಒಳ್ಳೆಯದು ಮತ್ತು ಅದು ಹೇಗೆ ನೇರವಾದ ಮಾರ್ಗಕ್ಕೆ ಸೂಚನೆಯಾಗಿದೆ.