Skip to content

ಯೇಸುವಿನ ಬಲಿದಾನದ ಮೂಲಕ ಶುದ್ಧೀಕರಣದ ವರವನ್ನು ಹೊಂದಿಕೊಳ್ಳುವದು ಹೇಗೆ?

https://www.youtube.com/watch?v=w7M6NrSnshI
ಇಲ್ಲಿ ಹೆಚ್ಚಿನ ಹಾಡುಗಳು

ಎಲ್ಲಾ ಜನರಿಗಾಗಿ ತನ್ನನ್ನೇ ಯಜ್ಞವನ್ನಾಗಿ ಸಮರ್ಪಿಸಿಕೊಳ್ಳಲು ಯೇಸು ಬಂದನು. ಈ ಸಂದೇಶವನ್ನು ಪ್ರಾಚೀನ ರುಗ್ವೇದದ ಗೀತೆಗಳಲ್ಲಿ ಹಾಗೂ ಪ್ರಾಚೀನ ಇಬ್ರಿಯ ವೇದಗಳ ವಾಗ್ದಾನಗಳಲ್ಲಿ ಮತ್ತು ಹಬ್ಬಗಳಲ್ಲಿ ಮುನ್ಸೂಚಿಸಲಾಗಿದೆ.  ಪ್ರತಿ ಸಾರಿ ನಾವು ಪ್ರಾರ್ಥಸ್ನಾನದ (ಅಥವಾ ಪ್ರಥಾಸನ) ಮಂತ್ರದ ಪ್ರಾರ್ಥನೆಯನ್ನು ಕಂಠಪಾಠ ಮಾಡುವಾಗ  ಕೇಳುವ ಪ್ರಶ್ನೆಗೆ ಯೇಸುವೇ ಉತ್ತರವಾಗಿದ್ದಾನೆ.  ಇದು ಹೇಗೆ ಸಾಧ್ಯ? ಕಾರ್ಮಿಕ ನಿಯಮವು ನಮ್ಮೆಲ್ಲರ ಮೇಲೆ ಪ್ರಭಾವಬೀರುತ್ತದೆ ಎಂದು ಸತ್ಯವೇದವು (ವೇದ ಪುಸ್ತಕ) ಪ್ರಕಟಿಸುತ್ತದೆ:   

ಯಾಕಂದರೆ ಪಾಪವು ಕೊಡುವ ಸಂಬಳ ಮರಣ…..

ರೋಮಾ 6:23

ಈ ಕೆಳಗೆ ಒಂದು ದೃಷ್ಟಾಂತದಿಂದ ಕಾರ್ಮಿಕ್ ನಿಯಮವನ್ನು ನಾನು ತೋರಿಸುತ್ತೇನೆ. “ಮರಣ” ಎಂದರೆ  ಅಗಲುವಿಕೆ. ನಮ್ಮ ಆತ್ಮವು ದೇಹವನ್ನು ಅಗಲಿದಾಗ ನಾವು ಶಾರೀರಿಕವಾಗಿ ಸತ್ತಿದ್ದೇವೆ. ಅದೇ ರೀತಿಯಲ್ಲಿ ನಾವು ಆತ್ಮೀಕವಾಗಿ ದೇವರಿಂದ ಅಗಲಿದ್ದೇವೆ. ಇದು ಸತ್ಯ ಯಾಕಂದರೆ ದೇವರು ಪರಿಶುದ್ಧನಾಗಿದ್ದಾನೆ (ಪಾಪರಹಿತನು).

ಎರಡು ಬಂಡೆಗಳ ನಡುವಿನಲ್ಲಿರುವ ದೊಡ್ಡ ಕಣಿವೆಯಂತೆ ನಮ್ಮ ಪಾಪಗಳ ನಿಮಿತ್ತ ನಾವು ದೇವರಿಂದ ದೂರವಾಗಿದ್ದೇವೆ. ನಾವು ಬಂಡೆಯ ಮೇಲೆ ಇರುವಂತೆ ಮತ್ತು ದೇವರು ಮತ್ತೊಂದು ಬಂಡೆಯ ಮೇಲೆ ಇರುವಂತೆ ಊಹಿಸಿಕೊಳ್ಳಬಹುದು ಮತ್ತು ನಾವು ಈ ತಳವಿಲ್ಲದ ದೊಡ್ಡ ಪಾಪದ ಕಣಿವೆಯಿಂದ ಬೇರ್ಪಡಿಸಲ್ಪಟ್ಟಿದ್ದೇವೆ.   

ಈ ಅಗಲುವಿಕೆಯು ಅಪಾರದದ ಭಾವನೆ ಮತ್ತು ಭಯವನ್ನು ಉಂಟುಮಾಡುತ್ತದೆ. ಆದುದರಿಂದ ನಾವು ಸ್ವಾಭಾವಿಕವಾಗಿ ನಮ್ಮ ಕಡೆಯಿಂದ (ಮರಣ) ದೇವರ ಕಡೆಗೆ ಕರೆದುಕೊಂಡು ಹೋಗುವ ಸೇತುವೆಯನ್ನು ಕಟ್ಟಲು ಪ್ರಯತ್ನಿಸುತ್ತೇವೆ. ನಾವು ಬಲಿಗಳನ್ನು ಅರ್ಪಿಸುತ್ತೇವೆ, ಪೂಜೆಗಳನ್ನು ಮಾಡುತ್ತೇವೆ, ತಪಸ್ಸು ಮಾಡುತ್ತೇವೆ, ಹಬ್ಬಗಳಲ್ಲಿ ಭಾಗವಹಿಸುತ್ತೇವೆ, ದೇವಸ್ಥಾನಗಳಿಗೆ ಹೋಗುತ್ತೇವೆ, ಬಹಳಷ್ಟು ಪ್ರಾರ್ಥನೆಗಳನ್ನು ಮಾಡುತ್ತೇವೆ ಮತ್ತು ನಮ್ಮ ಪಾಪಗಳನ್ನು ಕಡಿಮೆ ಮಾಡಲು ಅಥವಾ ನಿಲ್ಲಿಸಲು ಸಹ ಪ್ರಯತ್ನಿಸುತ್ತೇವೆ. ಯೋಗ್ಯತೆಯನ್ನು ಪಡೆದುಕೊಳ್ಳಲು ಈ ಕ್ರಿಯೆಗಳು ನಮ್ಮಲ್ಲಿ ಕೆಲವರಿಗೆ ಬಹಳ ಕಾಲ ತೆಗೆದುಕೊಳ್ಳಬಹುದು. ಇಲ್ಲಿರುವ ಸಮಸ್ಯೆ ಎಂದರೆ ನಮ್ಮ ಪ್ರಯತ್ನಗಳು, ಯೋಗ್ಯತೆಗಳು, ಬಲಿದಾನಗಳು, ಮತ್ತು ತಪಸ್ವಗಳು ಇತ್ಯಾದಿಗಳು ತಮಲ್ಲಿ ತಾವೇ ಕೆಟ್ಟವುಗಳಲ್ಲ ಆದರೆ ನಮ್ಮ ಪಾಪಗಳಿಗೆ ಕೊಡಬೇಕಾದ ಕ್ರಯವು (‘ಸಂಬಳವು’) ‘ಮರಣ’ ವಾಗಿರುವದರಿಂದ ಅವು ಸಾಕಾಗುವದಿಲ್ಲ. ಇದನ್ನು ಮುಂದಿನ ಚಿತ್ರದಲ್ಲಿ ದೃಷ್ಟಾಂತಪಡಿಸಲಾಗಿದೆ.

ಧಾರ್ಮಿಕ ಅರ್ಹತೆ – ಇದು ಒಳ್ಳೆಯದಾಗಿದ್ದರೂ ಸಹ ನಮ್ಮ ಮತ್ತು ದೇವರ ನಡುವಿನ ಅಂತರವನ್ನು ಕಟ್ಟಲು ಆಗುವದಿಲ್ಲ

ನಮ್ಮನ್ನು ಮತ್ತು ದೇವರನ್ನು ದೂರಮಾಡಿರುವ ಅಂತರವನ್ನು ದಾಟಲು ನಮ್ಮ ಧಾರ್ಮಿಕ ಪ್ರಯಾಸಗಳಿಂದ ನಾವು ‘ಸೇತುವೆಯನ್ನು’ ಕಟ್ಟಲು ಪ್ರತ್ನಿಸುತ್ತೇವೆ.  ಇದು ಕೆಟ್ಟದಲ್ಲದಿದ್ದರೂ ಸಹ ಇದು ನಮ್ಮ ಸಮಸ್ಯೆಯನ್ನು ಪರಿಹರಿಸುವದಿಲ್ಲ ಯಾಕಂದರೆ ಇದು ಮತ್ತೊಂದು ಕಡೆಗೆ ಸಂಪೂರ್ಣವಾಗಿ ಹೋಗುವಲ್ಲಿ ಯಶಸ್ವಿಯಾಗುವದಿಲ್ಲ. ನಮ್ಮ ಪ್ರಯತ್ನಗಳು ಸಾಕಾಗುವದಿಲ್ಲ. ಇದು ಸಸ್ಯ ಆಹಾರವನ್ನು ತಿನ್ನುವದರ ಮೂಲಕ ಮಾತ್ರ ಕ್ಯಾನ್ಸರ್ ರೋಗವನ್ನು (ಮರಣಕ್ಕೆ ನಡೆಸುವ) ಗುಣಪಡಿಸಲು ಪ್ರಯತ್ನಿಸುವ ಹಾಗೆ ಇರುತ್ತದೆ. ಸಸ್ಯ ಆಹಾರವನ್ನು ತಿನ್ನುವದು ಒಳ್ಳೆಯದು – ಆದರೆ ಇದು ಕ್ಯಾನ್ಸರ್ ರೋಗವನ್ನು ಗುಣಪಡಿಸುವದಿಲ್ಲ. ಇದಕ್ಕೆ ನಿಮಗೆ ಸಂಪೂರ್ಣವಾಗಿ ಬೇರ ಚಿಕಿತ್ಸೆ ಅಗತ್ಯವಾಗಿರುತ್ತದೆ.   ನಾವು ಈ ಪ್ರಯತ್ನಗಳನ್ನು ಧಾರ್ಮಿಕ ಅರ್ಹತೆಯ ‘ಸೇತುವೆ’ಗೆ ದೃಷ್ಟಾಂತ ಕೊಡಬಹುದು, ಇದು ಕೇವಲ ಆಳವಾದ ಹಳ್ಳದ ಒಂದು ಭಾಗಕ್ಕೆ ಮಾತ್ರ ಕರಕೊಂಡುಹೋಗುತ್ತದೆ, ಆದರೆ ನಾವು ದೇವರಿಂದ ಇನ್ನೂ ದೂರದಲ್ಲಿಯೇ ಇರುತ್ತೇವೆ.  

ಕಾರ್ಮಿಕ್ ನಿಯಮವು ಕೆಟ್ಟ ಸುದ್ದಿಯಾಗಿದೆ – ಅದು ಬಹಳ ಕೆಟ್ಟದಾಗಿದ್ದು ನಾವು ಅದನ್ನು ಅನೇಕ ವೇಳೆ ಕೇಳಲು ಸಹ ಬಯಸುವದಿಲ್ಲ ಮತ್ತು ಈ ನಿಯಮವು ಹೊರಟು ಹೋಗುತ್ತದೆ ಎಂದು ನಿರೀಕ್ಷಿಸಿ ನಮ್ಮ ಪರಿಸ್ಥಿತಿಯ ಗುರುತ್ವಾಕರ್ಷಣೆಯು ನಮ್ಮ ಆತ್ಮದೊಳಗೆ ಮುಳುಗುವವರೆಗೆ ನಾವು ಅನೇಕ ವೇಳೆ ನಮ್ಮ ಜೀವಿತವನ್ನು ಚಟುವಟಿಕೆಗಳಿಂದ ಮತ್ತು ಸಂಗತಿಗಳಿಂದ ತುಂಬಿಸುತ್ತೇವೆ. ಆದರೆ ಸತ್ಯವೇದವು ಈ ಕಾರ್ಮಿಕ ನಿಯಮದಿಂದ ಕೊನೆಗೊಳ್ಳುವದಿಲ್ಲ.

ಯಾಕಂದರೆ ಪಾಪವು ಕೊಡುವ ಸಂಬಳ ಮರಣ ಆದರೆ…..

ರೋಮಾ 6:23

‘ಆದರೆ‘ ಎಂಬ ಚಿಕ್ಕ ಪದವು  ಈ ನಿಯಮದ ಮಾರ್ಗದರ್ಶನವನ್ನು ಈಗ ಮತ್ತೊಂದು ದಾರಿಯಲ್ಲಿ ತೆಗೆದುಕೊಂಡು ಹೋಗಲಿದೆ, ಅದು ಶುಭವಾರ್ತೆ- ಸುವಾರ್ತೆ. ಕಾರ್ಮಿಕ್ ನಿಯಮವು ಮೊಕ್ಷ ಮತ್ತು ಜ್ಞಾನೋದಯ ಎಂಬುದಕ್ಕೆ ವ್ಯತಿರಿಕ್ತವಾಗಿದೆಯೇ. ಹಾಗಾದರೆ ಮೋಕ್ಷದ ಈ ಶುಭವಾರ್ತೆ ಯಾವುದು?

 ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.

ರೋಮಾ 6:23

ಸುವಾರ್ತೆಯ ಶುಭವರ್ತಮಾನವೆಂದರೆ ನಮ್ಮ ಮತ್ತು ದೇವರ ನಡುವಿನ ಅಂತರವನ್ನು ಕಟ್ಟಲು ಯೇಸುವಿನ ಮರಣದ ಬಲಿದಾನವು ಸಾಕು. ನಾವು ಇದನ್ನು ತಿಳಿದಿದ್ದೇವೆ ಯಾಕಂದರೆ ತನ್ನ ಮರಣದ ಮೂರನೆಯ ದಿನದ ನಂತರ ಯೇಸು ದೈಹೀಕವಾಗಿ ಎದ್ದನು, ಶಾರೀರಿಕ ಪುನರುತ್ಥಾನದಲ್ಲಿ ತಿರಿಗಿ ಬದುಕಿಬಂದನು.  ಈ ದಿನ ಕೆಲವು ಜನರು ಯೇಸುವಿನ ಪುನರುತ್ಥಾನವನ್ನು ನಂಬದೆ ಇರಲು ಆಯ್ಕೆಮಾಡಿಕೊಂಡರೂ ಸಹ ಈ ಬಹಳ ಬಲವಾದ ಸಂಗತಿಯನ್ನು ಒಂದು ವಿಶ್ವವಿದ್ಯಾನಿಲಯದ ಸಾರ್ವಜನಿಕ ಉಪನ್ಯಾಸದಲ್ಲಿ ತೋರಿಸಿಕೊಡಲಾಗಿದೆ ( ಇಲ್ಲಿ ವಿಡಿಯೋ ಜೋಡಣೆ )

ಯೇಸು ಪುರುಷನಾಗಿದ್ದು ಪರಿಪೂರ್ಣವಾದ ಬಲಿದಾನವನ್ನು ಕೊಡುತ್ತಿದ್ದಾನೆ. ಆತನು ಮನುಷ್ಯನಾಗಿದ್ದದರಿಂದ ಕಣಿವೆಯ ವ್ಯಾಪ್ತಿಗಳನ್ನು ಕಟ್ಟಿ ಮಾನವನ ಕಡೆಯನ್ನು ತಲುಪಲು ಆತನು ಶಕ್ತನಾಗಿದ್ದಾನೆ. ಮತ್ತು ಆತನು ಪರಿಪೂರ್ಣನಾಗಿರುವದರಿಂದ ದೇವರ ಕಡೆಯನ್ನು ಸಹ ತಲುಪುವನು.  ಆತನು ಜೀವಕ್ಕೆ ಸೇತುವೆಯಾಗಿದ್ದಾನೆ ಮತ್ತು ಇದನ್ನು ಈ ಕೆಳಗಿನಂತೆ ದೃಷ್ಟಾಂತಪಡಿಸಬಹುದು.

ದೇವರು ಮತ್ತು ಮನುಷ್ಯನ ನಡುವಿನ ಕಣಿವೆಯ ವ್ಯಾಪ್ತಿಗಳನ್ನು ಕಟ್ಟಲು ಯೇಸುವೇ ಸೇತುವೆಯಾಗಿದ್ದಾನೆ.  ಆತನ ಬಲಿದಾನವು ನಮ್ಮ ಪಾಪಗಳಿಗೆ ಕ್ರಯವನ್ನು ಕೊಡುತ್ತದೆ

ಯೇಸುವಿನ ಈ ಬಲಿದಾನವು ನಮಗೆ ಹೇಗೆ ಕೊಡಲ್ಪಟ್ಟಿದೆ ಎಂದು ಗಮನಿಸಿ.  ಇದನ್ನು ನಮಗೆ ‘ಉಚಿತಾರ್ಥವರವಾಗಿ… ಕೊಡಲಾಗಿದೆ. ಉಚಿತಾರ್ಥವರಗಳನ್ನು ಕುರಿತು ಆಲೋಚಿಸಿರಿ. ಉಚಿತಾರ್ಥವರವು ಏನೇ ಆಗಿದ್ದರೂ ಸರಿ, ಅದು ನಿಜವಾಗಿ ಉಚಿತಾರ್ಥವರವಾಗಿದ್ದರೆ, ನೀವು ಅದಕ್ಕಾಗಿ ಕೆಲಸಮಾಡುವದಿಲ್ಲ ಮತ್ತು ನೀವು ಅದನ್ನು ಅರ್ಹತೆಯಿಂದ ಸಂಪಾದಿಸಿಕೊಳ್ಳುವದಿಲ್ಲ. ನೀವು ಅದನ್ನು ಸಂಪಾದಿಸಿಕೊಂಡರೆ ಉಚಿತಾರ್ಥವರವು  ಎಂದಿಗೂ ಉಚಿತಾರ್ಥವರವಾಗಿರುವದಿಲ್ಲ! ಅದೇ ರೀತಿಯಲ್ಲಿ ಯೇಸುವಿನ ಬಲಿದಾನವನ್ನು ನೀವು ಕೆಲಸದಿಂದಾಗಲಿ ಮತ್ತು ಯೋಗ್ಯತೆಯಿಂದಾಗಲಿ ಸಂಪಾದಿಸಿಕೊಳ್ಳಲು ಆಗುವದಿಲ್ಲ. ಇದನ್ನು ನಿಮಗೆ ಉಚಿತಾರ್ಥವರವಾಗಿ ಕೊಡಲಾಗಿದೆ.

ಮತ್ತು ಉಚಿತಾರ್ಥವರವು ಏನಾಗಿದೆ ? ಅದು ನಿತ್ಯಜೀವಆಗಿದೆ.  ಅಂದರೆ ನಿಮಗೆ ಮರಣವನ್ನು ತಂದ ಪಾಪವನ್ನು ಈಗ ರದ್ದುಪಡಿಸಲಾಗಿದೆ.  ಯೇಸುವಿನ ಬಲಿದಾನವು. ನೀವು ದೇವರೊಂದಿಗೆ ಸಂಬಂಧ ಕಲ್ಪಿಸಿ ಸದಾಕಾಲದ ಜೀವವನ್ನು ಪಡೆದುಕೊಳ್ಳುವದಕ್ಕಾಗಿ ನೀವು ದಾಟಬಹುದಾದ ಸೇತುವೆಯಾಗಿದೆ. ಈ ಉಚಿತಾರ್ಥವರವು ಯೇಸುವಿನಿಂದ ಕೊಡಲ್ಪಟ್ಟಿದೆ, ಆತನು ಮರಣದಿಂದ ಎದ್ದು ಬರುವದರ ಮೂಲಕ ತನ್ನನ್ನೇ ‘ಕರ್ತನೆಂದು’ ತೋರಿಸಿಕೊಟ್ಟನು.    

ಯೇಸು ನಮಗೆ ಉಚಿತಾರ್ಥವರವಾಗಿ ಕೊಡುವ ಈ ಜೀವದ ಸೇತುವೆಯನ್ನು ನೀವು ಮತ್ತು ನಾನು ‘ದಾಟುವದು’ ಹೇಗೆ? ಪುನಃ ಉಚಿತಾರ್ಥವರಗಳನ್ನು ಕುರಿತು ಆಲೋಚಿಸಿರಿ. ಯಾರಾದರು ಬಂದು ನಿಮಗೆ ಉಚಿತಾರ್ಥವರವನ್ನು ಕೊಟ್ಟರೆ ನೀವು ಅದಕ್ಕಾಗಿ ಕೆಲಸ ಮಾಡುವದಿಲ್ಲ. ಆದರೆ ಆ ಉಚಿತಾರ್ಥವರದಿಂದ ಲಾಭವನ್ನು ಪಡೆದುಕೊಳ್ಳಬೇಕಾದರೆ ನೀವು  ‘ಅದನ್ನು ಹೊಂದಿಕೊಳ್ಳಬೇಕು’. ಒಂದು ಉಚಿತಾರ್ಥವರವನ್ನು ಕೊಟ್ಟಾಗ  ಅದಕ್ಕೆ ಎರಡು ಬದಲಿಗಳಿರುತ್ತವೆ. ಉಚಿತಾರ್ಥವರವನ್ನು ನಿರಾಕರಿಸಬಹುದು ( “ಬೇಡ, ವಂದನೆಗಳು ) ಅಥವಾ ಅದನ್ನು ಪಡೆದುಕೊಳ್ಳಬಹುದು ( “ನಿಮ್ಮ ಉಚಿತಾರ್ಥವರಕ್ಕಾಗಿ ವಂದನೆಗಳು. ನಾನು ಅದನ್ನು ತೆಗೆದುಕೊಳ್ಳತ್ತೇನೆ” ).  ಯೇಸು ಕೊಡುವ ಉಚಿತಾರ್ಥವರವನ್ನು ಹೊಂದಿಕೊಳ್ಳಬೇಕು. ಇದನ್ನು ಕೇವಲ ‘ನಂಬುವದು’, ‘ಅಧ್ಯಯನ ಮಾಡುವದು’, ಅಥವಾ ‘ತಿಳಿದುಕೊಳ್ಳುವದಲ್ಲ’.  ಇದನ್ನು ಮುಂದಿನ ಚಿತ್ರದಲ್ಲಿ ವಿವರಿಸಲಾಗಿದೆ, ಇಲ್ಲಿ ನಾವು ದೇವರ ಕಡೆಗೆ ತಿರುಗಿಕೊಂಡು ಸೇತುವೆಯ ಮೇಲೆ ನಡೆದು ಆತನು ನಮಗೆ ಕೊಡುವ ಉಚಿತಾರ್ಥವರವನ್ನು ಹೊಂದಿಕೊಳ್ಳುತ್ತೇವೆ.

ಯೇಸುವಿನ ಬಲಿದಾನವು ಉಚಿತಾರ್ಥವರವಾಗಿದೆ ಅದನ್ನು ಪ್ರತಿಯೊಬ್ಬರು ಪಡೆದುಕೊಳ್ಳಲು  ಆಯ್ಕೆಮಾಡಿಕೊಳ್ಳಬೇಕು

ಹಾಗಾದರೆ, ನಾವು ಉಚಿತಾರ್ಥವರವನ್ನು ಪಡೆದುಕೊಳ್ಳುವದು ಹೇಗೆ? ಸತ್ಯವೇದವು ಹೀಗೆ ಹೇಳುತ್ತದೆ :

 ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ

ರೋಮಾ 10:12

ಈ ವಾಗ್ದಾನವು ಒಂದು ನಿರ್ಧಿಷ್ಟ ಧರ್ಮ, ಜಾತಿ ಅಥವಾ ದೇಶದವರಿಗೆ ಅಲ್ಲದೆ, ‘ಪ್ರತಿಯೊಬ್ಬರಿಗೂ’ ಆಗಿದೆ. ಯೇಸು ಮರಣದಿಂದ ಎದ್ದು ಬಂದನು ಆದ್ದದರಿಂದ ಈತನು ಈಗಲೂ ಸಹ ಜೀವಂತನಾಗಿದ್ದಾನೆ ಮತ್ತು ಆತನು ‘ಒಡೆಯನಾಗಿದ್ದಾನೆ.’   ಆದುದರಿಂದ ನೀವು ಆತನನ್ನು ಕೂಗಿಕೊಂಡರೆ ಆತನು ಕಿವಿಗೊಟ್ಟು ನಿಮಗೆ ತನ್ನ ಜೀವದ ವರವನ್ನು ಕೊಡುವನು. ನೀವು ಆತನೊಂದಿಗೆ ಸಂಭಾಷಣೆಯನ್ನು ಮಾಡುವದರ ಮೂಲಕ ಆತನನ್ನು ಕೂಗಿ ಬೇಡಿಕೊಳ್ಳಬೇಕಾಗಿದೆ. ಬಹುಶಃ ನೀವು ಹೀಗೆ ಎಂದಿಗೂ ಮಾಡಿರುವದಿಲ್ಲ.  ನೀವು ಇಂಥ ಸಂಭಾಷಣೆಯನ್ನು ಮಾಡಲು ಮತ್ತು ಆತನಲ್ಲಿ ಪ್ರಾರ್ಥಿಸಲು ಇಲ್ಲಿ ನಿಮಗೊಂದು ಮಾರ್ಗದರ್ಶನವಿದೆ.   ಇದು ಕೇವಲ ಮಾಂತ್ರಿಕ ಪಠನವಲ್ಲ.  ಇದು ಶಕ್ತಿಯನ್ನು ಕೊಡುವಂತ ನಿರ್ಧಿಷ್ಟವಾದ ಮಾತುಗಳಲ್ಲ. ನಮಗೆ ಈ ಉಚಿತಾರ್ಥವರವನ್ನು ಕೊಡುವ ಆತನ ಸಾಮರ್ಥ್ಯದಲ್ಲಿ ಮತ್ತು ಚಿತ್ತದಲ್ಲಿ ಭರವಸೆಯಿಡುವದಾಗಿದೆ. ನಾವು ಆತನಲ್ಲಿ ಭರವಸೆಯಿಡುವಾಗ ಆತನು ನಮಗೆ ಕಿವಿಗೊಟ್ಟು ಉತ್ತರಕೊಡುವನು. ಆದುದರಿಂದ ನೀವು ಯೇಸುವಿನೊಂದಿಗೆ ಗಟ್ಟಿಯಾಗಿ ಅಥವಾ ನಿಮ್ಮ ಆತ್ಮನಲ್ಲಿ ಮಾತನಾಡಿ ಈ ಉಚಿತಾರ್ಥವರವನ್ನು ಹೊಂದಿಕೊಳ್ಳುವಾಗ ಈ ಮಾರ್ಗದರ್ಶನವನ್ನು ಅನುಸರಿಸಲು ಹಿಂಜರಿಯಬೇಡಿರಿ –

ಕರ್ತನಾದ ಯೇಸುವೇ, ನನ್ನ ಜೀವಿತದಲ್ಲಿರುವ ಪಾಪಗಳ ನಿಮಿತ್ತ ನಾನು ದೇವರಿಂದ ದೂರವಾಗಿದ್ದೇನೆ ಎಂದು ನಾನು ತಿಳಿದುಕೊಳ್ಳುತ್ತೇನೆ. ನಾನು ಕಷ್ಟಪಟ್ಟು ಪ್ರಯತ್ನಿಸಿದರೂ, ನನ್ನ ಕಡೆಯಿಂದ ಯಾವುದೇ ಪ್ರಯತ್ನವಾಗಲಿ ಅಥವಾ ಬಲಿದಾನವು ಈ ಅಗಲುವಿಕೆಯನ್ನು ಕಟ್ಟಲು ಆಗುವದಿಲ್ಲ. ಆದರೆ ನನ್ನ ಎಲ್ಲಾ ಪಾಪಗಳನ್ನು – ನನ್ನ ಪಾಪಗಳನ್ನು ಸಹ ತೊಳೆಯುವದಕ್ಕಾಗಿ ನಿನ್ನ ಮರಣವು ಯಜ್ಞವಾಗಿತ್ತೆಂದು ನಾನು ತಿಳಿದುಕೊಳ್ಳುತ್ತೇನೆ. ನೀನು ಮರಣದಿಂದ ಎದ್ದು ಬಂದೆ ಎಂದು ನಾನು ನಂಬುತ್ತೇನೆ, ಇದರಿಂದ ನಿನ್ನ ಬಲಿದಾನವು ಸಾಕೆಂದು ನಾನು ತಿಳಿದುಕೊಳ್ಳಬಹುದು. ನನ್ನ ಪಾಪಗಳನ್ನು ತೊಳೆದು ನನಗಾಗಿ ದೇವರ ಕಡೆಗೆ ಹೋಗುವ ಸೇತುವೆಯನ್ನು ಕಟ್ಟಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ, ಹೀಗೆ ನಾನು  ನಿತ್ಯಜೀವವನ್ನು ಹೊಂದಿಕೊಳ್ಳಬಹುದು. ಪಾಪಕ್ಕೆ ದಾಸತ್ವದಲ್ಲಿರುವ ಜೀವನವನ್ನು ನಡೆಸಲು ನಾನು ಬಯಸುವದಿಲ್ಲ, ಆದುದರಿಂದ ದಯವಿಟ್ಟು ಕರ್ಮದ ಹಿಡಿತದಲ್ಲಿರುವ ಈ ಪಾಪಗಳಿಂದ ನನ್ನನ್ನು ಬಿಡಿಸು. ಕರ್ತನಾದ ಯೇಸುವೇ, ನನಗಾಗಿ ಈ ಎಲ್ಲಾ ಕಾರ್ಯಗಳನ್ನು ಮಾಡಿದಕ್ಕಾಗಿ ನಿನಗೆ ವಂದನೆಗಳು ಮತ್ತು ಈಗಲೂ ಸಹ ನೀನು ನನ್ನ ಜೀವನದಲ್ಲಿ ಮಾರ್ಗದರ್ಶನ ಕೊಡು, ಇದರಿಂದ ನಿನ್ನನ್ನು ನನ್ನ ಒಡೆಯನನ್ನಾಗಿ ಸ್ವೀಕರಿಸಿ ಹಿಂಬಾಲಿಸಬಹುದು.

Leave a Reply

Your email address will not be published. Required fields are marked *